
ಸನಾತನ ಧರ್ಮದಲ್ಲಿ ತೆಂಗಿನಕಾಯಿಯನ್ನು ಅತ್ಯಂತ ಪವಿತ್ರ ಹಾಗೂ ‘ಶ್ರೀಫಲ’ (ಲಕ್ಷ್ಮಿ ದೇವಿಯ ಫಲ) ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಅನೇಕರು ಹೊಸ ಮನೆಗೆ ಪ್ರವೇಶಿಸಿದಾಗ ಅಥವಾ ಹಬ್ಬ-ಹರಿದಿನಗಳಲ್ಲಿ ಮನೆಯ ಮುಖ್ಯ ದ್ವಾರಕ್ಕೆ ಬಟ್ಟೆಯಲ್ಲಿ ಸುತ್ತಿದ್ದ ತೆಂಗಿನಕಾಯಿಯನ್ನು ಕಟ್ಟುವುದು ವಾಡಿಕೆ. ಇದರ ಹಿಂದಿರುವ ಧಾರ್ಮಿಕ ಮತ್ತು ಜ್ಯೋತಿಷ್ಯ ರಹಸ್ಯಗಳು ಇಲ್ಲಿವೆ.
ಮನೆಯ ಮುಖ್ಯ ದ್ವಾರಕ್ಕೆ ಕೆಂಪು ಅಥವಾ ಹಳದಿ ಬಟ್ಟೆಯಲ್ಲಿ ಸುತ್ತಿದ್ದ ತೆಂಗಿನಕಾಯಿಯನ್ನು ಕಟ್ಟುವುದರಿಂದ ಮನೆಗೆ ಯಾರ ದೃಷ್ಟಿಯೂ ಬೀಳುವುದಿಲ್ಲ. ಇದು ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿಗಳನ್ನು ತಡೆದು, ಧನಾತ್ಮಕ ಶಕ್ತಿಯನ್ನು ಮನೆಯೊಳಗೆ ಆಕರ್ಷಿಸುತ್ತದೆ.
ತೆಂಗಿನಕಾಯಿಯನ್ನು ‘ಶ್ರೀಫಲ’ ಎಂದು ಕರೆಯಲಾಗುತ್ತಿದ್ದು, ಇದು ಲಕ್ಷ್ಮಿ ದೇವಿಯ ಸಂಕೇತವಾಗಿದೆ. ಮುಖ್ಯ ಬಾಗಿಲಿಗೆ ತೆಂಗಿನಕಾಯಿ ಕಟ್ಟುವುದರಿಂದ ಮನೆಗೆ ವಾಸ್ತು ದೋಷಗಳು ಎದುರಾಗುವುದಿಲ್ಲ ಮತ್ತು ಮನೆಯಲ್ಲಿ ಸದಾ ಧನ-ಧಾನ್ಯ, ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ: ಹಸ್ತಸಾಮುದ್ರಿಕ ಶಾಸ್ತ್ರ: ಅದೃಷ್ಟವಂತರ ಕೈಯಲ್ಲಿ ಮಾತ್ರ ಇರುತ್ತವೆ ಈ ‘ರಾಜಯೋಗ’ ತರುವ ಶುಭ ರೇಖೆಗಳು!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮನೆಯ ದ್ವಾರಕ್ಕೆ ತೆಂಗಿನಕಾಯಿ ಕಟ್ಟುವುದರಿಂದ ರಾಹು ಮತ್ತು ಕೇತು ಗ್ರಹಗಳ ನಕಾರಾತ್ಮಕ ಪ್ರಭಾವ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ಕುಟುಂಬ ಸದಸ್ಯರಿಗೆ ಎದುರಾಗುವ ಆಕಸ್ಮಿಕ ಸಂಕಷ್ಟಗಳು ಹಾಗೂ ಶನಿ ದೋಷದ ತೀವ್ರತೆಯು ಶಮನಗೊಳ್ಳುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಶುಭ ಫಲಗಳಿಗಾಗಿ ಕೆಂಪು, ಹಳದಿ ಅಥವಾ ಕೇಸರಿ ಬಟ್ಟೆಯನ್ನು ಬಳಸಬೇಕ ಮಂಗಳವಾರ, ಶುಕ್ರವಾರ ಅಥವಾ ಅಮಾವಾಸ್ಯೆ/ಹುಣ್ಣಿಮೆಯ ದಿನಗಳಲ್ಲಿ ಧೂಪ-ದೀಪ ತೋರಿಸಿ ಕಟ್ಟಿದರೆ ಹೆಚ್ಚಿನ ಫಲ ಸಿಗುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ