AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasantha Panchami 2022: ಜ್ಞಾನ ದೇವತೆ ಸರಸ್ವತಿಯ ಪೂಜೆಯಿಂದ ಲಭಿಸಲಿದೆ ಅನೇಕ ಫಲಗಳು

ಜನರು ಅಜ್ಞಾನದಿಂದ ಜ್ಞಾನವನ್ನು ಪಡೆಯಲು, ಆಲಸ್ಯ ಮತ್ತು ಅಜ್ಞಾನವನ್ನು ತೊಡೆದುಹಾಕಲು ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಮಕ್ಕಳಿಗೆ ಶಿಕ್ಷಣವನ್ನು ಪ್ರಾರಂಭಿಸುವ ಈ ಆಚರಣೆಯನ್ನು ಅಕ್ಷರ-ಅಭ್ಯಾಸಂ ಅಥವಾ ವಿದ್ಯಾ-ಆರಂಭಂ/ಪ್ರಾಸನ ಎಂದು ಕರೆಯಲಾಗುತ್ತದೆ,

Vasantha Panchami 2022: ಜ್ಞಾನ ದೇವತೆ ಸರಸ್ವತಿಯ ಪೂಜೆಯಿಂದ ಲಭಿಸಲಿದೆ ಅನೇಕ ಫಲಗಳು
ಜ್ಞಾನ ದೇವತೆ ಸರಸ್ವತಿ
TV9 Web
| Updated By: ಆಯೇಷಾ ಬಾನು|

Updated on: Feb 04, 2022 | 6:30 AM

Share

ವಸಂತ ಪಂಚಮಿಯನ್ನು ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಂಚಮಿಯಂದು ಆಚರಿಸಲಾಗುತ್ತೆ. ಈ ಬಾರಿ ಫೆಬ್ರವರಿ 05ರ ಶನಿವಾರದಂದು ಹಬ್ಬವನ್ನು ಆಚರಿಸಲಾಗುತ್ತೆ. ವಸಂತ ಪಂಚಮಿ(Vasantha Panchami) ದಿನವನ್ನು ಜ್ಞಾನ, ಸಂಗೀತ, ಕಲೆ, ವಿಜ್ಞಾನ ಮತ್ತು ತಂತ್ರಜ್ಞಾನದ ದೇವತೆಯಾದ ಸರಸ್ವತಿಗೆ ಸಮರ್ಪಿಸಲಾಗಿದೆ. ವಸಂತ ಪಂಚಮಿಯ ದಿನದಂದು ಸರಸ್ವತಿ ದೇವಿಯನ್ನು ಪೂಜಿಸಲಾಗುತ್ತದೆ. ವಸಂತ ಪಂಚಮಿಯನ್ನು ಶ್ರೀ ಪಂಚಮಿ ಮತ್ತು ಸರಸ್ವತಿ ಪಂಚಮಿ ಎಂದೂ ಕರೆಯಲಾಗುತ್ತದೆ.

ವಸಂತ ಪಂಚಮಿ ಮುಹೂರ್ತ ಫೆಬ್ರವರಿ 05 ರಂದು ಬೆಳಗ್ಗೆ 03:47ರ ಸಮಯಕ್ಕೆ ಪಂಚಮಿ ತಿಥಿ ಪ್ರಾರಂಭವಾಗುತ್ತದೆ ಮತ್ತು ಫೆಬ್ರವರಿ 06ರ ಬೆಳಗ್ಗೆ 03:46ಕ್ಕೆ ಪಂಚಮಿ ತಿಥಿ ಕೊನೆಗೊಳ್ಳುತ್ತದೆ.

ಜನರು ಅಜ್ಞಾನದಿಂದ ಜ್ಞಾನವನ್ನು ಪಡೆಯಲು, ಆಲಸ್ಯ ಮತ್ತು ಅಜ್ಞಾನವನ್ನು ತೊಡೆದುಹಾಕಲು ಸರಸ್ವತಿ ದೇವಿಯನ್ನು ಪೂಜಿಸುತ್ತಾರೆ. ಮಕ್ಕಳಿಗೆ ಶಿಕ್ಷಣವನ್ನು ಪ್ರಾರಂಭಿಸುವ ಈ ಆಚರಣೆಯನ್ನು ಅಕ್ಷರ-ಅಭ್ಯಾಸಂ ಅಥವಾ ವಿದ್ಯಾ-ಆರಂಭಂ/ಪ್ರಾಸನ ಎಂದು ಕರೆಯಲಾಗುತ್ತದೆ, ಇದು ವಸಂತ ಪಂಚಮಿಯ ಪ್ರಸಿದ್ಧ ಆಚರಣೆಗಳಲ್ಲಿ ಒಂದಾಗಿದೆ. ದೇವಿಯ ಆಶೀರ್ವಾದ ಪಡೆಯಲು ಶಾಲಾ-ಕಾಲೇಜುಗಳಲ್ಲಿ ಸರಸ್ವತಿ ಪೂಜೆಗಳನ್ನು ಮಾಡಲಾಗುತ್ತೆ. ಸೂರ್ಯೋದಯ ಮತ್ತು ಮಧ್ಯಾಹ್ನದ ನಡುವಿನ ಸಮಯವಾದ ಪೂರ್ವಾಹ್ನ ಕಾಲವನ್ನು ವಸಂತ ಪಂಚಮಿ ದಿನವನ್ನು ನಿರ್ಧರಿಸಲು ಪರಿಗಣಿಸಲಾಗುತ್ತದೆ. ಪೂರ್ವಾಹ್ನ ಕಾಲದ ಸಮಯದಲ್ಲಿ ಪಂಚಮಿ ತಿಥಿ ಪ್ರಚಲಿತದಲ್ಲಿರುವ ದಿನ ವಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಇದರಿಂದಾಗಿ ವಸಂತ ಪಂಚಮಿ ಕೂಡ ಚತುರ್ಥಿ ತಿಥಿಯಂದು ಬೀಳಬಹುದು. ಅನೇಕ ಜ್ಯೋತಿಷಿಗಳು ವಸಂತ ಪಂಚಮಿಯನ್ನು ಅಬುಜಾ (ಅಬೂಜ್) ದಿನವೆಂದು ಪರಿಗಣಿಸುತ್ತಾರೆ. ಈ ದಿನವನ್ನು ಎಲ್ಲಾ ಒಳ್ಳೆಯ ಕೆಲಸಗಳನ್ನು ಪ್ರಾರಂಭಿಸಲು ಮಂಗಳಕರವಾದ ದಿನವೆಂದು ಪರಿಗಣಿಸಲಾಗಿದೆ.

ವಸಂತ ಪಂಚಮಿ ಪೂಜಾ ವಿಧಿ ಸರಸ್ವತಿಯ ಆರಾಧನೆ ವೇಳೆ ಮೊದಲು, ಆಚಮಾನ, ಪ್ರಾಣಾಯಾಂ ಇತ್ಯಾದಿಗಳ ಮೂಲಕ ನಿಮ್ಮ ಬಾಹ್ಯ ಪಾವಿತ್ರ್ಯವನ್ನು ಮಾಡಿಕೊಳ್ಳಿ. ನಂತರ ಸರಸ್ವತಿಯನ್ನು ಪೂಜಿಸುವ ಪ್ರತಿಜ್ಞೆಯನ್ನು ಮಾಡಬೇಕು. ವಸಂತ ಪಂಚಮಿ ಪೂಜೆಯ ನಂತರ ‘ಯಥೋಪಲಬ್ಧಪೂಜನಸಾಮಾಗ್ರೀಭಿಃ ಭಗವತ್ಯಾಃ ಸರಸ್ವತ್ಯಾಃ ಪೂಜನಮಹಂ ಕರಿಶ್ಯೆ’ ಈ ಮಂತ್ರವನ್ನು ಓದಿ ನಂತರ ನೀರನ್ನು ಬಿಡಬೇಕು. ಇದರ ನಂತರ, ಗಣೇಶನನ್ನು ಪೂಜಿಸಬೇಕು. ಒಂದು ಪೀಠವನ್ನು ಸ್ಥಾಪಿಸಿ ಮತ್ತು ಅದರಲ್ಲಿ ಸರಸ್ವತಿ ದೇವಿಯನ್ನು ಗೌರವದಿಂದ ಆಹ್ವಾನಿಸಿ ಮತ್ತು ವೇದ ಅಥವಾ ಪೌರಾಣಿಕ ಮಂತ್ರಗಳನ್ನು ಪಠಿಸುವಾಗ ದೇವಿ ಸರಸ್ವತಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಬೇಕು. ಪೂಜೆಯ ಸಮಯದಲ್ಲಿ, ‘ಶ್ರೀ ಹೃರೀಂ ಸರಸ್ವತ್ಯೈ ಸ್ವಾಹಾ’ ಎನ್ನುವ ಅಷ್ಟಾಕ್ಷರ ಮಂತ್ರದೊಂದಿಗೆ ಎಲ್ಲವನ್ನೂ ಶ್ರೀಸರಸ್ವತಿಗೆ ಅರ್ಪಿಸಬೇಕು. ಅಂತಿಮವಾಗಿ, ಸರಸ್ವತಿ ದೇವಿಗೆ ಆರತಿ ಮಾಡಿ ಮತ್ತು ಅವಳನ್ನು ಸ್ತುತಿಸಬೇಕು.

ವಸಂತ ಪಂಚಮಿ ಪ್ರಾಮುಖ್ಯತೆ ಹಿಂದೂ ಧರ್ಮಗ್ರಂಥಗಳ ಪ್ರಕಾರ, ಭಗವಾನ್ ಶ್ರೀಮನ್ನಾರಾಯಣನು ವಾಲ್ಮೀಕಿಗೆ ಸರಸ್ವತಿಯ ಮಂತ್ರವನ್ನು ತಿಳಿಸಿದ್ದರು. ಮಹರ್ಷಿ ವಾಲ್ಮೀಕಿ, ವ್ಯಾಸ, ವಸಿಷ್ಠ, ವಿಶ್ವಾಮಿತ್ರ ಮುಂತಾದ ಋಷಿಮುನಿಗಳು ಅವರ ಆಧ್ಯಾತ್ಮಿಕ ಅಭ್ಯಾಸದಿಂದ ಮಾತ್ರ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಭಗವತಿ ಸರಸ್ವತಿಯನ್ನು ಆಹ್ಲಾದಕರಗೊಳಿಸಿ, ವಿಶ್ವವಿಜಯ ಎಂಬ ಸರಸ್ವತಿ ರಕ್ಷಾಕವಚದ ರಕ್ಷಣೆಯ ವರವನ್ನು ಪಡೆದುಕೊಂಡರು. ಭಗವತಿ ಸರಸ್ವತಿಯ ಈ ಅದ್ಭುತ ವಿಶ್ವವಿಜಯ ರಕ್ಷಾಕವಚವನ್ನು ಧರಿಸಿ ಮುನಿಗಳು ಸಾಧನೆ ಮಾಡಿದರು. ಸಂಪತ್ತಿನ ಮೂಲವೇ ವಿದ್ಯೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Temple Tour: ಧನಲಕ್ಷ್ಮಿಯಾಗಿ ಕಂಗೊಳಿಸಿದ ಕನ್ನಿಕಾ ಪರಮೇಶ್ವರಿ ದೇವಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ