AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maha Shivratri 2023: ಮಹಾ ಶಿವರಾತ್ರಿಗೆ ರೈಲ್ವೆ ಇಲಾಖೆಯಿಂದ 12 ಶಿವನ ದೇವಾಲಯಗಳಿಗೆ ಟೂರ್ ಪ್ಯಾಕೇಜ್; ವಿವರ ಇಲ್ಲಿದೆ

Jyotirlinga Yatra Tour Package: ಶಿವನು ಬೆಳಕಿನ ರೂಪವಾಗಿ ಕಾಣಿಸಿಕೊಂಡನೆಂದು ನಂಬಲಾದ ದೇವಾಲಯಗಳು ಈ 12 ಜ್ಯೋತಿರ್ಲಿಂಗಗಳಾಗಿವೆ.

Maha Shivratri 2023: ಮಹಾ ಶಿವರಾತ್ರಿಗೆ ರೈಲ್ವೆ ಇಲಾಖೆಯಿಂದ 12 ಶಿವನ ದೇವಾಲಯಗಳಿಗೆ ಟೂರ್ ಪ್ಯಾಕೇಜ್; ವಿವರ ಇಲ್ಲಿದೆ
ಮಹಾಶಿವರಾತ್ರಿ
ಸುಷ್ಮಾ ಚಕ್ರೆ
|

Updated on:Feb 12, 2023 | 11:58 AM

Share

ನವದೆಹಲಿ: ಮಹಾಶಿವರಾತ್ರಿಯು (Maha Shivratri) ಶಿವನನ್ನು ಪೂಜಿಸುವವರಿಗೆ ಬಹಳ ಪ್ರಮುಖ ದಿನವಾಗಿದೆ. ಭಾರತದ ಅತ್ಯಂತ ಪೂಜ್ಯ ದೇವರಲ್ಲಿ ಒಬ್ಬನಾದ ಶಿವನಿಗೆ (Shiva Temples) ಹಲವಾರು ದೇವಾಲಯಗಳಿವೆ. 12 ಶಿವ ಜ್ಯೋತಿರ್ಲಿಂಗಗಳು ಈ ದೇವಾಲಯಗಳಲ್ಲಿ ಅತ್ಯಂತ ಪ್ರಸಿದ್ಧವಾಗಿವೆ. ಶಿವನ ಭಕ್ತರು ತೀರ್ಥಯಾತ್ರೆಗೆ ಪ್ರಯಾಣಿಸಲು ಈ ದೇವಾಲಯಗಳನ್ನು ಅತ್ಯಂತ ಮಂಗಳಕರ ಸ್ಥಳಗಳೆಂದು ಪರಿಗಣಿಸುತ್ತಾರೆ. ಹೀಗಾಗಿ, ಶಿವರಾತ್ರಿಯಂದು ಭಾರತೀಯ ರೈಲ್ವೆ ಇಲಾಖೆ 12 ಜ್ಯೋತಿರ್ಲಿಂಗಗಳ ದೇವಸ್ಥಾನಗಳಿಗೆ ವಿಶೇಷ ಪ್ಯಾಕೇಜ್ ನಿಗದಿಪಡಿಸಿದೆ.

ಶಿವನು ಬೆಳಕಿನ ರೂಪವಾಗಿ ಕಾಣಿಸಿಕೊಂಡನೆಂದು ನಂಬಲಾದ ದೇವಾಲಯಗಳು ಈ 12 ಜ್ಯೋತಿರ್ಲಿಂಗಗಳಾಗಿವೆ. ಅವುಗಳೆಂದರೆ,

1. ಸೋಮನಾಥ ದೇವಾಲಯ 2. ಕಾಶಿ ವಿಶ್ವನಾಥ 3. ಮಹಾಕಾಳೇಶ್ವರ 4. ಮಲ್ಲಿಕಾರ್ಜುನ 5. ಓಂಕಾರೇಶ್ವರ 6. ಕೇದಾರನಾಥ 7. ಭೀಮಾಶಂಕರ 8. ಬೈದ್ಯನಾಥ 9. ರಾಮನಾಥಸ್ವಾಮಿ 10. ನಾಗೇಶ್ವರ 11. ತ್ರಯಂಬಕೇಶ್ವರ 12. ಗೃಷ್ಣೇಶ್ವರ

ಇದನ್ನೂ ಓದಿ: Maha Shivaratri 2023: ಈ ಬಾರಿ ಮಹಾಶಿವರಾತ್ರಿ ಯಾವಾಗ?; ದಿನಾಂಕ, ಸಮಯ, ಪೂಜಾ ವಿಧಾನದ ಮಾಹಿತಿ ಇಲ್ಲಿದೆ

ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಟೂರಿಸಂ ಕಾರ್ಪೊರೇಷನ್ (IRCTC) ಜ್ಯೋತಿರ್ಲಿಂಗಗಳನ್ನು ಭೇಟಿ ಮಾಡಲು ಬಯಸುವ ಯಾತ್ರಾರ್ಥಿಗಳಿಗಾಗಿ ವಿಶೇಷವಾದ ಪ್ರಯಾಣದ ಪ್ಯಾಕೇಜ್ ಪ್ರವಾಸವನ್ನು ರಚಿಸಿದೆ. IRCTC ಜ್ಯೋತಿರ್ಲಿಂಗ ಯಾತ್ರಾ ಪ್ರವಾಸ ಪ್ಯಾಕೇಜ್‌ನಲ್ಲಿ ಓಂಕಾರೇಶ್ವರ್, ಮಹಾಕಾಳೇಶ್ವರ್, ಸೋಮನಾಥ, ನಾಗೇಶ್ವರ್, ಭೇಟ್ ದ್ವಾರಕಾ ಮತ್ತು ಶಿವರಾಜಪುರ ಬೀಚ್‌ನಂತಹ ಜನಪ್ರಿಯ ಯಾತ್ರಾ ಸ್ಥಳಗಳನ್ನು ಸೇರಿಸಲಾಗಿದೆ.

ಈ ಪ್ಯಾಕೇಜ್​ನಲ್ಲಿ ಟಿಕೆಟ್ ಬುಕ್ ಮಾಡಲು ಬಯಸುವವರು IRCTC ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಅಧಿಕಾರಿಗಳ ಮೂಲಕವೂ ಬುಕಿಂಗ್ ಮಾಡಬಹುದು. IRCTC ವೆಬ್‌ಸೈಟ್‌ನಲ್ಲಿ ಕೂಡ ರೈಲು ಟಿಕೆಟ್ ಬುಕಿಂಗ್ ಲಭ್ಯವಿದೆ.

ಮಹಾಶಿವರಾತ್ರಿ ನವ ಜ್ಯೋತಿರ್ಲಿಂಗ ಯಾತ್ರಾ SZBD384A ದಿನಾಂಕ: ಮಾರ್ಚ್ 08ರಿಂದ ಮಾರ್ಚ್ 20 ದಿನಾಂಕಗಳ ಸಂಖ್ಯೆ: 12 ರಾತ್ರಿಗಳು / 13 ದಿನಗಳು ಪ್ಯಾಕೇಜ್ ಕೋಡ್: SZBD384A ಮೂಲ: ಮಧುರೈ ಬೋರ್ಡಿಂಗ್ ಪಾಯಿಂಟ್: ತಿರುನೋವೇಲಿ, ವುರುಡುನಗರ, ಮಧುರೈ, ದಿಂಡಿಗಲ್, ಕರೂರ್, ಈರೋಡ್, ಸೇಲಂ, ವಾರಂಗಲ್, ವಿಜಯವಾಡ, ಜೋಲಾರ್ಪೆಟ್ಟೈ, ಕಟ್ಪಾಡಿ, ಪೆರಂಬೂರ್, ನೆಲ್ಲೂರು.

ಇದನ್ನೂ ಓದಿ: Shivratri 2023: ಶಿವರಾತ್ರಿ ಎಂದರೇನು? ಆಚರಣೆಯ ಮಹತ್ವ ಮತ್ತು ಪದ್ಧತಿ ಹೇಗೆ ? ಪುಣ್ಯಕಾಲ ಯಾವುದು?

ಈ ಸ್ಥಳಗಳಲ್ಲಿ ಮಹಾಕಾಳೇಶ್ವರ, ಓಂಕಾರೇಶ್ವರ, ಸೋಮಂತ್, ತ್ರಯಂಬಕೇಶ್ವರ, ಭೀಮಶಂಕರ್, ಗುರುನೇಶ್ವರ, ಆಯುಂಧ್ ನಾಗನಾಥ್, ಪರ್ಲಿ ವೈಜಿನಾಥ್, ಮಲ್ಲಿಕಾರ್ಜುನ ಸ್ವಾಮಿ ಸೇರಿವೆ.

ವೆಚ್ಚ: 15, 350 ರೂ.

ವಿವಿಧ ನಿಲ್ದಾಣಗಳಲ್ಲಿ ರೈಲು ಆಗಮನ ಮತ್ತು ನಿರ್ಗಮನದ ಸಮಯವು ತಾತ್ಕಾಲಿಕವಾಗಿದೆ. ಈ ಬಗ್ಗೆ ವಿವರಗಳ ಮಾಹಿತಿಯು irctcportal.inನಲ್ಲಿ ಲಭ್ಯವಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:58 am, Sun, 12 February 23

ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ