Navratri 2022: ನವರಾತ್ರಿಯಲ್ಲಿ ಈ 9 ಬಣ್ಣದ ಬಟ್ಟೆಗಳನ್ನು ಧರಿಸಿ, ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗಿ

| Updated By: ನಯನಾ ರಾಜೀವ್

Updated on: Sep 26, 2022 | 11:01 AM

ಇಂದಿನಿಂದ ಅಂದರೆ ಸೆಪ್ಟೆಂಬರ್ 26ರಿಂದ ನವರಾತ್ರಿ ಆರಂಭವಾಗಿದೆ. ಈ ಸಮಯದಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಯಾವ ದಿನದಂದು ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿ ದುರ್ಗಾ ಮಾತೆಯನ್ನು ಮೆಚ್ಚಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

Navratri 2022: ನವರಾತ್ರಿಯಲ್ಲಿ ಈ 9 ಬಣ್ಣದ ಬಟ್ಟೆಗಳನ್ನು ಧರಿಸಿ, ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗಿ
Navratri
Follow us on

ಇಂದಿನಿಂದ ಅಂದರೆ ಸೆಪ್ಟೆಂಬರ್ 26ರಿಂದ ನವರಾತ್ರಿ ಆರಂಭವಾಗಿದೆ. ಈ ಸಮಯದಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ.
ಯಾವ ದಿನದಂದು ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿ ದುರ್ಗಾ ಮಾತೆಯನ್ನು ಮೆಚ್ಚಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

ಈ ಸಮಯದಲ್ಲಿ ಸಂಪೂರ್ಣ 9 ದಿನ ಉಪವಾಸಗಳನ್ನು ಕೈಗೊಳ್ಳುತ್ತಾರೆ. ನವರಾತ್ರಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

9 ದೇವತೆಗಳು ತಮ್ಮದೇ ಆದ ನಿರ್ದಿಷ್ಟ ಬಣ್ಣವನ್ನು ಇಷ್ಟಪಡುತ್ತಾರೆ ಎಂದು ನಂಬಲಾಗಿದೆ. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸುವುದರಿಂದ ದೇವಿಯು ಪ್ರಸನ್ನಳಾಗುತ್ತಾಳೆ. ಪ್ರತಿದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೇ ದಿನ
ನವರಾತ್ರಿಯ ಮೊದಲ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ಈ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಶೈಲಪುತ್ರಿ ದೇವಿಗೆ ಹಳದಿ ಬಣ್ಣ ಎಂದರೆ ತುಂಬಾ ಇಷ್ಟ. ಇದನ್ನು ಧರಿಸಿ ಪೂಜಿಸುವುದರಿಂದ ಶುಭವಾಗುತ್ತದೆ.

ಎರಡನೇ ದಿನ
ಎರಡನೇ ದಿನ ಹಸಿರು ಬಟ್ಟೆ ಧರಿಸಿ. ಈ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಬಣ್ಣವನ್ನು ಸಮೃದ್ಧಿ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವಿಯನ್ನು ಮೆಚ್ಚಿಸಲು ಈ ದಿನ ನೀವು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬಹುದು.

ದಿನ 3
ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ದಟ್ಟ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸುವುದರಿಂದ ದೇವಿಯ ಅನುಗ್ರಹ ದೊರೆಯುತ್ತದೆ.

ನಾಲ್ಕನೇ ದಿನ
ನವರಾತ್ರಿಯ ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಭಕ್ತರು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸಬೇಕು. ಇದು ದೇವಿಯನ್ನು ಮೆಚ್ಚಿಸುತ್ತದೆ.

ಐದನೇ ದಿನ
ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಈ ಬಣ್ಣವು ಶಾಂತಿಯ ಸಂಕೇತವಾಗಿದೆ. ಮಾತೆಗೆ ಬಿಳಿ ಬಣ್ಣ ಎಂದರೆ ತುಂಬಾ ಇಷ್ಟ.

ಆರನೇ ದಿನ
ನವರಾತ್ರಿಯ ಆರನೇ ದಿನದಂದು ಮಾ ಕಾತ್ಯಾಯನಿಯನ್ನು ಪೂಜಿಸಲಾಗುತ್ತದೆ. ದೇವಿಗೆ ಕೆಂಪು ಬಣ್ಣ ತುಂಬಾ ಇಷ್ಟ. ಈ ಬಣ್ಣವು ಅದೃಷ್ಟ, ಉತ್ಸಾಹ, ಧೈರ್ಯ ಮತ್ತು ಹೊಸ ಜೀವನದ ಸಂಕೇತವಾಗಿದೆ.

ಏಳನೇ ದಿನ
ನವರಾತ್ರಿಯ ಏಳನೇ ದಿನದಂದು ಮಾ ಕಲರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ಪೂಜೆಯಲ್ಲಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಎಂಟನೆಯ ದಿನ
ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಈ ದಿನ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸಬೇಕು. ದೇವಿಗೆ ಗುಲಾಬಿ ಬಣ್ಣ ತುಂಬಾ ಇಷ್ಟ.

ಒಂಬತ್ತನೇ ದಿನ
ನವರಾತ್ರಿಯ 9ನೇ ದಿನದಂದು ಮಾ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ದೇವಿಯ ಅನುಗ್ರಹ ದೊರೆಯುತ್ತದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ