Daily Devotional: ಗರ್ಭಿಣಿಗೆ ನೋವುಂಟು ಮಾಡುವುದು ಮಹಾಪಾಪ, ಶಾಸ್ತ್ರಗಳು ಹೇಳುವುದೇನು?
ಮನೆಯಲ್ಲಿ ಗರ್ಭಿಣಿಯನ್ನು ಸಂತೋಷವಾಗಿ ಇಟ್ಟುಕೊಳ್ಳುವುಉ ಕುಟುಂಬದ ಒಟ್ಟಾರೆ ಯಶಸ್ಸಿಗೆ ಕಾರಣವಾಗುತ್ತದೆ. ಗರ್ಭಿಣಿಯನ್ನು ಸಂತೋಷದಿಂದ ಇಟ್ಟುಕೊಂಡರೆ ಕುಟುಂಬಕ್ಕೆ ಐಶ್ವರ್ಯ ಮತ್ತು ಅದೃಷ್ಟ ಬರುತ್ತದೆ. ಹೆಣ್ಣಿಗೆ ಗೌರವ ಮತ್ತು ಪೂಜ್ಯ ಭಾವನೆಯನ್ನು ನೀಡುವುದು ಮುಖ್ಯ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಗರ್ಭಿಣಿಯ ಸಂತೋಷ ಮತ್ತು ಕುಟುಂಬದ ಒಟ್ಟಾರೆ ಕಲ್ಯಾಣದ ನಡುವಿನ ಆಳವಾದ ಸಂಬಂಧವನ್ನು ವಿಶ್ಲೇಷಿಸಿದ್ದಾರೆ. ಮನೆಯಲ್ಲಿ ಗರ್ಭಿಣಿ ಮಹಿಳೆ ಸಂತೋಷದಿಂದ, ನಗುನಗುತ್ತಾ ಇದ್ದರೆ ಕುಟುಂಬಕ್ಕೆ ಅದೃಷ್ಟ ಮತ್ತು ಐಶ್ವರ್ಯ ಬರುತ್ತದೆ ಎಂದು ವಿವರಿಸಿದ್ದಾರೆ.
ಶಾಸ್ತ್ರಗಳ ಪ್ರಕಾರ, ಗರ್ಭಿಣಿಯರಿಗೆ ಮನಸ್ಸಿಗೆ ನೋವುಂಟು ಮಾಡುವುದು ಅಥವಾ ತೊಂದರೆ ಕೊಡುವುದು ಮಹಾಪಾಪ. ಇದು ಕೇವಲ ಧಾರ್ಮಿಕ ನಂಬಿಕೆಯಲ್ಲ. ಗರ್ಭಿಣಿಯ ಮನಸ್ಸಿನ ಸ್ಥಿತಿ ಮಗುವಿನ ಬೆಳವಣಿಗೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಗರ್ಭಿಣಿಯರು ಸಂತೋಷ ಮತ್ತು ಶಾಂತಿಯಿಂದ ಇದ್ದಾಗ ಮಗು ಆರೋಗ್ಯವಾಗಿ ಜನಿಸುವ ಸಾಧ್ಯತೆ ಹೆಚ್ಚು.
ವಿಡಿಯೋ ಇಲ್ಲಿದೆ ನೋಡಿ:
ಹೆಣ್ಣನ್ನು ಪ್ರಕೃತಿಯ ಸಂಕೇತ ಮತ್ತು ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವಳಿಗೆ ಗೌರವ ಮತ್ತು ಪೂಜ್ಯ ಭಾವನೆಯನ್ನು ತೋರಿಸುವುದು ಕುಟುಂಬದ ಸುಖ ಮತ್ತು ಸಮೃದ್ಧಿಗೆ ಅತ್ಯಗತ್ಯ. “ಗೃಹಿಣಿ ಗೃಹ ಮುಚ್ಚತೆ” ಎಂಬ ಮಾತು ಇದಕ್ಕೆ ಸಾಕ್ಷಿಯಾಗಿದೆ. ಹೆಣ್ಣಿಗೆ ಗೌರವ ನೀಡುವುದು ದೇವತೆಗಳನ್ನು ಪೂಜಿಸಿದಂತೆ ಎಂದು ಪರಿಗಣಿಸಲಾಗಿದೆ. ಗರ್ಭಿಣಿಯ ಅಳು ಮತ್ತು ಕೋಪವು ದೇವತೆಗಳನ್ನು ಕೋಪಗೊಳಿಸುತ್ತದೆ ಎಂದು ಗುರೂಜಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಗಣೇಶನ ಪೂಜೆಯ ವೇಳೆ ತಪ್ಪಾಗಿಯೂ ಈ ವಸ್ತುಗಳನ್ನು ಅರ್ಪಿಸಬೇಡಿ!
ಆದ್ದರಿಂದ ಗರ್ಭಿಣಿಯ ಸಂತೋಷವನ್ನು ಕೇವಲ ವೈಯಕ್ತಿಕ ವಿಷಯವೆಂದು ಪರಿಗಣಿಸದೇ, ಕುಟುಂಬದ ಒಟ್ಟಾರೆ ಕಲ್ಯಾಣಕ್ಕೆ ಅತ್ಯಗತ್ಯ. ಗರ್ಭಿಣಿಯ ಸಂತೋಷಕ್ಕೆ ಪ್ರತಿಯೊಬ್ಬರೂ ಕೊಡುಗೆ ನೀಡುವುದು ಅತ್ಯಗತ್ಯ. ಇದು ಕೇವಲ ನಂಬಿಕೆ ಅಥವಾ ಆಚಾರ-ವಿಚಾರಗಳಿಗೆ ಸೀಮಿತವಾಗಿಲ್ಲ. ಇದು ಮಗುವಿನ, ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








