AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಸುಂದರ ದಾಂಪತ್ಯ ಜೀವನ ನಡೆಸಲು ಚಾಣಕ್ಯ ಹೇಳಿದ ಈ 4 ವಿಷಯಗಳನ್ನು ಅನುಸರಿಸಿ

’ ಗೌಪ್ಯತೆ: ಸಂಗಾತಿಯ ನಡುವಿನ ಸಂಬಂಧದಲ್ಲಿ ಗೌಪ್ಯತೆ ಬಹಳ ಮುಖ್ಯ. ಸಂಗಾತಿಗಳು ತಮ್ಮ ನಡುವಿನ ವಿಷಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳಬೇಕು. ಆ ವಿಷಯಗಳು ಯಾವುದೇ ಮೂರನೇ ವ್ಯಕ್ತಿಯನ್ನು ಯಾವುದೇ ರೀತಿಯಲ್ಲಿ ತಲುಪಲು ಬಿಡಬಾರದು. ಮೂರನೇ ವ್ಯಕ್ತಿ ಸಂಗಾತಿಗಳ ನಡುವಿನ ರಹಸ್ಯಗಳನ್ನು ಅರಿತು ಪ್ರವೇಶಿಸಿದರೆ, ಅದು ಸಂಬಂಧದಲ್ಲಿನ ನಂಬಿಕೆಯನ್ನು ನಾಶಪಡಿಸುತ್ತದೆ. ಇದಲ್ಲದೆ, ಅಪಾರ್ಥಗಳು ಸಹ ಉದ್ಭವಿಸುತ್ತವೆ.

Chanakya Niti: ಸುಂದರ ದಾಂಪತ್ಯ ಜೀವನ ನಡೆಸಲು ಚಾಣಕ್ಯ ಹೇಳಿದ ಈ 4 ವಿಷಯಗಳನ್ನು ಅನುಸರಿಸಿ
ಸುಂದರ ದಾಂಪತ್ಯ ಜೀವನ ನಡೆಸಲು ಚಾಣಕ್ಯ ಹೇಳಿದ ಈ 4 ವಿಷಯಗಳನ್ನು ಅನುಸರಿಸಿ
TV9 Web
| Updated By: ಸಾಧು ಶ್ರೀನಾಥ್​|

Updated on: Sep 18, 2024 | 9:44 AM

Share

ಸಂತೋಷ ನೆಮ್ಮದಿಯ ದಾಂಪತ್ಯ ಜೀವನಕ್ಕೆ ಪರಸ್ಪರ ನಂಬಿಕೆ ಮತ್ತು ಸಮನ್ವಯ ಅಗತ್ಯ. ಆದ್ದರಿಂದ, ನೀವು ಈಗಾಗಲೇ ಮದುವೆಯಾಗಿದ್ದರೆ ಅಥವಾ ಮದುವೆಯಾಗಲು ಹೊರಟಿದ್ದರೆ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಗಮನ ಕೊಡದೆ ನಿರ್ಲಕ್ಯ ಮಾಡುವುದು ಒಳಿತು. ಇಲ್ಲದಿದ್ದರೆ ಸೂಕ್ತ ಪರಿಣಾಮಗಳನ್ನೂ ಅನುಭವಿಸಬೇಕಾಗುತ್ತದೆ. ಕೆಲವು ಅತಿರೇಕದ್ದಾಗಿದ್ದರೆ ಅದು ನಿಮ್ಮ ಸ್ವಭಾವದಲ್ಲಿನ ಕೆಲವು ನ್ಯೂನತೆಗಳಿಂದಾಗಿ ನಿಮ್ಮ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮದುವೆಯ ಬಂಧವು ಜೀವನದುದ್ದಕ್ಕೂ ಗಟ್ಟಿಯಾಗಿರಬೇಕೆಂದರೆ ಅಂತಹ ವಿಷಯಗಳನ್ನು ನಿರ್ಲಕ್ಷಿಸಿಬಿಡಿ. ಇವುಗಳನ್ನು ಶಾಶ್ವತವಾಗಿಯೂ ಕೈಬಿಡಬೇಕಾಗುತ್ತದೆ. ಚಾಣಕ್ಯ ಹೇಳಿದ ಗುಣಗಳೇನು ಎಂಬುದನ್ನು ನಾವು ಇಂದು ತಿಳಿದುಕೊಳ್ಳೋಣ.. ಅವು ನಿಮ್ಮ ದಾಂಪತ್ಯ ಜೀವನವನ್ನಷ್ಟೇ ಅಲ್ಲ.. ಇತರರೊಂದಿಗೆ ಸಂಬಂಧವನ್ನೂ ಸುಧಾರಿಸುತ್ತವೆ..

ಗೌಪ್ಯತೆ: ಸಂಗಾತಿಯ ನಡುವಿನ ಸಂಬಂಧದಲ್ಲಿ ಗೌಪ್ಯತೆ ಬಹಳ ಮುಖ್ಯ. ಸಂಗಾತಿಗಳು ತಮ್ಮ ನಡುವಿನ ವಿಷಯಗಳನ್ನು ತಮ್ಮಲ್ಲೇ ಇಟ್ಟುಕೊಳ್ಳಬೇಕು. ಆ ವಿಷಯಗಳು ಯಾವುದೇ ಮೂರನೇ ವ್ಯಕ್ತಿಯನ್ನು ಯಾವುದೇ ರೀತಿಯಲ್ಲಿ ತಲುಪಲು ಬಿಡಬಾರದು. ಮೂರನೇ ವ್ಯಕ್ತಿ ಸಂಗಾತಿಗಳ ನಡುವಿನ ರಹಸ್ಯಗಳನ್ನು ಅರಿತು ಪ್ರವೇಶಿಸಿದರೆ, ಅದು ಸಂಬಂಧದಲ್ಲಿನ ನಂಬಿಕೆಯನ್ನು ನಾಶಪಡಿಸುತ್ತದೆ. ಇದಲ್ಲದೆ, ಅಪಾರ್ಥಗಳು ಸಹ ಉದ್ಭವಿಸುತ್ತವೆ.

sಉಳ್ಳು ಹೇಳುವುದು: ಈ ಒಂದೇ ಒಂದು ಅಭ್ಯಾಸವು ವೈವಾಹಿಕ ಸಂಬಂಧಗಳನ್ನು ಮಾತ್ರವಲ್ಲದೆ ಯಾವುದೇ ಸಂಬಂಧವನ್ನು ನಾಶಪಡಿಸುತ್ತದೆ. ಯಾವುದೇ ಸಂಬಂಧವಿರಲಿ, ನೀವು ಸುಳ್ಳಿನ ಮೇಲೆ ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗುವುದಿಲ್ಲ. ಸಂಬಂಧದಲ್ಲಿ ಸುಳ್ಳುಗಳಿದ್ದರೆ ಆ ಸಂಬಂಧಕ್ಕೆ ಆಧಾರವೇ ಇರುವುದಿಲ್ಲ. ಸುಳ್ಳಿನ ಮೇಲೆ ಸ್ಥಾಪಿತವಾದ ಸಂಬಂಧವು ಯಾವುದೇ ಸಮಯದಲ್ಲಿ ಮುರಿಯಬಹುದು. ಆದುದರಿಂದ ಯಾವುದೇ ಸಂದರ್ಭದಲ್ಲೂ ಆಚಾರ್ಯ ಚಾಣಕ್ಯ ಸುಳ್ಳನ್ನು ಆಶ್ರಯಿಸುವುದು ಒಳ್ಳೆಯದಲ್ಲ, ಅದು ದುರಂತಕ್ಕೆ ಕಾರಣವಾಗಬಹುದು ಎಂದಿದ್ದಾರೆ.

ಸಂಗಾತಿಯ ನಡುವಿನ ಸಂಬಂಧದಲ್ಲಿ ಹಣದ ವಿಷಯಗಳು ಯಾವಾಗಲೂ ಸ್ಪಷ್ಟವಾಗಿರಬೇಕು. ಇಂದಿನ ದಿನಗಳಲ್ಲಿ ಪುರುಷರೊಂದಿಗೆ ಮಹಿಳೆಯರೂ ಕೂಡ ಸಂಪಾದಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಎರಡೂ ಪಾತ್ರಗಳು ಸ್ವಲ್ಪ ವಿಭಿನ್ನವಾಗಿದ್ದವು. ಆದರೆ ಈಗ ಹಾಗಲ್ಲ. ಈಗ ದಂಪತಿಗಳು ಸಂಪಾದಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಇಬ್ಬರೂ ಸಂಗಾತಿ ಒಟ್ಟಿಗೆ ಹಣದ ವಿಷಯಗಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಉಳಿತಾಯ, ಖರ್ಚು ಮತ್ತು ಹೂಡಿಕೆಗೆ ಸಂಬಂಧಿಸಿದಂತೆ ಒಟ್ಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಿ. ಒಬ್ಬರಿಗೊಬ್ಬರು ಆರ್ಥಿಕ ಪರಿಸ್ಥಿತಿಯ ಬಗ್ಗೆ ಅರಿತುಕೊಳ್ಳಿ. ಅಲ್ಲದೆ ಅನಗತ್ಯ ವೆಚ್ಚಗಳನ್ನು ತಪ್ಪಿಸಿ. ಏಕೆಂದರೆ ಸಂಪತ್ತು ಮತ್ತು ಬಡತನವು ಅನೇಕ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.

ವ್ಯಸನಗಳು ಮನುಷ್ಯರಿಗೆ ದೈಹಿಕವಾಗಿ ಹಾನಿಕಾರಕವಲ್ಲ. ಆದರೆ ಅವರನ್ನು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ತುಂಬಾ ದುರ್ಬಲಗೊಳಿಸುತ್ತವೆ. ಮಾದಕ ವ್ಯಸನಕ್ಕೆ ಒಳಗಾದವರ ಬದುಕು ಮತ್ತೆಂದೂ ಪತ್ತೆಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಂಡನಾಗಲಿ, ಹೆಂಡತಿಯಾಗಲಿ ಯಾವುದಾದರೂ ನಶೆಯ ಚಟವಿದ್ದರೆ ಆ ಚಟಗಳಿಂದ ಹೊರಬರಬೇಕು. ನಿಜವಾದ ವ್ಯಸನಗಳಿಂದ ದೂರವಿರುವುದಕ್ಕೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ. ಪತಿ-ಪತ್ನಿಯರ ನಡುವಿನ ಸಂಬಂಧಗಳು ಛಿದ್ರವಾಗಲು ಮದ್ಯದ ಚಟವೇ ದೊಡ್ಡ ಕಾರಣ ಎಂಬುದು ಹಲವು ಸಮೀಕ್ಷೆಗಳಲ್ಲಿ ಬಹಿರಂಗವಾಗಿದೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ