AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sankashti Chaturthi 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿ; ಪೂಜಾ ವಿಧಾನ ಮತ್ತು ಮಹತ್ವ ತಿಳಿಯಿರಿ

ಸಂಕಷ್ಟ ಚತುರ್ಥಿ ಗಣೇಶನ ಆರಾಧನೆಗೆ ಮೀಸಲಾದ ವಿಶೇಷ ದಿನ. ಹುಣ್ಣಿಮೆ ನಂತರ ಸಂಕಷ್ಟಹರ ಚತುರ್ಥಿ, ಅಮಾವಾಸ್ಯೆ ಬಳಿಕ ವಿನಾಯಕ ಚತುರ್ಥಿ ಬರುತ್ತದೆ. ಇದು ಜೀವನದ ಅಡೆತಡೆಗಳನ್ನು ನಿವಾರಿಸಿ, ಸುಖ-ಸಮೃದ್ಧಿ ತರುತ್ತದೆ ಎಂಬ ನಂಬಿಕೆ. ಈ ದಿನ ಉಪವಾಸವಿದ್ದು, ಗಣೇಶನನ್ನು ಪೂಜಿಸಿ, ಚಂದ್ರೋದಯದ ನಂತರ ವ್ರತ ಮುರಿಯುವುದು ರೂಢಿ. ಈ ಆಚರಣೆಗಳಿಂದ ಇಷ್ಟಾರ್ಥ ಸಿದ್ಧಿಸುತ್ತವೆ.

Sankashti Chaturthi 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿ; ಪೂಜಾ ವಿಧಾನ ಮತ್ತು ಮಹತ್ವ ತಿಳಿಯಿರಿ
ಸಂಕಷ್ಟ ಚತುರ್ಥಿ
ಅಕ್ಷತಾ ವರ್ಕಾಡಿ
|

Updated on: Dec 07, 2025 | 10:21 AM

Share

ಗಣೇಶನ ಆರಾಧನೆಗೆ ಇರುವ ವಿಶೇಷ ದಿನ ಸಂಕಷ್ಟ ಚತುರ್ಥಿ. ತಿಂಗಳಿಗೆ ಎರಡು ಚತುರ್ಥಿಗಳು ಬರುತ್ತವೆ. ಅವುಗಳಲ್ಲಿ ಹುಣ್ಣಿಮೆಯ ನಂತರ ಬರುವುದನ್ನು ‘ಸಂಕಷ್ಟಹರ ಚತುರ್ಥಿ’ ಎಂತಲೂ ಹಾಗೂ ಅಮಾವಾಸ್ಯೆ ಬಳಿಕ ಬರುವುದನ್ನು ‘ವಿನಾಯಕ ಚತುರ್ಥಿ’ ಎಂದೂ ಕರೆಯಲಾಗುತ್ತದೆ. ಈ ವರ್ಷದ ಕೊನೆಯ ಸಂಕಷ್ಟ ಚತುರ್ಥಿ ಇಂದು(ಡಿಸೆಂಬರ್​ 07ರಂದು)ಬಂದಿದೆ. ಈ ಸಂಕಷ್ಟ ಚತುರ್ಥಿಯನ್ನು ಅಖುರಥ ಸಂಕಷ್ಟ ಚತುರ್ಥಿ ಎಂದು ಕರೆಯುತ್ತಾರೆ.

ಶುಭ ಸಮಯಗಳ ವಿವರ:

  • ತಿಥಿ ಪ್ರಾರಂಭ: ಡಿಸೆಂಬರ್ 7, ಸಂಜೆ 06:24ಕ್ಕೆ .
  • ತಿಥಿ ಮುಕ್ತಾಯ: ಡಿಸೆಂಬರ್ 8, 2025, ಸಂಜೆ 04:03 ಕ್ಕೆ.
  • ಚಂದ್ರೋದಯ ಸಮಯ: ಡಿಸೆಂಬರ್ 7, 2025, ರಾತ್ರಿ 08:30 ಕ್ಕೆ (ಈ ಸಮಯವು ಸ್ಥಳದಿಂದ ಸ್ಥಳಕ್ಕೆ ಸ್ವಲ್ಪ ಬದಲಾಗಬಹುದು).

ಸಂಕಷ್ಟ ಚತುರ್ಥಿಯ ಮಹತ್ವ ಮತ್ತು ಆಚರಣೆ:

ಸಂಕಷ್ಟ ಚತುರ್ಥಿಯು ಗಣೇಶನಿಗೆ ಅರ್ಪಿತವಾದ ಮಂಗಳಕರ ದಿನವಾಗಿದ್ದು, ಜೀವನದ ಎಲ್ಲಾ ತೊಂದರೆಗಳು, ಅಡೆತಡೆಗಳನ್ನು ನಿವಾರಿಸಿ, ಜ್ಞಾನ, ಸಂಪತ್ತು, ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಗಣೇಶನಿಗೆ ಉಪವಾಸ ಮಾಡಿ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ

ವ್ರತಾಚರಣೆಯ ವಿಧಾನ:

  • ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ.
  • ಪೂಜಾ ಕೊಠಡಿಯಲ್ಲಿ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಇರಿಸಿ ಪೂಜೆ ಮಾಡಿ.
  • ದೀಪ, ಧೂಪ, ಹೂವು, ಗರಿಕೆ, ಮೋದಕ ಅಥವಾ ಲಡ್ಡುಗಳನ್ನು ಅರ್ಪಿಸಿ.
  • ಗಣೇಶ ಮಂತ್ರಗಳು ಮತ್ತು ಸಂಕಷ್ಟನಾಶನ ಗಣೇಶ ಸ್ತೋತ್ರವನ್ನು ಪಠಿಸಿ.
  • ದಿನವಿಡೀ ಉಪವಾಸವಿದ್ದು, ರಾತ್ರಿ ಚಂದ್ರೋದಯವಾದ ನಂತರ ಚಂದ್ರನಿಗೆ ಅರ್ಘ್ಯ ಅರ್ಪಿಸಿ, ಪೂಜೆ ಮುಗಿಸಿ ವ್ರತವನ್ನು ಮುರಿಯಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ