AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ 2021 ಏಳನೇ ದಿನ: ಈ ದಿನ ದುರ್ಗೆ ಭಯಂಕರ ರೂಪದಲ್ಲಿ ಕಾಣಿಸಿಕೊಳ್ತಾಳೆ ಏಕೆ?

Navratri 2021: ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆ ಕಾಲರಾತ್ರಿಯ ರೂಪವನ್ನು ತಾಳುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ.

ನವರಾತ್ರಿ 2021 ಏಳನೇ ದಿನ: ಈ ದಿನ ದುರ್ಗೆ ಭಯಂಕರ ರೂಪದಲ್ಲಿ ಕಾಣಿಸಿಕೊಳ್ತಾಳೆ ಏಕೆ?
ಕಾಲರಾತ್ರಿ
TV9 Web
| Updated By: shruti hegde|

Updated on: Oct 13, 2021 | 8:13 AM

Share

ನವದುರ್ಗೆಯರಲ್ಲಿ ಕಾಲರಾತ್ರಿಯದ್ದು ಏಳನೇ ರೂಪ. ದುಷ್ಟರ ವಿನಾಶ ಮಾಡುವ ಈ ದೇವಿಯದ್ದು ಅತ್ಯಂತ ಭಯಂಕರ ರೂಪ. ಇವಳ ವಾಹನ ಕತ್ತೆ. ಈ ದೇವಿಯ ಶರೀರ ದಟ್ಟವಾದ ಅಂಧಕಾರದಂತೆ ಕಪ್ಪಾಗಿದೆ. ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು, ಕೈ ಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಬ್ರಹ್ಮಾಂಡದಂತಹ 3 ಕಣ್ಣುಗಳಿವೆ. ಇವಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತೆ. ಇವಳು ಉಸಿರಾಡಿದ್ರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು ಕಬ್ಬಿಣದ ಮುಳ್ಳಿನ ಅಸ್ತ್ರವಿದೆ. ಈಕೆ ಅಸುರರ ಪಾಲಿಗೆ ದುಃಸ್ವಪ್ನ. ಧರ್ಮದ ರಕ್ಷಣೆಗಾಗಿ, ಅಧರ್ಮರ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.

ರಕ್ತಬೀಜಾಸುರನನ್ನು ವಧಿಸುವ ಸಲುವಾಗಿ ದುರ್ಗೆ ಕಾಲರಾತ್ರಿಯ ರೂಪವನ್ನು ತಾಳುತ್ತಾಳೆ. ರಕ್ತಬೀಜಾಸುರನನ್ನು ಕೊಂದು ರಕ್ತಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ಮದದಿಂದ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸಹಸಾರ ಚಕ್ರದಲ್ಲಿ ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು ಎನ್ನಲಾಗುತ್ತೆ.

ಕಾಲರಾತ್ರಿಯ ಪೂಜೆ ಹೇಗೆ ಮಾಡಬೇಕು? ರಾತ್ರಿ ಅರಳುವ ಮಲ್ಲಿಗೆ ಹೂವು ಕಾಲರಾತ್ರಿಗೆ ಅರ್ಪಿಸಲು ಪ್ರಸಕ್ತವಾದ ಹೂವು. ಕಾಲರಾತ್ರಿಗೆ ಪೂಜೆ ಸಲ್ಲಿಸುವ ಮೊದಲು ಗಣೇಶನಿಗೆ ಪೂಜೆ ಸಲ್ಲಿಸಬೇಕು. ಬಳಿಕ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಆರತಿಯೊಂದಿಗೆ ಪೂಜೆ ಕೊನೆಗೊಳಿಸಬೇಕು. ಈ ದಿನ ದೇವಿಗೆ ಅನ್ನದಿಂದ ಮಾಡಿದ ನೈವೇದ್ಯ ಅಥವಾ ಎರಿಯಪ್ಪ ಅರ್ಪಿಸಬಹುದು.

ಕಾಲರಾತ್ರಿ ಮಂತ್ರ ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ವಾಮಪಾದೋಲ್ಲ ಸಲ್ಲೋಹಲತಾ ಕಂಟಕಭೂಷಣಾ ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ಈ ದೇವಿ ನೋಡೋಕೆ ಎಷ್ಟು ಭಯಂಕರವಾಗಿದ್ದಾಳೋ, ಅಷ್ಟೇ ಶುಭಫಲಗಳನ್ನು ಕೊಡುವವಳು. ಹೀಗಾಗೇ ಇವಳಿಗೆ ಶುಭಂಕರೀ ಎಂಬ ಹೆಸರೂ ಇದೆ. ಕಾಲರಾತ್ರಿ ದೇವಿ ದುಷ್ಟರಿಗೆ ಮೃತ್ಯುದೇವತೆಯಾದ್ರೆ, ಶಿಷ್ಟರಿಗೆ ರಕ್ಷಾಕವಚ. ಈಕೆ ಧರ್ಮವನ್ನು ರಕ್ಷಣೆ ಮಾಡಿ ಪಾಪ ನಾಶ ಮಾಡುತ್ತಾಳೆ. ನವರಾತ್ರಿಯಲ್ಲಿ ಇವಳ ಉಪಾಸನೆ ಅತ್ಯಂತ ಫಲದಾಯಕ. ಹಾಗಾದ್ರೆ ಈ ದೇವಿ ಆರಾಧನೆಯಿಂದ ಸಿಗುವ ಫಲಗಳೇನು? ಕಾಲರಾತ್ರಿ ಪೂಜಾ ಫಲಗಳು * ಈ ದೇವಿಯನ್ನು ಆರಾಧಿಸಿದ್ರೆ ವಿಘ್ನಗಳು ದೂರಾಗುತ್ತವೆ * ಪುಣ್ಯಪ್ರಾಪ್ತಿಯಾಗುತ್ತೆ * ದುಷ್ಟಶಕ್ತಿಗಳ ಕಾಟ ದೂರಾಗುತ್ತೆ * ಗ್ರಹ ಬಾಧೆಗಳು ದೂರಾಗುತ್ತೆ * ಶತ್ರುಭಯ ನಿವಾರಣೆಯಾಗುತ್ತೆ * ಸಮಸ್ತ ಪಾಪ ನಾಶ ಮಾಡ್ತಾಳೆ

ಇದನ್ನೂ ಓದಿ: Durga Puja: ನವರಾತ್ರಿಯ ಆರನೇ ದಿನ ಕೆಂಪು ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ