Rudraksha: ರುದ್ರಾಕ್ಷಿ ಧರಿಸಿದವರಿಗೆ ರುದ್ರ ಲೋಕ ಪ್ರಾಪ್ತಿಯಾಗುತ್ತದೆ! ಏನಿದು ರುದ್ರಾಕ್ಷಿ ಕಥೆ ಮತ್ತು ಮಹಿಮೆ?

Rudraksha spiritual effects: ರಾಜನು ತನ್ನ ಮಗ ತಾರಕ ಹಾಗೂ ಮಂತ್ರಿ ಮಗ ಸುಧರ್ಮ ಇವರಿಬ್ಬರ ಕುರಿತು ಹೇಳಿ, ಅವರು ರುದ್ರಾಕ್ಷಿ ಧರಿಸುವ ಬಗ್ಗೆಯೂ ಹೇಳಿ, ಮಕ್ಕಳಿಬ್ಬರ ವಿಚಿತ್ರ ನಡವಳಿಕೆಗೆ ಕಾರಣವೇನು ಹೇಳಿರಿ ಎಂದು ಪ್ರಾರ್ಥಿಸಿದನು.

Rudraksha: ರುದ್ರಾಕ್ಷಿ ಧರಿಸಿದವರಿಗೆ ರುದ್ರ ಲೋಕ ಪ್ರಾಪ್ತಿಯಾಗುತ್ತದೆ! ಏನಿದು ರುದ್ರಾಕ್ಷಿ ಕಥೆ ಮತ್ತು ಮಹಿಮೆ?
ರುದ್ರಾಕ್ಷಿ ಧರಿಸಿದವರಿಗೆ ರುದ್ರ ಲೋಕ ಪ್ರಾಪ್ತಿಯಾಗುತ್ತದೆ! ಏನಿದು ರುದ್ರಾಕ್ಷಿ ಕಥೆ ಮತ್ತು ಮಹಿಮೆ?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 06, 2023 | 6:16 AM

ರುದ್ರಾಕ್ಷಿ (Rudrakshi) ಮಹಿಮೆ ವಿವರಿಸುತ್ತಾ, ಯಾರಾದರೂ ರುದ್ರಾಕ್ಷಿ ಧಾರಣೆ ಮಾಡಿದರೆ ಪಾಪಗಳಿರುವುದಿಲ್ಲ. ಬಹಳ ಪುಣ್ಯ ಲಭಿಸುತ್ತದೆ ಎಂದು ಶೃತಿ, ಸ್ಮೃತಿ , ಪುರಾಣಗಳು ಹೇಳುತ್ತವೆ. ರುದ್ರಾಕ್ಷಿ ಮತ್ತು ಸ್ಪಟಿಕಗಳನ್ನು ಸೇರಿಸಿ ಚಿನ್ನದಲ್ಲಿ ಸುತ್ತಿ ಧರಿಸಿದವರಿಗೆ ರುದ್ರ ಲೋಕ ಪ್ರಾಪ್ತಿಯಾಗುತ್ತದೆ. ರುದ್ರಾಕ್ಷಿ ಸರದಿಂದ ಜಪ ಮಾಡಿದರೆ ಅನಂತ ಫಲ ಬರುತ್ತದೆ. ಭಸ್ಮ ರುದ್ರಾಕ್ಷಿ (Shiva) ಧರಿಸದವನ ಜನ್ಮವೇ ವ್ಯರ್ಥ. ರುದ್ರಾಕ್ಷಿ ಧರಿಸಿ ಸ್ನಾನ ಮಾಡಿದರೆ ಗಂಗಾ ಸ್ನಾನದ ಫಲ ಲಭಿಸುತ್ತದೆ. ಯಾವುದೇ ರುದ್ರಾಕ್ಷಿಯನ್ನು ಧರಿಸಿದರೂ ನಾಲ್ಕು ಪುರುಷಾರ್ಥಗಳು ಸಿದ್ಧಿಸುತ್ತವೆ. ಈ ಕುರಿತಾದ ಮನೋಜ್ಞ ಕಥೆ ಇಲ್ಲಿದೆ (Spiritual).

ಹಿಂದೆ ಕಾಶ್ಮೀರ ದೇಶದಲ್ಲಿ ಭದ್ರಸೇನಾ ಎನ್ನುವ ರಾಜನಿದ್ದನು. ಅವನಿಗೆ ತಾರಕನೆಂಬ ಮಗ ಇದ್ದು, ಮಂತ್ರಿ ಸುಧರ್ಮನಿಗೆ, ಸದ್ಗುಣ ಎನ್ನುವ ಮಗ ಇದ್ದನು. ಈ ಮಕ್ಕಳು ಚಿಕ್ಕಂದಿನಿಂದಲೂ ಒಟ್ಟಿಗೆ ಬೆಳೆದು, ಯಾವಾಗಲೂ ಜೊತೆಯಾಗಿರುತ್ತಾ, ಅರಮನೆಯ ಆಭರಣಗಳಿಗೆ ಆಸೆ ಪಡದೆ, ಪ್ರತಿ ದಿನವೂ ರುದ್ರಾಕ್ಷಿ ಧರಿಸಿ ಶಿವನ ಆರಾಧನೆ ಮಾಡಿದ ನಂತರವೇ ಅವರು ಊಟ ಮಾಡುತ್ತಿದ್ದರು.

ಹೀಗಿದ್ದಾಗ ಒಂದು ದಿನ ರಾಜನ ಅರಮನೆಗೆ ಪರಾಷರ ಮಹರ್ಷಿಗಳು ಬಂದರು. ಅವರನ್ನು ಸ್ವಾಗತಿಸಿ ಅರ್ಘ್ಯಪಾದ್ಯಾದಿ ಗಳಿಂದ ಸತ್ಕರಿಸಿ ಪೂಜಿಸಿದನು. ರಾಜನು ತನ್ನ ಮಗ ತಾರಕ ಹಾಗೂ ಮಂತ್ರಿ ಮಗ ಸುಧರ್ಮ ಇವರಿಬ್ಬರ ಕುರಿತು ಹೇಳಿ, ಅವರು ರುದ್ರಾಕ್ಷಿ ಧರಿಸುವ ಬಗ್ಗೆಯೂ ಹೇಳಿ, ಮಕ್ಕಳಿಬ್ಬರ ವಿಚಿತ್ರ ನಡವಳಿಕೆಗೆ ಕಾರಣವೇನು ಹೇಳಿರಿ ಎಂದು ಪ್ರಾರ್ಥಿಸಿದನು. ಪರಾಷರ ಮಹರ್ಷಿಗಳು ಈ ಕುರಿತು ಒಂದು ಕಥೆ ಹೇಳಿದರು.

ರಾಜಾ, ಹಿಂದೆ ನಂದಿ ಎಂಬ ಗ್ರಾಮದಲ್ಲಿ ಅಪೂರ್ವ ಸೌಂದರ್ಯವತಿ ಶ್ರೀಮಂತಳೂ ಆಗಿದ್ದ ‘ಮಹಾನಂದ’ ಎನ್ನುವ ವೇಶ್ಯೆ ಇದ್ದಳು. ಆಕೆ ಗುಣವಂತಳು, ವೃತ್ತಿ ಧರ್ಮವನ್ನು ಪಾಲಿಸುತ್ತಿದ್ದಳು. ಸ್ವೇಚ್ಛಾಚಾರಣಿಯಾಗಿ ಬದುಕದೆ, ಹಿರಿಯರಿಂದ ಸಕಲ ಧರ್ಮಗಳನ್ನು ಅರಿತು ದಾನ ಧರ್ಮಗಳನ್ನು ಮಾಡುತ್ತ ಜೀವನ ನಡೆಸುತ್ತಿದ್ದಳು. ಆಕೆ ಪ್ರತಿದಿನವೂ ಅಲಂಕಾರ ಮಾಡಿಕೊಂಡು ತನ್ನ ಮನೆಯಲ್ಲಿದ್ದ ನೃತ್ಯ ಮಂಟಪದಲ್ಲಿ ಶಿವನ ಆರಾಧನೆಯಂತೆ ಭಕ್ತಿಯಿಂದ ನೃತ್ಯ ಮಾಡುತ್ತಿದ್ದಳು. ಅವಳು ತನ್ನ ಜೊತೆ ಒಂದು ಕೋಳಿ ಮತ್ತು ಒಂದು ಮಂಗನನ್ನು ಸಾಕಿದ್ದಳು. ಆ ವೇಶ್ಯೆ, ಸುಮ್ನೆ ತಮಾಷೆಗಾಗಿ ಮಂಗ ಮತ್ತು ಕೋತಿಯನ್ನು ರುದ್ರಾಕ್ಷಿ ಸರಗಳಿಂದ ಅಲಂಕರಿಸುತ್ತಿದ್ದಳು.

ಒಂದು ದಿನ ಶಿವವ್ರತಾದೀಕ್ಷಿತನಾದ, ಆಗರ್ಭ ಶ್ರೀಮಂತನೊಬ್ಬನು ಅವಳ ಮನೆಗೆ ಬಂದನು. ಅವನು ಮೈಮೇಲೆ ವಿಭೂತಿ, ಕೈಗಳಲ್ಲಿ ರತ್ನ ಕಂಕಣಗಳು, ಹಾಗೂ ಅವನ ಬಲಗೈಯಲ್ಲಿ ಸೂರ್ಯನಂತೆ ಬೆಳಗುತ್ತಿರುವ ರತ್ನ ಲಿಂಗವು ಇತ್ತು. ಅದನ್ನು ನೋಡಿ ಆ ವೇಶ್ಯೆ ಆಸೆಪಟ್ಟು ಅವನಿಗೆ ತನ್ನ ಸಖಿಯೊಡನೆ ಹೇಳಿ ಕಳಿಸಿದಳು. ಆತನು ಆ ಮಂಟಪದಲ್ಲಿ ಕುಳಿತು, ಹೀಗೆ ಹೇಳಿದನು.

ಮಹಾ ಸೌಂದರ್ಯವತಿಯಾದ ಆ ವೇಶ್ಯೆ ತನ್ನನ್ನು ಸಂತೋಷಪಡಿಸಿದರೆ, ನಾನು ಈ ರತ್ನ ಲಿಂಗವನ್ನು ಕೊಡುತ್ತೇನೆ ಎಂದನು. ಇದನ್ನು ಕೇಳಿ ವೇಶ್ಯೆ ಬಹು ಸಂತೋಷಪಟ್ಟು, ಆಯಿತು ನಾನು ಇಂದಿನಿಂದ ಮೂರು ರಾತ್ರಿಗಳು ಪತಿವ್ರತಾ ಧರ್ಮವನ್ನು ಅನುಸರಿಸಿ ಅವನನ್ನು ಸೇರಬಲ್ಲೆ ಎಂದು ತನ್ನ ಸಖಿಯ ಮೂಲಕ ಹೇಳಿಸಿದಳು.

ಆ ಶ್ರೀಮಂತ ಅವಳ ಮಾತು ಕೇಳಿ, ನನ್ನ ವಿಷಯದಲ್ಲಿ ನಿಮಗೆ ಅಂತಹ ಸಂದೇಹಕ್ಕೆಡೆಯೇ ಇಲ್ಲ ಎಂದು ಹೇಳಿದಾಗ ಆಕೆಯು, ನಾನು ತ್ರಿಕರಣ ಶುದ್ದಿಯಾಗಿ ಆ ಮೂರು ದಿನಗಳು ಪಾತಿವ್ರತ್ಯವನ್ನು ಅನುಸರಿಸುತ್ತೇನೆ ಎಂದು ಹೇಳಿ ಆ ಲಿಂಗದ ಮೇಲೆ ಕೈ ಇಟ್ಟು ಸೂರ್ಯ, ಚಂದ್ರರ ಸಾಕ್ಷಿಯಾಗಿ ಪ್ರಮಾಣ ಮಾಡಿದಳು. ನಂತರ ವೈಶ್ಯನು ರತ್ನ ಖಚಿತವಾದ ಆ ಶಿವಲಿಂಗವನ್ನು ಅವಳ ಕೈಲಿ ಕೊಟ್ಟು, ಪ್ರಿಯೆ ಇದು ನನ್ನ ಪ್ರಾಣಕ್ಕೆ ಸಮಾನವಾದದ್ದು, ಇದಕ್ಕೇನಾದರೂ ಆದರೆ ನಾನು ನೇಣು ಹಾಕಿಕೊಳ್ಳುತ್ತೇನೆ ಎಂದನು.

ಆಕೆ ಆ ರತ್ನಲಿಂಗವನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸಿದಳು. ವೈಶ್ಯ ಮತ್ತು ವೇಶ್ಯೆ, ಅವರಿಬ್ಬರೂ ಆ ರಾತ್ರಿ ಅಂತಃಪುರ ಸೇರಿಕೊಂಡರು. ಅದೇ ಸಮಯಕ್ಕೆ ಅದೇನು ವಿಚಿತ್ರವೋ ನಾಟ್ಯಮಂದಿರ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡು ಭಸ್ಮವಾಗಿ ಹೋಯಿತು. ಆ ಕೋತಿ ಮತ್ತು ಕೋಳಿ ಕೂಡ ಸುಟ್ಟು ಹೋದವು. ಸುತ್ತಮುತ್ತಲಿನವರೆಲ್ಲ ಸೇರಿ ಬೆಂಕಿಯನ್ನು ಆರಿಸುತ್ತಿದ್ದರು. ಈ ವಿಚಾರ ಬೆಳಗಾದ ಮೇಲೆ ವೈಶ್ಯಗೆ ತಿಳಿದು ಆತ ರೋಧಿಸುತ್ತಾ, ಅಯ್ಯೋ ನನ್ನ ಪ್ರಾಣ ಲಿಂಗವೇ ಹೋಯಿತು. ನಾನಿನ್ನ ಬದುಕುವುದಿಲ್ಲ ಎಂದು ಅಳುತ್ತಾ ಬೂದಿಯನ್ನೆಲ್ಲ ಜಾಲಾಡಿದರೂ ಆ ಲಿಂಗ ಸಿಗಲಿಲ್ಲ.

ವೈಶ್ಯನು ಒಂದು ಚಿತೆ ಮಾಡಿ ಅದಕ್ಕೆ ಬೆಂಕಿ ಕೊಟ್ಟು ಅದರೊಳಗೆ ಬಿದ್ದನು. ಇದನ್ನು ನೋಡುತ್ತಿದ್ದಂತೆಯೇ, ವೇಶ್ಯೆ ಕೂಡ ಪ್ರಾಣನಾಥ ಎಂದು ಕೂಗುತ್ತಾ ತನ್ನ ಧರ್ಮವನ್ನು ಅನುಸರಿಸಿ ಸಹಗಮನಕ್ಕೆ ಸಿದ್ದಳಾದಳು. ಅವಳ ಬಂಧು-ಬಳಗದವರು ಆಕೆಯನ್ನು ಎಳೆಯುತ್ತಾ, ವೇಶ್ಯೆಯಾದ ನಿನಗೆ ಇದೇನು ಹುಚ್ಚು ಎಂದು ಅವಳಿಗೆ ತಿಳಿವಳಿಕೆ ಹೇಳತೊಡಗಿದರು.

ಆದರೆ ಅವಳು ಅವರ ಯಾವ ಮಾತನ್ನೂ ಕೇಳಿಸಿಕೊಳ್ಳದೆ ಸೂರ್ಯ- ಚಂದ್ರರ ಸಾಕ್ಷಿಯಾಗಿ ಅವನಲ್ಲಿ ಪಾತಿವ್ರತ್ಯವನ್ನು ಅವಲಂಬಿಸಿದ ನನಗೆ ಇದೇ ಧರ್ಮ. ನಾನೀಗ ಸಹಗಮನ ಮಾಡದಿದ್ದರೆ ನನ್ನ ಜೊತೆಗೆ ನನ್ನ 21 ತಲೆಮಾರಿನವರು ನರಕಕ್ಕೆ ಹೋಗುತ್ತಾರೆ. ನನ್ನ ಧರ್ಮ ನಾನು ಪಾಲಿಸಿದರೆ ಅವರೆಲ್ಲರೂ ಉದ್ಧಾರವಾಗುತ್ತಾರೆ. ಮರಣವೆನ್ನುವುದು ಎಂದಿಗಾದರೂ ಬರುವುದಲ್ಲವೇ? ಹೀಗೆ ಹೀನಾಯವಾಗಿ ಬದುಕುವುದಕ್ಕಿಂತ ನನ್ನ ಧರ್ಮವನ್ನು ಆಚರಿಸಿ ಉದ್ಧಾರವಾಗುವುದು ಬಹಳ ಶ್ರೇಷ್ಠ ಎಂದು ಹೇಳಿ ಬೆಂಕಿಯಲ್ಲಿ ಬೀಳಲು ಹೋದಳು.

ತಕ್ಷಣವೇ ಶಿವನು ಪ್ರತ್ಯಕ್ಷನಾಗಿ ಸುಂದರಿ ನಿನ್ನ ಗುಣವನ್ನು ಪರೀಕ್ಷೆ ಮಾಡಬೇಕೆಂದು, ನಾನೇ ಆ ವೈಶ್ಯನ ರೂಪದಲ್ಲಿ ಬಂದೆ. ನಿನಗೆ ಕೊಟ್ಟಿದ್ದು ನನ್ನ ಆತ್ಮಲಿಂಗವೇ! ಈ ಮಂಟಪಕ್ಕೆ ನಾನೇ ಬೆಂಕಿ ಇಟ್ಟು, ನಿನ್ನ ಪಾತಿವ್ರತ್ಯದ ಪರೀಕ್ಷೆ ಮಾಡಿದೆ.‌ ನಿನಗಿಷ್ಟ ಬಂದ ವರ ಕೋರಿಕೋ ಎಂದು ಹೇಳಿದ. ಅವಳು ಆಶ್ಚರ್ಯಪಟ್ಟು ಭಕ್ತಿಯಿಂದ ನಮಸ್ಕಾರ ಮಾಡಿ, “ಸ್ವಾಮಿ, ನನಗೆ ಇನ್ನು ಮುಂದೆ ಈ ಮೂರು ಲೋಕಗಳನಲ್ಲೂ ಇಂತಹ ಭೋಗಾಸಕ್ತಿಯು ಬೇಡ. ನನ್ನನ್ನು ಈ ಸಂಸಾರ ಬಂಧನದಿಂದ ಬಿಡಿಸಿ, ಶಾಶ್ವತವಾದ ಶಿವಾಸಾಯುಜ್ಯ ವನ್ನು ಪ್ರಸಾದಿಸು” ಎಂದು ಪ್ರಾರ್ಥಿಸಿದಳು.

ಶಿವನು ಸಂತೋಷಪಟ್ಟು ಆಕೆಯನ್ನು ಕೈಲಾಸಕ್ಕೆ ಕರೆದುಕೊಂಡು ಹೋದನು. ಆ ದಿನ ನಾಟ್ಯ ಮಂಟಪದಲ್ಲಿ ಬೆಂಕಿಯಲ್ಲಿ ಸಿಕ್ಕಿ ಸುಟ್ಟುಹೋದ ಆ ಕೋಳಿ ಮತ್ತು ಕೋತಿ ಈಗ ಈ ಮಕ್ಕಳಾಗಿ ಹುಟ್ಟಿದ್ದಾರೆ. ಪೂರ್ವಜನ್ಮ ಸಂಸ್ಕಾರದಿಂದ ಶಿವಭಕ್ತರಾಗಿ ಭಸ್ಮ- ರುದ್ರಾಕ್ಷಿಗಳನ್ನು ಇಷ್ಟೊಂದು ಪ್ರೀತಿಯಿಂದ ಧರಿಸುತ್ತಾರೆ. ಇವರ ಪುಣ್ಯ ಹೇಳಲಸದಳವಾದದ್ದು ಎಂದು ಪರಾಷರ ಮಹರ್ಷಿಗಳು ಕಾಶ್ಮೀರದ ಭದ್ರ ಸೇನ ರಾಜನಿಗೆ ಈ ಕಥೆಯನ್ನು ಹೇಳಿ ರುದ್ರಾಕ್ಷಿ ಮಹಿಮೆಯನ್ನು ತಿಳಿಸಿದರು. (ಬರಹ: ಆಶಾ ನಾಗಭೂಷಣ)

ಹೆಚ್ಚಿನ ಧಾರ್ಮಿಕ ಲೇಖನಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಹೆಡ್ ಔಟ್ ಮಾಡಿದ ಸಿರಾಜ್: ತೊಲಗು ಎಂದು ಸಂಭ್ರಮಿಸಿದ ಪುಟ್ಟ ಅಭಿಮಾನಿ
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
ಮಾಧ್ಯಮ ವರದಿಗಳ ನಂತರವೇ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ?
ಉತ್ತರ ಪ್ರದೇಶ: ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ
ಉತ್ತರ ಪ್ರದೇಶ: ಬಿಜೆಪಿ ಕಚೇರಿಯನ್ನೇ ನೆಲಸಮ ಮಾಡಿದ ಯೋಗಿ ಸರ್ಕಾರ
Karnataka Winter Session Live: ಬೆಳಗಾವಿ ಚಳಿಗಾಲದ ಅಧಿವೇಶನ ಲೈವ್​
Karnataka Winter Session Live: ಬೆಳಗಾವಿ ಚಳಿಗಾಲದ ಅಧಿವೇಶನ ಲೈವ್​
ಕಿತ್ತಾಟದಿಂದ ರದ್ದಾಯ್ತು ಟಾಸ್ಕ್; ದೊಡ್ಡ ಪರಿಣಾಮ ಎದುರಿಸಿದ ಮನೆ ಮಂದಿ
ಕಿತ್ತಾಟದಿಂದ ರದ್ದಾಯ್ತು ಟಾಸ್ಕ್; ದೊಡ್ಡ ಪರಿಣಾಮ ಎದುರಿಸಿದ ಮನೆ ಮಂದಿ