AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2025: ನಮ್ಮ ಕನ್ನಡದ ‘ಕಮಲದ ಮೊಗದೊಳೆ…’ ಹಾಡಿಗೆ ಮನಸೋತ ಪ್ರಧಾನಿ ಮೋದಿ

ಖ್ಯಾತ ಗಾಯಕಿ ಎಸ್. ಜಾನಕಿಯುವರು ಹಾಡಿರುವ 'ಕಮಲದ ಮೊಗದೊಳೆ..' ಕನ್ನಡ ಭಕ್ತಿಗೀತೆಯನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ದೇಶದ ಜನತೆಗೆ ಪ್ರಧಾನಿ ನವರಾತ್ರಿ ಹಬ್ಬದ ಶುಭಾಶಯವನ್ನು ತಿಳಿಸಿದ್ದು, ಅದರ ಜೊತೆಗೆ ಈ ಹಾಡನ್ನು ಹಂಚಿಕೊಂಡಿದ್ದಾರೆ. 1984ರಲ್ಲಿ ಬಿಡುಗಡೆಗೊಂಡ 'ಹೊಸ ಇತಿಹಾಸ' ಚಿತ್ರದ ಹಾಡು, ಇದೀಗಾ ಮತ್ತೆ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

Navratri 2025: ನಮ್ಮ ಕನ್ನಡದ 'ಕಮಲದ ಮೊಗದೊಳೆ...' ಹಾಡಿಗೆ ಮನಸೋತ ಪ್ರಧಾನಿ ಮೋದಿ
'ಕಮಲದ ಮೊಗದೊಳೆ...' ಹಾಡಿಗೆ ಮನಸೋತ ಮೋದಿ
ಅಕ್ಷತಾ ವರ್ಕಾಡಿ
|

Updated on:Sep 26, 2025 | 5:51 PM

Share

1984ರಲ್ಲಿ ಬಿಡುಗಡೆಗೊಂಡ ‘ಹೊಸ ಇತಿಹಾಸ’ ಚಿತ್ರಕ್ಕಾಗಿ ಖ್ಯಾತ ಗಾಯಕಿ ಎಸ್. ಜಾನಕಿ ಅವರು ಹಾಡಿರುವ ‘ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..’ ಎಂಬ ಹಾಡನ್ನಂತೂ ಕೇಳದವರಿಲ್ಲ. ಪ್ರತೀ ನವರಾತ್ರಿಯ ಸಮಯದಲ್ಲಿ ಈ ಹಾಡನ್ನು ಒಂದಲ್ಲ ಒಂದು ಕಡೆ ಕೇಳುವುದು ಗ್ಯಾರಂಟಿ ಎಂಬಷ್ಟರ ಮಟ್ಟಿಗೆ ಈ ಹಾಡು ಅಜರಾಮರವಾಗಿ ಉಳಿದಿದೆ. ಇದೀಗ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈ ಹಾಡನ್ನು ಕೇಳಿ ಮೆಚ್ಚಿಕೊಂಡಿದ್ದು, ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಹಾಡಿನ ಕುರಿತು ಟ್ವೀಟ್​​ ಮಾಡಿದ್ದಾರೆ. ಸದ್ಯ ಈ ಪೋಸ್ಟ್​ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

ನರೇಂದ್ರ ಮೋದಿಯವರ ಅಧಿಕೃತ ಟ್ವಿಟರ್​​ ಖಾತೆ(@narendramodi)ಯಲ್ಲಿ ಕನ್ನಡದ ಈ ಪ್ರಸಿದ್ಧ ಭಕ್ತಿಗೀತೆಯ ವಿಡಿಯೋವನ್ನು ಹಾಕಿ ದೇಶದ ಜನತೆಗೆ ನವರಾತ್ರಿ ಶುಭಾಶಯ ಕೋರಲಾಗಿದೆ. ದೇವಿಯೂ ಎಲ್ಲಾ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಆಕೆಯ ಪ್ರೀತಿಯ ವಾತ್ಸಲ್ಯವು ಪ್ರತಿಯೊಬ್ಬರ ಜೀವನದಲ್ಲೂ ಹೊಸ ಶಕ್ತಿ ಮತ್ತು ಉತ್ಸಾಹವನ್ನು ತುಂಬಲಿ ಎಂದು ಟ್ವೀಟ್ ಮಾಡಲಾಗಿದೆ.

ಟ್ವಿಟರ್​​​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: ನವರಾತ್ರಿಯ ಐದನೇ ದಿನದ ವಿಶೇಷ; ಭಕ್ತರ ಮೇಲೆ ಸ್ಕಂದಮಾತೆಯ ಕೃಪಾದೃಷ್ಟಿ

ಇಂದು(ಸೆ.26) ಬೆಳಗ್ಗೆ 9.48ಕ್ಕೆ ಹಂಚಿಕೊಂಡಿರುವ ಈ ಪೋಸ್ಟ್​​ ಈಗಾಗಲೇ 10ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಕನ್ನಡಿಗರು “ನಮ್ಮ ಕನ್ನಡ, ನಮ್ಮ ಹೆಮ್ಮೆ” ಎಂದು ಕಾಮೆಂಟ್​​ ಮಾಡಿದ್ದಾರೆ. ಸದ್ಯ ಪೋಸ್ಟ್​​ ಎಲ್ಲೆಡೆ ವೈರಲ್​ ಆಗುತ್ತಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Fri, 26 September 25