Mysore Dasara 2022: ಪಾರಂಪರಿಕ ಸೈಕಲ್ ಸವಾರಿ ಟ್ರಿನ್ ಟ್ರಿನ್ ಕಾರ್ಯಕ್ರಮ ಉದ್ಘಾಟಿಸಿದ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಸೈಕಲ್ ಸವಾರಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಪಾರಂಪರಿಕ ಸೈಕಲ್ ಸವಾರಿ ಟ್ರಿನ್ ಟ್ರಿನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮೈಸೂರು: ನಾಡ ಹಬ್ಬ ದಸರಾ ಹಿನ್ನೆಲೆ, ಪಾರಂಪರಿಕ ಸೈಕಲ್ ಸವಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟನೆ ಮಾಡಿದರು. ಸ್ವಲ್ಪ ಒತ್ತು ಸೈಕಲ್ ಏರಿ ಸವಾರಿ ಮಾಡಿದರು. ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ಸೈಕಲ್ ಸವಾರಿ ಕಾರ್ಯಕ್ರಮ ಆಯೋಜನೆ ಮಾಡಿದೆ. ಪಾರಂಪರಿಕ ಸೈಕಲ್ ಸವಾರಿ ಟ್ರಿನ್ ಟ್ರಿನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ಸೈಕಲ್ ಸವಾರರು ಭಾಗಿಯಾಗಿದ್ದರು. ಪುರಭವನದಿಂದ ಪ್ರಾರಭವಾಗಿ ಹತ್ತನೆ ಚಾಮರಾಜ ಒಡೆಯರ್ ವೃತ್ತ, ಜಗಮೋಹನ ಅರಮನೆ, ಪರಕಾಲ ಮಠ, ಮುಡಾ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ಜೂನಿಯರ್ ಮಹಾರಾಜ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು ನಂತ್ರದೊಡ್ಡ ಗಡಿಯಾರದ ಬಳಿ ಮುಕ್ತಾಯವಾಗಲಿದೆ. ಸೈಕಲ್ ಸವಾರಿ ಮೂಲಕ ಮೈಸೂರಿನ ವಿವಿಧ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡಲಾಗುತ್ತೆ.
ರಾಹುಲ್ ಗಾಂಧಿ ಭೇಟಿಯಿಂದ ಮೈಸೂರು ದಸರಾಗೆ ತೊಂದರೆ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, RSSನ ಬ್ಯಾನ್ ಮಾಡಬೇಕು ಅನ್ನೋ ನೆಸ್ಸಸ್ಸಿಟಿ ಏನಿದೆ. ಪಿಏಫ್ಐ ಅವರು ದೇಶ ದ್ರೋಹಿ ಕೆಲಸಗಳನ್ನ ಮಾಡುತ್ತಿದ್ದಾರೆ. ಆರ್ಎಸ್ಎಸ್ ದೇಶ ಭಕ್ತಿ ಕೆಲಸಗಳನ್ನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಚುನಾವಣೆಗೆ ಇದಕ್ಕೆ ಸಂಬಂಧ ಇಲ್ಲ. ಅವರನ್ನ ಅವಾಗಿನಿಂದ ಬ್ಯಾನ್ ಮಾಡಬೇಕು ಅಂತ ಇತ್ತು. ರಾಹುಲ್ ಗಾಂಧಿ ಮೈಸೂರಿಗೆ ಭೇಟಿ ದಸರಾಗೆ ತೊಂದರೆ ಆಗದೆ ಇರೋ ರೀತಿ ಪ್ಲ್ಯಾನ್ ಮಾಡಲಾಗಿದೆ. ಡಿಕೆ ಶಿವಕುಮಾರ್ ದಾಳಿ ರಾಜಕೀಯ ದಾಳಿ ಇಲ್ಲ. ಅವರನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ. ಅವರೋಬರ ಮೇಲೆ ಇಡಿ ಏನು ದಾಳಿ ಮಾಡಿಲ್ವ. ಅವರು ಪರಿಶುದ್ಧವಾಗಿ ಹೊರಗಡೆ ಬರಲಿ ಎಂದು ಸೋಮಶೇಖರ್ ಹೇಳಿದರು.
ಇಂದು ದಸರಾ ಕ್ರೀಡಾಕೂಟ ಉದ್ಘಾಟನೆ:
ಇಂದು ಸಂಜೆ 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಒಲಂಪಿಕ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲ್ಲಿಕ್‌ರಿಂದ ದಸರಾ ಕ್ರೀಡಾಕೂಟ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯದ ನಾನಾ ಜಿಲ್ಲೆಗಳಿಂದ ಸುಮಾರು 4500 ಕ್ರೀಡಾಪಟುಗಳು ಭಾಗವಹಿಸಲಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾ ಸಚಿವ ನಾರಾಯಣಗೌಡ ಭಾಗಿಯಾಗಲಿದ್ದಾರೆ.
ವಿಶ್ವ ಹೃದಯ ದಿನ ಆಚರಣೆ:
ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ವಿಶ್ವ ಹೃದಯ ದಿನ ಆಚರಣೆ ಮಾಡಲಾಯಿತು. ಅಪೋಲೋ ಆಸ್ಪತ್ರೆಯಿಂದ ಆಯೋಜನೆ ಮಾಡಿದ್ದು, ಕೆಂಪು ಟಿ ಶರ್ಟ್ ಧರಿಸಿ, ಕೆಂಪು ಬಲೂನ್ ಹಾರಿ ಬಿಟ್ಟು ಸಂಭ್ರಮಿಸಲಾಯಿತು. ವೇದಿಕೆ ಮೇಲೆ ಕೆಳಗೆ ಜನರು ಕುಣಿದು ಕುಪ್ಪಳಿಸಿದರು. ಹೃದಯವನ್ನು ಸಂತೋಷವಾಗಿಡಿ ಅನ್ನೋ ಸಂದೇಶ ರವಾನೆ ಮಾಡಿದ್ದು, ಹೃದಯದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:17 am, Thu, 29 September 22