Gita Jayanti 2022: ಇಂದು ಶ್ರೀ ಗೀತಾ ಜಯಂತಿ ಮತ್ತು ಮೋಕ್ಷದಾ ಏಕಾದಶಿ: ದಿನದ ಮಹತ್ವ ಅಧಿಕವಾಗಿದೆ, ಪೂಜಾ ವಿಧಾನ ತಿಳಿದುಕೊಳ್ಳಿ

Gita Mahotsav 2022: ಈ ಬಾರಿ ಗೀತಾ ಜಯಂತಿ ಮತ್ತು ಮೋಕ್ಷದಾ ಏಕಾದಶಿಯು ಒಂದೇ ದಿನ ಬಂದಿರುವುದರಿಂದ ದಿನದ ಪ್ರಾಮುಖ್ಯತೆ ಹೆಚ್ಚಾಗಿದೆ. ಮೋಕ್ಷವನ್ನು ಪಡೆಯುವುದಕ್ಕಾಗಿ ಈ ದಿನ ಪೂಜೆಯನ್ನು ಮಾಡಲಾಗುತ್ತದೆ. ಪೂಜಾ ವಿಧಾನ ತಿಳಿದುಕೊಳ್ಳಿ

Gita Jayanti 2022: ಇಂದು ಶ್ರೀ ಗೀತಾ ಜಯಂತಿ ಮತ್ತು ಮೋಕ್ಷದಾ ಏಕಾದಶಿ: ದಿನದ ಮಹತ್ವ ಅಧಿಕವಾಗಿದೆ, ಪೂಜಾ ವಿಧಾನ ತಿಳಿದುಕೊಳ್ಳಿ
Gita Mahotsav 2022: ಇಂದು ಶನಿವಾರ ಶ್ರೀ ಗೀತಾ ಜಯಂತಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 03, 2022 | 6:51 AM

ಇಂದು ಶನಿವಾರ ಡಿಸೆಂಬರ್ 3, 2022 ರಂದು ಗೀತಾ ಜಯಂತಿಯನ್ನು ಆಚರಿಸಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಮಾರ್ಗಶೀರ್ಷ ಮಾಸದಲ್ಲಿ (Margashirsha Maas 2022) ಶ್ರೀಮದ್ಭಾಗವತ ದರ್ಶನವು ಪುಣ್ಯಕ್ಕೆ ಕಾರಣವಾಗುತ್ತದೆ. ಮಾರ್ಗಶೀರ್ಷ ಮಾಸವನ್ನು ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ 9ನೇ ಮಾಸ ಎಂದು ಕರೆಯಲಾಗುತ್ತದೆ. ಈ ಮಾಸದಲ್ಲಿ ಶ್ರೀಕೃಷ್ಣನನ್ನು ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಮಾರ್ಗಶೀರ್ಷ ಮಾಸದಲ್ಲಿ ಗಂಗಾ ಸ್ನಾನ ಮತ್ತು ಸತ್ಯನಾರಾಯಣ ದೇವರನ್ನು ಪೂಜಿಸುವ ವಿಶೇಷ ಪದ್ಧತಿಯಿದೆ. ಈ ಮಾಸದಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸುವಾಗ, ಪ್ರಾಮಾಣಿಕ ಹೃದಯದಿಂದ ಮಾಡಿದ ಪ್ರತಿಜ್ಞೆಯು ಖಂಡಿತವಾಗಿ ನೆರವೇರುತ್ತದೆ.

ಈ ಮಾಸದಲ್ಲಿ ದಾನ ಮತ್ತು ಧರ್ಮಕ್ಕೆ ವಿಶೇಷ ಮಹತ್ವವಿದೆ:

ನಂಬಿಕೆಯ ಪ್ರಕಾರ ಈ ತಿಂಗಳು ಗಾಯತ್ರಿ ಮಂತ್ರವನ್ನು ಪಠಿಸಬೇಕು. ಇದಲ್ಲದೇ ಈ ಮಾಸದಲ್ಲಿ ಸೂರ್ಯದೇವನನ್ನು ಪೂಜಿಸಬೇಕು. ಈ ತಿಂಗಳಿನಲ್ಲಿಯೇ ಶ್ರೀ ಕೃಷ್ಣನು ಮಹಾಭಾರತ ಯುದ್ಧದ ಸಮಯದಲ್ಲಿ ಕುರುಕ್ಷೇತ್ರ ರಂಗದಲ್ಲಿ ತನ್ನ ಆತ್ಮೀಯ ಸ್ನೇಹಿತ ಅರ್ಜುನನಿಗೆ ಗೀತೆಯನ್ನು (Bhagavad Gita) ಉಪದೇಶಿಸಿದನು. ಆದ್ದರಿಂದ, ಈ ತಿಂಗಳ 3 ರಂದು ಶನಿವಾರ ಮೋಕ್ಷದಾ ಏಕಾದಶಿ ವ್ರತವನ್ನು ಮತ್ತು ಗೀತಾ ಜಯಂತಿ ಹಬ್ಬವನ್ನು ಒಂದೇ ದಿನ ಆಚರಿಸಲಾಗುವುದು. ಗಮನಾರ್ಹವೆಂದರೆ ಈ ಬಾರಿ 5159ನೇ ಗೀತಾ ಜಯಂತಿ ವಾರ್ಷಿಕೋತ್ಸವ.

ಗೀತಾ ಜಯಂತಿ ಮತ್ತು ಮೋಕ್ಷದ ಏಕಾದಶಿ ಪೂಜೆ ವಿಧಾನ:

ಈ ದಿನ ಸೂರ್ಯದೇವನನ್ನು ಆರಾಧಿಸಿ. ಏಕಾದಶಿಯ ಒಂದು ದಿನದ ಮೊದಲು ಅಂದರೆ ದಶಮಿಯಂದು ತಾಮಸಿಕ ಆಹಾರವನ್ನು ತ್ಯಜಿಸಿ. ಬ್ರಹ್ಮಚರ್ಯ ನಿಯಮದಂತೆ ಏಕಾದಶಿ ಉಪವಾಸವನ್ನು ಆಚರಿಸಿ. ಮಾರ್ಗಶೀರ್ಷ ಶುಕ್ಲ ಏಕಾದಶಿ (Ekadashi) ತಿಥಿಯು ಶನಿವಾರ ಡಿಸೆಂಬರ್ 3, 2022ರ ಮುಂಜಾನೆ 5.39 ರಿಂದ ಆರಂಭವಾಗಿ ಡಿಸೆಂಬರ್ 4, 2022ರ ಮುಂಜಾನೆ 5.34ಕ್ಕೆ ಕೊನೆಗೊಳ್ಳುತ್ತದೆ. ಈ ಮುಹೂರ್ತದಲ್ಲಿ ಎದ್ದು ಶ್ರೀ ಮಹಾವಿಷ್ಣುವನ್ನು ಸ್ಮರಿಸುವ ಮತ್ತು ಧ್ಯಾನಿಸುವ ಮೂಲಕ ದಿನವನ್ನು ಪ್ರಾರಂಭಿಸಿ.

ದೈನಂದಿನ ಕೆಲಸವಾದ ನಂತರ ನೀರಿನಲ್ಲಿ ಗಂಗಾಜಲವನ್ನು ಬೆರೆಸಿ ಸ್ನಾನ ಮಾಡಿ ಮತ್ತು ‘ಓಂ ಭಾಗೀರಥ್ಯೈ‌ನಮಃ’ ಮಂತ್ರವನ್ನು ಜಪಿಸುತ್ತಾ ಧ್ಯಾನ ಮಾಡಿ. ಶುಭ್ರವಾದ, ಒಗೆದ ಬಟ್ಟೆ ಧರಿಸಿ, ಹಳದಿ ಹೂವುಗಳು, ಹಳದಿ ಹಣ್ಣುಗಳು, ಧೂಪ, ದೀಪಗಳು ಇತ್ಯಾದಿಗಳಿಂದ ವಿಷ್ಣುವನ್ನು ಪೂಜಿಸಿ.

ಆರತಿ ಮಾಡುವ ಮೂಲಕ ಪೂಜೆಯನ್ನು ಪೂರ್ಣಗೊಳಿಸಿ. ಭಗವದ್ಗೀತೆಯ ಅಧ್ಯಾಯವನ್ನು ಓದಿ ಮತ್ತು ಏಕಾದಶಿ ವ್ರತ ಕಥೆಯನ್ನು ಕೂಡ ಓದಿ. ಇಂದು ದಿನವಿಡೀ ಉಪವಾಸದಿಂದಿರಬೇಕು. ಸಂಜೆ ಪೂಜೆ, ಆರತಿ, ಪ್ರಾರ್ಥನೆ ನಂತರ ಹಣ್ಣುಗಳನ್ನು ದೇವರಿಗೆ ಅರ್ಪಿಸಿ. ಈ ಉಪವಾಸದಲ್ಲಿ ಒಮ್ಮೆ ನೀರು ಮತ್ತು ಒಂದು ಹಣ್ಣನ್ನು ತೆಗೆದುಕೊಳ್ಳಬಹುದು. ಜೀವನದಲ್ಲಿ ಗೀತಾ ಬೋಧನೆಗಳನ್ನು ಅಳವಡಿಸಿಕೊಂಡರೆ ಮೋಕ್ಷವನ್ನು ಪಡೆಯಬಹುದು.

ಈ ಬಾರಿ ಗೀತಾ ಜಯಂತಿ ಮತ್ತು ಮೋಕ್ಷದಾ ಏಕಾದಶಿಯು ಒಂದೇ ದಿನ ಬಂದಿರುವುದರಿಂದ ದಿನದ ಪ್ರಾಮುಖ್ಯತೆಯು ಹೆಚ್ಚಾಗುವುದು. ಮೋಕ್ಷವನ್ನು ಪಡೆಯುವುದಕ್ಕಾಗಿ ಈ ದಿನ ಪೂಜೆಯನ್ನು ಮಾಡಲಾಗುತ್ತದೆ.

ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:06 am, Sat, 3 December 22