Mahakumbh 2025: ಮಹಾಕುಂಭವನ್ನು ಸನಾತನ ಧರ್ಮದಲ್ಲಿ ಏಕೆ ವಿಶೇಷವೆಂದು ಪರಿಗಣಿಸಲಾಗಿದೆ?
ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಮಹಾಕುಂಭ ಮೇಳವು 12 ವರ್ಷಗಳಿಗೊಮ್ಮೆ ನಡೆಯುವ ವಿಶ್ವಪ್ರಸಿದ್ಧ ಧಾರ್ಮಿಕ ಉತ್ಸವ. ಸಮುದ್ರ ಮಂಥನದ ಪೌರಾಣಿಕ ಕಥೆಗೆ ಸಂಬಂಧಿಸಿದ ಈ ಮೇಳದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ಬಾರಿ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಭಾರತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭವು ವಿಶ್ವಪ್ರಸಿದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವಾಗಿದೆ. ಈ ಬಾರಿ ಜನವರಿ 13 ರಿಂದ ಪ್ರಾರಂಭವಾಗಿ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ವಿದೇಶಗಳಿಂದ ಯೋಗಿಗಳು, ಸಂತರು ಈಗಿಂದಲೇ ಆಗಮಿಸುತ್ತಿದ್ದಾರೆ. ಆದ್ದರಿಂದ ಮಹಾಕುಂಭ ಏಕೆ ತುಂಬಾ ವಿಶೇಷ ಮತ್ತು ಅದರ ಧಾರ್ಮಿಕ ಮಹತ್ವವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಮಹಾಕುಂಭದ ಧಾರ್ಮಿಕ ಪ್ರಾಮುಖ್ಯತೆ:
ಸನಾತನ ಧರ್ಮದಲ್ಲಿ ಮಹಾಕುಂಭಕ್ಕೆ ವಿಶೇಷ ಮಹತ್ವವಿದೆ. ಕುಂಭಮೇಳದ ಧಾರ್ಮಿಕ ಪ್ರಾಮುಖ್ಯತೆಯು ಸಮುದ್ರ ಮಂಥನಕ್ಕೆ ಸಂಬಂಧಿಸಿದೆ. ಪೌರಾಣಿಕ ಮತ್ತು ಧಾರ್ಮಿಕ ಕಥೆಗಳ ಪ್ರಕಾರ, ದೇವತೆಗಳು ಮತ್ತು ರಾಕ್ಷಸರು ಒಟ್ಟಾಗಿ ಸಾಗರವನ್ನು ಮಂಥನ ಮಾಡಿದಾಗ, ಅಮೃತ ಕಲಶ ಅದರಿಂದ ಹೊರಬಂದಿತು. ಅಮತ್ರಿ ಕಲಶವನ್ನು ಕುಂಭದ ಸಂಕೇತವೆಂದು ಪರಿಗಣಿಸಲಾಗಿದೆ. ಕುಂಭ ಎಂದರೆ ಕಲಶ (ಕುಂಡ). ಆದರೆ ಇದು ಸಾಮಾನ್ಯ ಕಲಶವಲ್ಲ ಅಮೃತ ಕಲಶ ಮತ್ತು ಈ ಅಮೃತ ಕಲಶ ಕುಂಭೋತ್ಸವದ ಹಿನ್ನೆಲೆಯಾಗಿದೆ.
ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಮಹತ್ವದ್ದಾಗಿದೆ. ಆದರೆ ಮಹಾಕುಂಭದ ಸಮಯದಲ್ಲಿ ಪವಿತ್ರ ರಾಜ ಸ್ನಾನವನ್ನು ತೆಗೆದುಕೊಳ್ಳುವುದರಿಂದ, ವ್ಯಕ್ತಿಯು ದೈಹಿಕ ಮಾತ್ರವಲ್ಲದೆ ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧಿಯನ್ನು ಪಡೆಯುತ್ತಾನೆ. ಕುಂಭದ ಸಮಯದಲ್ಲಿ ಗಂಗಾ, ಯಮುನಾ, ಗೋದಾವರಿ ಮತ್ತು ಶಿಪ್ರಾ ಮುಂತಾದ ಪವಿತ್ರ ನದಿಗಳ ನೀರು ಅಮೃತದಂತೆ ಶುದ್ಧವಾಗುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: Vastu Tips: ಈ ಮೂರು ವಸ್ತುಗಳನ್ನು ಯಾರ ಮನೆಯಿಂದಲೂ ತರಬೇಡಿ
ಕುಂಭಮೇಳವನ್ನು ಪ್ರತಿ 3 ವರ್ಷಗಳಿಗೊಮ್ಮೆ, ಅರ್ಧ ಕುಂಭಮೇಳವನ್ನು ಪ್ರತಿ 6 ವರ್ಷಗಳಿಗೊಮ್ಮೆ ಮತ್ತು ಮಹಾ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. 2013ರಲ್ಲಿ ಕೊನೆಯ ಮಹಾಕುಂಭಮೇಳವನ್ನು ಆಯೋಜಿಸಲಾಗಿತ್ತು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:58 pm, Sat, 7 December 24