Kannada News Spiritual Ram Navami 2022 here is do s and dont s in this Ram Navami details here
Ram Navami 2022: ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ
Ram Navami: ರಾಮ ನವಮಿ ಏಪ್ರಿಲ್ 10 ರಂದು 1:32 ಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ರಂದು 3:15 ಕ್ಕೆ ರಾಮ ನವಮಿ ಮುಕ್ತಾಯಗೊಳ್ಳಲಿದೆ. ರಾಮನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ.
ದುರ್ಗಾ ದೇವಿಯ ಭಕ್ತಿ ಚೈತ್ರ ನವರಾತ್ರಿಯನ್ನು ಈ ಬಾರಿ ಏಪ್ರಿಲ್ 2ರಿಂದ- ಏಪ್ರಿಲ್ 11ರವರೆಗೆ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಉಪವಾಸ ಮತ್ತು ಭಕ್ತಿ ಚೈತ್ರ ನವರಾತ್ರಿಯು ಮುಕ್ತಾಯಗೊಳ್ಳುವ 9ನೇ ದಿನವನ್ನು ರಾಮ ನವಮಿ (Sri Rama Navami) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನವರಾತ್ರಿ ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯಾದರೆ, ಅಕ್ಟೋಬರ್- ನವೆಂಬರ್ ಸಂದರ್ಭದಲ್ಲಿ ಶಾರದೀಯ ನವರಾತ್ರಿಯನ್ನು ಆಚರಿಸಲಾಗುತ್ತದೆ. ಶಾರದೀಯ ನವರಾಥ್ರಿಯು ವಿಜಯದಶಮಿಯೊಂದಿಗೆ ಮುಕ್ತಾಯವಾದರೆ, ಚೈತ್ರ ನವರಾತ್ರಿಯು ರಾಮ ನವಮಿಯೊಂದಿಗೆ ಮುಕ್ತಾಯವಾಗುತ್ತದೆ. ನಮ್ಮಲ್ಲಿ ಚೈತ್ರ ನವರಾತ್ರಿಗಿಂತ ರಾಮ ನವಮಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಏಪ್ರಿಲ್ 10 ರಂದು 1:32 ಕ್ಕೆ ಪ್ರಾರಂಭವಾಗಿ ಏಪ್ರಿಲ್ 11 ರಂದು 3:15 ಕ್ಕೆ ರಾಮ ನವಮಿ ಮುಕ್ತಾಯಗೊಳ್ಳಲಿದೆ. ರಾಮ ನವಮಿ ಆಚರಣೆ ಹೇಗಿರಬೇಕು? ಇಲ್ಲಿದೆ ಮಾಹಿತಿ.
ರಾಮನವಮಿ ಆಚರಣೆ ಹೀಗಿರಲಿ:
ದಶಮಿಯವರೆಗೆ ಎಲ್ಲಾ ನವರಾತ್ರಿ ದಿನಗಳಲ್ಲಿ ಅಖಂಡ ದೀಪವನ್ನು ಬೆಳಗಿಸಿ. ಇದು ನಿಮ್ಮಿಂದ ಸಾಧ್ಯವಾಗದಿದ್ದರೆ, ಹಬ್ಬ ಮುಗಿಯುವವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆರತಿಯನ್ನು ನಡೆಸಬಹುದು.
ಎಲ್ಲಾ ನವರಾತ್ರಿ ದಿನಗಳಲ್ಲಿ ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತಶತಿ ಪಠಿಸಬಹುದು.
ಉಪವಾಸ ಮಾಡುವಾಗ ದೇಹವನ್ನು ನಿರ್ಜಲೀಕರಣಗೊಳ್ಳದಂತೆ ನೋಡಿಕೊಳ್ಳಬೇಕು. ಇದಕ್ಕೆ ನಿಂಬೆ ರಸ, ಎಳನೀರು, ಮಜ್ಜಿಗೆ ಮತ್ತು ಗ್ರೀನ್ ಟೀ ಉತ್ತಮ ಆಯ್ಕೆ.
ನೀವು ಕೆಲಸ ಮಾಡುತ್ತಿದ್ದರೆ, ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾಗಳಂತಹ ಡ್ರೈಫ್ರೂಟ್ಸ್ ತಿನ್ನಬಹುದು.