ಶೂದ್ರನೆಂದರೆ ನಿಜವಾಗಿಯೂ ಕನಿಷ್ಠನೇ? ಈ ಕುರಿತಾಗಿ ಶಾಸ್ತ್ರಗಳ ತಾತ್ವಿಕ ಚಿಂತನೆಯೇನು?

ಶಾಸ್ತ್ರೀಯ ಚಿಂತನೆಯ ಪ್ರಕಾರ ನಾಲ್ಕು ವರ್ಣಗಳು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು. ಇದನ್ನು ಭಗವದ್ಗೀತೆಯಲ್ಲಿ ಭಗವಂತ ಹೇಳುತ್ತಾನೆ. "ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ" ಎಂಬುದಾಗಿ. ನಾಲ್ಕು ವರ್ಣ ವಿಭಾಗಗಳನ್ನು ನನ್ನಿಂದ ಹೇಳಲ್ಪಟ್ಟಿದೆ.

ಶೂದ್ರನೆಂದರೆ ನಿಜವಾಗಿಯೂ ಕನಿಷ್ಠನೇ? ಈ ಕುರಿತಾಗಿ ಶಾಸ್ತ್ರಗಳ ತಾತ್ವಿಕ ಚಿಂತನೆಯೇನು?
ಸಾಂದರ್ಭಿಕ ಚಿತ್ರ
Follow us
ಡಾ. ಗೌರಿ ಕೇಶವಕಿರಣ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 14, 2023 | 11:11 AM

ವರ್ತಮಾನ ಜಗತ್ತಿನಲ್ಲಿ ಹಾಗೂ ಹಲವು ಕಾಲಗಳ ಹಿಂದೆಯೂ ಅತ್ಯಂತ ಪ್ರಖರವಾಗಿ ಎದ್ದಂತಹ ಈಗಲೂ ಏಳುತ್ತಿರುವಂತಹ ಪ್ರಶ್ನೆ ಶೂದ್ರ ಎಂದರೇನು ? ಎಂಬುದಾಗಿ. ಶೂದ್ರ ಎಂಬ ಪದದ ಅರ್ಥ ಹೇಳುವುದಾದರೆ ಸೇವಕ ಅಥವಾ ಶೋಕಿಸುವವನು ಎಂಬುದು ಸರಿಯಾಗಿ ಕೂಡಿಬರುತ್ತದೆ. ಸೇವಕ ಅಂದಾಕ್ಷಣ ಯಾರ ಸೇವಕ ಎಂಬ ಪ್ರಶ್ನೆ ಏಳುವುದು ಸಹಜ. ಯಾರೋ ಒಬ್ಬ ಉತ್ತಮನ ಅಥವಾ ಉನ್ನತ ವ್ಯಕ್ತಿಯ ಸೇವಕ ಎಂಬ ಉತ್ತರ ನೀಡಬಹುದು. ಹಾಗಾದರೇ ಯಾರು ಉತ್ತಮರು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಧರ್ಮಶಾಸ್ತ್ರದ ಪ್ರಕಾರ ಹೇಳುವುದಾದರೆ ಯಾರು ಜ್ಞಾನಿಯೋ ಅವನು ಉತ್ತಮ ಎಂದು. ಶಾಸ್ತ್ರೀಯ ಚಿಂತನೆಯ ಪ್ರಕಾರ ನಾಲ್ಕು ವರ್ಣಗಳು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂದು. ಇದನ್ನು ಭಗವದ್ಗೀತೆಯಲ್ಲಿ ಭಗವಂತ ಹೇಳುತ್ತಾನೆ. “ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣ ಕರ್ಮ ವಿಭಾಗಶಃ” ಎಂಬುದಾಗಿ. ನಾಲ್ಕು ವರ್ಣ ವಿಭಾಗಗಳನ್ನು ನನ್ನಿಂದ ಹೇಳಲ್ಪಟ್ಟಿದೆ. ಅದು ಗುಣ ಕರ್ಮಕ್ಕೆ ಅನುಗುಣವಾಗಿ ವಿಭಾಗ ಮಾಡಲಾಗಿದೆ ಎಂದು.

ಈಗ ಬ್ರಾಹ್ಮಣ ಎಂದರೇನು ಎಂದು ತಿಳಿಯೋಣ ಬ್ರಹ್ಮ ವಿತ್ ಬ್ರಾಹ್ಮಣಃ ಸ್ಮೃತಃ ಎಂದು ಶಾಸ್ತ್ರ ಹೇಳುತ್ತದೆ. ಬ್ರಹ್ಮ ಎಂದರೆ ಉತ್ತಮ ಜ್ಞಾನ” ಅಥವಾ ತಾತ್ವಿಕ ಜ್ಞಾನ (ಬ್ರಹ್ಮಜ್ಞಾನ ಇದನ್ನು ಸುಲಭ ಪದದಿಂದ ಹೇಳುವುದು ಕಷ್ಟಸಾಧ್ಯ) ಎಂದು ಬಲ್ಲವರು ವ್ಯಾಖ್ಯಾನಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಬ್ರಾಹ್ಮಣ ಎಂಬ ಪದದ ಅರ್ಥ ತತ್ವಜ್ಞಾನವನ್ನು ಹೊಂದಿದವನು ಮತ್ತು ಅದಕ್ಕೆ ಪೂರಕವಾದ ವಾತಾವರಣದಲ್ಲಿ ಬದುಕುತ್ತಿರುವವನು ಎಂದು.

ಜಗತ್ತಿನ ವ್ಯವಸ್ಥೆಯು ಸುಲಲಿತವಾಗಿ ಸಾಗಲು ಒಬ್ಬರಿಗೊಬ್ಬರ ಸಹಾಯ ಅನಿವಾರ್ಯ. ಒಬ್ಬ ವ್ಯಕ್ತಿ ಜ್ಞಾನ ಸಂಪಾದನೆಗೆ ಹೊರಟನೆಂದರೆ ಅವನಿಗೆ ಉಳಿದ ಸಂಪನ್ಮೂಲಗಳನ್ನು ಒದಗಿಸುವವರು ಬೇಕಾಗುತ್ತದೆ. ಹಾಗೇ ಅವರನ್ನು ರಕ್ಷಿಸುವವರು ಪೋಷಿಸುವವರು ಅವರಿಗೆ ಬೇಕಾದ ವಾತಾವರಣವನ್ನು ನಿರ್ಮಿಸಿಕೊಡುವವರು ಹೀಗಿರುವ ವಾತಾವರಣವಿದ್ದರೆ ಅವರು ಲೋಕೋಪಯೋಗಿಯಾದ ಜ್ಞಾನ ಸಂಪಾದಿಸಿ ಎಲ್ಲರಿಗೂ ಉಪಕರಿಸಲು ಸಾಧ್ಯ.

ಈ ಸಾಧನೆಗೆ ಹಲವು ನಿಯಮಗಳಿವೆ. ಅದರಲ್ಲಿ ಕೆಲವೊಂದು ನಿಯಮ ಹೇಳುವುದಾದರೆ ಆಹಾರ ನಿಯಮ. ತಾಮಸ ಮನಸ್ಥಿತಿಯನ್ನುಂಟು ಮಾಡುವ ಆಹಾರಗಳನ್ನು ಮತ್ತು ಬೇಗ ಜೀರ್ಣವಾಗದಿರುವ ಆಹಾರಗಳನ್ನು ಸಾಧನೆ ಮಾಡುತ್ತಿರುವವರು ಸೇವಿಸಬಾರದು (ಇದನ್ನು ವೈದ್ಯಕೀಯ ಶಾಸ್ತ್ರವೂ ಒಪ್ಪುತ್ತದೆ). ನಿದ್ರಾದಿಗಳಲ್ಲಿ ನಿರ್ದಿಷ್ಟ ನಿಯಂತ್ರಣ ಇರಬೇಕಾಗುತ್ತದೆ. ಹಾಗಯೇ ದೈನಂದಿನವಾಗಿ ಕೆಲವು ಕಡ್ಡಾಯ ಆಚಾರಗಳಿರುತ್ತವೆ. ಇದೆನ್ನೆಲ್ಲಾ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾಧಿಸುತ್ತಿರಬೇಕು. ಇಂತಹ ಜನರಿಗೆ ಉಳಿದವರು ಸಹಕರಿಸಬೇಕು.

ಇದನ್ನೂ ಓದಿ; Pradosh Vrat 2023: ಪ್ರದೋಷ ವ್ರತ ಆಚರಣೆಯ ಮಹತ್ವವೇನು? ಇಲ್ಲಿದೆ ನೋಡಿ

ಈ ಸಹಕಾರದ ಕುರಿತಾಗಿ ಒಂದು ಉದಾಹರಣೆ ಕೊಡುತ್ತೇನೆ ನೋಡಿ ಒಂದು ಜಿಲ್ಲಾಧಿಕಾರಿ ಕಛೇರಿಯನ್ನು ಕಲ್ಪಿಸಿಕೊಳ್ಳಿ. ಅಲ್ಲಿ ಒಬ್ಬ ಜಿಲ್ಲಾಧಿಕಾರಿ & ಸಹಾಯಕ ಜಿಲ್ಲಾಧಿಕಾರಿ & ಅಧಿಕಾರಿ ವರ್ಗ & ಪ್ರಥಮ ದರ್ಜೆ ಸಹಾಯಕರು & ದ್ವಿತೀಯ ದರ್ಜೆ ಸಹಾಯಕರು ವಾಹನ ಚಾಲಕರು ಗುಮಾಸ್ತರು ಹೀಗೆ ವಿಭಾಗಗಳು ಇರುತ್ತವೆ ಅಲ್ಲವೇ?

ಇವರುಗಳು ತಮ್ಮ ವ್ಯಾಪ್ತಿಗೆ ಅನುಸಾರವಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಗುಮಾಸ್ತ ದ್ವಿತೀಯ ದರ್ಜೆ ಸಹಾಯಕನಿಂದ ಆರಂಭಿಸಿ ಜಿಲ್ಲಾಧಿಕಾರಿಯ ತನಕ ಅವವರವರ ಕೆಲಸಕ್ಕೆ ಸಹಕರಿಸಬೇಕು ಅಲ್ಲವೇ? ಇವನಿಗೆ ದೈಹಿಕ ಶ್ರಮ ಹೆಚ್ಚಿರುತ್ತದೆ ಅಲ್ಲವೇ? ಹಾಗೆಯೇ ದ್ವಿತೀಯ ದರ್ಜೆಯವನಿಗೆ ಸ್ವಲ್ಪ ಕಡಿಮೆ ದೈಹಿಕ ಶ್ರಮ ಇರುತ್ತದೆ. ಮುಂದೆ ಸಾಗುತ್ತಾ ಜಿಲ್ಲಾಧಿಕಾರಿಯ ಬಳಿ ತಲುಪುವಾಗ ಅವನಿಗೆ ಮೇಲ್ನೋಟಕ್ಕೆ ದೈಹಿಕ ಶ್ರಮ ಅತ್ಯಲ್ಪವಾಗಿರುತ್ತದೆ. ಕೇವಲ ಸಹಿಯೊಂದೆ ಅವನ ಕೆಲಸವೋ ಎಂಬಂತೆ ಕಾಣುತ್ತದೆ ಅಲ್ಲವೇ?

ಆದರೆ ಅವನು ಜಿಲ್ಲಾಧಿಕಾರಿಯಾಗಲು ಓದಲು ಬಳಸಿದ ಶ್ರಮ ಆಹಾರ ವಿಹಾರಗಳಲ್ಲಿ ಕಠಿಣ ನಿಯಮಗಳು ಏನಿವೆ ಅದಕ್ಕೆ ಇಂದು ಸಿಗುತ್ತಿರುವ ಗೌರವ ಇದು ಅಲ್ಲವೇ? ಹಾಗಂತ ಗುಮಾಸ್ತ ಕನಿಷ್ಠ ಎಂದು ತಾತ್ಪರ್ಯವಲ್ಲ. ಅವನ ಜವಾಬ್ದಾರಿ ಅಷ್ಟೇ. ಈಗ ನೋಡಿ ಬ್ರಾಹ್ಮಣ್ಯವೆಂಬುದು ಒಂದು ಸಾಧನೆ. ವಾಲ್ಮೀಕಿಗಳು ಸಾಧಿಸಿ ಮಹರ್ಷಿಗಳಾದರು. ತಂದೆ ಯಾರೆಂದು ತಿಳಿಯದ ಜಾಬಲಿಯೆಂಬ ಒಬ್ಬ ಸಾಮಾನ್ಯ ಹುಡುಗ ಪ್ರಾತಸ್ಮರಣೀಯ ಮಹಾತ್ಮನಾದ. ಈ ಸಾಧಕರಿಗೆ ಸಹಕರಿಸುವುದಕ್ಕೆ ಮಾತ್ರ ಈ ವರ್ಣವಿಭಾಗವಷ್ಟೇ.

ಹೇಗೆ ಜಿಲ್ಲಾಧಿಕಾರಿಯ ಜೊತೆಗೆ ಸಮನಾಗಿ ಒಬ್ಬ ಗುಮಾಸ್ತ ಹೋಗಲಾರ ಮತ್ತು ಕೂರಲಾರನೋ ಅದೇ ರೀತಿ ಜ್ಞಾನದ ಕುರಿತಾಗಿ ಸಾಧಿಸುವವನ ಸಮನಾಗಿ ಆಹಾರ ವಿಹಾರ ನಿಯಮವಿಲ್ಲದ ವ್ಯಕ್ತಿಯೋರ್ವ ಇರಬಯಸುವುದು ತಪ್ಪಲ್ಲವೇ? ಇಲ್ಲಿ ತಾರತಮ್ಯ ಎಂಬುದಲ್ಲ ಅವನವನು ಅವನವನ ವ್ಯಾಪ್ತಿಯಲ್ಲಿ ಉತ್ತಮ ಸಾತ್ವಿಕನಾಗಿ ಕಾರ್ಯ ಮಾಡಿದ್ದೇ ಆದಲ್ಲಿ ಉತ್ತಮತ್ವ ಎಂಬುದು ಇದ್ದೇ ಇದೆ. ಆದ ಕಾರಣ ಶೂದ್ರ ಎಂಬುದು ನಿಕ್ರಷ್ಟತ್ವ ಸೂಚಿಸುವ ವರ್ಣ ಅಲ್ಲ.

ಸೇವೆ ಮಾಡಿ ಬದುಕುವವನು ಶೂದ್ರ. ಸಂಪತ್ತು ನೀಡಿ ಧರ್ಮರಕ್ಷಿಸುವವನು ವೈಶ್ಯ. ಬಾಹುಬಲದಿಂದ ರಕ್ಷಿಸುವವನು ಕ್ಷತ್ರಿಯ. ಜ್ಞಾನ ಬಲದಿಂದ ರಕ್ಷಿಸುವವನು ಬ್ರಾಹ್ಮಣ. ಇದು ನಿಜವಾದ ವ್ಯವಸ್ಥೆ.ಇಲ್ಲಿ ಕನಿಷ್ಠ ಗರಿಷ್ಠ ಎಂಬ ಭಾವನೆಯೇ ತಪ್ಪು. ಅದು ಕಂಡುಬಂದರೆ ಸಾತ್ವಿಕತೆ ಎನಿಸಲ್ಪಡುವುದಿಲ್ಲ. ಒಬ್ಬೊರಿಗೊಬ್ಬರು ಸಹಕರಿಸಿ ನಡೆದರೆ ಒಳ್ಳೆಯ ಫಲ ನಿಶ್ಚಿತ. ಹಾಗೆಯೇ ಇನ್ನೊಬ್ಬರ ಸಾಧನೆಯನ್ನು ಅವಮಾನಿಸುವುದು & ಅದಕ್ಕೆ ತೊಂದರೆ ನೀಡುವುದು & ಕನಿಷ್ಠವಾಗಿ ಕಾಣುವುದು & ದುರಾಸೆ ಪಡುವುದು & ವಾಮಮಾರ್ಗ ಬಳಸುವುದು ತಪ್ಪು.

ಶೂದ್ರನೆಂಬವನು ಕನಿಷ್ಠನಲ್ಲ. ಅವನು ಪ್ರತಿಯೊಬ್ಬರ ಕಷ್ಟಕ್ಕೂ ಇಷ್ಟವನ್ನು ಕಲ್ಪಿಸುವ ಪ್ರಾಮಾಣಿಕ ಶ್ರಮಜೀವಿ. ಆ ಪ್ರಾಮಾಣಿಕತೆಗೆ ಭಗವಂತನೂ ಬಂದು ಕರುಣಿಸಿದ ಘಟನೆ ಸಾಕಷ್ಟಿದೆ. ರಾಮಾಯಾಣದಲ್ಲಿ ಗುಹನಿಗೆ ರಾಮ ಅನುಗ್ರಹಿಸಿದ. ತಾಯಿ ಶಬರಿಯ ಸೇವೆಗೆ ಅವಳು ನೀಡಿದ ಕಚ್ಚಿದ ಹಣ್ಣನ್ನು ಸೇವಿಸಿದ ಅಲ್ಲವೇ? ಹಾಗಾದರೆ ಪರಿಶುದ್ಧವಾದ ಪ್ರಾಮಾಣಿಕ ಸಾತ್ವಿಕ ಸೇವೆಗೆ ಬೆಲೆ ಇದ್ದೇ ಇದೆ.

ಡಾ.ಗೌರಿ ಕೇಶವ ಕಿರಣ ಬಿ

ಧಾರ್ಮಿಕಚಿಂತಕರು

ಮತ್ತಷ್ಟು ಅಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್