Kamika Ekadashi 2023: ಆಷಾಢ ಮಾಸದ ಕೊನೆಯ ಏಕಾದಶಿಯ ಮಹತ್ವವೇನು? ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ

ಈ ದಿನದಂದು ವಿಷ್ಣುವನ್ನು ಪೂಜಿಸಿ, ಉಪವಾಸವಿದ್ದು ವ್ರತ ಆಚರಣೆ ಮಾಡುವುದರಿಂದ ಅಕಾಲಿಕ ಮರಣದ ಭಯ, ಮಾಡಿದ ಎಲ್ಲಾ ಪಾಪಗಳಿಂದ ಮುಕ್ತಿ, ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣ ಗೊಳ್ಳುತ್ತದೆ ಎಂಬ ಪ್ರತೀತಿ ಇದೆ.

Kamika Ekadashi 2023: ಆಷಾಢ ಮಾಸದ ಕೊನೆಯ ಏಕಾದಶಿಯ ಮಹತ್ವವೇನು? ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 12, 2023 | 6:48 AM

ಹಿಂದೂ ಪಂಚಾಗದ ಪ್ರಕಾರ, ಕಾಮಿಕಾ ಏಕಾದಶಿ (Kamika Ekadashi) ಉಪವಾಸವನ್ನು ಜುಲೈ 13 ರಂದು ಆಚರಿಸಲಾಗುತ್ತದೆ. ಇದು ಆಷಾಢ ಮಾಸದ ಕೊನೆಯ ಏಕಾದಶಿಯಾಗಿರುವುದರಿಂದ ಬಳಿಕ ಜುಲೈ 17ಕ್ಕೆ ಆಷಾಢ ಮುಕ್ತಾಯವಾಗಿ ಶ್ರಾವಣ ಮಾಸ ಆರಂಭವಾಗಲಿದೆ. ಈ ವರ್ಷ ಕಾಮಿಕ ಏಕಾದಶಿಯು ಜುಲೈ 12 ಮತ್ತು 13 ರಂದು ಎರಡು ದಿನಗಳು ಬಂದಿರುವುದರಿಂದ ಎರಡು ದಿನ ಆಚರಣೆ ನಡೆಯಲಿದೆ. ಇದು ಚಾತುರ್ಮಾಸ್ಯದ ಮೊದಲ ಏಕಾದಶಿ. ಚಾತುರ್ಮಾಸ್ಯದಲ್ಲಿ ವಿಷ್ಣು 4 ತಿಂಗಳ ಕಾಲ ಯೋಗ ನಿದ್ರಾದಲ್ಲಿ ಇರುತ್ತಾನೆ. ಈ ದಿನ ವಿಷ್ಣುವನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸ ಮಾಡಲಾಗುತ್ತದೆ.

ಕಾಮಿಕಾ ಏಕಾದಶಿ ಮಹತ್ವ:

ಈ ದಿನದಂದು ವಿಷ್ಣುವನ್ನು ಪೂಜಿಸಿ, ಉಪವಾಸವಿದ್ದು ವ್ರತ ಆಚರಣೆ ಮಾಡುವುದರಿಂದ ಅಕಾಲಿಕ ಮರಣದ ಭಯ, ಮಾಡಿದ ಎಲ್ಲಾ ಪಾಪಗಳಿಂದ ಮುಕ್ತಿ, ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣ ಗೊಳ್ಳಲಿದೆ. ಜೊತೆಗೆ ಸಂಕಷ್ಟ ದೂರವಾಗಿ ಜೀವನದಲ್ಲಿ ಸುಖ, ಶಾಂತಿ ಮನೆಮಾಡಲಿದೆ. ಈ ಏಕಾದಶಿಯಂದು ಯಾವುದೇ ಅಡೆತಡೆ ಇಲ್ಲದೆ ಉಪವಾಸವನ್ನು ಆಚರಿಸಿದರೆ ವಿಷ್ಣು ಮತ್ತು ನಮ್ಮೆಲ್ಲರ ರಕ್ಷಕಿ ತಾಯಿ ಲಕ್ಷ್ಮೀ ಸಂತೋಷಟ್ಟು ನಮ್ಮ ಎಲ್ಲಾ ಆಸೆಗಳನ್ನು ಈಡೇರಿಸುತ್ತಾರೆ ಎಂಬುದು ಪೌರಾಣಿಕ ನಂಬಿಕೆಯಾಗಿದೆ. ಕಾಮಿಕಾ ಏಕಾದಶಿಯ ದಿನದಂದು, ಭಕ್ತರು ಶ್ರೀ ಹರಿ ಸ್ತೋತ್ರವನ್ನು ಪೂರ್ಣ ಭಕ್ತಿಯಿಂದ ಪಠಿಸಿದರೆ, ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ ವಿಷ್ಣುವನ್ನು ಪೂಜಿಸುವ ಮೂಲಕ, ವ್ಯಕ್ತಿಯ ಎಲ್ಲಾ ತೊಂದರೆಗಳಿಂದ ಪಾರಾಗುತ್ತಾನೆ ಮತ್ತು ಎಲ್ಲಾ ಕೆಲಸಗಳು ಕಾರ್ಯಗತ ಗೊಳ್ಳುತ್ತದೆ. ಈ ಸಂದರ್ಭದಲ್ಲಿ ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ತುಳಸಿಯನ್ನು ಪೂಜಿಸಿ, ಆದರೆ ತುಳಸಿ ಸಸ್ಯವನ್ನು ಮುಟ್ಟಬೇಡಿ ಮತ್ತು ತುಳಸಿ ಎಲೆಗಳನ್ನು ಕೀಳಬೇಡಿ. ತುಳಸಿ ಗಿಡವನ್ನು ಮುಟ್ಟಿದರೆ ತಾಯಿ ಲಕ್ಷ್ಮೀ ಕೋಪಗೊಳ್ಳುತ್ತಾಳೆ ಎಂಬ ಪ್ರತೀತಿ ಇದೆ. ಜೊತೆಗೆ ಏಕಾದಶಿ ವ್ರತ ಕಥೆಯನ್ನು ಕಾಮಿಕಾ ಏಕಾದಶಿ ಉಪವಾಸದ ದಿನದಂದು ಓದಬೇಕು ಮತ್ತು ಕೇಳಬೇಕು. ಇಲ್ಲವಾದಲ್ಲಿ ಉಪವಾಸ ಅಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: Devshayani Ekadashi 2023: ದೇವಶಯನಿ ಏಕಾದಶಿಯ ಮಹತ್ವ, ಆಚರಣೆಯ ಹಿಂದಿನ ಕಥೆ ಇಲ್ಲಿದೆ

ಕಾಮಿಕಾ ಏಕಾದಶಿ ಮುಹೂರ್ತ:

ಕಾಮಿಕಾ ಏಕಾದಶಿ ಪ್ರಾರಂಭವಾಗುವುದು ಜುಲೈ 12 ಸಂಜೆ 05.59ಕ್ಕೆ ಏಕಾದಶಿ ಕೊನೆಗೊಳ್ಳುವುದು ಜುಲೈ 13 ಸಂಜೆ 06.24ಕ್ಕೆ ಏಕಾದಶಿ ಉಪವಾಸ ಜುಲೈ 13ರಂದು ಆಚರಿಸಲಾಗುವುದು. ಪೂಜೆಗೆ ಶುಭ ಮುಹೂರ್ತ ಜುಲೈ 13 ಬೆಳಗ್ಗೆ 5:32ರಿಂದ 07:16ರವರೆಗೆ ಅಥವಾ ಬೆಳಗ್ಗೆ 10:43ರಿಂದ ಮಧ್ಯಾಹ್ನ 03:45ರವರೆಗೆ.

ವ್ರತ ಮಾಡುವುದರಿಂದ ಏನೆಲ್ಲಾ ಫಲ ಪ್ರಾಪ್ತಿಯಾಗುತ್ತದೆ?

ಈ ಏಕಾದಶಿಯನ್ನು ಆಚರಣೆ ಮಾಡುವುದರಿಂದ ಅಶ್ವಮೇಧ ಯಾಗದ ಫಲ ದೊರೆಯುತ್ತದೆ. ಹಿಂದೆ ಮಾಡಿದ ಪಾಪಗಳಿಂದ ಮುಕ್ತಿ. ಪಿತೃದೋಷದಿಂದ ಮುಕ್ತಿ, ಬ್ರಹ್ಮ ದೋಷ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ.

ಹೆಚ್ಚಿನ ಆಧ್ಯಾತ್ಮಿಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ