Shivaratri Special: ಮಹಾದೇವ ಒಬ್ಬನೇ ದೇವರು ಎಂದವಳು ಸತ್ಯಕ್ಕ

Shivaratri Special: ಸತ್ಯಕ್ಕನು ಹುಟ್ಟಿನಿಂದ ಭಿಕ್ಷೆಯನ್ನು ತಂದು ನೀಡಿದಾಗ ಜಂಗಮ ರೂಪದ ಶಿವನ ಜೋಳಿಗೆಯ ಹರಿದಿದ್ದರಿಂದ ಆದರೋಳಗಿಂದ ಕಾಳುಗಳು ನೆಲಕ್ಕೆ ಬೀಳುತ್ತವೆ. ಅದಕ್ಕೆ ಆ ಜಂಗಮನು "ಅಯ್ಯೊ ಕಾಳು ಹರಿದು ಹರಿಯಿಂದ ನೆಲಕ್ಕೆ ಬಿದ್ದವು ಜೋಳಿಗೆಯ ಚಿಲಿ ಹರಿ ಹರಿಯಿಂದೆ ಭಿಕ್ಷೆಸೂಸಿತ್ತು" ಎಂದನು ಸತ್ಯಕ್ಕೆ ಜಂಗಮ ಉದ್ದೇಶಪೂರ್ವಕವಾಗಿ ಹೀಗೆ "ಹರಿ" ಶಬ್ದವನು ಉಚ್ಚರಿಸುತ್ತ ತನ್ನನ್ನು ನಿಂದಿಸಿ. ನುಡಿಯುತ್ತಿರುವನು ಎಂದು ತಿಳಿದು.

Shivaratri Special: ಮಹಾದೇವ ಒಬ್ಬನೇ ದೇವರು ಎಂದವಳು ಸತ್ಯಕ್ಕ
ಸತ್ಯಕ್ಕ ಮತ್ತು ಶಿವ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 01, 2022 | 7:38 AM

ನಮ್ಮೂರು ಶಿವಶರಣರ ನಾಡು ಶಿಕಾರಿಪುರ ತಾಲ್ಲೂಕಿನ ಹಿರೇಜಂಬೂರು ಅಕ್ಕ ಮಹಾದೇವಿ ಶರಣೆಯ ಹೊಟ್ಟುರಿಂದ ಆರೇಳು ಕಿ.ಲೋ.ಮೀಟರ್ ದೂರದಲ್ಲಿದೆ. ಜಂಬೂಕ ಎಂಬ ಖುಷಿ ಇಲ್ಲಿ ತಪಸ್ಸು ಮಾಡಿದ್ದರಿಂದ ಜಂಬೂರು ಎಂಬ ಹೆಸರು ಬಂತು ಅದೇ ಮುಂದೆ ಹಿರೇಜಂಬೂರು ಆಗಿತ್ತು ಇಲ್ಲಿ ಶಿವರಾತ್ರಿಯ ಶಿವನ ಆಚರಣೆ ಬಲು ವಿಷೇಶ ಯಾಕೆಂದರೆ 12ನೇ ಶತಮಾನದಲ್ಲಿ ನಡೆದ ಒಂದು ಘಟನೆ ಇದಕ್ಕೆ ಸಾಕ್ಷಿ ಹಾಗು ಶಿವನೇ ಈ ಊರಿಗೆ ಕಾಲಿಟ್ಟ ಹಾಗೂ ಇಲ್ಲೆ ನೆಲೆಸಿರುವ ಕಥೆ 12ನೇ ಶತಮಾನದಲ್ಲಿ ಜಂಬೂರಿನಲ್ಲಿ ಸತ್ಯಕ್ಕ ಎಂಬ ಶಿವಶರಣೆ ನೆಲೆಸಿದ್ದಳು ಶಿವಭಕ್ತೆಯಾಗಿದ್ದಳು ಶಿವಭಕ್ತ ಅಂಗಳವನ್ನು ಗುಡಿಸಿ ಅವರ ಮನೆಯ ಸಮ್ಮಾರ್ಜನೆಯನ್ನು ಮಾಡುತ್ತ ಅವರು ಕೊಟ್ಟ ಪ್ರಸಾದ ಮೇಲೆ ಉಪಜೀವನ ಸಾಗಿಸುತ್ತಿದ್ದಳು ಇದೇ ಅವಳ ಕಾಯಕವಾಗಿತ್ತು. ಅವಳು ಶಿವನೊಬ್ಬನೇ ದೇವರೆಂದು ಭಾವಿಸಿದಳು ಅನ್ಯದೇವರ ಪೂಜೆಯನ್ನು ಎಂದು ಮಾಡದವಳು ಹೀಗಿರಲು ಒಂದು ದಿನ ಶಿವನು ಅವಳ ಮನಸ್ಸು ಹಾಗು ಕಾಯಕ ನಿಷ್ಠೆಯ ಪರೀಕ್ಷೆಯ ಮಾಡಲು ಬಯಸಿ ಭಿಕ್ಷುಕನ ವೇಶದಲ್ಲಿ ಬಂದು ಸತ್ಯಕ್ಕನ ಮನೆಯ ಮುಂದೆ ನಿಂತು ಭಿಕ್ಷೆ ಕೇಳುತ್ತೇನೆ.

ಸತ್ಯಕ್ಕನು ಹುಟ್ಟಿನಿಂದ ಭಿಕ್ಷೆಯನ್ನು ತಂದು ನೀಡಿದಾಗ ಜಂಗಮ ರೂಪದ ಶಿವನ ಜೋಳಿಗೆಯ ಹರಿದಿದ್ದರಿಂದ ಆದರೋಳಗಿಂದ ಕಾಳುಗಳು ನೆಲಕ್ಕೆ ಬೀಳುತ್ತವೆ. ಅದಕ್ಕೆ ಆ ಜಂಗಮನು “ಅಯ್ಯೊ ಕಾಳು ಹರಿದು ಹರಿಯಿಂದ ನೆಲಕ್ಕೆ ಬಿದ್ದವು ಜೋಳಿಗೆಯ ಚಿಲಿ ಹರಿ ಹರಿಯಿಂದೆ ಭಿಕ್ಷೆಸೂಸಿತ್ತು” ಎಂದನು ಸತ್ಯಕ್ಕೆ ಜಂಗಮ ಉದ್ದೇಶಪೂರ್ವಕವಾಗಿ ಹೀಗೆ “ಹರಿ” ಶಬ್ದವನು ಉಚ್ಚರಿಸುತ್ತ ತನ್ನನ್ನು ನಿಂದಿಸಿ. ನುಡಿಯುತ್ತಿರುವನು ಎಂದು ತಿಳಿದು. ಅದರಿಂದ ಕೋಪಗೊಂಡು ತನ್ನ ಕೈಯಲ್ಲಿದ್ದ ಹುಟ್ಟಿನಿಂದ ಅವನನ್ನು ಹೊಡೆದಳು ಆಗ ಜಂಗಮನ ಹಲ್ಲುಗಳು ಮುರಿದವು ಅದರ ವೇದನೆಯಿಂದ ಬೀದಿಯಲ್ಲಿ ಬಂದು ಕೂಗುತ್ತ ಜಂಗಮ ನಿಲ್ಲಲು ಊರ ಜನರು ನೆರೆದರು ಆ ಜಂಗಮನು ಅವರಿಗೆ ಸತ್ಯಕ್ಕ ಸತ್ಯಯುಳ್ಳ ಭಕ್ತೆಯಂದು ನಾನು ಬಿಕ್ಷಕ್ಕೆ ಹೋದರೆ ಇವಳು ನನನ್ನು ಬಡಿದು ಹಿಂಸಿಸಿದಳು ಎಂದು ಹೇಳಿದನು.

ಜನರು ಸತ್ಯಕ್ಕನಿಗೆ “ಈ ರೀತಿ ಬಿಕ್ಷುಕನಿಗೆ ಯಾಕೆ ಹೊಡೆದೆ ಎನ್ನಲು ಸತ್ಯಕ್ಕೆ ಜಂಗಮ ನುಡಿದ ಪದಗಳು ಎಂದಳು. ಜನರು ಜಂಗಮ ನೀನು ಏನು ನುಡಿದೆ ಎಂದು ಕೇಳಲು ಜಂಗಮ “ನನ್ನ ಜೋಳಿಗೆಯು ಹರಿದ ಹರಿಕಿನಲ್ಲಿ ಭಿಕ್ಷದ ಕಾಳು ಚಲ್ಲಿದವು” ಎಂದು ಮರುನುಡಿಯುತ್ತಿರಲು ಅನ್ಯ ಶಬ್ದವನ್ನು ಜಂಗಮನ ನುಡಿದದ್ದರಿಂದ ಮತ್ತೆ ಮೊದಲಿನಂತೆಯೇ ಹರಿ ಎಂಬ ಶಬ್ದವನು ಜಂಗಮನ ಬಾಯಿಂದ ಕೇಳಿದ ಸತ್ಯಕ್ಕ ನೆರೆದ ಜನರ ಎದುರಿಗೆ ಮತ್ತೆ ಜಂಗಮನನ್ನು ಪುನಃ ಹೊಡೆದಳು ಜಂಗಮ ಓಡಲು ಪ್ರಾರಂಭಿಸುವನು ಆಗ ಹರನು ಆಕೆಯ ಏಕದೇವ ನಿಷ್ಠೆಯ ಬಗ್ಗೆ ಇದ್ದ ಗಣಾಚಾರವನ್ನು ನೋಡಿ ಪ್ರೀತನಾಗಿ.

ತನ್ನ ನಿಜರೂಪ ತೋರುವನು ” ಸತ್ಯಕ್ಕೆ ನಾನು ನಿನ್ನ ನಿಷ್ಠೆಯನ್ನು ಮೆಚ್ಚಿದ್ದೇನೆ ನಿನಗೆ ಬೇಕಾದದನ್ನು ಬೇಡಿಕೊ ಎನ್ನಲು ಸತ್ಯಕ್ಕೆ ಶಿವಾ ಶಿವಾ ಶಿವಾ ನನ್ನನ್ನೇ ಭಿಕ್ಷೆಯನ್ನಾಗಿ ಮಾಡಿ ನಿನ್ನ ಕುಕ್ಷಿಯಲ್ಲಿಟ್ಟುಕೊ ಎಂದು ಬೇಡಿಕೊಳ್ಳಲು ಪರಮಾತ್ಮನು ಹಾಗೆಯೇ ಆಗಲೆಂದು ಸತ್ಯಕ್ಕನನ್ನು ತನ್ನ ಕುಕ್ಷಿಯಲ್ಲಿಟ್ಟುಕೊಂಡು ಅವಳಿಗೆ ನಿತ್ಯಪದವನ್ನು ಕೊಟ್ಟನು ಸತ್ಯಕ್ಕನ ಚರಿತ್ರೆಯಿಂದ ದೇವರು ಒಬ್ಬನೇ ಇದ್ದಾನೆ ಅವನೊಬ್ಬನನ್ನೇ ಭಜಿಸಬೇಕೆಂದು ಶಿವಾನುಭವದ ತತ್ವವು ಸಾರಿದ ಕಿರ್ತಿ ಸತ್ಯಕ್ಕದು ಹೀಗೆ ಶಿವಭಕ್ತ ಸತ್ಯಕ್ಕನ ನಿಷ್ಠೆಗೆ ಮೆಚ್ಚಿ ಶಿವನು ಹಿರೇಜಂಬೂರಿನ ಮಹಾ ಕೆರೆಯ ಕೆಳಗೆ ಪಂಚಮುಖ ಲಿಂಗವಾಗಿ ನೆಲೆವುರಿದನೆಂದು ಇಲ್ಲಿನ ಪ್ರತೀತಿ ಇದೆ. ಹೀಗಾಗಿ ಈ ದೇವರನ್ನು ಈಗಲೂ ಅನೇಕ ಜನ ಪೂಜಿಸುತ್ತರೆ. ಶಿವರಾತ್ರಿಯ ದಿನ ಇಲ್ಲಿ ಭಕ್ತಿಸುಧೆಯೇ ಹರಿಯುತ್ತದೆ. ಹೀಗೆ ನಮ್ಮೂರಿನ ಶಿವರಾತ್ರಿ ವಿಶೇಷ ಹಾಗು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜಂಬೂರು ಶರಣರು ಎಂಬುವ ರಮೇಶ್.ಬಿ.ಹಿರೇಜಂಬೂರು ಇವರ ಪುಸ್ತಕದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.

ಮಂಜುನಾಥ. ಬಿ .ವೈ

Published On - 7:19 am, Tue, 1 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ