Puja or Meditation: ನೆಲದ ಮೇಲೆ ಕುಳಿತು ದೇವರ ಪೂಜೆ ಮಾಡುತ್ತಿದ್ದರೆ ಇಂದೇ ಆ ಅಭ್ಯಾಸ ನಿಲ್ಲಿಸಿ

Puja Aasan or Pooja Peeta: ಆಸನಗಳ ಮೇಲೇ ಕುಳಿತು ನಾವೇಕೆ ಪೂಜೆ ಮಾಡಬೇಕು? ಮಹತ್ವವೇನು? ಪೂಜೆ ಮಾಡುವಾಗ ನಾವು ಕುಳಿತುಕೊಳ್ಳಲು ಯಾವ ಆಸನವನ್ನು ಬಳಸಬೇಕು..? ಪೂಜೆಯಲ್ಲಿ ಬಳಸುವ ಆಸನಗಳ ಮಹತ್ವವೇನು..? ಸನಾತನ ಧರ್ಮದಲ್ಲಿ, ಆಸನವಿಲ್ಲದೆ ಯಾವುದೇ ಪೂಜೆ ಅಥವಾ ಧ್ಯಾನ ಮಾಡುವುದನ್ನು ನಿಷೇಧಿಸಲಾಗಿದೆ.

Puja or Meditation: ನೆಲದ ಮೇಲೆ ಕುಳಿತು ದೇವರ ಪೂಜೆ ಮಾಡುತ್ತಿದ್ದರೆ ಇಂದೇ ಆ ಅಭ್ಯಾಸ ನಿಲ್ಲಿಸಿ
ನೆಲದ ಮೇಲೆ ಕುಳಿತು ದೇವರ ಪೂಜೆ ಮಾಡುತ್ತಿದ್ದರೆ ಇಂದೇ ಆ ಅಭ್ಯಾಸ ನಿಲ್ಲಿಸಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 14, 2023 | 6:06 AM

ಹಿಂದೂ ಧರ್ಮದಲ್ಲಿ ಮಾಡುವ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮಹತ್ವವಿದೆ. ಪೂಜೆಯಲ್ಲಿ ನಾವು ಕೆಲವೊಂದು ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ಪೂಜೆಗೆ ಸಂಬಂಧಿಸಿದ ನಿಯಮಗಳಲ್ಲಿ ನಾವು ಬಳಸುವ ಆಸನವು ಕೂಡ ಒಂದು. ಪೂಜೆ ಮಾಡುವಾಗ ನಾವು ಕುಳಿತುಕೊಳ್ಳಲು ಯಾವ ಆಸನವನ್ನು (Puja Aasan or Pooja Peeta) ಬಳಸಬೇಕು..? ಪೂಜೆಯಲ್ಲಿ ಬಳಸುವ ಆಸನಗಳ ಮಹತ್ವವೇನು..? ಸನಾತನ ಧರ್ಮದಲ್ಲಿ, ಆಸನವಿಲ್ಲದೆ ಯಾವುದೇ ಪೂಜೆ (Puja) ಅಥವಾ ಧ್ಯಾನ ಮಾಡುವುದನ್ನು ನಿಷೇಧಿಸಲಾಗಿದೆ. ಮತ್ತೊಂದೆಡೆ, ಕೆಲವು ವಿಶೇಷ ವಸ್ತುಗಳ ಭಂಗಿಗಳು ಅದೃಷ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಆಸನ ಎಂದರೆ ಆರಾಧಕ ಅಥವಾ ಪೂಜೆಯನ್ನು ಮಾಡುವವನು ಕುಳಿತುಕೊಳ್ಳಲು ಬಳಸುವ ಸಾಧನವಾಗಿದೆ. ಇದರ ಹಿಂದೆ ಅಡಗಿರುವ ಕಾರಣಗಳನ್ನು ಸನಾತನ ಧರ್ಮದ ಪುರಾಣಗಳಲ್ಲಿಯೂ ವಿವರಿಸಲಾಗಿದೆ (Spiritual).

ಪೂಜೆ ಮಾಡುವ ವಿಧಾನ

ಬ್ರಹ್ಮಾಂಡ ಪುರಾಣದ ತಂತ್ರ ಸಾರದಲ್ಲಿ ವಿವಿಧ ಆಸನಗಳ ಕುರಿತು ಮಾಹಿತಿಯನ್ನು ನೀಡಲಾಗಿದೆ. ಪುರಾಣಗಳ ಪ್ರಕಾರ, ಖಾಲಿ ನೆಲದ ಮೇಲೆ ಕುಳಿತುಕೊಂಡು ಪೂಜೆ ಮಾಡುವುದರಿಂದ ನಾವು ಅನೇಕ ರೀತಿಯ ಸಮಸ್ಯೆಗಳನ್ನು ಮತ್ತು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದರಂತೆ ಮರದ ಅಥವಾ ಬಿದಿರಿನ ಚಾಪೆಯ ಮೇಲೆ ಕುಳಿತು ಪೂಜಿಸಿದರೆ ಅಥವಾ ಎಲೆಗಳ ಆಸನದ ಮೇಲೆ ಕುಳಿತು ಪೂಜಿಸಿದರೆ ಅದು ಫಲಪ್ರದವಾಗುವುದಿಲ್ಲ. ಹಾಗಾದರೆ, ನಾವು ಯಾವ ರೀತಿಯ ಆಸನದ ಮೇಲೆ ಕುಳಿತು ಪೂಜೆಯನ್ನು ಮಾಡಬೇಕು..?

ಪೂಜೆಯಲ್ಲಿ ಆಸನಗಳ ಮಹತ್ವ

ಆಸನದ ಅಕ್ಷರಶಃ ಅರ್ಥವೆಂದರೆ ಕುಳಿತುಕೊಳ್ಳುವ ಸ್ಥಾನ. ಮತ್ತೊಂದೆಡೆ, ಒಬ್ಬರು ಕುಳಿತುಕೊಳ್ಳುವ ಭಂಗಿಯನ್ನು ಕೂಡ ಆಸನ ಎಂದೂ ಕರೆಯುತ್ತಾರೆ. ಹೆಚ್ಚಿನ ಜನರು ಪದ್ಮಾಸನದಲ್ಲಿ ಕುಳಿತು ಪೂಜೆ ಮಾಡುತ್ತಿದ್ದರು. ಅಥವಾ ಕೆಲವರು ಸಿದ್ಧಾಸನದಲ್ಲಿ ಕುಳಿತುಕೊಳ್ಳುತ್ತಾರೆ. ನೀವು ಯಾವ ರೀತಿಯಲ್ಲಿ ಕುಳಿತುಕೊಳ್ಳುತ್ತೀರಿ, ಮತ್ತು ಯಾವುದನ್ನು ನಿಮ್ಮ ಆಸನವಾಗಿ ಬಳಸಿಕೊಳ್ಳುತ್ತೀರಿ ಎಂಬುದು ಮುಖ್ಯವಾಗಿದೆ. ಕಂಬಳಿ, ಕುಶ ಇತ್ಯಾದಿಗಳ ಮೇಲೆ ಕುಳಿತು ಪೂಜೆ ಮಾಡುವುದರ ಹಿಂದೆ ವೈಜ್ಞಾನಿಕ ಮಹತ್ವವೂ ಅಡಗಿದೆ. ವಾಸ್ತವವಾಗಿ ಪೂಜೆ ಅಥವಾ ಧ್ಯಾನದ ಸಮಯದಲ್ಲಿ ಪಡೆದ ಶಕ್ತಿಯು ದೇಹದಲ್ಲಿ ವೇಗವಾಗಿ ಹರಿಯುತ್ತದೆ. ಗುರುತ್ವಾಕರ್ಷಣೆಯಿಂದ ಈ ಶಕ್ತಿ ಅಲೆಗಳು ಭೂಮಿಗೆ ಹೋದರೆ, ಪೂಜೆಯ ಪೂರ್ಣ ಫಲಿತಾಂಶವನ್ನು ಸಾಧಿಸಲಾಗುವುದಿಲ್ಲ.

ಉದಾಹರಣೆಗೆ, ಒಂದು ತಳ ಒಡೆದ ಗಾಜಿನ ಲೋಟದಲ್ಲಿ ನೀರನ್ನು ತುಂಬಿಸಿದರೆ ಆ ನೀರು ಲೋಟದಲ್ಲಿ ಉಳಿಯುವುದಿಲ್ಲ. ಬದಲಾಗಿ, ನೀರು ನೆಲದಲ್ಲಿ ಹರಿಯಲಾರಂಭಿಸುತ್ತದೆ. ಅದೇ ರೀತಿ ನಾವು ಪೂಜೆಯಲ್ಲಿ ಬಳಸುವ ಆಸನದ ಮಹತ್ವವೂ ಹಾಗೇ ಇದೆ. ನಾವು ನೆಲದ ಮೇಲೆ ಕುಳಿತು ಪೂಜೆಯನ್ನು ಮಾಡುವುದರಿಂದ ಯಾವುದೇ ಫಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ನಾವು ಪೂಜೆಯಲ್ಲಿ ಬಳಸುವ ಆಸನವು ಸ್ವಚ್ಛವಾಗಿರಬೇಕು ಮತ್ತು ಅಚ್ಚುಕಟ್ಟಾಗಿರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ಪೂಜೆಯಲ್ಲಿ ನಾವು ಯಾವ ರೀತಿಯ ಆಸನ ಬಳಸಬೇಕು..? ಹೇಗೆ ಬಳಸಬೇಕು..?

ಪೂಜೆಯ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಆಸನದ ಕುರಿತು ಕೆಲವು ವಿಶೇಷ ವಿಷಯಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅವುಗಳು ಹೀಗಿವೆ ನೋಡಿ.. – ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಪೂಜೆ ಮಾಡುವಾಗ, ಬೇರೆಯವರ ಆಸನವನ್ನು ಎಂದಿಗೂ ಬಳಸಬೇಡಿ. – ಪೂಜೆಯ ನಂತರ, ಆಸನವನ್ನು ಸರಿಯಾಗಿ ಮಡಚಿ ಮತ್ತು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ. – ಪೂಜೆಯ ಆಸನವನ್ನು ಬೇರೆ ಯಾವುದೇ ಕೆಲಸಗಳಿಗೆ ಬಳಸಬೇಡಿ. – ಪೂಜೆ ಮಾಡುವಾಗ ಕಂಬಳಿಯ ಆಸನ ಅಥವಾ ಕುಶಾಸನ ಬಳಸುವುದು ಸೂಕ್ತ. – ಕುಶಾಸನದ ಮೇಲೆ ಕುಳಿತು ಮಂತ್ರವನ್ನು ಜಪಿಸಿದರೆ ಅದು ಬಹುಬೇಗ ಫಲವನ್ನು ನೀಡುತ್ತದೆ. ಅದೇ ಸಮಯದಲ್ಲಿ, ದೇವಿಯ ಪೂಜೆ ಮತ್ತು ಹನುಮಂತನ ಪೂಜೆಯಲ್ಲಿ ಕೆಂಪು ಬಣ್ಣದ ಹೊದಿಕೆಯನ್ನು ಬಳಸಬೇಕು. ಆದರೆ ಶ್ರಾದ್ಧ ಇತ್ಯಾದಿಗಳಲ್ಲಿ ಕುಶದ ಆಸನದ ಬಳಕೆಯನ್ನು ನಿಷೇಧಿಸಲಾಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ನಾವು ದೇವರ ಪೂಜೆಯನ್ನು ಮಾಡುವಾಗ ಅಥವಾ ಮಂತ್ರಗಳನ್ನು ಜಪಿಸುವಾಗ ಯಾವ ಆಸನವನ್ನು ಬಳಸಬೇಕು ಎಂಬುದರ ಮೇಲೆ ಹೆಚ್ಚಿನ ಗಮನವಿರಬೇಕು. ನಿಮ್ಮ ಪೂಜೆಯ ಫಲವನ್ನು ನೀವು ಪಡೆದುಕೊಳ್ಳಲು ಬಯಸಿದರೆ ಆಸನದ ಆಯ್ಕೆಯು ಸೂಕ್ತವಾಗಿರಬೇಕು. ಒಂದು ವೇಳೆ ನೀವು ನೆಲದ ಮೇಲೆ ಕುಳಿತು ದೇವರ ಪೂಜೆ ಮಾಡುತ್ತಿದ್ದರೆ ಇಂದೇ ಅದನ್ನು ನಿಲ್ಲಿಸಿ.

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್