Gemstone Astrology: ಮುತ್ತು ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ; ಈ 4 ರಾಶಿಗಳಿಗೆ ಅದೃಷ್ಟ, 5 ರಾಶಿಗೆ ಸಂಕಷ್ಟ!

ಪ್ರಾಚೀನ ಕಾಲದಿಂದಲೂ ರತ್ನಗಳನ್ನು ಧರಿಸುವ ಸಂಪ್ರದಾಯವಿದೆ. ಜ್ಯೋತಿಷ್ಯದ ಪ್ರಕಾರ, ರತ್ನಗಳು ಗ್ರಹಗಳ ಶುಭ-ಅಶುಭ ಪರಿಣಾಮಗಳನ್ನು ಸಮತೋಲನಗೊಳಿಸುತ್ತವೆ. ಮುತ್ತು ಚಂದ್ರನ ರತ್ನವಾಗಿದ್ದು, ಇದು ಮನಸ್ಸಿನ ಶಾಂತಿ, ಭಾವನಾತ್ಮಕ ಸಮತೋಲನ ನೀಡುತ್ತದೆ. ಕೆಲವು ರಾಶಿಗಳಿಗೆ ಶುಭವಾದರೆ, ಇನ್ನು ಕೆಲವು ರಾಶಿಗಳು ಜ್ಯೋತಿಷಿಗಳ ಸಲಹೆ ಇಲ್ಲದೆ ಧರಿಸಬಾರದು. ಸರಿಯಾದ ಜಾತಕ ಪರಿಶೀಲನೆ ನಡೆಸಿ, ಸಲಹೆ ಪಡೆದು ಧರಿಸುವುದೇ ಉತ್ತಮ.

Gemstone Astrology: ಮುತ್ತು ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ; ಈ 4 ರಾಶಿಗಳಿಗೆ ಅದೃಷ್ಟ, 5 ರಾಶಿಗೆ ಸಂಕಷ್ಟ!
ಮುತ್ತು ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ
Image Credit source: Getty Images

Updated on: Jul 11, 2026 | 7:54 AM

ಪ್ರಾಚೀನ ಕಾಲದಿಂದಲೂ ರತ್ನಗಳನ್ನು ಧರಿಸುವ ಸಂಪ್ರದಾಯ ನಡೆದು ಬಂದಿದೆ. ಹಿಂದೆ ರಾಜರು ಮತ್ತು ರಾಜಮನೆತನದವರು ವಿವಿಧ ಅಮೂಲ್ಯ ರತ್ನಗಳನ್ನು ಧರಿಸುತ್ತಿದ್ದರು. ಇಂದಿಗೂ ಅನೇಕರು ರತ್ನಗಳನ್ನು ಧರಿಸುತ್ತಾರೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರತ್ನ ಧರಿಸುವುದು ಕೇವಲ ಅಲಂಕಾರಕ್ಕಾಗಿ ಅಲ್ಲ, ಗ್ರಹಗಳ ಶುಭ-ಅಶುಭ ಪರಿಣಾಮಗಳನ್ನು ಸಮತೋಲನಗೊಳಿಸುವ ಪರಿಹಾರವಾಗಿಯೂ ಪರಿಗಣಿಸಲಾಗುತ್ತದೆ. ಆದ್ದರಿಂದ ಯಾವುದೇ ರತ್ನವನ್ನು ಧರಿಸುವ ಮೊದಲು ಅನುಭವಿ ಜ್ಯೋತಿಷಿಗಳ ಸಲಹೆ ಪಡೆಯುವುದು ಅತ್ಯಂತ ಮುಖ್ಯ.

ಮುತ್ತು ಯಾವ ಗ್ರಹವನ್ನು ಪ್ರತಿನಿಧಿಸುತ್ತದೆ?

ಜ್ಯೋತಿಷ್ಯದಲ್ಲಿ ಮುತ್ತು (Pearl) ಚಂದ್ರನ ರತ್ನವೆಂದು ಪರಿಗಣಿಸಲಾಗಿದೆ. ಚಂದ್ರನು ಮನಸ್ಸು, ಭಾವನೆಗಳು, ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸವನ್ನು ಪ್ರತಿನಿಧಿಸುತ್ತಾನೆ. ಜಾತಕದಲ್ಲಿ ಚಂದ್ರನು ದುರ್ಬಲವಾಗಿದ್ದರೆ ಅಥವಾ ಮಾನಸಿಕ ಅಶಾಂತಿ, ಭಾವನಾತ್ಮಕ ಏರಿಳಿತಗಳು ಹೆಚ್ಚಿದ್ದರೆ, ಮುತ್ತು ಧರಿಸಲು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿ, ಭಾವನಾತ್ಮಕ ಸಮತೋಲನ ಹಾಗೂ ಸಕಾರಾತ್ಮಕ ಚಿಂತನೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ.

ಈ ರಾಶಿಯವರಿಗೆ ಮುತ್ತು ಧರಿಸುವುದು ಶುಭ:

ಜ್ಯೋತಿಷ್ಯದ ಪ್ರಕಾರ ಮೇಷ, ಕರ್ಕಾಟಕ, ವೃಶ್ಚಿಕ ಮತ್ತು ಮೀನ ರಾಶಿಯವರಿಗೆ ಮುತ್ತು ಧರಿಸುವುದು ಸಾಮಾನ್ಯವಾಗಿ ಶುಭಕರವೆಂದು ಹೇಳಲಾಗುತ್ತದೆ. ಈ ರಾಶಿಯವರು ಮುತ್ತು ಧರಿಸಿದರೆ ಮಾನಸಿಕ ಸ್ಥಿರತೆ, ಆತ್ಮವಿಶ್ವಾಸ ಹಾಗೂ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರಬಹುದು ಎನ್ನಲಾಗಿದೆ. ಇನ್ನು ಸಿಂಹ, ತುಲಾ ಮತ್ತು ಧನು ರಾಶಿಯವರು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಮುತ್ತು ಧರಿಸಬಹುದು. ಆದರೆ ಅದಕ್ಕೂ ಮೊದಲು ತಮ್ಮ ಜಾತಕವನ್ನು ಜ್ಯೋತಿಷಿಗಳಿಂದ ಪರಿಶೀಲಿಸಿಕೊಳ್ಳುವುದು ಸೂಕ್ತ.

ಇದನ್ನೂ ಓದಿ: ಶ್ರಾದ್ಧದಲ್ಲಿ ಮೊದಲು ಕಾಗೆಗೆ ಅನ್ನ ಯಾಕೆ ನೀಡುತ್ತಾರೆ? ಇದರ ಹಿಂದಿದೆ ಗರುಡ ಪುರಾಣ ಮತ್ತು ರಾಮಾಯಣದ ಕುತೂಹಲಕಾರಿ ಕಥೆ

ಈ 5 ರಾಶಿಯವರು ಮುತ್ತು ಧರಿಸುವ ಮುನ್ನ ಎಚ್ಚರ:

ವೃಷಭ, ಮಿಥುನ, ಕನ್ಯಾ, ಮಕರ ಮತ್ತು ಕುಂಭ ರಾಶಿಯವರು ಜ್ಯೋತಿಷಿಗಳ ಸಲಹೆ ಇಲ್ಲದೆ ಮುತ್ತು ಧರಿಸಬಾರದು ಎಂದು ಹೇಳಲಾಗುತ್ತದೆ. ಇವರ ಜಾತಕದಲ್ಲಿ ಶುಕ್ರ, ಬುಧ ಅಥವಾ ಶನಿ ಗ್ರಹಗಳ ಪ್ರಭಾವ ಹೆಚ್ಚಿದ್ದರೆ ಮುತ್ತು ಧರಿಸುವುದರಿಂದ ಪ್ರತಿಕೂಲ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

ಜಾತಕ ಪರಿಶೀಲನೆ ಏಕೆ ಮುಖ್ಯ?

ಪ್ರತಿಯೊಬ್ಬರ ಜಾತಕದಲ್ಲಿರುವ ಗ್ರಹಗಳ ಸ್ಥಾನ, ಯೋಗಗಳು ಹಾಗೂ ದಶಾ-ಭುಕ್ತಿಗಳು ವಿಭಿನ್ನವಾಗಿರುತ್ತವೆ. ಆದ್ದರಿಂದ ಒಂದೇ ರತ್ನ ಎಲ್ಲರಿಗೂ ಒಂದೇ ರೀತಿಯ ಫಲ ನೀಡುವುದಿಲ್ಲ. ಜ್ಯೋತಿಷಿಗಳು ಜಾತಕವನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ರತ್ನ ಧರಿಸಲು ಶಿಫಾರಸು ಮಾಡುತ್ತಾರೆ. ಸರಿಯಾದ ರತ್ನವನ್ನು ಸರಿಯಾದ ವಿಧಾನದಲ್ಲಿ ಧರಿಸಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us