AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಕಾರ್ತಿಕ ಮಾಸದಲ್ಲಿ ವಿವಿಧ ಶಿವಲಿಂಗಗಳ ಆರಾಧನೆಯಿಂದ ದೊರೆಯುವ ಫಲ

ಕಾರ್ತಿಕ ಮಾಸದಲ್ಲಿ ಶಿವನ ಕೃಪೆ ಪಡೆಯಲು ವಿವಿಧ ರೀತಿಯ ಶಿವಲಿಂಗಗಳ ಪೂಜೆ ಹೆಚ್ಚು ಫಲಪ್ರದವಾಗಿದೆ. ಗಂಧ, ಪುಷ್ಪ, ಬೆಣ್ಣೆ, ವಿಭೂತಿ, ಉಪ್ಪು, ಕರ್ಪೂರ, ಗೋಮಯ, ನವರತ್ನ, ಸ್ಪಟಿಕ, ಬೆಲ್ಲ ಹಾಗೂ ಹುತ್ತದ ಮಣ್ಣಿನಿಂದ ಮಾಡಿದ ಲಿಂಗಗಳ ಆರಾಧನೆಯು ಜ್ಞಾನ, ಕೀರ್ತಿ, ಆರೋಗ್ಯ, ಐಶ್ವರ್ಯ ಮತ್ತು ಶತ್ರುನಿವಾರಣೆಯಂತಹ ಹಲವು ಪ್ರಯೋಜನಗಳನ್ನು ನೀಡುತ್ತದೆ.

Daily Devotional: ಕಾರ್ತಿಕ ಮಾಸದಲ್ಲಿ ವಿವಿಧ ಶಿವಲಿಂಗಗಳ ಆರಾಧನೆಯಿಂದ ದೊರೆಯುವ ಫಲ
ವಿಧವಿಧದ ಶಿವಲಿಂಗ ರೂಪ
ಅಕ್ಷತಾ ವರ್ಕಾಡಿ
|

Updated on:Nov 12, 2025 | 10:25 AM

Share

ಕಾರ್ತಿಕ ಮಾಸದಲ್ಲಿ ಶಿವನನ್ನು ವಿಧವಿಧದ ಶಿವಲಿಂಗ ರೂಪಗಳಲ್ಲಿ ಪ್ರಾರ್ಥಿಸುವುದರಿಂದ ದೊರೆಯುವ ಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ದೀಪ, ಸ್ನಾನ, ದೇವರ ಸ್ಮರಣೆ, ಶಿವನ ಆರಾಧನೆ, ಶಿವ ಸ್ತೋತ್ರ, ಬಿಲ್ವಪತ್ರೆ, ತುಂಬೆ ಹೂವುಗಳು ಹೀಗೆ ಎಲ್ಲವೂ ಕೂಡ ಶಿವಮಯವಾದ ಈ ಮಾಸದಲ್ಲಿ ಶಿವನ ಪೂರ್ಣಾನುಗ್ರಹವನ್ನು ಪಡೆಯಲು ಅನೇಕ ವಿಧದ ಶಿವಲಿಂಗಗಳ ಪೂಜೆಯನ್ನು ನಡೆಸಲಾಗುತ್ತದೆ. ಇತಿಹಾಸ ಮತ್ತು ಶಿವಪುರಾಣಗಳ ಪ್ರಕಾರ, ಯುಗಯುಗಗಳಿಂದಲೂ ಕಾರ್ತೀಕ ಮಾಸದಲ್ಲಿ ಶಿವನನ್ನು ವಿಧವಿಧದ ಶಿವಲಿಂಗ ರೂಪಗಳಲ್ಲಿ ಪ್ರಾರ್ಥಿಸುವುದರಿಂದ ದೊರೆಯುವ ಫಲಗಳು ಅಪಾರ.

ಶಿವನ ಕೃಪೆಗೆ ಪಾತ್ರರಾಗಲು ವಿವಿಧ ಪದಾರ್ಥಗಳಿಂದ ಮಾಡಿದ ಶಿವಲಿಂಗಗಳನ್ನು ಪೂಜಿಸುವ ವಿಧಾನಗಳು ಮತ್ತು ಅವುಗಳ ಫಲಗಳು ಹೀಗಿವೆ:

ಗಂಧದ ಲಿಂಗ:

ಶುದ್ಧವಾದ ಗಂಧದ ಪುಡಿಯನ್ನು ನೀರಿನಲ್ಲಿ ಬೆರೆಸಿ ಲಿಂಗವನ್ನು ತಯಾರಿಸಿ ಪೂಜಿಸಬೇಕು. ಇದಕ್ಕೆ ಕಸ್ತೂರಿ, ಕುಂಕುಮ, ಕರ್ಪೂರ ಸೇರಿಸಿ ಪೂಜಿಸಿದಾಗ ಶಿವನ ಸಾಕ್ಷಾತ್ ಅನುಗ್ರಹ ಮತ್ತು ತೃಪ್ತಿ ಲಭಿಸುತ್ತದೆ.

ಪುಷ್ಪ ಲಿಂಗ:

ನಾನಾವಿಧವಾದ ಹೂವುಗಳನ್ನು ಲಿಂಗಾಕಾರದಲ್ಲಿ ಜೋಡಿಸಿ ಪೂಜಿಸುವುದರಿಂದ ರಾಜಾತಿಥ್ಯ, ಸಾರ್ವಜನಿಕ ಗೌರವ ಮತ್ತು ಪ್ರತಿಷ್ಠೆ ದೊರೆಯುತ್ತದೆ.

ನವನೀತ ಲಿಂಗ (ಬೆಣ್ಣೆ):

ಬೆಣ್ಣೆಯಿಂದ ಶಿವಲಿಂಗವನ್ನು ಮಾಡಿ ಕಾರ್ತೀಕ ಮಾಸದಲ್ಲಿ ಪೂಜಿಸಿದರೆ ಕೀರ್ತಿ ಮತ್ತು ಪ್ರತಿಷ್ಠೆಗಳಿಗೆ ಭಾಜನರಾಗುತ್ತಾರೆ.

ವಿಭೂತಿ ಲಿಂಗ:

ಪವಿತ್ರ ವಿಭೂತಿಯಿಂದ ಲಿಂಗವನ್ನು ತಯಾರಿಸಿ ಪೂಜಿಸುವುದು ಜ್ಞಾನ ವೃದ್ಧಿಗೆ ಸಹಕಾರಿ. ಇದು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತಿಯನ್ನು ತರುತ್ತದೆ. ಓಂ ನಮಃ ಶಿವಾಯ ಎಂಬ ಮಂತ್ರವನ್ನು ಪಠಿಸುತ್ತಾ ಈ ಲಿಂಗಾರಾಧನೆ ಮಾಡಬಹುದು.

ಲವಣ ಲಿಂಗ (ಉಪ್ಪು):

ಕಲ್ಲು ಉಪ್ಪಿಗೆ ಸ್ವಲ್ಪ ನೀರು ಬೆರೆಸಿ ಗಟ್ಟಿಯಾದ ಲಿಂಗವನ್ನು ತಯಾರಿಸಿ ಪೂಜಿಸಿದಾಗ ಶತ್ರುಗಳು ಕಡಿಮೆ ಆಗುತ್ತಾರೆ. ಕೋಪತಾಪಗಳು ದೂರವಾಗಿ, ನಮ್ಮ ಬಗ್ಗೆ ಅಸಹ್ಯ ಪಡುವವರು ಕೂಡ ವಶೀಕರಣಗೊಳ್ಳುತ್ತಾರೆ.

ಕರ್ಪೂರ ಲಿಂಗ:

ಕರ್ಪೂರದಿಂದ ಲಿಂಗವನ್ನು ಮಾಡಿ ಪೂಜಿಸಿದರೆ ಕುಟುಂಬದಲ್ಲಿ ಮಾಟ-ಮಂತ್ರಗಳು ದೂರವಾಗಿ ಸಂತೋಷ ನೆಲೆಸುತ್ತದೆ.

ಗ್ರಾನೈಟ್ ಲಿಂಗ:

ಗ್ರಾನೈಟ್ ಕಲ್ಲುಗಳಲ್ಲಿ ಶಿವಲಿಂಗವನ್ನು ಮಾಡಿ ಪೂಜಿಸುವುದು ಆರೋಗ್ಯ ವೃದ್ಧಿಗೆ ಉತ್ತಮವಾಗಿದೆ.

ಗೋಮಯ ಲಿಂಗ (ಸಗಣಿ):

ಗೋಮಯದಿಂದ ಪುಟ್ಟ ಲಿಂಗವನ್ನು ಮಾಡಿ ಪೂಜಿಸುವುದರಿಂದ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.

ನವರತ್ನ ಲಿಂಗ:

ನವರತ್ನಗಳನ್ನು ಜೋಡಿಸಿ ಒಂದು ಲಿಂಗವನ್ನು ತಯಾರಿಸಿ ಪೂಜಿಸುವುದರಿಂದ ಐಶ್ವರ್ಯ ಪ್ರಾಪ್ತಿಯಾಗಿ, ಸಾಲಬಾಧೆಗಳಿಂದ ಮುಕ್ತಿ ಸಿಗುತ್ತದೆ.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ಸ್ಪಟಿಕ ಲಿಂಗ:

ಸ್ಪಟಿಕದಿಂದ ಮಾಡಿದ ಲಿಂಗದ ಪೂಜೆಯು ಕಾರ್ಯಸಿದ್ಧಿಯನ್ನು ನೀಡುತ್ತದೆ.

ಬೆಲ್ಲದ ಲಿಂಗ:

ಬೆಲ್ಲದಿಂದ ಲಿಂಗವನ್ನು ತಯಾರಿಸಿ ಪೂಜಿಸುವುದರಿಂದ ಕೀರ್ತಿ ಮತ್ತು ಪ್ರತಿಷ್ಠೆಗಳು ಲಭಿಸುತ್ತವೆ.

ಹುತ್ತದ ಮಣ್ಣಿನ ಲಿಂಗ:

ಎಲ್ಲಕ್ಕಿಂತ ಮಿಗಿಲಾದ ಫಲವನ್ನು ಹುತ್ತದ ಮಣ್ಣಿನ ಲಿಂಗದ ಪೂಜೆಯಿಂದ ಪಡೆಯಬಹುದು. ಹುತ್ತದ ಮಣ್ಣಿನಿಂದ ಪುಟ್ಟ ಲಿಂಗವನ್ನು ಮಾಡಿ ನಿರಂತರವಾಗಿ ಒಂಬತ್ತು ದಿನ ಅಭಿಷೇಕ ಮಾಡಿ, ಆ ಮಣ್ಣನ್ನು ಮನೆಯ ಎಲ್ಲಾ ಕಡೆ ನೀರಲ್ಲಿ ಬೆರೆಸಿ ಪ್ರೋಕ್ಷಣೆ ಮಾಡಿದರೆ ಸರ್ವ ವಿಧವಾದ ಶಿವನ ಕೃಪೆ ಲಭಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Wed, 12 November 25