ಮಹಿಳೆಯರು ಕೈಗಳಿಗೆ ಬಳೆಗಳನ್ನು ಹಾಕಿಕೊಳ್ಳುವುದೇಕೆ ಗೊತ್ತಾ? ಇದರ ಹಿಂದಿನ ಮಹತ್ವವೇನು?

| Updated By: ಆಯೇಷಾ ಬಾನು

Updated on: Jan 21, 2022 | 7:20 AM

ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸಬಹುದು.

ಮಹಿಳೆಯರು ಕೈಗಳಿಗೆ ಬಳೆಗಳನ್ನು ಹಾಕಿಕೊಳ್ಳುವುದೇಕೆ ಗೊತ್ತಾ? ಇದರ ಹಿಂದಿನ ಮಹತ್ವವೇನು?
ಮಹಿಳೆಯರು ಕೈಗಳಿಗೆ ಬಳೆಗಳನ್ನು ಹಾಕಿಕೊಳ್ಳುವುದೇಕೆ ಗೊತ್ತಾ?
Follow us on

ಹಿಂದಿನ ಕಾಲದಲ್ಲಿ ನಮ್ಮ ಮನೆಯಲ್ಲಿ ಅಮ್ಮ, ಅಕ್ಕ, ತಂಗಿ ಹೀಗೆ ಎಲ್ಲಾ ಸ್ತ್ರೀಯರು ತಪ್ಪದೇ ನಮ್ಮ ಹಿಂದೂ ಸಂಪ್ರದಾಯದಂತೆ ಕೈಗಳಿಗೆ ಬಳೆಗಳನ್ನು ಹಾಕಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ. ಯಾವುದಾದರೂ ಕಾರ್ಯಕ್ರಮಗಳಿಗೆ ಹೋಗುವಾಗ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕೈಗಳಿಗೆ ಬಳೆಗಳನ್ನು ಹಾಕಿಕೊಳ್ಳುತ್ತಾರೆ.

ಗಾಜಿನ ಬಳೆಗಳಿಗೂ ನಮ್ಮ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ಆದರೆ ಅನೇಕ ಕಾರಣಗಳನ್ನು ನೀಡಿ ಇಂದು ಮಹಿಳೆಯರು ಬಳೆಗಳನ್ನು ಹಾಕಿಕೊಳ್ಳುತ್ತಿಲ್ಲ. ಒಡೆದು ಹೋಗುತ್ತದೆ, ಕೈಗಳಿಗೆ ಚುಚ್ಚಿ ಕೊಳ್ಳುತ್ತವೆ, ಮನೆಯಲ್ಲಿ ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲವೆಂದು ಅನೇಕ ಕಾರಣಗಳನ್ನು ನೀಡುತ್ತಾರೆ. ಆದರೆ ಬಳೆಗಳನ್ನು ಧರಿಸುವುದರಿಂದ ಆಗುವ ಪ್ರಯೋಜನಗಳು ಏನೇನು? ಎಂಬುದು ಅನೇಕ ಜನರಿಗೆ ಗೊತ್ತಿಲ್ಲ. ಬನ್ನಿ ಇದರ ಬಗ್ಗೆ ತಿಳಿದುಕೊಳ್ಳೋಣ.

ಬಳೆಗಳಿಗೆ ಚಂದ್ರನೊಂದಿಗೆ ಮತ್ತು ಶುಕ್ರನಿಗೆ ನೇರವಾದ ಸಂಬಂಧವಿರುತ್ತದೆ. ಬಳೆಗಳು ಹಾಗೂ ಅವುಗಳ ಬಣ್ಣ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ಒಂದು ವೇಳೆ ನೀವು ಹಳದಿ ಬಣ್ಣದ ಬಳೆಗಳನ್ನು ಧರಿಸಿದರೆ ಚಂದ್ರ ಹಾಗೂ ಬೃಹಸ್ಪತಿಗೆ ಹೋಲಿಸುತ್ತಾರೆ. ಅದರ ಪ್ರಭಾವದಿಂದ ನೀವು ತೆಗೆದುಕೊಳ್ಳುವ ನಿರ್ಣಯಗಳು ದೃಢವಾಗಿರುತ್ತದೆ. ಚಂದ್ರ ನಮ್ಮ ಜೀವನದಲ್ಲಿ ಒಳ್ಳೆಯ ಪ್ರಭಾವ ಬೀರುತ್ತಾನೆ. ನಮ್ಮ ಸುಖ ಸಂತೋಷಗಳಿಗೆ ಕಾರಣನಾಗುತ್ತಾನೆ. ಹಾಗೂ ಹಳದಿ ಬಣ್ಣ ಗಣಪತಿಗೆ ಸಂಬಂಧಿಸಿದ್ದು ಎಂದು ಹೇಳುತ್ತಾರೆ.

ಮಹಿಳೆಯರು ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳೆಗಳನ್ನು ಧರಿಸುವುದರಿಂದ ನಮ್ಮ ಜೀವನದಲ್ಲಿ ಭಾಗಶಃ ಸುಖ ಸಂತೋಷವನ್ನು ಕಳೆದುಕೊಂಡಂತೆಯೇ. ಆದ್ದರಿಂದಲೇ ವಾರಕ್ಕೆ ಎರಡು ದಿನಗಳಾದರೂ ಸರಿಯಾಗಿ ಬಳೆಗಳನ್ನು ಧರಿಸಲು ಪ್ರಯತ್ನಿಸಬೇಕು. ಸೋಮವಾರ ಮತ್ತು ಬುಧವಾರ ಬಳೆಗಳನ್ನು ಧರಿಸಿ ಆಗ ನಿಮಗೆ ಅದೃಷ್ಟ ಕೂಡಿ ಬರುತ್ತದೆ.

ಭಾರತೀಯ ಮಹಿಳೆಯರು ಏಕೆ ಬಳೆಗಳನ್ನು ಧರಿಸುತ್ತಾರೆ
ಸಾಮಾನ್ಯವಾಗಿ ಮನುಷ್ಯರಲ್ಲಿ ಮೊಣಕೈ ಭಾಗವು ಅತಿ ಹೆಚ್ಚು ಸಕ್ರಿಯವಾಗಿರುವ ಭಾಗವಾಗಿದೆ. ಇದರ ಜೊತೆಗೆ ಇದೇ ಭಾಗದಲ್ಲಿನ ನಾಡಿಯನ್ನು ಪರೀಕ್ಷಿಸಿಯೇ ಜನರಿಗೆ ಬರುವ ವಿವಿಧ ಕಾಯಿಲೆಗಳನ್ನು ಗುರುತಿಸಬಹುದು. ಮಹಿಳೆಯರು ಬಳೆಗಳನ್ನು ತಮ್ಮ ಅಂಗೈಗೆ ಧರಿಸಿಕೊಳ್ಳುವುದು ತಿಳಿದ ವಿಚಾರವೇ. ಇದರಿಂದ ಬಳೆಗಳ ನಿರಂತರ ಘರ್ಷಣೆಯು ಈ ಭಾಗದ ಮೇಲೆ ಆಗುತ್ತಿರುತ್ತದೆ. ಆಗ ಇದು ದೇಹದಲ್ಲಿನ ರಕ್ತ ಪರಿಚಲನೆಯು ಅಧಿಕಗೊಳ್ಳುತ್ತದೆ. ಕೆಲವೊಮ್ಮೆ ನಮ್ಮ ದೇಹದಲ್ಲಿ ಸೃಷ್ಟಿಯಾಗುವ ವಿದ್ಯುತ್ ನಮ್ಮ ತ್ವಚೆಯ ಮೂಲಕ ಹೊರ ಬರುತ್ತದೆ, ಆಗ ಬಳೆಗಳು ಅದನ್ನು ಎಳೆದುಕೊಂಡು ಪುನಃ ನಮ್ಮ ದೇಹಕ್ಕೆ ರವಾನಿಸುತ್ತವೆ. ಏಕೆಂದರೆ ಬಳೆಗಳು ದುಂಡಗೆ ವೃತ್ತಾಕಾರವಾಗಿ ಇರುವುದರಿಂದ ವಿದ್ಯುತ್ ಇತರ ಕಡೆ ಪ್ರವಾಹಿಸಲು ಸಾಧ್ಯವಾಗದೆ ಮರಳಿ ದೇಹಕ್ಕೆ ರವಾನೆಯಾಗುತ್ತದೆ.

ಮಾಹಿತಿ: ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ, ವಾಸ್ತುಶಾಸ್ತ್ರಜ್ಞ

ಇದನ್ನೂ ಓದಿ:Sankashti Chaturthi 2022: ಇಷ್ಟಾರ್ಥ ಸಿದ್ಧಿ ಸಂಕಷ್ಟ ಚತುರ್ಥಿ; ಆಚರಣೆ, ಚಂದ್ರೋದಯದ ಸಮಯದ ಬಗ್ಗೆ ತಿಳಿಯಿರಿ