AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ram Navami 2025: ರಾಮ ನವಮಿಯ ಈ ಶುಭ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿವೆ ಅರ್ಥಪೂರ್ಣ ಸಂದೇಶಗಳು

ಪ್ರತಿವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ರಾಮ ನವಮಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಏಪ್ರಿಲ್‌ 6 ರಂದು ಅಂದರೆ ಇಂದು ರಾಮ ನವಮಿ. ಈ ದಿನ ಭಕ್ತರು ರಾಮ ದೇವರನ್ನು ಬಹಳ ಭಕ್ತಿ ಪೂರ್ವಕವಾಗಿ ಪೂಜಿಸುತ್ತಾರೆ. ಈ ದಿನ ನೀವೇನಾದರೂ ನಿಮ್ಮ ಪ್ರೀತಿ ಪಾತ್ರರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಬೇಕೆಂದಿದ್ದರೆ ಇಲ್ಲಿವೆ ಒಂದಷ್ಟು ಹಬ್ಬದ ಅರ್ಥಪೂರ್ಣ ಸಂದೇಶಗಳು.

Ram Navami 2025: ರಾಮ ನವಮಿಯ ಈ ಶುಭ ದಿನ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಲು ಇಲ್ಲಿವೆ ಅರ್ಥಪೂರ್ಣ ಸಂದೇಶಗಳು
Ram Navami 2025
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: Apr 06, 2025 | 10:51 AM

Share

ರಾಮ ನವಮಿ (Ram Navami) ಶ್ರೀ ರಾಮ ದೇವರಿಗೆ ಮೀಸಲಾದ ಮಂಗಳಕರ ಹಬ್ಬವಾಗಿದೆ. ಭಾರತದಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಗುವ ಹಬ್ಬಗಳಲ್ಲಿ ರಾಮ ನಮವಿಯೂ ಒಂದು. ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನದಂದು ವಿಷ್ಣುವಿನ ಏಳನೇ ಅವತಾರವಾದ ಭಗವಾನ್‌ ಶ್ರೀ ರಾಮನ ಜನ್ಮ ದಿನವನ್ನು ರಾಮ ನವಮಿ (Ram Navami) ಎಂಬ ಹೆಸರಿನಿಂದ ಬಹಳ ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ. ಭಕ್ತರು ಈ ದಿನ ವಿಶೇಷ ಪೂಜೆ, ಉಪವಾಸ, ರಾಮ ನಾಮವನ್ನು ಪಠಿಸುವ ಮೂಲಕ ವಿಶೇಷವಾಗಿ ಹಬ್ಬವನ್ನು ಆಚರಿಸುತ್ತಾರೆ. ಈ ವರ್ಷ ಏಪ್ರಿಲ್‌ 6 ರಂದು ಅಂದರೆ ಇಂದು ರಾಮ ನವಮಿ ಹಬ್ಬ. ಈ ಮಂಗಳಕರ ಹಬ್ಬದಂದು ನೀವು ನಿಮ್ಮ ಸ್ನೇಹಿತರು, ಪ್ರೀತಿ ಪಾತ್ರರು ಮತ್ತು ಕುಟುಂಬ ಸದಸ್ಯರಿಗೆ ಶುಭಾಶಯ (Wish) ಮತ್ತು ಅರ್ಥಪೂರ್ಣ ಸಂದೇಶಗಳನ್ನು ಕಳುಹಿಸಲು ಬಯಸಿದರೆ ಇಲ್ಲಿವೆ ಸಂದೇಶಗಳು.

ನಿಮ್ಮ ಪ್ರೀತಿ ಪಾತ್ರರಿಗೆ ಈ ರೀತಿ ರಾಮ ನವಮಿ ಹಬ್ಬದ ಶುಭಾಶಯ ತಿಳಿಸಿ:

  1. ರಾಮ ನವಮಿ ಹಬ್ಬದ ಈ ಶುಭ ಸಂದರ್ಭದಲ್ಲಿ ಶ್ರೀರಾಮ ದೇವರ ಕೃಪೆ, ಆಶಿರ್ವಾದ ನಿಮ್ಮ ಮೇಲೆ ಇರಲು ಎಂದು ಹಾರೈಸುತ್ತೇನೆ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿ ಹಬ್ಬದ ಪ್ರೀತಿ ಪೂರ್ವಕ ಶುಭಾಶಯಗಳು.
  2. ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ಯುಲ್ಯಂ ರಾಮನಾಮ ವರಾನನೇ ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿ ಹಬ್ಬದ ಹಾರ್ದಿಕ ಶುಭಾಶಯಗಳು.
  3. ನಿಮ್ಮ ಜೀವನದಲ್ಲಿ ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳಿ, ರಾಮನಂತೆ ಸತ್ಯ ಮತ್ತು ಧರ್ಮದ ಮಾರ್ಗವನ್ನು ಅನುಸರಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗಿ. ನಿಮಗೂ ನಿಮ್ಮ ಕುಟುಂಬಕ್ಕೂ ರಾಮ ನವಮಿ ಹಬ್ಬದ ಶುಭಾಶಯಗಳು.
  4. ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ, ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ, ರಾಮ ನವಮಿಯ ಈ ಸುದಿನ ನಿಮ್ಮ ಬಾಳಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲೆಂದು ಹಾರೈಸುತ್ತೇನೆ.
  5. ಈ ರಾಮ ನವಮಿ ನಿಮ್ಮ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಭಗವಾನ್ ರಾಮನು ನಿಮಗೆ ಯಾವಾಗಲೂ ಉತ್ತಮ ದಾರಿಯನ್ನು ಅನುಸರಿಸಲು ಸ್ಫೂರ್ತಿ ನೀಡಲಿ. ರಾಮ ನವಮಿ ಹಬ್ಬದ ಶುಭಾಶಯಗಳು.
  6. ಮರ್ಯಾದಾ ಪುರುಷೋತ್ತಮ ರಾಮನು ತನ್ನ ಜೀವನದಲ್ಲಿ ಪ್ರತಿಯೊಂದು ಸವಾಲನ್ನು ಧೈರ್ಯ ಮತ್ತು ತಾಳ್ಮೆಯಿಂದ ಎದುರಿಸಿ ನಿಂತು ಜಯಿಸಿದಂತೆ, ನಿಮಗೂ ಕೂಡಾ ಪ್ರತಿಯೊಂದು ಕಷ್ಟವನ್ನು ಎದುರಿಸಿ ಜೀವನವನ್ನು ಜಯಿಸುವ ಶಕ್ತಿಯನ್ನು ಶ್ರೀರಾಮ ಕರುಣಿಸಲಿ. ರಾಮ ನವಮಿಯ ಶುಭಾಶಯಗಳು.
  7. ಶ್ರೀ ರಾಮ ದೇವರ ಅನುಗ್ರಹ ಸದಾ ನಿಮ್ಮೊಂದಿಗಿರಲಿ. ನಿಮ್ಮೆಲ್ಲಾ ಕಷ್ಟುಗಳು ದೂರವಾಗಿ, ನಿಮ್ಮ ಸಕಲ ಇಷ್ಟಾರ್ಥಗಳು ಸಿದ್ಧಿಸಲಿ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೆ ಶ್ರೀ ರಾಮ ನವಮಿಯ ಶುಭಾಶಯಗಳು
  8. ರಾಮನಾಮವೆಂಬೊ ನಾಮವ ನೆನೆದರೆ ಭಯವಿಲ್ಲಾ ಮನಕೆ… ಮೂರು ಲೋಕಕೆ ಕಾರಣ ಕರ್ತ ನಾರಾಯಣ ಜಗಕೆ. ರಾಮ ನವಮಿಯ ಈ ಸುದಿನ ನಿಮ್ಮ ಬಾಳಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲೆಂದು ಹಾರೈಸುತ್ತೇನೆ.
  9. ಶ್ರೀ ರಾಮಚಂದ್ರ ಕೃಪಾಲು ಭಜಮನ ಹರನ ಭವಭಯದಾರುಣಮ್, ನವಕಂಜ ಲೋಚನ, ಕಂಜಮುಖ ಕರಕಂಜ ಪದ ಕಂಜರುಣಮ್, ರಾಮ ನವಮಿಯ ಶುಭಾಶಯಗಳು
  10. ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆಯುವ ಮೂಲಕ ಭಗವಾನ್ ರಾಮಚಂದ್ರನ‌ ಕೃಪೆಗೆ ಪಾತ್ರರಾಗಿ. ರಾಮ ನವಮಿಯ ಈ ಸುದಿನ ನಿಮ್ಮ ಬಾಳಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ