AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hindu Rituals: ಮೃತ ವ್ಯಕ್ತಿಗಳ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆ ಏಕೆ ಹಾಕುತ್ತಾರೆ?

ಹಿಂದೂ ಧರ್ಮದಲ್ಲಿ ಗಂಗಾಜಲ ಮತ್ತು ತುಳಸಿ ಪವಿತ್ರವೆಂದು ಪರಿಗಣಿಸಲ್ಪಡುತ್ತವೆ. ಸಾವಿನ ನಂತರ ಮೃತದೇಹಕ್ಕೆ ಇವುಗಳನ್ನು ಬಳಸುವುದರಿಂದ ಆತ್ಮಕ್ಕೆ ಶಾಂತಿ ಮತ್ತು ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ. ಧಾರ್ಮಿಕ ನಂಬಿಕೆಗಳ ಜೊತೆಗೆ, ವೈಜ್ಞಾನಿಕವಾಗಿಯೂ ಇವುಗಳಿಗೆ ಅನೇಕ ಪ್ರಯೋಜನಗಳಿವೆ. ಗಂಗಾಜಲ ಬ್ಯಾಕ್ಟೀರಿಯಾ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ತುಳಸಿ ಒಂದು ಗಿಡಮೂಲಿಕೆ ಪ್ರತಿಜೀವಕವಾಗಿದೆ.

Hindu Rituals: ಮೃತ ವ್ಯಕ್ತಿಗಳ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆ ಏಕೆ ಹಾಕುತ್ತಾರೆ?
Tulsi LeavesImage Credit source: Pinterest
ಅಕ್ಷತಾ ವರ್ಕಾಡಿ
|

Updated on:Jun 13, 2025 | 8:12 AM

Share

ಹಿಂದೂ ಧರ್ಮದಲ್ಲಿ, ಗಂಗಾ ಜಲ ಮತ್ತು ತುಳಸಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಗಂಗಾ ಜಲವನ್ನು ಸಿಂಪಡಿಸಿರುವ ಪ್ರದೇಶವು ಪವಿತ್ರವಾಗಿರುತ್ತದೆ. ಅಷ್ಟೇ ಅಲ್ಲ, ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆದು ಹೋಗುತ್ತದೆ ಎಂಬ ನಂಬಿಕೆಯಿದೆ. ಪುರಾಣಗಳಲ್ಲಿ ಗಂಗಾ ನದಿಯ ಮಹತ್ವವನ್ನು ವಿವರಿಸಲಾಗಿದೆ. ಸಾವಿನ ಸಮಯದಲ್ಲಿ ಗಂಗಾ ಜಲವನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ, ಆತ್ಮವು ದೇಹವನ್ನು ಬಿಡುವಾಗ ಹೆಚ್ಚು ನೋವು ಅನುಭವಿಸುವುದಿಲ್ಲ ಎಂದು ಹೇಳಲಾಗುತ್ತದೆ.

ಗಂಗಾ ಜಲ ಬಾಯಿಯಲ್ಲಿದ್ದರೆ ಆತ್ಮದ ಮುಂದಿನ ಪ್ರಯಾಣ ಸುಲಭವಾಗುತ್ತದೆ ಎಂದು ನಂಬಿಕೆಯಿದ್ದರೆ, ಮತ್ತೊದೆಡೆ ವೈಜ್ಞಾನಿಕ ಹೇಳುವುದಾದರೆ ಗಂಗಾ ಜಲ ಶವದ ಮೇಲೆ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಹ ತಡೆಯುತ್ತದೆ. ಗಂಗಾ ನೀರಿನ ಜೊತೆಗೆ ತುಳಸಿ ಎಲೆಗಳು ಅಷ್ಟೇ ಮುಖ್ಯ.

ಧಾರ್ಮಿಕ ದೃಷ್ಟಿಕೋನದಿಂದ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ತುಳಸಿ ಯಾವಾಗಲೂ ವಿಷ್ಣುವಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಸಾವಿನ ಸಮಯದಲ್ಲಿ ತುಳಸಿ ಎಲೆಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಆತ್ಮವು ಶುದ್ಧವಾಗುತ್ತದೆ ಎಂದು ನಂಬಲಾಗಿದೆ. ಮೃತರು ಮೋಕ್ಷವನ್ನು ಪಡೆಯುತ್ತಾರೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

ಧರ್ಮದ ಜೊತೆಗೆ, ತುಳಸಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದಲೂ ನೋಡಲಾಗುತ್ತದೆ. ತುಳಸಿಯನ್ನು ಗಿಡಮೂಲಿಕೆ ಪ್ರತಿಜೀವಕವೆಂದು ಪರಿಗಣಿಸಲಾಗುತ್ತದೆ. ತುಳಸಿ ಅನೇಕ ರೋಗಗಳಿಗೆ ಪರಿಣಾಮಕಾರಿ ಔಷಧವಾಗಿದೆ. ತುಳಸಿ ಎಲೆಯನ್ನು ಬಾಯಿಯಲ್ಲಿ ಇಟ್ಟುಕೊಳ್ಳುವುದರಿಂದ ಸಾತ್ವಿಕ ಭಾವನೆಗಳು ಜಾಗೃತಗೊಳ್ಳುತ್ತವೆ ಎಂದು ನಂಬಲಾಗಿದೆ.

ಸಾವಿನ ಸಮಯದಲ್ಲಿ ತುಳಸಿ ಮತ್ತು ಗಂಗಾ ಜಲವನ್ನು ಕುಡಿದರೆ, ಸಾವಿನ ದೇವರು ಯಮನು ಆ ವ್ಯಕ್ತಿಯನ್ನು ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯುತ್ತಾನೆ. ಮೃತರ ಹಣೆಯ ಮೇಲೆ ತುಳಸಿ ಎಲೆಯನ್ನು ಇಡುವುದರಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಗಂಗಾ ಜಲ ಕುಡಿದು ಸಾಯುವವರು ಎಂದಿಗೂ ನರಕಕ್ಕೆ ಹೋಗುವುದಿಲ್ಲ ಎಂಬ ಅಪಾರ ನಂಬಿಕೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:58 am, Thu, 12 June 25