Navratri 2025: ನಿಮ್ಮ ಜನ್ಮ ಸಂಖ್ಯೆಯ ಆಧಾರದ ಮೇಲೆ ದುರ್ಗಾ ದೇವಿಗೆ ಈ ಹೂವು ಅರ್ಪಿಸಿ
ಶರನ್ನವರಾತ್ರಿಯು ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 2ರಂದು ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಸೂಕ್ತವಾದ ಹೂವನ್ನು ಅರ್ಪಿಸುವುದರಿಂದ ದೇವಿಯ ಅನುಗ್ರಹ ಪಡೆಯಬಹುದು. ಇಲ್ಲಿ ಜನ್ಮ ಸಂಖ್ಯೆ ಮತ್ತು ಅದಕ್ಕೆ ಸೂಕ್ತವಾದ ಹೂವಿನ ಬಗ್ಗೆ ಮಾಹಿತಿ ನೀಡಲಾಗಿದೆ.

ಶರನ್ನವರಾತ್ರಿಯು ಸೆಪ್ಟೆಂಬರ್ 22ರಿಂದ ಪ್ರಾರಂಭವಾಗಿದ್ದು, ಅಕ್ಟೋಬರ್ 2ರಂದು ಮುಕ್ತಾಯಗೊಳ್ಳಲಿದೆ. ಈ ಸಮಯದಲ್ಲಿ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಪೂಜೆಯ ಸಮಯದಲ್ಲಿ ದೇವಿಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗುತ್ತದೆ. ಆದ್ದರಿಂದ ನಿಮ್ಮ ಜನ್ಮ ದಿನಾಂಕದ ಪ್ರಕಾರ ನೀವು ಯಾವ ಹೂವನ್ನು ಅರ್ಪಿಸುವುದರಿಂದ ದೇವಿಯ ಸಂತುಷ್ಟರಾಗುತ್ತಾರೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಜನ್ಮಸಂಖ್ಯೆ 1:
ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1. ಈ ವ್ಯಕ್ತಿಗಳು ಸೂರ್ಯನಿಂದ ಆಳಲ್ಪಡುತ್ತಾರೆ. ಮತ್ತು ಅವರು ದುರ್ಗಾ ದೇವಿಗೆ ಚೆಂಡು ಹೂವನ್ನು ಅರ್ಪಿಸುವುದು ಶುಭ ಎಂದು ಪರಿಗಣಿಸಲಾಗಿದೆ.
ಜನ್ಮಸಂಖ್ಯೆ 2:
ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2. ಇವರು ಚಂದ್ರನಿಂದ ಆಳಲ್ಪಡುತ್ತಾರೆ ಮತ್ತು ಅವರು ದುರ್ಗಾ ಮಾತೆಗೆ ಮಲ್ಲಿಗೆ ಹೂವನ್ನು ಅರ್ಪಿಸಬೇಕು. ಇದು ಭಕ್ತಿಯನ್ನು ಸಂಕೇತಿಸುತ್ತದೆ ಎಂದು ನಂಬಲಾಗಿದೆ.
ಜನ್ಮಸಂಖ್ಯೆ 3:
ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3. ಈ ವ್ಯಕ್ತಿಗಳು ಗುರು ಗ್ರಹದ ಆಳ್ವಿಕೆಗೆ ಒಳಪಡುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ದುರ್ಗಾ ದೇವಿಗೆ ಸೂರ್ಯಕಾಂತಿಯನ್ನು ಅರ್ಪಿಸಬೇಕು ಏಕೆಂದರೆ ಅದು ಸಮರ್ಪಣೆ ಮತ್ತು ಪ್ರಶಾಂತತೆಯನ್ನು ಸಂಕೇತಿಸುತ್ತದೆ.
ಜನ್ಮಸಂಖ್ಯೆ 4:
ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4. ಇವರು ರಾಹುವಿನ ಆಳ್ವಿಕೆಯಲ್ಲಿರುತ್ತಾರೆ. ಇವರು ದುರ್ಗಾ ದೇವಿಗೆ ಮಲ್ಲಿಗೆ ಹೂವನ್ನು ಅರ್ಪಿಸಬೇಕು ಏಕೆಂದರೆ ಅದು ರಕ್ಷಣೆಯನ್ನು ಪ್ರತಿನಿಧಿಸುತ್ತದೆ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ.
ಜನ್ಮಸಂಖ್ಯೆ 5:
ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5. ಇವರು ಬುಧ ಗ್ರಹದಿಂದ ಆಳಲ್ಪಡುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ಬಿಳಿ ಕಮಲವನ್ನು ಅರ್ಪಿಸಬೇಕು ಏಕೆಂದರೆ ಅದು ತಾಯಿಯ ಪ್ರೀತಿ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತದೆ.
ಜನ್ಮಸಂಖ್ಯೆ 6:
ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6. ಈ ಸಂಖ್ಯೆಯಲ್ಲಿ ಜನಿಸಿದವರು ಶುಕ್ರನ ಆಳ್ವಿಕೆಯಲ್ಲಿರುತ್ತಾರೆ ಮತ್ತು ಇವರು ಗುಲಾಬಿಯನ್ನು ಅರ್ಪಿಸಬೇಕು ಏಕೆಂದರೆ ಅದು ಧೈರ್ಯ ಮತ್ತು ವೈವಾಹಿಕ ಸಾಮರಸ್ಯವನ್ನು ಪ್ರತಿನಿಧಿಸುತ್ತದೆ.
ಜನ್ಮಸಂಖ್ಯೆ 7:
ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7. ಈ ವ್ಯಕ್ತಿಗಳು ಕೇತುವಿನ ಆಳ್ವಿಕೆಯಲ್ಲಿರುತ್ತಾರೆ ಮತ್ತು ಅವರು ದುರ್ಗಾ ಮಾತೆಗೆ ಕಮಲದ ಹೂವನ್ನು ಅರ್ಪಿಸಬೇಕು ಏಕೆಂದರೆ ಅದು ಶಾಂತಿ, ಸಮೃದ್ಧಿ ಮತ್ತು ಆಧ್ಯಾತ್ಮಿಕತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ಆರಾಧನೆ; ದೇವಿಯ ಸ್ತುತಿ ಹಾಗೂ ಪೂಜಾ ವಿಧಾನ ಇಲ್ಲಿದೆ
ಜನ್ಮಸಂಖ್ಯೆ 8:
ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8. ಈ ಸಂಖ್ಯೆಯಲ್ಲಿ ಜನಿಸಿದವರು ಶನಿಯಿಂದ ಆಳಲ್ಪಡುತ್ತಾರೆ. ಇವರು ದುರ್ಗಾ ಮಾತೆಗೆ ಆರ್ಕಿಡ್ ಹೂವನ್ನು ಅರ್ಪಿಸಬೇಕು ಏಕೆಂದರೆ ಅದು ತಾಳ್ಮೆ ಮತ್ತು ಭಕ್ತಿಯನ್ನು ಸಂಕೇತಿಸುತ್ತದೆ.
ಜನ್ಮಸಂಖ್ಯೆ 9:
ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9. ಈ ಸಂಖ್ಯೆಯಲ್ಲಿ ಜನಿಸಿದವರು ಮಂಗಳ ಗ್ರಹದ ಆಳ್ವಿಕೆಯಲ್ಲಿರುತ್ತಾರೆ ಮತ್ತು ಇವರು ದುರ್ಗಾ ದೇವಿಗೆ ದಾಸವಾಳದ ಹೂವನ್ನು ಅರ್ಪಿಸುವುದು ಶುಭ. ಏಕೆಂದರೆ ಅದು ಧೈರ್ಯ ಮತ್ತು ವೈವಾಹಿಕ ಸಾಮರಸ್ಯವನ್ನು ಪ್ರತಿನಿಧಿಸುತ್ತದೆ ಎಂದು ನಂಬಲಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Tue, 23 September 25




