Festivals in September 2023: ಕೃಷ್ಣ ಜನ್ಮಾಷ್ಟಮಿಯಿಂದ ಗಣೇಶ ಚತುರ್ಥಿಯವರೆಗೆ, ಸಪ್ಟೆಂಬರ್​​ನಲ್ಲಿ ಬರುವ ಎಲ್ಲಾ ಹಬ್ಬ, ವ್ರತಗಳ ಮಾಹಿತಿ ಇಲ್ಲಿದೆ

ಈ ಬಾರಿಯ ಶ್ರಾವಣ ಮಾಸವು ಆಗಸ್ಟ್ 13ರಂದು ಬುಧವಾರ ಕೊನೆಗೊಳ್ಳುತ್ತದೆ. ಭಾದ್ರಪದ ಮಾಸವು ಸಪ್ಟೆಂಬರ್16, 2023ರಂದು ಶನಿವಾರದಂದು ಪ್ರಾರಂಭವಾಗುತ್ತದೆ. ಅರ್ಧ ತಿಂಗಳು ಶ್ರಾವಣ ಮತ್ತು ಇನ್ನರ್ಧ ತಿಂಗಳು ಭಾದ್ರಪದ ಮಾಸ ಇರುವುದರಿಂದ ಹಬ್ಬ, ವ್ರತಗಳ ಸಾಲು ಸಾಲು ಇದೆ. ಜನ್ಮಾಷ್ಟಮಿಯಿಂದ ಗಣೇಶ ಚತುರ್ಥಿ ಮತ್ತು ಅನಂತ ಚತುರ್ದಶಿಯವರೆಗೆ ಹಬ್ಬವೇ ಹಬ್ಬ. ಯಾವ ಹಬ್ಬ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ.

Festivals in September 2023: ಕೃಷ್ಣ ಜನ್ಮಾಷ್ಟಮಿಯಿಂದ ಗಣೇಶ ಚತುರ್ಥಿಯವರೆಗೆ, ಸಪ್ಟೆಂಬರ್​​ನಲ್ಲಿ ಬರುವ ಎಲ್ಲಾ ಹಬ್ಬ, ವ್ರತಗಳ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:Sep 12, 2023 | 10:47 AM

ಹಿಂದೂ ಕ್ಯಾಲೆಂಡರ್​​ನಲ್ಲಿ ಶ್ರಾವಣ ಮಾಸದಂತೆ ಭಾದ್ರಪದವೂ ಕೂಡ ಅನೇಕ ಹಬ್ಬ ವ್ರತಾಚರಣೆಗಳನ್ನು ಒಳಗೊಂಡಿದೆ. ಈ ತಿಂಗಳಿನಲ್ಲಿ ಗಣೇಶ ಮತ್ತು ಕೃಷ್ಣನನ್ನು ಆರಾಧಿಸಲಾಗುತ್ತದೆ. ಸಪ್ಟೆಂಬರ್​​ನಲ್ಲಿ ಶ್ರಾವಣ ಮಾಸ 15 ದಿನ ಮತ್ತು ಭಾದ್ರಪದದ 15 ದಿವಸ ಇರುವುದರಿಂದ ಹಲವು ಪ್ರಮುಖ ಹಬ್ಬಗಳಾದ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ಅನಂತ ಚತುರ್ದಶಿ ಮತ್ತು ಭಾದ್ರಪದ ಅಮಾವಾಸ್ಯೆಯಂತಹ ಪ್ರಮುಖ ಹಬ್ಬಗಳು ಮತ್ತು ಉಪವಾಸ ದಿನಗಳನ್ನು ಒಳಗೊಂಡಿದೆ. ಈ ತಿಂಗಳಲ್ಲಿ ಬರುವ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸಪ್ಟೆಂಬರ್ 1: ಕಜಾರಿ ತೀಜ್

ಕಜಾರಿ ತೀಜ್​ನ್ನು ಸಾಮಾನ್ಯವಾಗಿ ರಕ್ಷಾ ಬಂಧನದ ನಂತರ ಮೂರು ದಿನಗಳು ಮತ್ತು ಕೃಷ್ಣ ಜನ್ಮಾಷ್ಟಮಿಗೆ ಐದು ದಿನಗಳ ಮೊದಲು ಆಚರಿಸಲಾಗುತ್ತದೆ. ಇದು ಉತ್ತರ ಭಾರತದ ಕ್ಯಾಲೆಂಡರ್​​ನಲ್ಲಿ ಭಾದ್ರಪದ ತಿಂಗಳ ಕೃಷ್ಣ ಪಕ್ಷ ಮತ್ತು ದಕ್ಷಿಣ ಭಾರತದ ಕ್ಯಾಲೆಂಡರ್ ನಲ್ಲಿ ಶ್ರಾವಣ ತಿಂಗಳ ಕೃಷ್ಣ ಪಕ್ಷದ ಸಮಯದಲ್ಲಿ ಆಚರಿಸಲಾಗುತ್ತದೆ.

ಸಪ್ಟೆಂಬರ್ 3: ಸಂಕಷ್ಟ ಚತುರ್ಥಿ

ಪ್ರತಿ ತಿಂಗಳ ಚತುರ್ಥಿ ತಿಥಿಯಂದು ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಲಾಗುತ್ತದೆ. ಈ ದಿನ ಗಣಪತಿಯನ್ನು ಪೂಜಿಸುವುದರಿಂದ ಓರ್ವ ವ್ಯಕ್ತಿಯ ಜೀವನದಲ್ಲಿನ ಸಕಲ ಸಂಕಷ್ಟಗಳು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಕಾರಣಕ್ಕಾಗಿ ಸಂಕಷ್ಟ ಚತುರ್ಥಿ ದಿನದಂದು ಹೆಚ್ಚಿನ ಜನರು ಗಣಪತಿ ಆರಾಧನೆಯನ್ನು ಮಾಡುತ್ತಾರೆ. ಈ ಬಾರಿಯ ಸಂಕಷ್ಟ ಚತುರ್ಥಿಯನ್ನು ಸಪ್ಟೆಂಬರ್ 3ರಂದು ಆಚರಿಸಲಾಗುತ್ತದೆ.

ಸಪ್ಟೆಂಬರ್ 7: ಕೃಷ್ಣ ಜನ್ಮಾಷ್ಟಮಿ

ಶ್ರೀ ಕೃಷ್ಣನ ಜನ್ಮದಿನವಾದ ಜನ್ಮಾಷ್ಟಮಿ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ. ವಿಶೇಷವಾಗಿ ಮಥುರಾ, ವೃಂದಾವನ ಮತ್ತು ದ್ವಾರಕಾದಲ್ಲಿ ಈ ಆಚರಣೆ ಜೋರಾಗಿರುತ್ತದೆ. ಈ ಬಾರಿ ಜನ್ಮಾಷ್ಟಮಿಯನ್ನು ಸಪ್ಟೆಂಬರ್ 7ರಂದು ಆಚರಿಸಲಾಗುತ್ತಿದೆ.

ಸಪ್ಟೆಂಬರ್ 8: ಮೊಸರು ಕುಡಿಕೆ

ವಿಟ್ಲ ಪಿಂಡಿಯನ್ನು ಮೊಸರು ಕುಡಿಕೆ ಹಬ್ಬ ಎಂದೂ ಕರೆಯುತ್ತಾರೆ. ವಿಟ್ಲ ಪಿಂಡಿ ಹಬ್ಬವನ್ನು ಜನರು ಶ್ರೀಕೃಷ್ಣನ ಬಾಲ್ಯದ ತುಂಟಾಟಗಳನ್ನು ನೆನಪಿಸಿಕೊಳ್ಳಲು ಶ್ರೀಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಆಚರಿಸಲಾಗುತ್ತದೆ. ಈ ಭಾರಿ ಸಪ್ಟೆಂಬರ್ 8ರಂದು ಮೊಸರು ಕುಡಿಕೆ ಹಬ್ಬವನ್ನು ಆಚರಿಸಲಾಗುತ್ತದೆ.

ಸಪ್ಟೆಂಬರ್ 10: ಅಜಾ ಏಕಾದಶಿ

ಪುರಾಣಗಳ ಪ್ರಕಾರ ಏಕಾದಶಿ ವ್ರತ ಆಚರಣೆ ಮಾಡುವುದರಿಂದ ವಿಷ್ಣುವಿನ ಕೃಪೆ ಜೊತೆ ಮೋಕ್ಷ ಲಭಿಸುತ್ತದೆ. ಶ್ರಾವಣ ಮಾಸದ ಕೊನೆಯ ಏಕಾದಶಿಯಾಗಿದ್ದು, ಈ ವ್ರತವನ್ನು ಆಚರಿಸುವುದರಿಂದ ಮತ್ತು ವಿಷ್ಣುವನ್ನು ಪೂಜಿಸುವುದರಿಂದ ಅಶ್ವಮೇಧ ಯಾಗ ಮಾಡಿದಷ್ಟು ಪುಣ್ಯವು ಪ್ರಾಪ್ತಿಯಾಗುತ್ತದೆ. ಮಾನವನ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.

ಸಪ್ಟೆಂಬರ್ 12: ಪ್ರದೋಷ ವ್ರತ

ಪ್ರದೋಷ ವ್ರತವು ಮಂಗಳವಾರ ಬಂದರೆ ಆ ವ್ರತವನ್ನು ಭೌಮ ಪ್ರದೋಷ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ಆಚರಿಸುವುದರಿಂದ ರೋಗಗಳಿಂದ ಮುಕ್ತಿ ಸಿಗುತ್ತದೆ ಎಂಬ ಪ್ರತೀತಿ ಇದೆ.

ಇದನ್ನೂ ಓದಿ: ಆಗಸ್ಟ್ ತಿಂಗಳಿನಲ್ಲಿ ಆಚರಿಸುವ ಉಪವಾಸ, ಹಬ್ಬಗಳಾವುವು? ಇಲ್ಲಿದೆ ಮಾಹಿತಿ

ಸಪ್ಟೆಂಬರ್ 13: ಮಾಸ ಶಿವರಾತ್ರಿ

ಮಾಸಿಕ ಶಿವರಾತ್ರಿಯನ್ನು ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ಮಾಸ ಶಿವರಾತ್ರಿಯಂದು ಭಗವಾನ್ ಶಂಕರನನ್ನು ಆರಾಧಿಸುವುದರಿಂದ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ. ಭಗವಾನ್ ಶಂಕರನ ವಿಶೇಷ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಸಪ್ಟೆಂಬರ್ 14: ಬೆನಕನ ಅಮಾವಾಸ್ಯೆ

ಬೆನಕನ ಅಮಾವಾಸ್ಯೆ ಶುಕ್ರವಾರವೋ ಅಥವಾ ಶನಿವಾರವೋ ಎಂಬ ಪ್ರಶ್ನೆ ಮೂಡಿದೆ. ಹಾಗಾಗಿ ಆಯಾ ಭೌಗೋಳಿಕ ವ್ಯಾಪ್ತಿಯಲ್ಲಿ ಅನುಸರಿಸುವ ಪಂಚಾಂಗಕ್ಕೆ ಅನುಗುಣವಾಗಿ ಈ ದಿನವನ್ನು ಆಚರಿಸಬಹುದು. ಬೆನಕನ ಅಮಾವಾಸ್ಯೆ 2023 ರ ಸಪ್ಟೆಂಬರ್ 14 ರಂದು ಮುಂಜಾನೆ 4:48 ಆರಂಭವಾಗಿ ಸಪ್ಟೆಂಬರ್ 15 ರಂದು ಬೆಳಗ್ಗೆ 7:9 ಕ್ಕೆ ಮುಕ್ತಾಯಗೊಳ್ಳಲಿದೆ.

ಸಪ್ಟೆಂಬರ್ 17: ವರಾಹ ಜಯಂತಿಯು ವಿಷ್ಣುವಿನ

ಮೂರನೇ ಅವತಾರದ ಜನ್ಮ ಆಚರಣೆಯಾಗಿದೆ. ಅವನು ಜಗತ್ತನ್ನು ಉಳಿಸಲು ವರಾಹನಾಗಿ ಅವತಾರ ತಾಳಿದನು ಎಂಬ ಪ್ರತೀತಿ ಇದೆ. ಹಿಂದೂ ಪುರಾಣಗಳ ಪ್ರಕಾರ ವಿಷ್ಣುವಿನ ಎಲ್ಲಾ ವಿಭಿನ್ನ ಅವತಾರಗಳನ್ನು ಭಾರತದ ವಿವಿಧ ಭಾಗಗಳಲ್ಲಿ ಹಬ್ಬಗಳಾಗಿ ಆಚರಿಸಲಾಗುತ್ತದೆ. ಈ ಬಾರಿಯ ವರಾಹ ಜಯಂತಿಯನ್ನು ಸಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ.

ಸಪ್ಟೆಂಬರ್ 18: ಗಣೇಶ ಚತುರ್ಥಿ

ಈ ವರ್ಷ ಗಣೇಶ ಚತುರ್ಥಿ ಸೆಪ್ಟೆಂಬರ್‌ 18 ಮತ್ತು 19 ಎರಡು ದಿನವೂ ಆಚರಣೆ ಮಾಡಲಾಗುತ್ತದೆ. ಗಣೇಶ ಹಬ್ಬ 10 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್‌ 19ರಿಂದ ಸೆಪ್ಟೆಂಬರ್‌ 28ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಸಪ್ಟೆಂಬರ್ 28ರಂದು ಅಂದರೆ ಅನಂತ ಚತುರ್ದಶಿಯಂದು ಗಣೇಶನ ವಿಸರ್ಜನೆ ನಡೆಯಲಿದೆ.

ಇದನ್ನೂ ಓದಿ: ಸೆಪ್ಟೆಂಬರ್​​ನಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಾಚರಣೆಗಳು ಇಲ್ಲಿದೆ

ಸಪ್ಟೆಂಬರ್ 20: ಪ್ರತಿ ವರ್ಷ ಋಷಿ ಪಂಚಮಿಯ

ಉಪವಾಸವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ಉಪವಾಸದಲ್ಲಿ ಸಪ್ತಋಷಿಗಳನ್ನು ಪೂಜಿಸಲಾಗುತ್ತದೆ. ಇದನ್ನು ಮಹಿಳೆಯರು ಮಾತ್ರ ಆಚರಿಸುತ್ತಾರೆ. ಈ ಬಾರಿ ಸಪ್ಟೆಂಬರ್ 20 ರಂದು ಋಷಿ ಪಂಚಮಿಯನ್ನು ಆಚರಿಸಲಾಗುತ್ತದೆ.

ಸಪ್ಟೆಂಬರ್ 25: ಪರಿವರ್ತನಿ ಏಕಾದಶಿ

ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ಪದ್ಮ ಏಕಾದಶಿ ಅಥವಾ ಪರಿವರ್ತಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಚಾತುರ್ಮಾಸದ ಯೋಗ ನಿದ್ರೆಯಲ್ಲಿ ಮಲಗಿರುವ ಭಗವಾನ್ ವಿಷ್ಣು ಈ ದಿನ ತನ್ನ ಭಂಗಿಯನ್ನು ಬದಲಾಯಿಸುತ್ತಾನೆ ಎಂಬುದು ಪೌರಾಣಿಕ ನಂಬಿಕೆ. ಈ ಕಾರಣದಿಂದ ಇದನ್ನು ಪರಿವರ್ತಿನಿ ಏಕಾದಶಿ ಎಂದೂ ಕರೆಯುತ್ತಾರೆ.

ಸಪ್ಟೆಂಬರ್ 27: ಪ್ರದೋಷ ವ್ರತ

ಪ್ರದೋಷ ವ್ರತ ಅಥವಾ ಪ್ರದೋಷವು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾದ ಜನಪ್ರಿಯ ಹಿಂದೂ ವ್ರತ. ಪ್ರದೋಷ ವ್ರತವನ್ನು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದ ತ್ರಯೋದಶಿ ತಿಥಿಯಲ್ಲಿ (13 ನೇ ದಿನ) ಆಚರಿಸಲಾಗುತ್ತದೆ. ಆದ್ದರಿಂದ, ಇದು ಹಿಂದೂ ಕ್ಯಾಲೆಂಡರ್​​ನಲ್ಲಿ ಪ್ರತಿ ತಿಂಗಳು ಎರಡು ಬಾರಿ ಬರುತ್ತದೆ. ಈ ಭಾರಿಯ ಪ್ರದೋಷ ವ್ರತವನ್ನು ಸಪ್ಟೆಂಬರ್ 27 ರಂದು ಆಚರಿಸಲಾಗುತ್ತದೆ.

ಸಪ್ಟೆಂಬರ್ 28: ಅನಂತ ಚತುರ್ದಶಿ

ಭಾದ್ರಪದ ಮಾಸವು ಒಟ್ಟು ಹದಿನೈದು ದಿನಗಳನ್ನು ಹೊಂದಿದ್ದು, 14ನೇ ದಿನಕ್ಕೆ ಈ ಅನಂತ ಚತುರ್ದಶಿ ಹಬ್ಬವು ಬರುತ್ತದೆ. ಈ ದಿನದಂದು ಗಣೇಶನನ್ನು ವಿಸರ್ಜಿಸಲಾಗುತ್ತದೆ. ಈ ಬಾರಿ ಸಪ್ಟೆಂಬರ್ 28 ರಂದು ಈ ದಿನವನ್ನು ಆಚರಿಸಲಾಗುತ್ತದೆ.

ಸಪ್ಟೆಂಬರ್ 28: ಈದ್ ಮಿಲಾದ್

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈದ್ ಮಿಲಾದ್-ಉನ್-ನಬಿ ಸಪ್ಟೆಂಬರ್ 28 ಕ್ಕೆ ಆಚರಿಸಲಾಗುತ್ತದೆ. ಇದು ಪ್ರವಾದಿ ಮುಹಮ್ಮದ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

ಸಪ್ಟೆಂಬರ್ 29: ಭಾದ್ರಪದ ಪೂರ್ಣಿಮಾ ವ್ರತ

ಪೂರ್ಣಿಮೆಯಂದು ಉಪವಾಸ ಮಾಡುವುದರಿಂದ, ಭಗವಾನ್ ಸತ್ಯನಾರಾಯಣನ ಕಥೆಯನ್ನು ಓದುವುದರಿಂದ ಅಥವಾ ಕೇಳುವುದರಿಂದ, ಆ ವ್ಯಕ್ತಿಯ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುವುದು. ಆತನ ಎಲ್ಲಾ ತೊಂದರೆಗಳು ದೂರವಾಗಿ ಸ್ವಾಮಿಯ ಅನುಗ್ರಹ ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಭಾದ್ರಪದ ಪೂರ್ಣಿಮೆಯಂದು ಉಮಾ- ಮಹೇಶ್ವರರ ಉಪವಾಸವನ್ನು ಸಹ ಆಚರಿಸಲಾಗುತ್ತದೆ.

ಸಪ್ಟೆಂಬರ್ 30: ಪಿತೃ ಪಕ್ಷ ಆರಂಭ

ಪಿತೃ ಪಕ್ಷದ ಹದಿನೈದು ದಿನಗಳು ಸಪ್ಟೆಂಬರ್ 30ರಿಂದ ಪ್ರಾರಂಭವಾಗಿ ಅಕ್ಟೋಬರ್ 14 ರ ವರೆಗೆ ಇರುತ್ತದೆ. ಈ ಸಮಯದಲ್ಲಿ ಅಂದರೆ ಹದಿನೈದು ದಿನಗಳು ಮರಣ ಹೊಂದಿದವರಿಗೆ ಪಿಂಡ ಪ್ರಧಾನ ಕಾರ್ಯಗಳನ್ನು ಮಾಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 3:45 pm, Thu, 31 August 23

ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು