Naga Panchami 2021: ಇಂದು ನಾಗರ ಪಂಚಮಿಯನ್ನು ಹೀಗೆ ಆಚರಿಸಿ, ನಿಮ್ಮ ಮನಸ್ಸಿನಿಂದ ಹಾವಿನ ಭಯ ಕಿತ್ತೊಗೆಯಿರಿ

| Updated By: ಆಯೇಷಾ ಬಾನು

Updated on: Aug 13, 2021 | 6:51 AM

ಈ ಬಾರಿ ಆಗಸ್ಟ್​ 13 ರಂದು ಶುಕ್ರವಾರ ನಾಗ ಪಂಚಮಿ ಬಂದಿದೆ. ಪ್ರತೀತಿಯ ಪ್ರಕಾರ ಇಂದು ಸರ್ಪಗಳನ್ನು ಪೂಜಿಸಿದರೆ ಮಹಾದೇವ ಈಶ್ವರ ಸಂಪ್ರೀತನಾಗುತ್ತಾನೆ. ಮತ್ತು ಯಾರು ಸರ್ಪಕ್ಕೆ ಪೂಜೆ ಸಲ್ಲಿಸುತ್ತಾರೆ ಅಂತಹ ಆರಾಧಕರಿಗೆ ಅವರ ಇಷ್ಟಾರ್ಥಗಳು ನೆರವೇರುವುದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆಗೆ ಹಾವುಗಳಿಂದ ರಕ್ಷಣೆಯೂ ಲಭಿಸುತ್ತದೆ. ಮನಸ್ಸಿಂದ ಹಾವುಗಳ ಭಯ ತೊಲಗುತ್ತದೆ.

Naga Panchami 2021: ಇಂದು ನಾಗರ ಪಂಚಮಿಯನ್ನು ಹೀಗೆ ಆಚರಿಸಿ, ನಿಮ್ಮ ಮನಸ್ಸಿನಿಂದ ಹಾವಿನ ಭಯ ಕಿತ್ತೊಗೆಯಿರಿ
ಇಂದು ನಾಗರ ಪಂಚಮಿಯನ್ನು ಹೀಗೆ ಆಚರಿಸಿ, ನಿಮ್ಮ ಮನಸ್ಸಿನಿಂದ ಹಾವಿನ ಭಯ ಕಿತ್ತೊಗೆಯಿರಿ
Follow us on

ಈ ಸಲದ ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಇಂದು ಶುಕ್ರವಾರ (ಆಗಸ್ಟ್ 13​) ಬಂದಿದೆ. ಇಂದು ನಾಗರ ಹಾವುಗಳಿಗೆ ಪೂಜೆ ಮಾಡುವ ದಿನ. ನಿಮಗೆ ಹಾವುಗಳ ಬಗ್ಗೆ ಭಯ ಜಾಸ್ತಿಯಿದ್ದರೆ ಅಥವಾ ನಿಮ್ಮ ಕುಂಡಲಿಯಲ್ಲಿ ಕಾಳ ಸರ್ಪ ದೋಷ ಇದ್ದರೆ ಕೆಳಗೆ ವಿವರಿಸಿರುವಂತೆ ಜಪ ತಪಗಳನ್ನು ಮಾಡಿ ಭಯ/ ದೋಷವನ್ನು ನಿವಾರಿಸಿಕೊಳ್ಳಿ

ಹಾವುಗಳಿಗೆ ಸನಾತನ ಧರ್ಮದಲ್ಲಿ ಪೂಜನೀಯ ಸ್ಥಾನವಿದೆ. ಮಹಾದೇವ ಶಿವ ತನ್ನ ಕೊರಳಲ್ಲಿ ಹಾವನ್ನು ಧರಿಸಿರುವಾಗ, ಜಗತ್​ ನಿಯಾಮಕ ವಿಷ್ಣು ಭಗವಾನ್​ ಶೇಷನಾಗನ ಮೇಲೆ ವಿರಾಜಮಾನವಾಗಿ ಪವಡಿಸುವುದನ್ನು ಕಾಣಬಹುದು. ಆದರೆ ಏನೇ ಹೇಳಿ ಹಾವು ಒಂದು ಅಪಾಯಕಾರಿ ಜೀವಿ. ಇದರಿಂದ ಮಾನವರಿಗೆ ನಿಜಕ್ಕೂ ಭಯ ಆಗುತ್ತದೆ. ಮನುಷ್ಯರಲ್ಲಿ ಈ ಭಯ ನಿವಾರಿಸುವ ಮತ್ತು ಭೂಮಂಡಲದಲ್ಲಿ ಹಾವಿನ ಮಹಿಮೆಯನ್ನು ಸಾರುವ ನಿಟ್ಟಿನಲ್ಲಿ ಇಂದು ಆಚರಿಸುವ ನಾಗರ ಪಂಚಮಿ ಅತ್ಯಂತ ಮಹತ್ವದ್ದು. ಹಿಂದೂ ಧರ್ಮದಲ್ಲಿ ಪ್ರತಿ ವರ್ಷ ಈ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಪಂಚಮಿ ದಿನ ಈ ಹಬ್ಬ ಬರುತ್ತದೆ.

ಈ ಬಾರಿ ಆಗಸ್ಟ್​ 13 ರಂದು ಶುಕ್ರವಾರ ನಾಗ ಪಂಚಮಿ ಬಂದಿದೆ. ಪ್ರತೀತಿಯ ಪ್ರಕಾರ ಇಂದು ಸರ್ಪಗಳನ್ನು ಪೂಜಿಸಿದರೆ ಮಹಾದೇವ ಈಶ್ವರ ಸಂಪ್ರೀತನಾಗುತ್ತಾನೆ. ಮತ್ತು ಯಾರು ಸರ್ಪಕ್ಕೆ ಪೂಜೆ ಸಲ್ಲಿಸುತ್ತಾರೆ ಅಂತಹ ಆರಾಧಕರಿಗೆ ಅವರ ಇಷ್ಟಾರ್ಥಗಳು ನೆರವೇರುವುದಕ್ಕೆ ಸಾಧ್ಯವಾಗುತ್ತದೆ. ಇದರ ಜೊತೆಗೆ ಹಾವುಗಳಿಂದ ರಕ್ಷಣೆಯೂ ಲಭಿಸುತ್ತದೆ. ಮನಸ್ಸಿಂದ ಹಾವುಗಳ ಭಯ ತೊಲಗುತ್ತದೆ.

ಗರುಡ ಪುರಾಣದಲ್ಲಿ ನಾಗ ಪಂಚಮಿ ದಿನ ಮನೆಯಲ್ಲಿ ಮುಂಬಾಗಿಲ ಬಳಿ ಎರಡೂ ಕಡೆಗಳಲ್ಲಿ ನಾಗರ ಹಾವಿನ ಚಿತ್ರಗಳನ್ನು ಬಿಡಿಸಿ, ಪೂಜಿಸಬೇಕು ಎಂದು ತಿಳಿಯಹೇಳಲಾಗುತ್ತದೆ. ಅದೇ ಸ್ಕಂದ ಪುರಾಣದಲ್ಲಿ ನಾಗ ಪಂಚಮಿ ದಿನ ನಾಗರ ಹಾವಿನ ಪೂಜೆ ಮಾಡುವುದರಿಂದ ಮನಸ್ಸಿನಲ್ಲಿರುವ ಪ್ರತಿ ಅಭಿಲಾಷೆಯೂ ನೆರವೇರುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ತಡವೇಕೆ ಇಂದಿನ ನಾಗ ಪಂಚಮಿಯನ್ನು ಹೇಗೆ, ಯಾವ ಮುಹೂರ್ತದಲ್ಲಿ ನೆರವೇರಿಸಿಬೇಕು ಎಂಬುದನ್ನು ತಿಳಿದುಕೊಳ್ಳೋಣ.

ನಾಗದೇವ ಪೂಜೆ ಹೀಗೆ ನೆರವೇರಲಿ:
ನಾಗ ಪಂಚಮಿಯ ದಿನ ಐದು ನಾಗರ ಚಿತ್ರಗಳನ್ನು ಬಿಡಿಸಿ, ಪೂಜಿಸಿ. ಅನಂತ, ವಾಸುಕಿ, ತಕ್ಷಕ, ಕರ್ಕೋಟಕ ಮತ್ತು ಪಿಂಗಳ ನಾಗ ಎಂಬ ಹೆಸರಿನಲ್ಲಿ ಈ ನಾಗ ದೇವರುಗಳನ್ನು ಸೃಷ್ಟಿಸಿಕೊಳ್ಳಿ. ಬೆಳಗ್ಗೆ ಎದ್ದ ತಕ್ಷಣ ಸ್ನಾನ ಸಂಧ್ಯಾವಂದನೆಗಳನ್ನು ಮಾಡಿದ ನಂತರ ನಾಗ ದೇವರ ಸ್ಮರಣೆ ಮಾಡತೊಡಗುತ್ತಾ ಪೂಜೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಿ. ತದನಂತರ ಮನೆಯ ಗೋಡೆಯ ಮೇಲೆ ಚಂದನ, ಕಟ್ಟಿಗೆ ಅಥವಾ ಮಣ್ಣಿನಿಂದ ಮಾಡಿದ ಹರಿಶಿಣ ಲೇಪಿತ ನಾಗ ವಿಗ್ರಹಗಳನ್ನು ಸೃಷ್ಟಿಸಿಕೊಳ್ಳಬೇಕು.

ಕಮಲ, ಪಂಚಾಮೃತ, ಧೂಪ ಮುಂತಾದುವನ್ನು ಸಮರ್ಪಿಸುತ್ತಾ ವಿಧಿವತ್ತಾಗಿ ಪೂಜೆ ಮಾಡಬೇಕು. ಸಿಹಿಯನ್ನು ಸಹ ಮಾಡಿಡಬೇಕು. ಇದಾದ ಬಳಿಕ ನಾಗ ಗಾಯತ್ರಿ ಮಂತ್ರ ಮತ್ತು ಸರ್ಪ ಸೂಕ್ತವನ್ನು ಪಠಿಸಬೇಕು. ಅದಾದ ಮೇಲೆ ಆರತಿ ಎತ್ತಬೇಕು. ಇದರಿಂದ ಸರ್ಪ ಭಯದಿಂದ ರಕ್ಷಣೆ ಸಿಗುತ್ತದೆ. ಇದಿಂದ ಭಾಗ್ಯವೂ ಸಿಗುತ್ತದೆ.

ಈ ಬಾರಿ ನಾಗರ ಪಂಚಮಿ ಶುಭ ಮುಹೂರ್ತ ಯಾವಾಗ?
ಆಗಸ್ಟ್ 12 ಗುರುವಾರ ಮಧ್ಯಾಹ್ನ 3 ಗಂಟೆ 24 ನಿಮಿಷಕ್ಕೆ ಆರಂಭವಾಗಿ… ಆಗಸ್ಟ್ 13 ಶುಕ್ರವಾರ ಮಧ್ಯಾಹ್ನ 1 ಗಂಟೆ 42 ನಿಮಿಷದ ವರೆಗೂ ಇರುತ್ತದೆ. ಆದರೆ ಸೂರ್ಯೋದಯ ತಿಥಿ ಪ್ರಕಾರ ಆಗಸ್ಟ್​ 13 ಶುಕ್ರವಾರದಂದೇ ಆಚರಿಸಬೇಕಾಗುತ್ತದೆ. ಹಾಗಾಗಿ ಶುಕ್ರವಾರ ನಾಗರ ಪಂಚಮಿ ದಿನ ಬೆಳಗ್ಗೆ 5 ಗಂಟೆ 49 ನಿಮಿಷದಿಂದ 8 ಗಂಟೆ 28 ನಿಮಿಷದ ಮುಹೂರ್ತದ ಮಧ್ಯೆ ಆಚರಣೆ ಮಾಡಬೇಕಾಗುತ್ತದೆ.

ಈ ಸರಳೋಪಾಯವೂ ಆಚರಣೆಗೆ ಸೂಕ್ತವಾದೀತು ನೋಡಿ…

1. ನಾಗರ ಪಂಚಮಿಯ ದಿನ ಹೊರಗಡೆ ದೇವಸ್ಥಾನಗಳಲ್ಲಿ ಇರುವ ನಾಗರ ಕಟ್ಟೆಗಳಲ್ಲಿ ನಾಗ ದೇವರುಗಳ ದರ್ಶನ ಮಾಡಿ. ಹಾಲಿನಿಂದ ಹಾವಿಗೆ ಅಭಿಷೇಕ ಮಾಡಿಸಿ. ಒಂದು ವೇಳೆ ಹೊರಗಡೆ ಹೋಗಿ ನಾಗ ದರ್ಶನ ಸಾಧ್ಯವಾಗದಿದ್ದಲ್ಲಿ ಮನೆಯಲ್ಲೇ ನಾಗರ ಮೂರ್ತಿಯನ್ನು ಮಾಡಿ, ಹಾಲನ್ನು ಎರೆಯಿರಿ.

2. ಅಂಗಡಿಯಿಂದ ನಾಗರ ಜೋಡಿಯನ್ನು ಖರೀದಿಸಿ ತನ್ನಿ. ಮನೆಯಲ್ಲಿ ಭಕ್ತಿ ಭಾವದಿಂದ ಪೂಜಿಸಿ, ಬಳಿಕ ನಿರ್ಜನ ಪ್ರದೇಶದಲ್ಲಿ ಕಾಡು ಭಾಗದಂತಹ ಜಾಗಗಳಲ್ಲಿ ಬಿಟ್ಟು ಬನ್ನಿ. ಇದರಿಂದ ಹಾವಿನ ಭಯ ನಿವಾರಣೆಯಾಗುವುದರ ಜೊತೆ ಜೊತೆಗೆ ನಾಗದೋಷವೂ ತಗ್ಗುತ್ತದೆ.

3. ಮನೆ ಅಥವಾ ಮಂದಿರದಲ್ಲಿ ನಾಗ ಗಾಯತ್ರಿ ಮಂತ್ರವನ್ನು ಜಪಿಸಿ. ಈ ನಾಗ ಗಾಯತ್ರಿ ಮಂತ್ರವನ್ನು ಕನಿಷ್ಠ 108 ಬಾರಿ ಶ್ರದ್ಧಾ ಭಕ್ತಿಯಿಂದ ಜಪಿಸಿ.

ಓಂ ನಾಗ ಕುಲಾಯ ವಿದ್ಮಹೆ ವಿಷದಂತಾಯ ಧೀಮಹಿ ತತ್ರೋ ಸರ್ಪಃಪ್ರಚೋದಯಾತ್​

(ಇಲ್ಲಿ ನೀಡಿರುವ ಮಾಹಿತಿಯು ಧಾರ್ಮಿಕ ಶ್ರದ್ಧಾಭಕ್ತಿಗೆ ಅನುಗುಣವಾಗಿ ಲೋಕಮಾನ್ಯ ರೀತಿಯಲ್ಲಿ ನೀಡಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸ್ತುತ ಪಡಿಸಲಾಗಿದೆ)

Naga Panchami 2021: ಶ್ರಾವಣ ಮಾಸದ ಮದರಂಗಿ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಕ್ತಿ-ಭಾವ ಹೇಗೆ?

(nag panchami 2021 worship can remove fear of snakes and save you from kaala sarpa dosha)