TV9 Kannada Spiritual October Festival list 2026: Important list of festival celebrations in October
October Festival List 2026: ಅಕ್ಟೋಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳ ಪಟ್ಟಿ ಇಲ್ಲಿದೆ
ಸೆಪ್ಟೆಂಬರ್ ಮಾಸ ಕಳೆದು, ನಾವೀಗ ಈ ವರ್ಷದ ಅಕ್ಟೋಬರ್ ತಿಂಗಳಿಗೆ ಕಾಲಿಡಲು ಸಜ್ಜಾಗಿದ್ದೇವೆ. ಈ ತಿಂಗಳಲ್ಲೂ ಹಬ್ಬಗಳು, ವ್ರತಾಚರಣೆಗಳಿಗೆ ಕೊರತೆಯಿಲ್ಲ. ಹೌದು, ಚಂದ್ರ ಷಷ್ಠಿಯಿಂದ ಸಂಕಷ್ಟಹರ ಚತುರ್ಥಿಯವರೆಗೆ ಈ ತಿಂಗಳಲ್ಲಿ ಯಾವೆಲ್ಲಾ ಹಬ್ಬ ಹರಿದಿನಗಳು ಹಾಗೂ ವ್ರತಾಚರಣೆಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
October Festivals List
Image Credit source: Michael Prince/The Image Bank/Getty Images/ Pinterest
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು (festivals) ಆಚರಿಸಲಾಗುತ್ತದೆ. ಈ ವರ್ಷದ ಹತ್ತನೇ ತಿಂಗಳಾದ ಅಕ್ಟೋಬರ್‌ನಲ್ಲಿ ಹತ್ತು ಹಲವು ಹಬ್ಬಗಳನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಯಾವೆಲ್ಲಾ ಹಬ್ಬಗಳು ಹಾಗೂ ವ್ರತಗಳಿವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಅಕ್ಟೋಬರ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ
ಅಕ್ಟೋಬರ್ 01: ಚಂದ್ರ ಷಷ್ಠಿ
ಅಕ್ಟೋಬರ್ 03: ಅಷ್ಟಕಾ ಶ್ರಾದ್ಧ
ಅಕ್ಟೋಬರ್ 04: ಅವಿಧವಾನವಮಿ
ಅಕ್ಟೋಬರ್ 06: ಸರ್ವೈಕಾದಶಿ ಇಂದಿರಾ
ಅಕ್ಟೋಬರ್ 07: ಸಂನ್ಯಾಸಿ ಮಹಾಲಯ
ಅಕ್ಟೋಬರ್ 08: ಮಾಸಶಿವರಾತ್ರಿ
ಅಕ್ಟೋಬರ್ 08: ಪ್ರದೋಷ
ಅಕ್ಟೋಬರ್ 09: ಶಸ್ತ್ರಹತಃ ಶ್ರಾದ್ಧ
ಅಕ್ಟೋಬರ್ 10: ಗಜಛಾಯಾ
ಅಕ್ಟೋಬರ್ 10: ಮಹಾಲಯ ಅಮಾವಾಸ್ಯಾ
ಅಕ್ಟೋಬರ್ 11: ನವರಾತ್ರಿ ಆರಂಭ
ಅಕ್ಟೋಬರ್ 15: ಲಲಿತಾ ಪಂಚಮಿ ಅಥವಾ ಉಪಾಂಗ ಲಲಿತಾ ವ್ರತ
ಅಕ್ಟೋಬರ್ 16: ಶಾರದಾ ಪೂಜಾರಂಭ
ಅಕ್ಟೋಬರ್ 17: ತುಲಾ ಸಂಕ್ರಮಣ
ಅಕ್ಟೋಬರ್ 18: ಓಳಿ ಪ್ರಾರಂಭ
ಅಕ್ಟೋಬರ್ 19: ದುರ್ಗಾಷ್ಟಮಿ
ಅಕ್ಟೋಬರ್ 20: ಬುದ್ಧಿ ಜಯಂತಿ
ಅಕ್ಟೋಬರ್ 20: ದಸರಾ
ಅಕ್ಟೋಬರ್ 20: ಆಯುಧ ಪೂಜಾ
ಅಕ್ಟೋಬರ್ 21: ಮಧ್ವ ಜಯಂತಿ
ಅಕ್ಟೋಬರ್ 21: ವಿಜಯದಶಮಿ
ಅಕ್ಟೋಬರ್ 21: ಪಶ್ಚಿಮಜಾಗರ ಪೂಜಾರಂಭ
ಅಕ್ಟೋಬರ್ 22: ಸರ್ವೈಕಾದಶಿ ಪಾಶಂಕುಶಾ
ಅಕ್ಟೋಬರ್ 23: ಪ್ರದೋಷ
ಅಕ್ಟೋಬರ್ 23: ದ್ವಿದಳ ವ್ರತಾರಂಭ
ಅಕ್ಟೋಬರ್ 25: ವಾಲ್ಮೀಕಿ ಜಯಂತಿ
ಅಕ್ಟೋಬರ್ 25: ಸೌಭಾಗ್ಯ ವ್ರತ
ಅಕ್ಟೋಬರ್ 26: ಓಳಿ ಮುಕ್ತಾಯ
ಅಕ್ಟೋಬರ್ 26: ಅಗ್ರಯಣಮ್
ಅಕ್ಟೋಬರ್ 29: ಸಂಕಷ್ಟಹರ ಚತುರ್ಥಿ
ಇನ್ನಷ್ಟು ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಾಯಿನಂದಾ
ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ