Sign of good time: ಒಳ್ಳೆಯ ಸಮಯ ಪ್ರಾರಂಭವಾಗುವ ಮೊದಲು ಈ ಸೂಚನೆಗಳು ಕಂಡುಬರುತ್ತವೆ
ಕಷ್ಟದ ಸಮಯದಲ್ಲಿ, ಎಲ್ಲರೂ ಅಂದುಕೊಳ್ಳುವುದು ಏನೆಂದರೆ ಇದೆಲ್ಲವೂ ಶೀಘ್ರದಲ್ಲೇ ಕೊನೆಯಾಗಲಿ, ಉತ್ತಮ ದಿನಗಳು ಪ್ರಾರಂಭವಾಗಲಿ ಎಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಳ್ಳೆಯ ಸಮಯ ಪ್ರಾರಂಭವಾಗುವ ಮೊದಲು ಕೆಲವು ಸೂಚನೆಗಳು ಸಿಗುತ್ತವೆ. ನಿಮಗೂ ಈ ರೀತಿಯ ಸಂದರ್ಭ ಎದುರಾದರೆ ನಿಮ್ಮ ಜೀವನದಲ್ಲಿಯೂ ಒಳ್ಳೆಯ ಘಟನೆಗಳು ಸಂಭವಿಸಲಿದೆ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಹಾಗಾದರೆ ಯಾವ ರೀತಿಯ ಸೂಚನೆ ನಿಮ್ಮ ಬದುಕು ಬದಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಕಷ್ಟ ಎಂಬುದು ಬಂದೆ ಬರುತ್ತದೆ ಆತ ಅದನ್ನು ಎದುರಿಸಿ ಮುಂದೆ ಸಾಗಬೇಕು. ಆ ಕಷ್ಟದ ಸಮಯದಲ್ಲಿ, ಎಲ್ಲರೂ ಅಂದುಕೊಳ್ಳುವುದು ಏನೆಂದರೆ ಇದೆಲ್ಲವೂ ಶೀಘ್ರದಲ್ಲೇ ಕೊನೆಯಾಗಲಿ, ಉತ್ತಮ ದಿನಗಳು ಪ್ರಾರಂಭವಾಗಲಿ ಎಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಳ್ಳೆಯ ಸಮಯ ಪ್ರಾರಂಭವಾಗುವ ಮೊದಲು ಕೆಲವು ಸೂಚನೆಗಳು ಸಿಗುತ್ತವೆ. ನಿಮಗೂ ಈ ರೀತಿಯ ಸಂದರ್ಭ ಎದುರಾದರೆ ನಿಮ್ಮ ಜೀವನದಲ್ಲಿಯೂ ಒಳ್ಳೆಯ ಘಟನೆಗಳು ಸಂಭವಿಸಲಿದೆ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಹಾಗಾದರೆ ಯಾವ ರೀತಿಯ ಸೂಚನೆ ನಿಮ್ಮ ಬದುಕು ಬದಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
ನೀರು ತುಂಬಿದ ಕೊಡವನ್ನು ನೋಡುವುದು;
ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೊರಟಾಗ ತುಂಬಿದ ಪಾತ್ರೆಯನ್ನು ನೋಡಿದರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀರಿನಿಂದ ತುಂಬಿದ ಪಾತ್ರೆಯನ್ನು ನೋಡಿದ ಬಳಿಕ ನಿಮಗೆ ಒಳ್ಳೆಯ ಸುದ್ದಿ ಕೇಳಿಬರಬಹುದು ಅಥವಾ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೀವು ಕಾಣಬಹುದು.
ಅಂಗೈಗಳಲ್ಲಿ ತುರಿಕೆ
ಪುರುಷರ ಬಲಗೈ ಮತ್ತು ಮಹಿಳೆಯರ ಎಡಗೈಯಲ್ಲಿ ಆಗಾಗ ತುರಿಕೆಯ ಅನುಭವವಾಗುತ್ತದೆ, ಇದನ್ನು ಶುಭ ಸಂಕೇತವೆಂದು ಹೇಳಲಾಗುತ್ತದೆ. ಈ ರೀತಿ ಅನುಭವಕ್ಕೆ ಬಂದರೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಜೊತೆಗೆ ಆರ್ಥಿಕ ಲಾಭವಾಗುತ್ತದೆ. ಅಂಗೈಗಳಲ್ಲಿ ತುರಿಕೆ ಎಂದರೆ ನಿಮ್ಮ ಜೀವನದ ಕೆಟ್ಟ ದಿನಗಳು ಕಳೆದು ಆರ್ಥಿಕ ರಂಗದಲ್ಲಿ ಯಶಸ್ವಿಯಾಗುತ್ತೀರಿ ಎಂಬುದರ ಸೂಚನೆಯಾಗಿದೆ.
ಪೊರಕೆ ಕಾಣುವುದು
ಮನೆಯ ಹೊರಗೆ ಇರುವ ಪೊರಕೆಯನ್ನು ಅಥವಾ ಬೇರೆ ಬೇರೆ ಜಾಗಕ್ಕೆ ಹೋದಾಗ ಪದೇ ಪದೇ ಪೊರಕೆ ಕಂಡರೆ, ಲಕ್ಷ್ಮೀ ದೇವಿಯ ಆಶೀರ್ವಾದ ಸಿಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಜೊತೆಗೆ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.
ಕಪ್ಪು ಇರುವೆಗಳು ಮನೆಗೆ ಬರುವುದು
ಕಪ್ಪು ಇರುವೆಗಳು ಮಂಗಳಕರ ಸಂಕೇತ. ಇವು ಮನೆಗೆ ಬರುವುದನ್ನು ನೀವು ನೋಡಿದರೆ ಅದು ಮುಂಬರುವ ಒಳ್ಳೆಯ ದಿನಗಳ ಸಂಕೇತವಾಗಿದೆ. ನಿಮ್ಮ ಮನೆಯ ಗೋಡೆಯ ಮೇಲೆ ಇರುವೆಗಳು ಏರುವುದನ್ನು ಕಂಡರೆ, ನಿಮ್ಮ ವೃತ್ತಿಜೀವನ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುತ್ತೀರಿ. ಮನೆಗೆ ಬಂದ ಇರುವೆಗಳನ್ನು ಕೊಲ್ಲುವುದನ್ನು ತಪ್ಪಿಸಿ, ಇದಕ್ಕೆ ವಿರುದ್ಧವಾಗಿ ಅವುಗಳ ಮೇಲೆ ಹಿಟ್ಟು ಅಥವಾ ಸಕ್ಕರೆ ಹಾಕಿ.
ಇದನ್ನೂ ಓದಿ: ಹಿಂದೂ ಧರ್ಮದಲ್ಲಿ ಈಶಾನ್ಯ ದಿಕ್ಕಿನ ಪ್ರಾಮುಖ್ಯತೆ ಏನು? ಈ ದಿಕ್ಕಿನಲ್ಲಿ ಪೂಜೆ ಏಕೆ ಮಾಡಲಾಗುತ್ತದೆ?
ಶಂಖದ ಶಬ್ದ
ನೀವು ಬೆಳಿಗ್ಗೆ ಶಂಖದ ಶಬ್ದವನ್ನು ಕೇಳಿದರೆ ಅದು ನಿಮ್ಮ ಒಳ್ಳೆಯ ದಿನಗಳ ಪ್ರಾರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದರಿಂದ ನೀವು ಎದುರಿಸುತ್ತಿದ್ದ ಸವಾಲುಗಳು ದೂರವಾಗಬಹುದು.
ಕನಸಿನಲ್ಲಿ ಮಂತ್ರಗಳು ಕೇಳಿಬಂದರೆ
ಕನಸಿನಲ್ಲಿ ಮಂತ್ರಗಳು ಕೇಳಿದರೆ ಅದನ್ನು ಬಹಳ ಒಳ್ಳೆಯ ಕನಸು ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಜ ಜೀವನದಲ್ಲಿ ನೀವು ಯಶಸ್ಸಿನ ಹಾದಿಯಲ್ಲಿ ಸಾಗುತ್ತೀರಿ ಅಥವಾ ಕೆಲವು ಉತ್ತಮ ಬದಲಾವಣೆಗಳು ನಿಮಗೆ ಕಾಣಿಸುತ್ತದೆ ಎಂಬುದರ ಸೂಚನೆಯಾಗಿರಬಹುದು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ