ದೇವರ ಹುಂಡಿಗೆ ಎಷ್ಟು ಹಣ ಹಾಕಬೇಕು? ಇದರಿಂದ ಯಾವ ರೀತಿ ಫಲ ದೊರೆಯುತ್ತೆ

ನಾವು ದೇವಸ್ಥಾನಗಳಿಗೆ ಹೋಗಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸಿ ಬರುವುದು ಕಷ್ಟ ನಿವಾರಣೆ ಮಾಡಿಕೊಳ್ಳಲು ಮಾಡುವ ಪರಿಹಾರವೇ ಆಗಿದೆ. ಕೆಲವರು ಹರಕೆ ಹೇಳಿಕೊಂಡಿದ್ದರೆ ಅಥವಾ ಮನಸ್ಸಿಗೆ ಬಂದಷ್ಟು ಹಣವನ್ನು ದೇವರ ಹುಂಡಿಗೆ ಹಾಕುತ್ತೇವೆ. ಆದರೆ ನಿಜವಾಗಿಯೂ ಎಷ್ಟು ಹಣ ಹಾಕಬೇಕು? ಇದರಿಂದ ಯಾವೆಲ್ಲ ದೋಷಗಳು ಪರಿಹಾರವಾಗುತ್ತದೆ? ಎಂಬುದನ್ನು ತಿಳಿದುಕೊಳ್ಳಿ.

ದೇವರ ಹುಂಡಿಗೆ ಎಷ್ಟು ಹಣ ಹಾಕಬೇಕು? ಇದರಿಂದ ಯಾವ ರೀತಿ ಫಲ ದೊರೆಯುತ್ತೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 11, 2024 | 5:31 PM

ಜೀವನದ ಕಷ್ಟ ಮತ್ತು ದೋಷಗಳು ದೂರವಾಗಲು ದೇವರಲ್ಲಿ ನಾವು ಪ್ರಾರ್ಥನೆ ಮಾಡುವುದು ಸಹಜ. ಅದರಲ್ಲೂ ನಾವು ಮಾಡುವ ಕೆಲವು ಪರಿಹಾರಗಳು ವಿಶೇಷ ಫಲಗಳನ್ನು ನೀಡುತ್ತದೆ. ಅದರಲ್ಲಿ ನಾವು ದೇವಸ್ಥಾನಗಳಿಗೆ ಹೋಗಿ ದೇವರ ಹುಂಡಿಗೆ ಕಾಣಿಕೆ ಅರ್ಪಿಸಿ ಬರುವುದು ಕೂಡ ಒಂದು ರೀತಿಯ ಪರಿಹಾರವೇ ಆಗಿದೆ. ಕೆಲವರು ಹರಕೆ ಹೇಳಿಕೊಂಡಿದ್ದರೆ ಅಥವಾ ಮನಸ್ಸಿಗೆ ಬಂದಷ್ಟು ಹಣವನ್ನು ದೇವರ ಹುಂಡಿಗೆ ಹಾಕುತ್ತೇವೆ. ಆದರೆ ನಿಜವಾಗಿಯೂ ಎಷ್ಟು ಹಣ ಹಾಕಬೇಕು? ಯಾವೆಲ್ಲ ದೋಷಗಳು ಪರಿಹಾರವಾಗುತ್ತದೆ? ಇದು ಯಾವ ರೀತಿಯ ಫಲಗಳನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಏಕೆಂದರೆ ಕೆಲವೊಂದು ಸಮಸ್ಯೆಗಳ ನಿವಾರಣೆಗೆ ಇಂತಿಷ್ಟು ಹಣವನ್ನು ಅರ್ಪಿಸಬೇಕಾಗುತ್ತದೆ. ಹಾಗಾಗಿ ಎಂತಹ ಕಷ್ಟ ಬಂದಾಗ ಎಷ್ಟು ಹಣವನ್ನು ದೇವರಿಗೆ ನೀಡಬೇಕು? ಅದನ್ನು ಸಂಕಲ್ಪ ಪೂರ್ವಕವಾಗಿ ಹೇಗೆ ಅರ್ಪಿಸಬೇಕು ಎಂದು ತಿಳಿದುಕೊಳ್ಳಿ.

  • ನೀವು ಏಳು ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಿದರೆ ತುಂಬಾ ಒಳ್ಳೆಯದು. ಇದರಿಂದ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತದೆ.
  • ಶತ್ರು ಭಾದೆ ಮತ್ತು ಶನಿ ದೋಷ ದೂರವಾಗಲು 9 ರೂಪಾಯಿಯನ್ನು ದೇವರ ಹುಂಡಿಗೆ ಹಾಕಬೇಕು. ನವರಾತ್ರಿಯಲ್ಲಿ ದಿನಗಳು ಒಂಬತ್ತು. ಹಾಗಾಗಿ ಈ ಸಂಖ್ಯೆಯ ಹಣವನ್ನು ದೇವರ ಹುಂಡಿಗೆ ಹಾಕುವುದರಿಂದ ಶತ್ರುಗಳ ಸಮಸ್ಯೆ ಇದ್ದಲ್ಲಿ ಪರಿಹಾರಗೊಳ್ಳುತ್ತದೆ ಎನ್ನಲಾಗುತ್ತದೆ.
  • 11 ಚಂದ್ರನಿಗೆ ಪ್ರೀಯವಾದ ಸಂಖ್ಯೆ. ಹಾಗಾಗಿ 11 ರೂಪಾಯಿಯನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ಮಾನಸಿಕ ಸಮಸ್ಯೆಗಳಿದ್ದಲ್ಲಿ ಬೇಗ ಗುಣಮುಖವಾಗುತ್ತದೆ.
  • ಕುಟುಂಬ ರಕ್ಷಣೆಗೆ ದುರ್ಗಾ ದೇವಿಯ ಆಲಯಕ್ಕೆ ಹೋದಾಗ ಮರೆಯದೇ 12 ರೂಪಾಯಿಗಳನ್ನು ಹುಂಡಿಗೆ ಹಾಕಿ ಬನ್ನಿ ಇದರಿಂದ ಕುಟುಂಬಕ್ಕೆ ಅಮ್ಮನವರ ರಕ್ಷಣೆ ಪ್ರಾಪ್ತಿಯಾಗುತ್ತದೆ.
  • 21 ಮಹಾಗಣಪತಿಯ ಸಂಖ್ಯೆ ಹಾಗಾಗಿ ಗಣೇಶನ ಆಲಯಕ್ಕೆ ಹೋದಾಗ 21 ರೂಪಾಯಿಗಳನ್ನು ಅರ್ಪಿಸಿದರೆ ದೂರಾದೃಷ್ಟ ದೂರವಾಗುತ್ತದೆ. ಪ್ರತಿ ಕೆಲಸದಲ್ಲಿಯೂ ವಿಘ್ನ ಬರುವುದು ದೂರವಾಗಿ ಅದೃಷ್ಟ ಪ್ರಾಪ್ತಿಯಾಗುತ್ತದೆ.
  • ಗುರು ಗ್ರಹದ ದೋಷ ಪರಿಹಾರಕ್ಕೆ 54 ರೂಪಾಯಿಗಳನ್ನು ಹುಂಡಿಗೆ ಹಾಕಿ. ಇದರಿಂದ ಧನ ಲಾಭ ಮತ್ತು ಎಲ್ಲಾ ಕೆಲಸದಲ್ಲಿಯೂ ಜಯ ಪ್ರಾಪ್ತಿಯಾಗುತ್ತದೆ.
  • ಜಾತಕ ದೋಷ ಇದ್ದಲ್ಲಿ ದೇವಸ್ಥಾನಕ್ಕೆ ಹೋದಾಗ 108 ರೊಪಾಯಿಗಳನ್ನು ಹುಂಡಿಗೆ ಹಾಕಿ ಬನ್ನಿ. ಹೀಗೆ ಮಾಡುವುದರಿಂದ ನಿಮ್ಮ ಕೋರಿಕೆಗಳು ಈಡೇರುವುದರ ಜೊತೆಗೆ ದೋಷಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ 108 ಶ್ರೀ ಚಕ್ರದ ಸಂಕೇತವೂ ಮತ್ತು ವಿಶ್ವದ ಮೂಲವೂ ಹೌದು. ದೇಗುಲದಲ್ಲಿ 108 ರೂಪಾಯಿಗಳನ್ನು ಅರ್ಪಿಸಿದರೆ ಸಕಲ ಕೋರಿಕೆಗಳು ಈಡೇರುತ್ತದೆ. ಸಕಲ ಸಿದ್ದಿಗಳು ಪ್ರಾಪ್ತಿಯಾಗುತ್ತದೆ.
  • ಸಪ್ತ ಜನ್ಮಗಳ ಪಾಪಗಳು ದೂರವಾಗಲು 116 ರೂಪಾಯಿಗಳನ್ನು ದೇವರ ಹುಂಡಿಗೆ ಹಾಕಬೇಕು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ