Katyayani Avatar: ನವರಾತ್ರಿಯ ಆರನೇ ದಿನದ ಅವತಾರ.. ಮಹಿಷಾಸುರನ ಕೊಂದವಳು ಕಾತ್ಯಾಯನೀ ದೇವಿ!
Navratri: ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯನೀ ದೇವಿ, ಮಹಿಷಾಸುರನನ್ನು ಕೊಂದವಳು, ದೇವತೆಗಳನ್ನು ಸೆರೆಯಿಂದ ಬಿಡಿಸಿದವಳು. ನವರಾತ್ರಿ ಹಬ್ಬದ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆ ಮಹಿಷಾಸುರ ಮರ್ದಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ.
ನವರಾತ್ರಿಯ ಆರನೇ ದಿನ ಪೂಜಿಸಲ್ಪಡುವ ಕಾತ್ಯಾಯನೀ ದೇವಿ (Katyayani Avatar), ಮಹಿಷಾಸುರನನ್ನು (Mahishasura) ಕೊಂದವಳು, ದೇವತೆಗಳನ್ನು ಸೆರೆಯಿಂದ ಬಿಡಿಸಿದವಳು. ನವರಾತ್ರಿ ಹಬ್ಬದ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆ ಮಹಿಷಾಸುರ ಮರ್ದಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ.
ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಈ ತಾಯಿ ಮಹಿಷಾಸುರನನ್ನು ಕೊಂದಳು, ನಂತರ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂದಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು. ಈಕೆಯ ಕತೆ ಹೀಗಿದೆ.
ಮಹರ್ಷಿ ಕಾತ್ಯಾಯನರು ದೇವಿ ಆದಿಶಕ್ತಿಗಾಗಿ ತೀವ್ರ ತಪಸ್ಸು ಮಾಡಿದರು. ಪರಿಣಾಮವಾಗಿ ಅವರು ದೇವಿಯನ್ನು ತಮ್ಮ ಮಗಳಾಗಿ ಪಡೆದರು. ದೇವಿಯು ಮಹರ್ಷಿ ಕಾತ್ಯಾಯನರ ಆಶ್ರಮದಲ್ಲಿ ಜನಿಸಿದಳು. ಕಾತ್ಯಾಯನರ ಮಗಳಾದ ಕಾರಣದಿಂದ ಅವಳನ್ನು ಕಾತ್ಯಾಯನಿ ಎಂದು ಕರೆಯಲಾಗುತ್ತದೆ.
ದೇವಿಯು ಜನಿಸುವ ಮುನ್ನ ಮಹಿಷಾಸುರನೆಂಬ ರಾಕ್ಷಸನ ದೌರ್ಜನ್ಯವು ಲೋಕದಲ್ಲಿ ಬಹಳಷ್ಟು ಹೆಚ್ಚಾಗಿತ್ತು. ರಾಕ್ಷಸರು ಸ್ವರ್ಗ ಹಾಗೂ ಭೂಮಿಯಲ್ಲಿ ಗದ್ದಲ ಸೃಷ್ಟಿಸಿದರು. ಅಶ್ವಿನಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಕಾತ್ಯಾಯನ ಮುನಿಯ ಮನೆಯಲ್ಲಿ ತ್ರಿದೇವರ ಪ್ರಕಾಶಮಾನವಾದ ದೇವತೆ ಜನಿಸಿದಳು.
ಇದರ ನಂತರ ಕಾತ್ಯಾಯನ ಋಷಿ ತಾಯಿಯನ್ನು ಮೂರು ದಿನಗಳ ಕಾಲ ಪೂಜಿಸಿದರು. ಇದರ ನಂತರ, ದಶಮಿಯ ದಿನದಂದು, ಮಹಿಷಾಸುರನನ್ನು ತಾಯಿಯು ಕೊಂದಳು. ಶುಂಭ ಮತ್ತು ನಿಶುಂಭರೂ ಸ್ವರ್ಗದ ಮೇಲೆ ದಾಳಿ ನಡೆಸಿ ಹಾಳು ಮಾಡಿದ್ದರು. ಇಂದ್ರನ ಸಿಂಹಾಸನವನ್ನು ಸಹ ಕಿತ್ತುಕೊಂಡಿದ್ದರು.
ಅಷ್ಟೇ ಅಲ್ಲ ನವಗ್ರಹಗಳನ್ನೂ ಒತ್ತೆಯಾಳಾಗಿರಿಸಿಕೊಂಡಿದ್ದರು. ರಾಕ್ಷಸರು ಬೆಂಕಿ ಮತ್ತು ಗಾಳಿಯ ಶಕ್ತಿಯನ್ನು ಕೂಡ ವಶಪಡಿಸಿಕೊಂಡರು. ನೊಂದ ಎಲ್ಲಾ ದೇವತೆಗಳು ದೇವಿಯಿದ್ದ ಆಶ್ರಯಕ್ಕೆ ಹೋದರು ಮತ್ತು ಅವರನ್ನು ಅಸುರರ ದೌರ್ಜನ್ಯದಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು. ತಾಯಿ ಈ ಅಸುರರನ್ನು ಕೊಂದು ಎಲ್ಲರನ್ನೂ ಅವರ ಭಯದಿಂದ ಮುಕ್ತಗೊಳಿಸಿದರು.
ಕಾತ್ಯಾಯನಿಯ ಮಹತ್ವ
ಕಾತ್ಯಾಯನಿಯು ಗುರು ಗ್ರಹವನ್ನು ಆಳುತ್ತಾಳೆ. ಗುರುಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಜನ್ಮಕುಂಡಲಿಯಲ್ಲಿ ಗುರು ದೋಷವಿದ್ದರೂ ಪರಿಹಾರವಾಗುವುದು.
ಕಾತ್ಯಾಯಿನಿ ದೇವಿ ಮಂತ್ರ
ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ | ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಓಂ ಕಾತ್ಯಾಯಿನಿ ದೇವ್ಯೇ ನಮಃ ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರ್ದೂಲ್ವರ್ವಾಹನಾ ಕಾತ್ಯಾಯಿನಿ ಶುಭಂ ದದ್ಯಾದ್ ದೇವೀ ದಾನವಗತಿನೀ
ಕಾತ್ಯಾಯನಿ ದೇವಿಯ ಆರಾಧನಾ ವಿಧಾನ
ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ. ಮೊದಲು ಗಣಪತಿ ದೇವರನ್ನು ಪೂಜಿಸಿ. ನಂತರ ಚೌಕಿಯ ಮೇಲೆ ದೇವಿಯ ಚಿತ್ರ ಅಥವಾ ಮೂರ್ತಿಯನ್ನು ಸ್ಥಾಪಿಸಿ, ನಂತರ ಒಂದು ಹೂವನ್ನು ಕೈಯಲ್ಲಿ ತೆಗೆದುಕೊಂಡು ತಾಯಿಯ ಪಾದದಲ್ಲಿ ಹೂವನ್ನು ಅರ್ಪಿಸಿ, ನಂತರ ದೇವಿಗೆ ಕೆಂಪು ಬಟ್ಟೆ, 3 ಉಂಡೆ ಅರಿಶಿಣ, ಹಳದಿ ಹೂವುಗಳು, ಹಣ್ಣುಗಳು, ನೈವೇದ್ಯ ಇತ್ಯಾದಿಗಳನ್ನು ಅರ್ಪಿಸಿ. ಆರತಿಯನ್ನು ಮಾಡಿ. ಈ ದಿನದಂದು ಜನರು ಸೌಂದರ್ಯ ಮತ್ತು ನಿರ್ಭಯತೆಯನ್ನು ಸೂಚಿಸುವ ಬಣ್ಣವಾದ ಕೆಂಪು ಬಣ್ಣವನ್ನು ಧರಿಸುತ್ತಾರೆ.