AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

sleeping: ರಾತ್ರಿ ಮಲಗುವಾಗ ನಿಮ್ಮ ತಲೆ ಸರಿಯಾಗಿ ಇರಲಿ!

ನಿದ್ರೆಯೂ ಬೇಕು, ಎಚ್ಚರವೂ ಬೇಕು. ನಿದ್ರೆಯನ್ನು ಮಾಡುವುದು ಆಲಸ್ಯದ ಕಾರಣಕ್ಕಾಗಿ ಅಲ್ಲ. ಅದು ವಿಶ್ರಾಂತಿ ಅಷ್ಟೇ. ‌ದೇಹ ಹಾಗೂ ಮನಸ್ಸುಗಳು ಸದಾ ಚಟುವಟಿಕೆಯಲ್ಲಿ ಇರುತ್ತವೆ. ಅವುಗಳಿಗೆ ಸಣ್ಣ ವಿಶ್ರಾಂತಿ ಬೇಕು. ಅದಕ್ಕೆ ರಾತ್ರಿಯು ಉತ್ತಮವಾದ ಕಾಲ.

sleeping: ರಾತ್ರಿ ಮಲಗುವಾಗ ನಿಮ್ಮ ತಲೆ ಸರಿಯಾಗಿ ಇರಲಿ!
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 09, 2023 | 9:48 PM

Share

ನಿದ್ರೆ ಪ್ರಾಣಿಗಳಿಗೆ ದೇವರು ಕೊಟ್ಟ ವರ. ಅದಲ್ಲದೇ ಹೋಗಿದ್ದರೆ ಏನಾಗುತ್ತಿತ್ತು? ಪೂರ್ತಿ ದಿನ ಎಚ್ಚರಿದ್ದರೆ ಏನಾಗುತ್ತದೆ? ಹೆಚ್ಚು ಸಮಯ ಸಿಗುತ್ತದೆ. ಏನನ್ನಾದರೂ ಮಾಡಬಹುದು, ಓದಬಹದು, ಸಂಪಾದಿಸಬಹುದು. ಹೀಗೆ ಅನೇಕ ಕೆಲಸಗಳನ್ನು ಮಾಡಬಹುದು.‌ ಸುಮ್ಮನೇ ರಾತ್ರಿ ಮಲಗಿ (sleeping) ಟೈಮ್ ವೇಸ್ಟ್‌ ಆಗುತ್ತೆ ಅಲ್ವಾ? ಎಂದೆಲ್ಲ ಅನ್ನಿಸಬಹುದು. ಅಥವಾ ಆರು ಏಳು ತಾಸು ನಿದ್ರಿಸಬೇಕಾ? ಎನ್ನುವವರೂ ಇದ್ದಾರೆ. ಆದರೆ ಅಲಸರಿಗೆ ಇದೇ ಹೆಚ್ಚು ಸುಖ. ಅವರು ಇದನ್ನೇ ತಿರುಗಿಸಿ ಕೇಳಬಹುದು. ನೀವೆ ಅಷ್ಟೆಲ್ಲ ಮಾಡಿ ಸುಖವನ್ನು ಪಡೆಯುತ್ತೀರಿ, ಆದರೆ ನಾವು ಏನೂ ಮಾಡದೇ ಸುಖಿಯಾಗಿರುತ್ತೇವೆ ಎನ್ನಬಹುದು. ಅವರಿಗೆ ಕೆಲಸವೆಲ್ಲ ಬೇಕಾ ಎಂದು ಅನ್ನಿಸುತ್ತದೆ.

ನಿದ್ರೆಯೂ ಬೇಕು, ಎಚ್ಚರವೂ ಬೇಕು. ನಿದ್ರೆಯನ್ನು ಮಾಡುವುದು ಆಲಸ್ಯದ ಕಾರಣಕ್ಕಾಗಿ ಅಲ್ಲ. ಅದು ವಿಶ್ರಾಂತಿ ಅಷ್ಟೇ. ‌ದೇಹ ಹಾಗೂ ಮನಸ್ಸುಗಳು ಸದಾ ಚಟುವಟಿಕೆಯಲ್ಲಿ ಇರುತ್ತವೆ. ಅವುಗಳಿಗೆ ಸಣ್ಣ ವಿಶ್ರಾಂತಿ ಬೇಕು. ಅದಕ್ಕೆ ರಾತ್ರಿಯು ಉತ್ತಮವಾದ ಕಾಲ. ಸೂರ್ಯನು ನಮಗೆ ಎನರ್ಜಿಯನ್ನು ಕೊಡುವವನು‌. ಆತನು ಅಸ್ತವಾದ ಮೇಲೆ ನಮ್ಮ ಎನರ್ಜಿಯೂ ಕ್ಷೀಣಿಸುವುದು ಹಾಗಾಗಿ ರಾತ್ರಿ ವಿಶ್ರಾಂತಿ ಬೇಕು.

ಇದನ್ನೂ ಓದಿ: Temple: ದೇವಾಲಯದ ದೇವರೆದುರಿನ ಗಂಟೆ ಏನಾದರೂ ಹೇಳುವುದುಂಟೇ..?

ರಾತ್ರಿ ಮಲಗುವಾಗ ಹೇಗೆ ಮಲಗಬೇಕು? ಎಂದರೆ ದಪ್ಪ ಹಾಸಿಗೆ ಹಾಕಿಕೊಂಡು, ಚಳಿಯಿದ್ದರೆ ದಪ್ಪ ಬೆಡ್ ಶೀಟ್ ನ್ನು ಹಾಕಿಕೊಂಡು, ಸೆಕೆ ಇದ್ದರೆ ಹವಾನಿಯಂತ್ರಣ ರೂಮ್ ನಲ್ಲಿ ಬೆಚ್ಚಗೆ ಹೊದ್ದು ಮಲಗಬೇಕು ಎನ್ನಬಹುದು. ಆದರೆ ತಲೆ ಹೇಗಿರಬೇಕು ಎಂದರೆ ದಿಂಬನ ಮೇಲಿರಬೇಕು ಎಂಬ ಉತ್ತರ ಬರಬಹುದು. ನಿದ್ರೆಯೂ ಕೂಡ ಪ್ರಕೃತಿದತ್ತವಾದ ಕ್ರಿಯೆ ಎನ್ನುವುದನ್ನು ಮರೆಯಬಾರದು. ಹಾಗಾಗಿ ಅಲ್ಲಿಯೂ ಕೂಡ ಕ್ರಮವಿರುತ್ತದೆ.

ಯಾವ ದಿಕ್ಕಿಗೆ ತಲೆ ಹಾಕಿಕೊಂಡು ಮಲಗಬೇಕು? ಎನ್ನುವದು ಭಾರತೀಯರ ವಿಚಾರ. ಸಾಮಾನ್ಯವಾಗಿ ಯಾವ ದಿಕ್ಕಿಗೆ ತಲೆ ಇರುತ್ತದೋ ಅದರ ವಿರುದ್ಧ ದಿಕ್ಕಿನಲ್ಲಿ ಕಾಲಿರುತ್ತದೆ. ಇನ್ನೂ ಕೆಲವು‌ ಕಡೆ ರಾತ್ರಿ ಮಲಗುವಾಗ ತಲೆ ಇದ್ದ ಸ್ಥಳದಲ್ಲಿ ಕಾಲೂ, ಕಾಲಿದ್ದ ಜಾಗದಲ್ಲಿ ತಲೆಯೂ ಬರಬಹುದು. ಅಥವಾ ತೊಂಭತ್ತರ ಕೋನವೂ ಆಗುವ ಸಾಧ್ಯತೆ ಇದೆ.‌ ಇದೆಲ್ಲವೂ ನಿಮ್ಮ ನಿಯಂತ್ರಣವನ್ನು ತಪ್ಪಿ ಆಗುವ ಕೆಲಸ. ಆದರೆ ಮಲಗುವಾಗ ಯಾವ ದಿಕ್ಕಗೆ ತಲೆಯನ್ನು ಹಾಕಿ ಮಲಗಿದ್ದೇವೆ ಎಂಬುದನ್ನು ನೋಡಿಕೊಳ್ಳಬೇಕು.

ನಿದ್ರಿಸಲು ಯಾವ ದಿಕ್ಕು ಶ್ರೇಷ್ಠ?

ಪೂರ್ವ, ದಕ್ಷಿಣ, ಪಶ್ಚಿಮ, ಉತ್ತರ ಎಂಬುದಾಗಿ ನಾಲ್ಕು ದಿಕ್ಕುಗಳು.‌ ಆಗ್ನೇಯ,‌ ನೈರುತ್ಯ, ವಾಯವ್ಯ, ಈಶಾನ್ಯ ಎಂಬುದಾಗಿ ನಾಲ್ಕು ಉಪದಿಕ್ಕುಗಳು.‌ ಇಲ್ಲಿ ಪೂರ್ವ ಹಾಗೂ ದಕ್ಷಿಣಕ್ಕೆ ತಲೆಯನ್ನು ಇಟ್ಟು ಮಲಗಬೇಕು. ಉತ್ತರ ಮತ್ತು ದಕ್ಷಿಣಕ್ಕೆ ಅಲ್ಲ. ಪೂರ್ವದಿಕ್ಕಿಗೆ ತಲೆ ಹಾಕಿ ಮಲಗಿದರೆ ಸಂಪತ್ತು, ಯಶಸ್ಸುಗಳು ಸಿಗುವುದು. ದಕ್ಷಿಣಕ್ಕೆ ತಲೆ ಇಟ್ಟು ಮಲಗಿದರೆ ಆರೋಗ್ಯವು ವೃದ್ಧಿಯಾಗುವುದು. ಪಶ್ಚಿಮಕ್ಕೆ ತಲೆ ಇಟ್ಟ ಮಲಗಿದರೆ ಮಾನಸಿಕ ನೆಮ್ಮದಿಯು ಸಿಗದು. ದಿನವಿಡೀ ಮನಸ್ಸು ನಕಾರಾತ್ಮಕವಾಗಿ ಇರುವುದು. ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಿದರೆ ಮೃತ್ಯುವು ಬರುವುದು.

ಇದನ್ನೂ ಓದಿ: ವಾಸ್ತು ಸಲಹೆಗಳು: ಮನೆಯಲ್ಲಿ ಅಶಾಂತಿ ತೊಲಗಿ, ಸಂತೋಷ ತುಂಬಲು ಈ ಕ್ರಿಯೆಗಳನ್ನು ಅನುಸರಿಸಿ

ಪೂರ್ವವು ಸೂರ್ಯೋದಯದ ಸಿಕ್ಕು. ಆ ಕಡೆಗೆ ತಲೆ ಹಾಕಿ ಮಲಗಬೇಕು. ಆ ಕಡೆ ಕಾಲು ಹಾಕಿದರೆ ಅಗೌರವ ಕೊಟ್ಟಂತಾಗುವುದು. ಉತ್ತರ ದಿಕ್ಕಿಗೆ ತಲೆ‌ ಇಟ್ಟರೆ ನಾವು ದಕ್ಷಿಣ ದಿಕ್ಕಿನ್ನು ನೋಡುತ್ತೇವೆ. ಅಂದರೆ ಮೃತ್ಯುವನ್ನೇ ನೋಡುತ್ತ ಮಲಗುತ್ತೇವೆ ಎಂದರ್ಥ. ಉಪ ದಿಕ್ಕಿಗಳಿಗೆ ತಲೆ ಹಾಕಿದರೂ ಮುಖ್ಯ ಎರಡು ದಿಕ್ಕುಗಳ ಸ್ವಲ್ಪ ಭಾಗವು ಬರುವುದು. ಹಾಗಾಗಿ ನೀವು ಮಲಗುವಾಗ ‘ನಿಮ್ಮ ತಲೆ ಸರಿಯಿದೆಯಾ’ ಎಂದು ನೋಡಿಕೊಂಡು ಮಲಗಬೇಕು. ಉತ್ತಮ‌ ಆಚರಣೆಗಳು ಉತ್ತಮವಾದುದನ್ನೇ ಮಾಡುತ್ತವೆ.

ಮತ್ತಷ್ಟು ಅಧ್ಯಾತ್ಮ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ