ನವರಾತ್ರಿ ಮೊದಲ ದಿನ ದೇವಿ ಶೈಲಪುತ್ರಿಯನ್ನು ಪೂಜಿಸುವುದರಿಂದ ಸಿಗುವ ಫಲಗಳೇನು? ಈ ದೇವಿಯ ಹಿನ್ನೆಲೆಯೇನು? ತಿಳಿದುಕೊಳ್ಳಿ
ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿಯು ಮಲ್ಲಿಗೆ ಪ್ರಿಯಳು. ಪರ್ವತ ರಾಜ ಹಿಮವಂತನ ಮಗಳಾದ ಪಾರ್ವತಿ ದೇವಿ ಅಥವಾ ಆದಿಶಕ್ತಿಯನ್ನು ಸಂಪ್ರದಾಯ ಬದ್ದವಾಗಿ ಈ ದಿನ ಪೂಜಿಸಲಾಗುತ್ತದೆ. ಕೆಲವೆಡೆಗಳಲ್ಲಿ ದೇವಿಯ ಮಣ್ಣಿನ ಮೂರ್ತಿ ಮಾಡಿ, ಪೂಜೆ ಮಾಡುವ ಸಂಪ್ರದಾಯವಿದೆ.
ಆಶ್ವಿಜ ಅಥವಾ ಆಶ್ವಯುಜ ಮಾಸದ ಶುಕ್ಲ ಪಾಡ್ಯದಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸುವ ಹಬ್ಬವೇ ನವರಾತ್ರಿ(Navaratri). ಆ ದಿನಗಳಲ್ಲಿ ದೇವಿಯನ್ನು ಬೇರೆ ಬೇರೆ ರೂಪ, ನಾಮಗಳಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಶ್ವೇತ ವಸ್ತ್ರಧಾರಿಯಾಗಿರುವ ಶೈಲಪುತ್ರಿಯು ಮಲ್ಲಿಗೆ ಪ್ರಿಯಳು. ಪರ್ವತ ರಾಜ ಹಿಮವಂತನ ಮಗಳಾದ ಪಾರ್ವತಿ ದೇವಿ ಅಥವಾ ಆದಿಶಕ್ತಿಯನ್ನು ಸಂಪ್ರದಾಯ ಬದ್ದವಾಗಿ ಪೂಜಿಸಲಾಗುತ್ತದೆ. ಕೆಲವೆಡೆಗಳಲ್ಲಿ ದೇವಿಯ ಮಣ್ಣಿನ ಮೂರ್ತಿ ಮಾಡಿ, ಪೂಜೆ ಮಾಡುವ ಸಂಪ್ರದಾಯವಿದೆ. ಶೈಲಪುತ್ರಿಯು ಶಾಂತ ಸ್ವಭಾವದಳಾಗಿದ್ದಾಳೆ. ಶೈಲ ಎಂದರೆ ಬೆಟ್ಟ. ಒಂದು ಕೈಯಲ್ಲಿ ಕಮಲ, ಮತ್ತೊಂದು ಕೈಯಲ್ಲಿ ತ್ರಿಶೂಲ ಹಿಡಿದು ನಿಂತಿರುವಂತೆ ಈ ದೇವತೆಯನ್ನು ಚಿತ್ರಿಸಲಾಗಿದೆ. ಹಾಗಾಗಿ ದೇಹ ಮನಸ್ಸು ಮಲಿನವಾಗದಂತೆ, ಪಾರದರ್ಶಕವಾಗಿದ್ದಾಗ ಮಾತ್ರ ದೇವರನ್ನು ಒಲಿಸಿಕೊಳ್ಳಬಹುದು ಎನ್ನುವುದು ಇದು ತಿಳಿಸಿ ಕೊಡುತ್ತದೆ.
ಶೈಲ ಪುತ್ರಿಯ ಹಿನ್ನಲೆ
ಪರ್ವತರಾಜ ಹಿಮವಂತನ ಪುತ್ರಿಯೇ ಶೈಲ ಪುತ್ರಿ. ತನ್ನ ಹಿಂದಿನ ಜನ್ಮದಲ್ಲಿ ತಂದೆಯಾದ ದಕ್ಷ ಮಹಾರಾಜ, ತನ್ನ ಪತಿ ಶಿವನನ್ನು ಅವಮಾನಿಸಿದ್ದನ್ನು ಸಹಿಸಲಾಗದೆಯೇ ದಾಕ್ಷಾಯಿಣಿಯು ”ಯಜ್ಞಕುಂಡಕ್ಕೆ ಹಾರಿ ಪ್ರಾಣತ್ಯಾಗ ಮಾಡಿರುತ್ತಾಳೆ. ಹೀಗೆ ತನ್ನ ಶರೀರವನ್ನು ಭಸ್ಮವಾಗಿಸಿ ಮುಂದಿನ ಜನ್ಮದಲ್ಲಿ ಹಿಮವಂತನ ಪುತ್ರಿಯಾಗಿ ಅಂದರೆ ಶೈಲ ಪುತ್ರಿಯಾಗಿ ಹುಟ್ಟಿ ಮತ್ತೆ ಶಿವನ ಮಡದಿ ‘ಸತಿ’ಯಾಗುತ್ತಾಳೆ. ಮದುವೆಯಾದ ಬಳಿಕ ಶಿವ ಪತ್ನಿಗೆ ವರ್ಷದಲ್ಲಿ 10 ದಿನ ಮಾತ್ರ ತವರು ಮನೆಗೆ ತೆರಳಲು ಅನುಮತಿ ನೀಡುತ್ತಾನೆ. ಅದರಂತೆ ಈಗಲೂ ದಸರಾ ಸಮಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಆಮಂತ್ರಿಸಿ ಗೌರವಿಸುವ ಸಂಪ್ರದಾಯವಿದೆ.
ಪೂಜಾ ಫಲವೇನು?
ಶೈಲಪುತ್ರಿ ದೇವಿಯ ಆರಾಧನೆಯಿಂದ “ಧರ್ಮಾರ್ಥ ಕಾಮ ಮೋಕ್ಷ ಚತುರ್ ಭುವಿಧಂ ಪುರುಷಾರ್ಥ ಫಲವ” ಎನ್ನುವಂತೆ ಎಲ್ಲ ಫಲವು ಸಿಗುತ್ತದೆ. ಮನಸ್ಸಿನ ಆಸೆಗಳೆಲ್ಲ ಈಡೇರುತ್ತವೆ. ಸಕಲ ಸಂಕಷ್ಟಗಳು ನಿವಾರಣೆಯಾಗುತ್ತವೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ, ಇಂದ್ರಿಯ ನಿಗ್ರಹ ಶಕ್ತಿಯು ಒದಗುತ್ತದೆ. ಶೈಲಪುತ್ರಿಯ ರೂಪವು ನಾವು ಪಾಲಿಸಬೇಕಾದ ಶಾಂತಿಯುತವಾದ ನಡವಳಿಕೆಗೆ ಪ್ರೇರಣೆಯಾಗಿದೆ.
ಶೈಲಪುತ್ರಿಯ ಆಶೀರ್ವಾದ ಪಡೆಯಲು ಯಾವ ಮಂತ್ರ ಜಪಿಸಬೇಕು?
– ‘ಓಂ ದೇವಿ ಶೈಲಪುತ್ರಿಯೇ ನಮಃ”
– ಯಾ ದೇವಿ ಸರ್ವಭೂತೇಷು, ಮಾ ಶೈಲಪುತ್ರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
– ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
– ಜಯಂತಿ ಮಂಗಳ ಕಾಳಿ, ಭದ್ರ ಕಾಳಿ, ಕಪಾಲಿನಿ ದುರ್ಗಾ ಕ್ಷಮಾ ಶಿವಧಾತ್ರಿ ಸ್ವಾಹ ಸ್ವಧಾ ನಮೋಸ್ತುತೇ
– ಸರ್ವ ಬಾಧ ವಿನಿರ್ಮುಕ್ತೋ ಧನ ಧಾನ್ಯೇ ಸುತಾನ್ವಿತಃ ಮನುಷ್ಯೋ ಮತ್ ಪ್ರಸಾದೇನ್ ಭವಿಷ್ಯತಿ ನ ಸಂಶಯಃ
-ಓಂ ಹ್ರೀಂ ಶ್ರೀ ಶೈಲಪುತ್ರಿ ದುರ್ಗಾಯೇ ನಮಃ
– ಓಂ ದೇವಿ ಶೈಲಪುತ್ರೈ ಸ್ವಾಹಾ
-ವಂದೇ ವಂಚಿತ್ ಲಾಭಾಯ್, ಚಂದ್ರಾಕೃತಿಶೇಖರಂ | ವೃಷರುಧಂ ಶೂಲ್ಧಾರಂ ಶೈಲಪುತ್ರಿಂ ಯಶಸ್ವಿನಿಂ ||
Published On - 6:30 am, Sun, 15 October 23