Mysore Dasara 2023 Highlights Updates: ವಿದ್ಯುತ್ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ ಕೃಷ್ಣರಾಜಸಾಗರ ಡ್ಯಾಂ

Rakesh Nayak Manchi
| Updated By: ಗಂಗಾಧರ​ ಬ. ಸಾಬೋಜಿ

Updated on:Oct 15, 2023 | 10:46 PM

Mysuru Dasara, Navaratri Festival Highlights Updates: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ದಸರಾ ಆರಂಭವಾಗಲಿದೆ. ಸಂಗೀತ ನಿರ್ದೇಶಕ ಹಂಸಲೇಖ ಅವರು ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ ನೀಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ಸಿ ಮಹದೇವಪ್ಪ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಇದರೊಂದಿಗೆ ಕರ್ನಾಟಕ ಪ್ರಮುಖ ವಿದ್ಯಮಾನಗಳ ಬಗ್ಗೆ ಮಾಹಿತಿ Tv9 Digital Live ನಲ್ಲಿ ಪಡೆಯಿರಿ.

Mysuru Dasara 2023 Highlights Updates: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ ದಸರಾ ಆರಂಭವಾಗಲಿದೆ. ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರು ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ (Mysuru Dasara) ಚಾಲನೆ ನೀಡಲಿದ್ದಾರೆ. ನಾಡದೇವತೆ ತಾಯಿ ಚಾಮುಂಡೇಶ್ವರಿ ಮಹಿಷಾಸುರ ಮರ್ಧಿನಿ ವಿಗ್ರಹಕ್ಕೆ‌ ಪುಷ್ಪಾರ್ಚನೆ ಮಾಡಿ ದಸರೆಗೆ ಚಾಲನೆ ನೀಡಲಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಜಿಲ್ಲಾ ಉಸ್ತುವಾರಿ ಸಚಿವ ಹೆಚ್​ಸಿ ಮಹದೇವಪ್ಪ (HC Mahadevappa) ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಬೆಳಗ್ಗೆ 5.30 ಗಂಟೆಯಿಂದ ಅರಮನೆಯಲ್ಲಿ ಪೂಜಾ ವಿಧಿವಿಧಾನಗಳು ಆರಂಭಗೊಂಡಿವೆ. ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Krishnadatta Chamaraja Wadiyar) ಅವರು ಬೆ.11.30ರಿಂದ 11.50ಕ್ಕೆ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಈ ಎಲ್ಲದರ ಬಗೆಗಿನ ಮಾಹಿತಿ ಟಿವಿ9 ಡಿಜಿಟಲ್ ಲೈವ್​ನಲ್ಲಿ ಪಡೆಯಿರಿ.

LIVE NEWS & UPDATES

The liveblog has ended.
  • 15 Oct 2023 10:40 PM (IST)

    Mysore Dasara 2023 Live: ಅರಮನೆ ಆವರಣದ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅರಮನೆ ಆವರಣದ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಭಾವನ ರಾಮಣ್ಣ ತಂಡದಿಂದ ಮನಮೋಹಕ ಭರತನಾಟ್ಯ ಪ್ರದರ್ಶನ ಮಾಡಲಾಗಿದೆ. ಸಂಪೂರ್ಣ ನೃತ್ಯರೂಪಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು.

  • 15 Oct 2023 10:17 PM (IST)

    Mysore Dasara 2023 Live: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

  • 15 Oct 2023 09:25 PM (IST)

    Mysore Dasara 2023 Live: ವಿಕಾರ ಸ್ವರೂಪವನ್ನ ಅಭಿವ್ಯಕ್ತ ಗೊಳಿಸೋದಕ್ಕೆ ಕೈ ಹಾಕಬಾರದು

    ಜಗತ್ ಪ್ರಸಿದ್ದ ದಸರಾ ಮಹೋತ್ಸವದಲ್ಲಿ ಇಂಥ ಸಂಘರ್ಷ ಈ ವರೆಗೆ ನಡೆದಿಲ್ಲ. ಸಾಂಸ್ಕೃತಿಕ ದಸರಾ ಆಗಿ ಮನರಂಜನಾತ್ಮಕವಾಗಿ ನಡೆದುಕೊಂಡು ಬಂದಿದೆ. ಅದರ ಹಿನ್ನೆಲೆ ಕಾರ್ಯಕ್ರಮ ಮಾಡಬೇಕು. ಯಾವುದೋ ಒಂದು ವಿಕಾರ ಸ್ವರೂಪವನ್ನ ಅಭಿವ್ಯಕ್ತ ಗೊಳಿಸೋದಕ್ಕೆ ಕೈ ಹಾಕಬಾರದು ಎಂದು ರಂಬಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

  • 15 Oct 2023 08:58 PM (IST)

    Mysore Dasara 2023 Live: ರಾಜ್ಯದಲ್ಲಿ ವಿದ್ಯುತ್ ಕೊರತೆಯಿದೆ: ಇಂಧನ ಸಚಿವ ಕೆ.ಜೆ.ಜಾರ್ಜ್

    ರಾಜ್ಯದಲ್ಲಿ ವಿದ್ಯುತ್ ಕೊರತೆಯಿದೆ. ಆದರೂ ಲೋಡ್ ಶೆಡ್ಡಿಂಗ್ ಆಗದ ರೀತಿ ಗಮನ ಹರಿಸುತ್ತಿದ್ದೇವೆ. ಈಗಾಗಲೇ ಕೇಂದ್ರದ ಇಂಧನ ಸಚಿವರನ್ನು ಭೇಟಿ ಮಾಡಿದ್ದೇನೆ. ಖಾಸಗಿಯವರ ಬಳಿ ನಮಗೆ ಅಗತ್ಯವಿರುವಷ್ಟು ವಿದ್ಯುತ್ ಸಿಗುತ್ತಿಲ್ಲ. ಸರಿಯಾಗಿ ಗಾಳಿಯಿಲ್ಲದೆ ಪವನ ವಿದ್ಯುತ್ ಉತ್ಪಾದನೆ ಇಳಿಕೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

  • 15 Oct 2023 08:36 PM (IST)

    Mysore Dasara 2023 Live: ಕುಸ್ತಿಪಟುಗಳಿಗೆ ಶುಭ ಹಾರೈಸಿದ ಸಿಎಂ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ, ಕುಸ್ತಿಪಟುಗಳಿಗೆ ಶುಭ ಹಾರೈಸಿದ್ದಾರೆ.

  • 15 Oct 2023 07:41 PM (IST)

    Mysore Dasara 2023 Live: ಸ್ತಬ್ಧಚಿತ್ರಗಳನ್ನು ಕಂಡು ಸಿಎಂ ಸಿದ್ದರಾಮಯ್ಯ ಫುಲ್ ಖುಷ್

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಈ ಬಾರಿ ವಸ್ತು ಪ್ರದರ್ಶನದಲ್ಲಿ ಗ್ಯಾರಂಟಿ ಸ್ತಬ್ಧಚಿತ್ರ ಕೇಂದ್ರ ಬಿಂದುವಾಗಿತ್ತು. ವಾರ್ತಾ & ಪ್ರಸಾರ ಇಲಾಖೆ ಮಳಿಗೆಯಲ್ಲಿ ಸ್ತಬ್ಧಚಿತ್ರಗಳನ್ನು ವಿನ್ಯಾಸಗೊಂಡಿದ್ದವು. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಸ್ತಬ್ಧಚಿತ್ರಗಳನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಖುಷ್ ಆಗಿದ್ದಾರೆ.

  • 15 Oct 2023 06:57 PM (IST)

    Mysore Dasara 2023 Live: ಮಹಿಷಿ ದಸರಾ ಆಚರಣೆ ವಿವಾದ: ರಂಬಾಪುರಿ ಶ್ರೀ ಮಾತು

    ಅಧಿಕಾರದ ಚುಕ್ಕಾಣಿ ಹಿಡಿದ ನಾಯಕರು ಆ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಯಾವ ಕಾರ್ಯಕ್ರಮ ಮಾಡಿದರೆ ಒಳ್ಳೆದಾಗತ್ತೆ, ಯಾವುದನ್ನು ಮಾಡಿದರೆ ಜನರ ಮನಸ್ಸು ವಿಕಾರ ಆಗತ್ತೆ‌, ಅನ್ನೋದರ ಬಗ್ಗೆ ಅವಕಾಶ ಕೊಡದೆ ಒಂದು ಗೂಡಿ ಕೆಲಸ ಮಾಡಬೇಕು. ವಿನಾಕಾರಣ ಗೊಂದಲ ಹುಟ್ಟು ಹಾಕೋದು ಒಳ್ಳೆಯದಲ್ಲ ಎಂದು ರಾಯಚೂರಿನಲ್ಲಿ ರಂಬಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

  • 15 Oct 2023 06:20 PM (IST)

    Mysore Dasara 2023 Live: ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಕಾಣಿಕೊಂಡ ಹೊಗೆ

    ಮೈಸೂರು ದಸರಾ ವಸ್ತು ಪ್ರದರ್ಶನ ಆವರಣದ ಫ್ಯೂಸ್ ಬಾಕ್ಸ್​ನಲ್ಲಿ ಶಾರ್ಟ್​ಸರ್ಕ್ಯೂಟ್​ನಿಂದ ಹೊಗೆ ಕಾಣಿಸಿಕೊಂಡಿದೆ. ವಸ್ತು ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡುವುದಕ್ಕೂ ಮುನ್ನ ಅವಘಡ ಉಂಟಾಗಿದ್ದು, ಭಾರೀ ದುರಂತ ತಪ್ಪಿದೆ. ಓವರ್​ಲೋಡ್​ನಿಂದ ಶಾರ್ಟ್​ಸರ್ಕ್ಯೂಟ್ ಆಗಿರುವ ಅನುಮಾನ ವ್ಯಕ್ತವಾಗಿದ್ದು, ಸಿಬ್ಬಂದಿಗಳಿಂದ ಫ್ಯೂಸ್ ಸರಿಪಡಿಸಲಾಗಿದೆ.

  • 15 Oct 2023 05:44 PM (IST)

    Mysore Dasara 2023 Live: ವಸ್ತುಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಹಿನ್ನೆಲೆ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಸಚಿವರಾದ ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ ಉಪಸ್ಥಿತಿ ಇದ್ದರು.

  • 15 Oct 2023 05:17 PM (IST)

    Mysore Dasara 2023 Live: ಗ್ಯಾರಂಟಿ ಕೊಡುತ್ತೇನೆ ಅಂತಾ ಹೇಳಿ ಖಜಾನೆ ಖಾಲಿ ಮಾಡಿದ್ದಾರೆ‌

    ಗ್ಯಾರಂಟಿ ಕೊಡುತ್ತೇನೆ ಅಂತಾ ಹೇಳಿ ಖಜಾನೆ ಖಾಲಿ ಮಾಡಿದ್ದಾರೆ‌ ಎಂದು ರಾಯಚೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ಮಾಡಿದ್ದಾರೆ. ರಸ್ತೆ ಕಾಮಗಾರಿ, ನೀರಾವರಿ ಯೋಜನೆಗಳಿಗೆ ಅನುದಾನ ನೀಡುತ್ತಿಲ್ಲ. ಸರ್ಕಾರ ದಿವಾಳಿಯಾಗಿದೆ ಅಂತಾ ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

  • 15 Oct 2023 04:45 PM (IST)

    Mysore Dasara 2023 Live: ಯದುವೀರ್​ಗೆ ನವರಾತ್ರಿ ಹಬ್ಬದ ಯಾವ ಊಟ, ಸಿಹಿ ಇಷ್ಟ

  • 15 Oct 2023 03:40 PM (IST)

    Mysore Dasara 2023 Live: ಮಹಾರಾಜ ಅನ್ನೋದು ನಾನಲ್ಲ, ನಮ್ಮ ನಾಡಿನ ಪರಂಪರೆ

  • 15 Oct 2023 03:06 PM (IST)

    Mysore Dasara 2023 Live: ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

    ಕನ್ನಡ ಚಿತ್ರರಂಗ ವಿಶ್ವದರ್ಜೆಯ ಗುಣಮಟ್ಟದ ಚಿತ್ರಗಳನ್ನು ನೀಡಿದೆ. ಚಿತ್ರ ಪ್ರೇಮಿಗಳಿಗೆ ಸದಾವಕಾಶ, ಅನೇಕ ಚಿತ್ರಗಳು ಪ್ರದರ್ಶನ ಆಗುತ್ತಿವೆ. ಓದಿಗಿಂತ ಸಿನಿಮಾ ನೋಡಿ ಪ್ರಭಾವಿತರಾಗುವವರು ಬಹಳ ಜನರಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ.

    ವಿದ್ಯಾರ್ಥಿ ಜೀವನದಲ್ಲಿದ್ದಾಗ ವಾರಕ್ಕೆ 6 ದಿನ ಸಿನಿಮಾ ನೋಡುತ್ತಿದ್ದೆ: ಸಿಎಂ ಸಿದ್ದರಾಮಯ್ಯ

  • 15 Oct 2023 01:49 PM (IST)

    Mysore Dasara 2023 Live: ಓದಿಗಿಂತ ಸಿನಿಮಾ ನೋಡಿ ಪ್ರಭಾವಿತರಾಗುವವರು ಬಹಳ ಜನರಿದ್ದಾರೆ: ಸಿದ್ದರಾಮಯ್ಯ

    ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕನ್ನಡ ಚಿತ್ರರಂಗ ವಿಶ್ವದರ್ಜೆಯ ಗುಣಮಟ್ಟದ ಚಿತ್ರಗಳನ್ನು ನೀಡಿದೆ. ಚಿತ್ರ ಪ್ರೇಮಿಗಳಿಗೆ ಸದಾವಕಾಶ, ಅನೇಕ ಚಿತ್ರಗಳು ಪ್ರದರ್ಶನ ಆಗುತ್ತಿವೆ. ಜೀವನದ ಮೌಲ್ಯ ಸಿನಿಮಾಗಳ ಮೂಲಕ ತಿಳಿಸುವ ಕೆಲಸ ಮಾಡುತ್ತಿವೆ. ಓದಿಗಿಂತ ಸಿನಿಮಾ ನೋಡಿ ಪ್ರಭಾವಿತರಾಗುವವರು ಬಹಳ ಜನರಿದ್ದಾರೆ. ಗುಣಮಟ್ಟದ ಉತ್ತಮ ಚಿತ್ರಗಳಿಂದ ಸಮಾಜ, ನಾಡಿಗೆ ಉಪಯುಕ್ತ. ವಿದ್ಯಾರ್ಥಿ ಜೀವನದಲ್ಲಿದ್ದಾಗ ವಾರಕ್ಕೆ 6 ದಿನ ಸಿನಿಮಾ ನೋಡುತ್ತಿದ್ದೆ ಎಂದರು.

  • 15 Oct 2023 01:36 PM (IST)

    Mysore Dasara 2023 Live: 34ನೇ ವರ್ಷದ ಮಂಗಳೂರು ದಸರಾಕ್ಕೆ ಚಾಲನೆ

    ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ 34ನೇ ವರ್ಷದ ಮಂಗಳೂರು ದಸರಾಕ್ಕೆ ಚಾಲನೆ ನೀಡಲಾಯಿತು. ಕ್ಷೇತ್ರದ ಸಭಾಂಗಣದಲ್ಲಿ ಶಾರದೆ ಸಹಿತ ನವದುರ್ಗೆಯರ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾ ಚಾಲನೆ ಕಾರ್ಯಕ್ರಮದಲ್ಲಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಭಾಗಿಯಾಗಿದ್ದಾರೆ. ಇದೇ ವೇಳೆ ಹುಲಿವೇಷಧಾರಿಗಳಿಂದ ಕುಣಿದು ಶಾರದೆಗೆ ಗೌರವ ಸಲ್ಲಿಕೆ ಮಾಡಲಾಯಿತು.

  • 15 Oct 2023 01:26 PM (IST)

    Mysore Dasara 2023 Live: ದಸರಾ ಚಲನಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    ಮೈಸೂರಿನ‌‌ ಕಲಾಮಂದಿರದಲ್ಲಿ ನಡೆಯುತ್ತಿರುವ ದಸರಾ ಚಲನಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಟ ಡಾರ್ಲಿಂಗ್ ಕೃಷ್ಣ, ನಟಿ ಮಿಲನ ನಾಗರಾಜ್, ನಟಿ ಹರ್ಷಿಕ ಪೂನಚ್ಚ, ಮಯೂರಿ, ಸುಧಾ ನರಸಿಂಹರಾಜು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್​.ಸಿ.ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಹರೀಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದಾರೆ.

  • 15 Oct 2023 12:12 PM (IST)

    Mysore Dasara 2023 Live: ವಿಜಯನಗರ ಸಾಮ್ರಾಜ್ಯದ ಆಡಳಿತ ನೆನಪಿಸಿಕೊಂಡ ಸಿಎಂ

    ಭಾಷಣದ ವೇಳೆ ವಿಜಯನಗರ ಸಾಮ್ರಾಜ್ಯದ ಆಡಳಿತ ನೆನಪಿಸಿಕೊಂಡ ಸಿಎಂ ಸಿದ್ದರಾಮಯ್ಯ, ವಿಜಯನಗರ ಸಾಮಂತರು ಮಾಡುತ್ತಿದ್ದದ್ದು ವಿಜಯೋತ್ಸವ. ವಿಜಯನಗರ ಸಾಮ್ರಾಜ್ಯ ಶಾಂತಿ ಸಂಮೃದ್ಧಿಯಿಂದ ಕೂಡಿದ ನಾಡಾಗಿತ್ತು. ಹಂಪಿ ವಿರುಪಾಕ್ಷನ ದೇವಾಲಯದ ರಸ್ತೆಯಲ್ಲಿ ಮುತ್ತು ರತ್ನಗಳನ್ನ ಅಳೆಯುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಮೈಸೂರಿನ ಅರಸರು ದಸರಾ ಹಬ್ಬವನ್ನ ಆಚರಿಸಲಾಯ್ತು. ಮೈಸೂರಿಗೂ ಮೊದಲು ಶ್ರೀರಂಗಪಟ್ಟಣದಲ್ಲಿ ದಸರಾ ಹಬ್ಬವನ್ನ ಆಚರಿಸಲಾಗುತ್ತಿತ್ತು. ಈ ಹಿಂದೆ ಮೈಸೂರಿನ ಅರಸರು ಆನೆಯ ಅಂಬಾರಿ ಮೇಲೆ ಕುಳಿತು ಸಾಗುತ್ತಿದ್ದರು. ನನ್ನ ತಂದೆಯ ಹೆಗಲ ಮೇಲೆ ಕುಳಿತು ಜಂಬೂ ಸವಾರಿಯನ್ನ ವಿಕ್ಷಿಸಿದ್ದೆ ಎಂದು ಹೇಳುವ ಮೂಲಕ ವೇದಿಕೆ ಮೇಲೆ ಬಾಲ್ಯದಲ್ಲಿದ್ದಾಗ ನಡೆಯುತ್ತಿದ್ದ ದಸರಾ ಹಬ್ಬ ಆಚರಣೆಯನ್ನ ಮೆಲಕು ಹಾಕಿದರು.

  • 15 Oct 2023 12:10 PM (IST)

    Mysore Dasara 2023 Live: ಬರಗಾಲದ ನಡುವೆ ಸಾಂಪ್ರದಾಯಿಕ ದಸರಾ ಆಚರಣೆ

    ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದ್ದು, ಐದನೇ ಗ್ಯಾರಂಟಿಯನ್ನು ಕೆಲವೇ ತಿಂಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು. ದಸರಾದ ಮಹತ್ವ ಕಡಿಮೆಯಾಗಬಾರದು ಎಂದು ಬರಗಾಲದ ನಡುವೆ ಸಾಂಪ್ರದಾಯಿಕವಾಗಿ ಆಚರಣೆ ಮಾಡುತ್ತಿದ್ದೇವೆ. 42 ಲಕ್ಷ ಹೆಕ್ಟೇರ್​ನಲ್ಲಿ ಬೆಳೆ ಹಾನಿಯಾಗಿದೆ. 30 ಸಾವಿರ ಕೋಟಿ ರೂಪಾಯಿ ರೈತರಿಗೆ ನಷ್ಟವಾಗಿದೆ. ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ ವೀಕ್ಷಣೆ ಮಾಡಿದ್ದು, 4864 ಕೋಟಿ ರೂ. ಪರಿಹಾರ ನೀಡುವ ಭರವಸೆ ಇಟ್ಟುಕೊಂಡಿದ್ದೇವೆ.

  • 15 Oct 2023 12:06 PM (IST)

    Mysore Dasara 2023 Live: ಮೈಸೂರು ದಸರಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ

    ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಾಲ್ಯದಲ್ಲಿದ್ದಾಗ ಮೈಸೂರು ದಸರಾ ವೀಕ್ಷಣೆ ಮಾಡುತ್ತಿದ್ದ ಬಗ್ಗೆ ನೆನಪಿಸಿಕೊಂಡರು. ನಮ್ಮ ನಾಡು ಶ್ರೀಮಂತವಾಗಿದೆ. ಕರ್ನಾಟಕದ ಜನ ಸುಸಂಸ್ಕೃತ ಜನ. ನಮ್ಮಲ್ಲಿ ಪ್ರೀತಿ ವಿಶ್ವಾಸ ಮುನುಷ್ಯತ್ವ ಗುಣಗಳನ್ನು ಮೈಗೂಡಿಸಿಕೊಂಡ ರಾಜ್ಯ ಕರ್ನಾಟಕ. ಪರಪಸ್ಪರ ಪ್ರೀತಿ, ಗೌರವದಿಂದ ಬದುಕುದು ಬಹಳ ಮುಖ್ಯ. ಪ್ರತಿಯೊಬ್ಬ ಕನ್ನಡಿಗನೂ ಈ ರೀತಿಯಾಗಿ ನಡೆದುಕೊಳ್ಳುವುದು ಅವಶ್ಯಕ. ಪ್ರತೀ ಪ್ರಜಾ ಸರ್ಕಾರದ ಕರ್ತವ್ಯ ಸಂವಿಧಾನದ ಪ್ರಸ್ತಾವನೆಯನ್ನು ಈಡೇರಿಸುವುದಾಗಿರಬೇಕು ಎಂದರು.

  • 15 Oct 2023 11:57 AM (IST)

    Mysore Dasara 2023 Live: ಸಂಗೀತ ಸಾಮ್ರಾಟ ಹಂಸಲೇಖರಿಗೆ ವಿಶೇಷ ಉಡುಗೊರೆ

    ಮೈಸೂರು ದಸಾರ ಉದ್ಘಾಟನೆ ನೆರೆವೇರಿಸಿದ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಭವಿತ ಎಂಬ ವಿದ್ಯಾರ್ಥಿನಿಯೊಬ್ಬಳು ತನ್ನ ತಂದೆಯೊಂದಿಗೆ ವೇದಿಕೆಗೆ ಬಂದು ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾಳೆ. ಉಡುಗೊರೆಯನ್ನ ಹಂಸಲೇಖ ಅವರು ಸಂತಸದ ಸ್ವೀಕರಿಸಿದರು. ಹಂಸಲೇಖ ಜೊತೆಗೂಡಿ ಸಿದ್ದರಾಮಯ್ಯ ಕೂಡ ಪುಸ್ತಕವನ್ನು ಸ್ವೀಕರಿಸಿದರು.

  • 15 Oct 2023 11:51 AM (IST)

    Mysore Dasara 2023 Live: ಸಿಎಂ ಸಿದ್ದರಾಮಯ್ಯರನ್ನು ಸನ್ಮಾನಿಸಿದ ಸಚಿವ ಮಹದೇವಪ್ಪ

    ಮೈಸೂರು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವ ಹೆಚ್​ಡಿ ಮಹದೇವಪ್ಪ ಅವರು ಸನ್ಮಾನಿಸಿದರು. ಈ ವೇಳೆ ಅಂಬಾರಿಯನ್ನ ಹೊತ್ತು ಸಾಗುವ ಆನೆಯನ್ನು ಉಡುಗೊರೆ ನೀಡಿದರು.

  • 15 Oct 2023 11:03 AM (IST)

    Mysore Dasara 2023 Live: ಕೆಲವೇ ಕ್ಷಣದಲ್ಲಿ ನಡೆಯಲಿರುವ ಯಧುವೀರ್ ಖಾಸಗಿ ದರ್ಬಾರ್

    ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಇನ್ನು ಕೆಲವೇ ಕ್ಷಣಗಳಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್ ನಡೆಯಲಿದೆ. ಅಲಂಕಾರಗೊಂಡ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಕೆಲವೇ ಕ್ಷಣದಲ್ಲಿ ಅರಮನೆಯ ಸವಾರಿ ತೊಟ್ಟಿಗೆ ತೆರಳಲಿದೆ.

  • 15 Oct 2023 11:00 AM (IST)

    Mysore Dasara 2023 Live: ಪರಸ್ಪರ ತಬ್ಬಿಕೊಂಡು ಶುಭಕೋರಿದ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನಾಯಕರು

    ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನಾಯಕರು ಸಂಗಮವಾಗಿದ್ದಾರೆ. ವೇದಿಕೆಯಲ್ಲಿ ಪರಸ್ಪರ ತಬ್ಬಿಕೊಂಡು ಶುಭಕೋರಿದರು. ಬಿಜೆಪಿ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಶಾಸಕ ತನ್ವೀರ್‌ಸೇಠ್ ಹಾಗೂ ಜೆಡಿಎಸ್ ಶಾಸಕ ಜಿಟಿ.ದೇವೇಗೌಡ ಪರಸ್ಪರ ಆಲಿಂಗನ ಮಾಡಿಕೊಂಡಿದ್ದು ಜನರ ಗಮನ ಸೆಳೆಯಿತು.

  • 15 Oct 2023 10:58 AM (IST)

    Mysore Dasara 2023 Live: ದಸರಾ ಎನ್ನುವುದು ಜೀವಂತ ಮಹಾಕಾವ್ಯ: ಹಂಸಲೇಖ

    ದಸರಾ ಎನ್ನುವುದು ಜೀವಂತ ಮಹಾಕಾವ್ಯ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ದಸರಾ ಒಂದು ರೀತಿ ಕಥಾ ಕಣಜ, ಮಹಾಕಾವ್ಯವಾಗಿ ಬೆಳಗಬೇಕು. ಕನ್ನಡ ನಮ್ಮ ಶೃತಿ ಆಗಬೇಕು, ಅಭಿವೃದ್ಧಿ ನಮ್ಮ ಕೃತಿ ಆಗಬೇಕು. ಕನ್ನಡದ ಭಾಷೆಗೆ ಮಿತಿ ಇದೆ, ಆದರೆ ಭಾವಕ್ಕೆ ಮಿತಿ ಎಲ್ಲಿದೆ? ನಮಗೆ ದೆಹಲಿ ಬೇಕು ದೆಹಲಿಗೂ ನಾವು ಬೇಕು. ದೆಹಲಿಗೆ ಕನ್ನಡವೇ ಬೇಕಾಗುತ್ತಿಲ್ಲ, ಅದಕ್ಕೆ ತಲೆಕೆಡಿಸಿಕೊಳ್ಳೋದು ಬೇಡ. ನಾವು ಕನ್ನಡವನ್ನು ಜಗತ್ತಿನಲ್ಲಿ ಮೆರೆಸಬೇಕಿದೆ. ಕರ್ನಾಟಕದ ಶಾಂತಿ, ಸಮೃದ್ಧಿ ಕನ್ನಡಿಗರ ಮಂತ್ರ ಆಗಬೇಕು. ಕಾವೇರಿಗೆ ಒಂದು ಮಿತಿಯಿದೆ, ಕನ್ನಡ ಭಾಷೆಗೆ ಒಂದು ಮಿತಿಯಿದೆ. ಅದರ ಭಾವಕ್ಕೆ ಎಲ್ಲಿ ಮಿತಿಯಿದೆ ಎಂದರು.

  • 15 Oct 2023 10:43 AM (IST)

    Mysore Dasara 2023 Live: ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ: ಹಂಸಲೇಖ

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಹಂಸಲೇಖ, ಪೂಜ್ಯ ಕನ್ನಡಕ್ಕೆ, ಪೂಜ್ಯ ಕನ್ನಡಿಗರಿಗೆ ನನ್ನ ನಮನ. ಈ ಅವಕಾಶಕ್ಕಾಗಿ ನಾನು ಸಾವಿರ ಮೆಟ್ಟಿಲು ಹತ್ತಿ ಬಂದಿದ್ದೇನೆ ಎಂದರು. ಯಾರು ಯಾರನ್ನು ನೆನೆಯಾನಾ ? ಯಾರು ಯಾರನ್ನು ನೆನೆಯಲಿ, ಕನ್ನಡ ದೀಪ, ಸಮೃದ್ದಿ ಅಭಿವೃದ್ಧಿ ಶಾಂತಿ ಸಮೃದ್ದಿಯ ನನ್ನ ಮಾತಿನ ಪರಿವಿಧಿ. ಪೂಜ್ಯ ಕನ್ನಡಿಗರಿಗೆ ಪೂಜ್ಯ ಕನ್ನಡಕ್ಕೆ ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು. ಐದಶ ಕರ್ನಾಕದ ಏಕೀಕರಣಕ್ಕೆ ಈಗ ಐದಶ ಅಂದರೆ ಐವತ್ತು. ಏಕೀಕರಣಕ್ಕೆ ಐವತ್ತು ತುಂಬಿದೆ ಕರ್ನಾಟಕ ಐದಶ ಅಂತಾ ಕರೆಯೋಣ. ಕರ್ನಾಟಕ ಐದಶ ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಇದು ಬಹಳ ಬೆಲೆ ಬಾಳುವಂತಹದ್ದು. ಈ ಅವಕಾಶಕ್ಕಾಗಿ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹಾಗೂ ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕೆ ಯಾರು ಕಾರಣ ಯಾರನ್ನು ಮೊದಲು ನೆನೆಯಲಿ. ಅಪ್ಪ ಗೋವಿಂದರಾಜ ಮಾನೆ ಅಮ್ಮ ರಾಜಮ್ಮ ಗುರು ನೀಲಕಂಠ ಅಥವಾ ನಾದ ನಾಟಕರಂಗ ಸರ್ಕಾರ ಅಥವಾ ಸಂವಿಧಾನವನ್ನೇ, ಸಂವಿಧಾನದ ದನಿ ಸಿದ್ದರಾಮಯ್ಯ ಅವರನ್ನೇ ? ಡಿಸಿಎಂ ಪ್ರಬಲ ಶಕ್ತಿ ಸಂಘಟಕ ಡಿ ಕೆ ಶಿವಕುಮಾರ್, ನನ್ನ ಹೆಸರು ಸೂಚಿಸಿದ ಡಾ ಎಚ್ ಸಿ ಮಹದೇವಪ್ಪ ಅವರನ್ನೇ, ನನ್ನ ಹೆಂಡತಿ ಮಕ್ಕಳು ಅಭಿಮಾನಿಗಳನ್ನೇ ? ಅಥವಾ ಭೂಮಿ ತಾಯಿಯನ್ನೇ ಯಾರು ಯಾರು ಅಂತಾ ಹೇಳಲಿ ಎಂದರು.

  • 15 Oct 2023 10:23 AM (IST)

    Mysore Dasara 2023 Live: ಮೈಸೂರು ದಸರಾಗೆ ಚಾಲನೆ ನೀಡಿದ ಹಂಸಲೇಖ

    ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಚಾಲನೆ ನೀಡಿದ್ದಾರೆ, ಬೆಳಗ್ಗೆ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ಚಾಲನೆ ನೀಡಲಾಗಿದ್ದು,  ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ H​.C.ಮಹದೇವಪ್ಪ, ಕೆ.ಜೆ.ಜಾರ್ಜ್, ವೆಂಕಟೇಶ್, ಮುನಿಯಪ್ಪ, ಶಿವರಾಜ್ ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿಟಿಡಿ, ರವಿಶಂಕರ್, ಎ.ಆರ್.ಕೃಷ್ಣಮೂರ್ತಿ, ಶ್ರೀವತ್ಸ, ಹರೀಶ್ ಗೌಡ, ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಮೇಯರ್ ಶಿವಕುಮಾರ್​ ಉಪಸ್ಥಿತರಿದ್ದರು.

  • 15 Oct 2023 09:44 AM (IST)

    Mysore Dasara 2023 Live: ದಸರಾ ಹಬ್ಬಕ್ಕೆ ಶುಭಾಶಯ ಕೋರಿದ ಹೆಚ್​ಡಿ ಕುಮಾರಸ್ವಾಮಿ,

    ನಾಡಿನ ಸಮಸ್ತ ಜನರಿಗೆ ನಾಡಹಬ್ಬ ನವರಾತ್ರಿ ಹಾಗೂ ದಸರಾ ಹಬ್ಬದ ಶುಭಾಶಯಗಳು. ಶ್ರೀ ಚಾಮುಂಡೇಶ್ವರಿ ಅಮ್ಮನವರು ಸರ್ವರಿಗೂ ಒಳ್ಳೆಯದನ್ನೇ ಮಾಡಲಿ ಹಾಗೂ ಪ್ರತಿಯೊಬ್ಬರಿಗೂ ಆಯುರಾರೋಗ್ಯ, ಚೈತನ್ಯ ಕರುಣಿಸಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸುವಂತೆ ದಯೆ ತೋರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ.

  • 15 Oct 2023 09:33 AM (IST)

    Mysore Dasara 2023 Live: ಚಾಮುಂಡಿ ಬೆಟ್ಟಕ್ಕೆ ಗಣ್ಯರ ಆಗಮನ

    ಮೈಸೂರು ದಸರಾ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ‌ ದಸರಾ ಉದ್ಘಾಟಕ ಹಂಸಲೇಖ, ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ ಎಚ್ ಸಿ ಮಹದೇವಪ್ಪ, ಮುನಿಯಪ್ಪ ಸೇರಿ ಹಲವರು ಆಗಮಿಸಿದ್ದಾರೆ. ಗಣ್ಯರನ್ನು ಪೂರ್ಣಕುಂಭ ಕಲಾತಂಡಗಳ ಮೂಲಕ ಸ್ವಾಗತ ಮಾಡಲಾಯಿತು.

  • 15 Oct 2023 09:06 AM (IST)

    Mysore Dasara 2023 Live: ಚಾಮುಂಡಿ ಬೆಟ್ಟದ ಕಡೆ ಹೊರಟ ಸಿಎಂ ಸಿದ್ದರಾಮಯ್ಯ

    ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸರಸ್ವತಿಪುರಂನಲ್ಲಿರುವ ತಮ್ಮ ನಿವಾಸದಿಂದ ಸಿಎಂ ಸಿದ್ದಾಮಯ್ಯ ಅವರು ಚಾಮುಂಡಿ ಬೆಟ್ಟಕ್ಕೆ ಹೊರಟಿದ್ದಾರೆ.

  • 15 Oct 2023 08:03 AM (IST)

    Mysore Dasara 2023 Live: ಚಾಮುಂಡಿಬೆಟ್ಟದಲ್ಲಿ ಫಳ ಫಳ ಹೊಳೆಯುತ್ತಿರುವ ಮಹಿಷಾಸುರ ಪ್ರತಿಮೆ

    ಮೈಸೂರು: ಚಾಮುಂಡಿಬೆಟ್ಟದಲ್ಲಿ ಮಹಿಷಾಸುರನ ಪ್ರತಿಮೆ ಫಳ ಫಳ ಹೊಳೆಯುತ್ತಿದೆ. ದಸರಾ ಹಿನ್ನೆಲೆ ಜಿಲ್ಲಾಡಳಿತವು ಮಹಿಷಾಸುರ ಪ್ರತಿಮೆಗೆ ಹೊಸದಾಗಿ ಬಣ್ಣ ಹಚ್ಚಿದೆ. ಬಣ್ಣ ಹಚ್ಚಲು ಒಂದು ವಾರ ಪ್ರತಿಮೆ ಮುಚ್ಚಲಾಗಿತ್ತು. ಇದೀಗ ಮಹಿಷಾಸುರ ಪ್ರತಿಮೆ ವೀಕ್ಷಣೆ ಮಾಡಬಹುದು.

  • 15 Oct 2023 07:08 AM (IST)

    Mysore Dasara 2023 Live: ಮೈಸೂರು ದಸರಾಕ್ಕೆ ಪೊಲೀಸ್ ಭದ್ರತೆ

    ಇಂದಿನಿಂದ ಅ.24ರವರೆಗೆ ಮೈಸೂರು ದಸರಾ ಮಹೋತ್ಸವ-2023 ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ನಗರ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ದಸರಾ ಕಾರ್ಯಕ್ರಮ ನಡೆಯಲಿರುವ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೈಸೂರು ನಗರ, ಇತರೆ ಜಿಲ್ಲೆಯ ಅಧಿಕಾರಿಗಳು, 1 ಡಿಐಜಿ, 11 ಎಸ್​ಪಿಗಳು, 20 ಎಎಸ್​ಪಿ ಸೇರಿದಂತೆ 4200 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಶಸ್ತ್ರ ಪಡೆಗಳು, ವಿಧ್ವಂಸಕ ಕೃತ್ಯ ಪಡೆಗಳು, ಸ್ಫೋಟಕ ನಿಷ್ಕ್ರಿಯ ದಳ, ವಿಶೇಷ ಗರುಡ ಪಡೆ, 30 ಕೆಎಸ್​ಆರ್​ಪಿ ತುಕಡಿ ನಿಯೋಜಿಸಲಾಗಿದೆ.

  • 15 Oct 2023 07:02 AM (IST)

    Mysore Dasara 2023 Live: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ

    ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಚಾಮುಂಡಿಬೆಟ್ಟದಲ್ಲಿ ಇಂದು ಬೆಳಗ್ಗೆ 10.15ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ದಸರಾಗೆ ಚಾಲನೆ ನೀಡಲಿದ್ದಾರೆ. ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಕಲಾಮಂದಿರದಲ್ಲಿ 11.30ಕ್ಕೆ ದಸರಾ ಚಲನಚಿತ್ರೋತ್ಸವಕ್ಕೆ ಸಚಿವ ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ದಸರಾ ಫಲಪುಷ್ಪ ಪ್ರದರ್ಶನ ಉದ್ಘಾಟನೆಯನ್ನ ಕುಪ್ಪಣ್ಣ ಪಾರ್ಕ್‌ನಲ್ಲಿ ಸಚಿವ ಹೆಚ್.ಸಿ.ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಭಾರತ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ನಡೆಯುವ ಆಹಾರ ಮೇಳವನ್ನು ಮಧ್ಯಾಹ್ನ 1 ಗಂಟೆಗೆ ಸಚಿವ ಕೆಹೆಚ್​ ಮುನಿಯಪ್ಪ ಉದ್ಘಾಟಿಸಲಿದ್ದಾರೆ. ಇಂದು ಸಂಜೆ 4 ಗಂಟೆಗೆ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿgಎ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ. 4.30ಕ್ಕೆ ವಸ್ತು ಪ್ರದರ್ಶನವನ್ನೂ ಉದ್ಘಾಟಿಸಲಿದ್ದಾರೆ. ಇಂದು ಸಂಜೆ 5 ಗಂಟೆಗೆ ಸೆನೆಟ್ ಭವನದಲ್ಲಿ ಯೋಗ ದಸರಾವನ್ನು ಮಹದೇವಪ್ಪ ಅವರು ಉದ್ಘಾಟಿಸಲಿದ್ದಾರೆ. ಕಲಾಮಂದಿರದಲ್ಲಿ ಸಂಜೆ 5 ಗಂಟೆಗೆ ಅಖಿಲ ಭಾರತ, ರಾಜ್ಯ ಮಟ್ಟದ ಚಿತ್ರ ಶಿಲ್ಪ ಕಲಾ ಪ್ರದರ್ಶನವನ್ನು ಸಚಿವ ಶಿವರಾಜ್ ತಂಗಡಗಿ ಉದ್ಘಾಟಿಸಲಿದ್ದಾರೆ.  ಬಳಿಕ ಓವಲ್ ಮೈದಾನದಲ್ಲಿ ದಸರಾ ಪುಸ್ತಕ ಮಾರಾಟ ಮೇಳ ಹಾಗೂ ಸಂಜೆ 5.30ಕ್ಕೆ ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವಕ್ಕೆ ತಂಗಡಗಿ ಚಾಲನೆ ನೀಡಲಿದ್ದಾರೆ. ಸಂಜೆ 6.30ಕ್ಕೆ ವಿದ್ಯುತ್ ದೀಪಾಲಂಕಾರ ಕಾರ್ಯಕ್ರಮವನ್ನು ಸಚಿವ ಕೆಜೆ ಜಾರ್ಜ್ ಅವರು ಉದ್ಘಾಟಿಸಲಿದ್ದಾರೆ. ಸಂಜೆ 7 ಗಂಟೆಯಿಂದ ಆರಂಭವಾಗುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.

  • 15 Oct 2023 06:50 AM (IST)

    Mysore Dasara 2023 Live: ಮೈಸೂರು ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭ

    ಇಂದಿನಿಂದ ಮೈಸೂರು ಅರಮನೆಯಲ್ಲಿ ದಸರಾ ಉತ್ಸವ ಆರಂಭವಾಗಲಿದೆ. ಬೆಳಗ್ಗೆ ಬೆಳಗ್ಗೆ 5.30 ಗಂಟೆಯಿಂದ ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭಗೊಂಡಿದ್ದು, ಬೆಳಿಗ್ಗೆ 6 ಗಂಟೆಯಿಂದ 6.25ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆಯಾಗಲಿದೆ. ಬೆ.07.05 ರಿಂದ 7.45ರ ಶುಭ ಲಗ್ನದಲ್ಲಿ ರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆ.9.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಗೋಶಾಲೆಗೆ ಪಟ್ಟದ ಆನೆ ಪಟ್ಟದ ಕುದುರೆ ಆಗಮಿಸಲಿದೆ. ಬೆ.10.15ಕ್ಕೆ ಕಳಸ‌ ಪೂಜೆ ಸಿಂಹಾಸನ‌ ಪೂಜೆ, ಬೆ.11.30ರಿಂದ 11.50ಕ್ಕೆ ಯದುವೀರ್ ಅವರಜ ಸಿಂಹಾಸನವೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಮ.1.45 ರಿಂದ 02.05 ತಾಯಿ ಚಾಮುಂಡೇಶ್ವರಿ ಪೋಟೋ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನೆಯಾಗಲಿದೆ. ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳ ಹಿನ್ನೆಲೆ ಅರಮನೆಗೆ ಮಾಧ್ಯಮಗಳು ಹಾಗೂ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

  • Published On - Oct 15,2023 6:47 AM

    Follow us
    ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
    ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
    ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
    ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
    ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
    ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
    ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
    ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
    ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
    ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
    ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
    ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
    ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
    ಹಿಟ್ಟಿನ ದೀಪ ಹಚ್ಚುವದರ ಹಿಂದಿನ ರಹಸ್ಯವೇನು? ಏನು ಪ್ರಯೋಜನ
    Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
    Daily Horoscope: ಈ ರಾಶಿಯವರು ಭೂ ವ್ಯಾಪಾರದಲ್ಲಿ ಅಧಿಕ ಲಾಭ ಗಳಿಸುವರು
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
    ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ