Sign In

By signing in or creating an account, you agree with Associated Broadcasting Company's Terms & Conditions and Privacy Policy.

Gita Jayanti 2022: ಗೀತಾಜಯಂತಿಯ ಈ ದಿನದಂದು ಗೀತಾಪಾರಾಯಣ ಮತ್ತು ಭಗವದ್ಗೀತಾಪೂಜೆ ಮಾಡುವ ವಿಧಾನ ಹೀಗಿದೆ

ಸಾಧಕನು ಅಂದರೆ ಗೆಲುವನ್ನು ಅರಸಿ ಹೊರಟವನು ಒಂದೊಂದೇ ಮೆಟ್ಟಿಲನ್ನು ಏರಿ ಗುರಿ ಸಾಧಿಸುವಂತೆ ಭಗವದ್ಗೀತೆಯ ಪ್ರತೀ ಅಧ್ಯಾಯಗಳನ್ನು ಕ್ರಮವಾಗಿ ಅಭ್ಯಸಿಸುತ್ತಾ ಹೋದರೆ ಆನಂದರೂಪದಲ್ಲಿ ಭಗವದನುಗ್ರಹ ನಿಶ್ಚಿತವಾಗಿ ಆಗುವುದು ಎಂದು ಧಾರ್ಮಿಕಚಿಂತಕರು ಹೇಳುತ್ತಾರೆ.

Gita Jayanti 2022: ಗೀತಾಜಯಂತಿಯ ಈ ದಿನದಂದು ಗೀತಾಪಾರಾಯಣ ಮತ್ತು ಭಗವದ್ಗೀತಾಪೂಜೆ ಮಾಡುವ ವಿಧಾನ ಹೀಗಿದೆ
ಗೀತಾ ಜಯಂತಿ: ಮಹಾಭಾರತ ಯದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಶ್ರೀಕೃಷ್ಣನು ಉಪದೇಶಿಸಲ್ಪಟ್ಟ ದಿನ
Follow us
TV9 Web
| Updated By: Rakesh Nayak Manchi

Updated on:Dec 03, 2022 | 7:31 AM

ಭಗವದ್ಗೀತೆ (Bhagavad Gita) ಎಂಬುದು ಒಂದು ಪೂಜನೀಯಗ್ರಂಥ ಮತ್ತು ಅನುಸಂಧಾನ ಮಾಡಲು ಯೋಗ್ಯವಾದ ಜ್ಞಾನರಾಶಿಯಾಗಿದೆ. ಮಾಗಶೀರ್ಷ ಮಾಸದ ಶುಕ್ಲಪಕ್ಷದ ಏಕಾದಶಿಯಂದು ಭಗವಂತನಿಂದ ಅರ್ಜುನನಿಗೆ ಉಪದೇಶಿಸಲ್ಪಟ್ಟ ಸಾರ್ವಕಾಲಿಕವಾದ ಶ್ಲೋಕರೂಪದ ಯೋಗಪ್ರದ ಗ್ರಂಥವಾಗಿದೆ. ಇಲ್ಲಿ ಯೋಗಗಳ ಸಂಗಮವನ್ನು ನಾವು ಕಾಣಬಹುದು. ಏಳುನೂರು ಶ್ಲೋಕಗಳನ್ನೊಳಗೊಂಡ ಹದಿನೆಂಟು ಅಧ್ಯಾಯಗಳಿವೆ. ಸಾಧಕನು ಅಂದರೆ ಗೆಲುವನ್ನು ಅರಸಿ ಹೊರಟವನು ಒಂದೊಂದೇ ಮೆಟ್ಟಿಲನ್ನು ಏರಿ ಗುರಿ ಸಾಧಿಸುವಂತೆ ಪ್ರತೀ ಅಧ್ಯಾಯಗಳನ್ನು ಕ್ರಮವಾಗಿ ಅಭ್ಯಸಿಸುತ್ತಾ ಹೋದರೆ ಆನಂದರೂಪದಲ್ಲಿ ಭಗವದನುಗ್ರಹ ನಿಶ್ಚಿತವಾಗಿ ಆಗುವುದು. ಗೀತಾ ಜಯಂತಿ (Gita Jayanti 2022)ಯಂದು ಪ್ರಾತಃಕಾಲ ಸೂರ್ಯೋದಯಕ್ಕಿಂತ ಮೊದಲೇ ಎದ್ದು ಸ್ನಾನಾದಿಗಳನ್ನು ಮಾಡಿ ಶುಚಿಯಾಗಿ ಮಡಿಯುಟ್ಟು ಶ್ರೀಕೃಷ್ಣನ ಮೂರ್ತಿ ಅಥವಾ ಫೋಟೋ (Bhagwan Lord Srikrishna Photo)ವನ್ನು ಸ್ಥಾಪಿಸಿ ಅದರ ಮುಂದೆ ರಂಗವಲ್ಯಾದಿಗಳಿಂದ ಅಲಂಕರಿಸಿ ವಿಷ್ಣುನಾಮವನ್ನು ಹೇಳುತ್ತಾ ಪೂಜೆ ಮಾಡಬೇಕು. ಈ ದಿನ ಏಕಾದಶಿ ಆದ್ದರಿಂದ ದೇವರಿಗೆ ಭಕ್ಷ್ಯನೈವೇದ್ಯ ಮಾಡುವಂತಿಲ್ಲ ಮತ್ತು ನಾವು ತಿನ್ನದಿದ್ದರೆ ಉತ್ತಮ. ಅರ್ಥಾತ್ ದೇವರಿಗೆ ಹಣ್ಣು ಮಾತ್ರ ನೈವೇದ್ಯ ಮಾಡಿರಿ ಹಾಗೆಯೇ ಸಾಧ್ಯವಾದ ಮಟ್ಟಿಗೆ ಉಪವಾಸ, ಕಷ್ಟವಾದಲ್ಲಿ ಫಲಾಹಾರವನ್ನು ಮಾಡಬೇಕು. ಊಟಾದಿಗಳನ್ನು ಬಿಟ್ಟರೆ ಅತ್ಯುತ್ತಮ.

ಇದನ್ನೂ ಓದಿ: Gita Jayanti 2022: ಧರ್ಮಗ್ರಂಥ ಭಗವದ್ಗೀತಾ ಆವಿರ್ಭವಿಸಿದ ದಿನ, ಗೀತಾಜಯಂತಿ ದಿನಾಂಕ, ಮಹತ್ವ, ಆಚರಣೆ ಇಲ್ಲಿದೆ

ಗೀತೆಯನ್ನು ಮೂರು ವಿಭಾಗ ಮಾಡಿ ಪಾರಾಯಣ ಮಾಡಬೇಕು. ಆದಿ- ಒಂದರಿಂದ ಆರನೇಯ ಅಧ್ಯಾಯದ ಕೊನೆಯ ತನಕ ಬೆಳಗ್ಗೆ ಪಾರಾಯಣ ಮಾಡಬೇಕು. ತದನಂತರ ಮಧ್ಯ- ಏಳನೇಯ ಅಧ್ಯಾಯದಿಂದ ಹನ್ನೆರಡನೇಯ ಅಧ್ಯಾಯದ ಕೊನೆಯ ತನಕ ಮಧ್ಯಾಹ್ನ ಪಾರಾಯಣ ಮಾಡಬೇಕು. ತುರೀಯ- ಹದಿಮೂರನೇಯ ಅಧ್ಯಾಯದಿಂದ ಹದಿನೆಂಟನೇಯ ಅಧ್ಯಾಯದವರೆಗೆ ಸಾಯಂಕಾಲ ಪಾರಾಯಣ ಮಾಡಿರಿ. ಸಮಯದ ಅಡಚಣೆಯಿದ್ದಲ್ಲಿ ಆದಿ ಮಧ್ಯವನ್ನು ಬೆಳಗ್ಗೆ ಮಾಡಿ ತುರೀಯವನ್ನು ಸಾಯಂಕಾಲ ಮಾಡುವ ಕ್ರಮವೂ ಇದೆ.

ಇದನ್ನೂ ಓದಿ: Gita Jayanti 2022: ಇಂದು ಶ್ರೀ ಗೀತಾ ಜಯಂತಿ ಮತ್ತು ಮೋಕ್ಷದಾ ಏಕಾದಶಿ: ದಿನದ ಮಹತ್ವ ಅಧಿಕವಾಗಿದೆ, ಪೂಜಾ ವಿಧಾನ ತಿಳಿದುಕೊಳ್ಳಿ

ಆಸ್ತಿಕ ಮತಿಯುಳ್ಳವನು ಕನಿಷ್ಠ ಒಂದು ಅಧ್ಯಾಯವನ್ನಾದರೂ ಪಾರಾಯಣ ಈ ದಿನದಂದು ಮಾಡಿದರೆ ಉತ್ತಮ. ಮನುಷ್ಯ ಜೀವನದ ಉದ್ದೇಶ ಹಲವಿರಬಹುದು. ಆದರೆ ಪ್ರತೀ ಜೀವಿಯು ನೆಮ್ಮದಿಯ ಬದುಕನ್ನು ಅರಸುತ್ತಿರುತ್ತಾರೆ. ಆ ಜೀವನ ಈ ಗೀತೆಯ ಅನುಸಂಧಾನದಿಂದ ಸುಲಭವಾಗಿ ಲಭ್ಯವಾಗುತ್ತದೆ. ಅದರ ಆರಂಭಕ್ಕೆ ಪುಣ್ಯಕಾಲ ಈ ಗೀತಾಜಯಂತಿ. ಶ್ರೀಕೃಷ್ಣನನ್ನು ನಂಬಿದವರಿಗೆ ಹಾಗೆಯೇ ಗೀತೆಯನ್ನು ಓದಿ ಅನುಸಂಧಾನ ಮಾಡಿದವರಿಗೆ ಎಂದೂ ಸೋಲಾಗಿದ್ದು ಇಲ್ಲ. ಅದೆಷ್ಟೋ ಸಮಯವನ್ನು ವ್ಯರ್ಥಮಾಡುತ್ತಿರುತ್ತೇವೆ ನಾವು. ಈ ಸಲದ ಗೀತಾಜಯಂತಿಯಿಂದ ಆದರೂ ಭಗವದ್ಗೀತಾಪಾಠಕರಾಗಿ ಜನರನ್ನು ಮತ್ತು ಜಗತ್ತನ್ನು ಗೆಲ್ಲುವ ಕಲೆಯನ್ನು ಬೆಳೆಸೋಣ.

ಈ ದಿನದಂದು ಶ್ಲೋಕವನ್ನು ಕನಿಷ್ಠ 108 ಬಾರಿ ಆದರೂ ಜಪಿಸಿ. ಈ ಕೃಷ್ಣ ಮಂತ್ರ ಅತ್ಯಂತ ಫಲದಾಯಕವಾದದ್ದು. –

ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಂ | ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||

ನಂಬಿಕೆಗಿಂತ ಮಿಗಿಲಾದ ಸಮರ್ಪಣೆ ಯಾವುದೂ ಇಲ್ಲ. ನಂಬಿಕೆಯಿಂದ ಪೂಜಿಸಿ, ಪಾರಾಯಣ ಮಾಡಿ, ಅನುಸಂಧಾನ ಮಾಡಿ, ಶೋಧನೆ ಮಾಡಿ ಸತ್ಯವನ್ನು ಅರಿಯೋಣ ಅಲ್ಲವೇ ?

ಲೇಖನ: ಡಾ.ಕೇಶವಕಿರಣ ಬಿ, ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಮತ್ತಷ್ಟು ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 am, Sat, 3 December 22

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು