AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Holi 2025: ಹೋಳಿ ಹಬ್ಬದ ಹಿಂದಿನ ದಿನ ಹೋಲಿಕಾ ದಹನ ಏಕೆ ಆಚರಿಸಲಾಗುತ್ತದೆ? ಪುರಾಣ ಕಥೆ ಇಲ್ಲಿದೆ

ಹೋಳಿ ಹಬ್ಬದ ಹಿಂದಿನ ದಿನ ಹೋಳಿಕಾ ದಹನವನ್ನು ಆಚರಿಸಲಾಗುತ್ತದೆ. ಆದರೆ ಹೋಲಿಕಾ ದಹನವನ್ನು ಏಕೆ ಆಚರಿಸಲಾಗುತ್ತದೆ ಎಂದು ತಿಳಿದಿದೆಯೇ? ಈ ಲೇಖನದಲ್ಲಿ ಪ್ರಹ್ಲಾದನ ಕಥೆಯೊಂದಿಗೆ ಹೋಳಿಕಾ ದಹನದ ಇತಿಹಾಸ ಮತ್ತು ಪುರಾಣವನ್ನು ತಿಳಿಸಲಾಗಿದೆ. ಈ ವರ್ಷದ ಹೋಳಿಕಾ ದಹನ ಯಾವಾಗ ಮತ್ತು ಆಚರಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

Holi 2025: ಹೋಳಿ ಹಬ್ಬದ ಹಿಂದಿನ ದಿನ ಹೋಲಿಕಾ ದಹನ ಏಕೆ ಆಚರಿಸಲಾಗುತ್ತದೆ? ಪುರಾಣ ಕಥೆ ಇಲ್ಲಿದೆ
Holika Dahan
ಅಕ್ಷತಾ ವರ್ಕಾಡಿ
|

Updated on:Mar 06, 2025 | 8:29 AM

Share

ರಂಗು ರಂಗಿನ ಹೋಳಿ ಹಬ್ಬ, ಎಲ್ಲರ ಮನ-ಮನಸ್ಸಿಗಳನ್ನು ಪುಳಕಿತಗೊಳಿಸುವ ಹಬ್ಬವಾಗಿದೆ. ಪ್ರತಿ ವರ್ಷ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪ್ರತಿಪದ ತಿಥಿಯಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ಹಬ್ಬದ ಒಂದು ದಿನ ಮೊದಲು ಹೋಳಿಕಾ ದಹನ ಮಾಡಲಾಗುತ್ತದೆ ಮತ್ತು ಈ ದಿನದಂದು ವಿಶೇಷ ಪ್ರಾರ್ಥನೆಗಳನ್ನು ಸಹ ಮಾಡಲಾಗುತ್ತದೆ. ಈ ವರ್ಷ ಹೋಳಿ ಹಬ್ಬವನ್ನು ಮಾರ್ಚ್ 14 ರಂದು ಆಚರಿಸಲಾಗುವುದು, ಆದರೆ ಹೋಳಿಕಾ ದಹನ ಮಾರ್ಚ್ 13 ರಂದು ನಡೆಯಲಿದೆ.

ಹೋಳಿಕಾ ದಹನಕ್ಕಾಗಿ, ಜನರು ತಮ್ಮ ಪ್ರದೇಶದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಿ ನಂತರ ಅದಕ್ಕೆ ಬೆಂಕಿ ಹಚ್ಚುತ್ತಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹೋಳಿಕಾ ದಹನ ವೀಕ್ಷಿಸುವಲ್ಲಿ ಭಾಗವಹಿಸುತ್ತಾರೆ. ಆದರೆ ಹೋಲಿಕಾ ದಹನವನ್ನು ಏಕೆ ಮಾಡಲಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೋಲಿಕಾಳನ್ನು ಏಕೆ ಸುಡಲಾಗುತ್ತದೆ ಮತ್ತು ಹೋಲಿಕಾ ದಹನದ ಹಿಂದಿನ ಕಥೆ ಏನು ಎಂಬದನ್ನು ಇಲ್ಲಿ ತಿಳಿದುಕೊಳ್ಳಿ.

ಹೋಲಿಕಾಳನ್ನು ಏಕೆ ಸುಟ್ಟು ಹಾಕಲಾಯಿತು?

ಹೋಳಿಕಾ ದಹನವನ್ನು ದುಷ್ಟರ ಮೇಲೆ ಒಳ್ಳೆಯತನ ಸಾಧಿಸುವ ವಿಜಯದ ಸಂಕೇತವೆಂದು ಪರಿಗಣಿಸಲಾಗಿದೆ. ಹೋಳಿಕಾ ದಹನದ ದಿನದಂದು ಹೋಳಿಕಾಳನ್ನು ಪೂಜಿಸಲಾಗುತ್ತದೆ ಮತ್ತು ದೀಪೋತ್ಸವವನ್ನು ಬೆಳಗಿಸಲಾಗುತ್ತದೆ. ಹೋಳಿಕಾ ದಹನದ ದಿನದಂದು ಹೋಳಿಕಾಳನ್ನು ಪೂಜಿಸುವುದು ವಾಡಿಕೆ ಎಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಯ ಪ್ರಕಾರ, ವಿಷ್ಣುವಿನ ಭಕ್ತ ಪ್ರಹ್ಲಾದನನ್ನು ಸುಟ್ಟ ಹೋಳಿಕಾಳನ್ನು ಈ ದಿನದಂದು ಬೆಂಕಿಯಲ್ಲಿ ಸುಟ್ಟು ಹಾಕಲಾಯಿತು, ಆದ್ದರಿಂದ ಈ ದಿನದಂದು ಹೋಳಿಕಾ ದಹನವನ್ನು ನಡೆಸಲಾಗುತ್ತದೆ.

ಇದನ್ನೂ ಓದಿ
Image
ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ಸಲಹೆ ಅನುಸರಿಸಿ
Image
ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ; ಅದೃಷ್ಟ ಖುಲಾಯಿಸಲಿದೆ
Image
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಈ ವಿಷ್ಯ ನೆನಪಿಟ್ಟುಕೊಳ್ಳಿ
Image
ನರಸಿಂಹ ದ್ವಾದಶಿ ಯಾವಾಗ? ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನ ತಿಳಿಯಿರಿ

ಇದನ್ನೂ ಓದಿ: 30 ವರ್ಷಗಳ ನಂತರ, ಶನಿ-ರಾಹು ಸಂಯೋಗದಿಂದ ಪಿಶಾಚ ಯೋಗ; ಯಾರಿಗೆ ಕಂಟಕ?

ಹೋಲಿಕಾ ದಹನ ಹಿಂದಿನ ಕಥೆ ಏನು?

ಹೋಳಿಕಾ ದಹನನ ಕಥೆಯು ವಿಷ್ಣುವಿನ ಭಕ್ತನಾದ ಪ್ರಹ್ಲಾದನಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ದಂತಕಥೆಯ ಪ್ರಕಾರ, ಪ್ರಹ್ಲಾದನ ತಂದೆ ರಾಕ್ಷಸ ರಾಜ ಹಿರಣ್ಯಕಶ್ಯಪ, ವಿಷ್ಣುವಿನ ಅತಿದೊಡ್ಡ ಶತ್ರು ಎಂದು ಪರಿಗಣಿಸಲ್ಪಟ್ಟಿದ್ದ ಮತ್ತು ತನ್ನನ್ನು ತಾನು ದೇವರೆಂದು ಪರಿಗಣಿಸಿಕೊಂಡಿದ್ದ. ಅವನು ತನ್ನ ರಾಜ್ಯದಲ್ಲಿ ಎಲ್ಲರೂ ದೇವರನ್ನು ಯಾರೂ ಆರಾಧಿಸಬಾರದು ಎಂದು ಆಜ್ಞಾಪಿಸಿದ್ದನು. ಆದರೆ ಅವನ ಮಗ ಪ್ರಹ್ಲಾದನು ವಿಷ್ಣುವಿನ ಮಹಾನ್ ಭಕ್ತನಾಗಿದ್ದನು. ತನ್ನ ಮಗ ದೇವರನ್ನು ಪೂಜಿಸುತ್ತಿರುವುದನ್ನು ಕಂಡ ಹಿರಣ್ಯಕಶಿಪು ತನ್ನ ಸ್ವಂತ ಮಗನನ್ನೇ ಶಿಕ್ಷಿಸಲು ನಿರ್ಧರಿಸಿದನು. ಹಿರಣ್ಯಕಶಿಪು ಪ್ರಹ್ಲಾದನಿಗೆ ಹಲವು ಬಾರಿ ತೊಂದರೆ ನೀಡಲು ಪ್ರಯತ್ನಿಸಿದನು, ಆದರೆ ಯಾವುದೂ ಸಾಧ್ಯವಾಗಲಿಲ್ಲ.

ಕೊನೆಗೆ ರಾಜ ಹಿರಣ್ಯಾಕ್ಷಯಪು ತನ್ನ ಸಹೋದರಿ ಹೋಳಿಕಾಳ ಸಹಾಯ ಕೇಳಿದ. ಹೋಳಿಕಾಗೆ ಬೆಂಕಿ ತನ್ನನ್ನು ಸುಡುವುದಿಲ್ಲ ಎಂಬ ವರವಿತ್ತು, ಆದ್ದರಿಂದ ಹೋಳಿಕಾ ಪ್ರಹ್ಲಾದನನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಬೆಂಕಿಯಲ್ಲಿ ಕುಳಿತಳು. ಆದರೆ ವಿಷ್ಣುವಿನ ಕೃಪೆಯಿಂದ ಹೋಳಿಕಾ ಆ ಬೆಂಕಿಯಲ್ಲಿ ಸುಟ್ಟುಹೋದಳು ಮತ್ತು ಪ್ರಹ್ಲಾದನು ಬದುಕುಳಿದನು. ಅಂದಿನಿಂದ ಹೋಳಿಕಾ ದಹನ ಹಬ್ಬವನ್ನು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವೆಂದು ಆಚರಿಸಲಾಗುತ್ತದೆ. ಹೋಳಿಕಾ ದಹನದ ಮರುದಿನ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸಲಾಗುತ್ತದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:28 am, Thu, 6 March 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ