ವಿದ್ಯಾರ್ಥಿ ಜೀವನದಲ್ಲಿದ್ದಾಗ ವಾರಕ್ಕೆ 6 ದಿನ ಸಿನಿಮಾ ನೋಡುತ್ತಿದ್ದೆ: ಸಿಎಂ ಸಿದ್ದರಾಮಯ್ಯ
ಮೈಸೂರಿನ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ್ದು, ಚಿತ್ರ ಪ್ರೇಮಿಗಳಿಗೆ ಸದಾವಕಾಶ, ಅನೇಕ ಚಿತ್ರಗಳು ಪ್ರದರ್ಶನ ಆಗುತ್ತಿವೆ. ಓದಿಗಿಂತ ಸಿನಿಮಾ ನೋಡಿ ಪ್ರಭಾವಿತರಾಗುವವರು ಬಹಳ ಜನರಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿದ್ದಾಗ ವಾರಕ್ಕೆ 6 ದಿನ ಸಿನಿಮಾ ನೋಡುತ್ತಿದ್ದೆ ಎಂದು ಹೇಳಿದ್ದಾರೆ.
ಮೈಸೂರು, ಅಕ್ಟೋಬರ್ 15: ಕನ್ನಡ ಚಿತ್ರರಂಗ ವಿಶ್ವದರ್ಜೆಯ ಗುಣಮಟ್ಟದ ಚಿತ್ರಗಳನ್ನು ನೀಡಿದೆ. ಚಿತ್ರ ಪ್ರೇಮಿಗಳಿಗೆ ಸದಾವಕಾಶ, ಅನೇಕ ಚಿತ್ರಗಳು ಪ್ರದರ್ಶನ ಆಗುತ್ತಿವೆ. ಓದಿಗಿಂತ ಸಿನಿಮಾ ನೋಡಿ ಪ್ರಭಾವಿತರಾಗುವವರು ಬಹಳ ಜನರಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ (Dasara Film Festival) ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು, ಗುಣಮಟ್ಟದ ಉತ್ತಮ ಚಿತ್ರಗಳಿಂದ ಸಮಾಜ, ನಾಡಿಗೆ ಉಪಯುಕ್ತ. ವಿದ್ಯಾರ್ಥಿ ಜೀವನದಲ್ಲಿದ್ದಾಗ ವಾರಕ್ಕೆ 6 ದಿನ ಸಿನಿಮಾ ನೋಡುತ್ತಿದ್ದೆ ಎಂದು ಹೇಳಿದ್ದಾರೆ.
ಇವತ್ತು ನಾಡ ಹಬ್ಬ ದಸರಾವನ್ನು ಖ್ಯಾತ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಅವರು ದಸರಾ ಉದ್ಘಾಟಿಸಿದ್ದಾರೆ. ಬರಗಾಲ ಇದ್ದರೂ ಸಂಪ್ರದಾಯದಂತೆ ದಸರಾ ಆಚರಣೆಗೆ ನಿರ್ಧಾರ ಮಾಡಲಾಗಿದೆ. ಉತ್ತಮ ಚಿತ್ರಗಳು ಬಂದು ಹೋಗಿವೆ ನಮ್ಮಲ್ಲಿ. ಅನೇಕ ಚಿತ್ರಗಳು ಬಹಳಷ್ಟು ದಿನ ಓಡಿರುವುದನ್ನು ನೋಡಿದ್ದೇವೆ. ಕೆಲವು ಚಿತ್ರಗಳನ್ನ 3-4 ಭಾರಿ ನೋಡಿರುವ ನಿದರ್ಶನ ಇದೆ. ನಾನು ಹೆಚ್ಚು ಸಿನಿಮಾ ನೋಡುತ್ತಿದ್ದೆ.
ಇದನ್ನೂ ಓದಿ: Mysore Dasara 2023: ಮೈಸೂರು ದಸರಾಗೆ ಚಾಲನೆ, ಹಂಸಲೇಖ ಉದ್ಘಾಟನಾ ಭಾಷಣದ ಮುಖ್ಯಾಂಶಗಳು
ಮಾನ್ಯತೆ ಪಡೆದ ಆನೇಕ ದೇಶಿ, ವಿದೇಶಿ ಚಿತ್ರಗಳ ಪ್ರದರ್ಶನ ಆಗುತ್ತವೆ. ಸರ್ಕಾರದಿಂದ ಗುಣಮಟ್ಟದ ಚಿತ್ರ ನೀಡಲು ಸಹಾಯ, ಸಹಕಾರ ಇದುವರೆಗೂ ಕೊಟ್ಟಿದ್ದೇವೆ, ಮುಂದೆಯೂ ಕೊಡುತ್ತೇವೆ. ನರಸಿಂಹ ರಾಜು ಅವರ ಜನ್ಮ ದಿನೋತ್ಸವ ಈ ವರ್ಷ ಮಾಡುತ್ತಿದ್ದೇವೆ. ಕನ್ನಡ ಚಿತ್ರರಂಗದ ಅಪರೂಪದ ಹಾಸ್ಯ ನಟ ನರಸಿಂಹ ರಾಜು. ಅವರಿಗೆ ಅವರೇ ಸಾಟಿ ಎಂದರು.
ಇದನ್ನೂ ಓದಿ: Mysore Dasara 2023 Live Streaming: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವವಿಖ್ಯಾತ ದಸರಾಗೆ ಚಾಲನೆ
ಈ ವೇಳೆ ನಾನಿದ್ದೇನೆ ಎಂದು ಸಾಧು ಕೋಕಿಲ ಎಂದಿದ್ದಕ್ಕೆ, ನೀನು ಬೇರೆ ಎಂದು ಸಿಎಂ ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಸಾಧು ಕೋಕಿಲ ಒಳ್ಳೆಯ ಹಾಸ್ಯ ನಟ, ಗಾಯಕ ಕೂಡ. ಇವಾಗ ನಮ್ಮ ಜೊತೆ ಸೇರಿದ್ದಾರೆ. ಚಲನಚಿತ್ರೋತ್ಸವ ಯಶಸ್ವಿಯಾಗಲಿ. ಎಲ್ಲರೂ ಚಲನಚಿತ್ರಗಳನ್ನ ನೋಡಿ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ನಟ ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ನಟಿ ಹರ್ಷಿಕ ಪೂನಚ್ಚ, ಮಯೂರಿ, ಸುಧಾ ನರಸಿಂಹರಾಜು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ ಮತ್ತು ಹರೀಶ್ ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಚಾಮುಂಡಿಬೆಟ್ಟದಲ್ಲಿ, ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದಸರಾಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಭಾನುವಾರ ಚಾಲನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.