AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Surya Grahan 2021: ಇಂದು 2021ರ ಕೊನೆಯ ಸೂರ್ಯಗ್ರಹಣ; ಎಷ್ಟು ಗಂಟೆಗೆ ಗ್ರಹಣ? ಎಲ್ಲೆಲ್ಲಿ ಸಂಭವಿಸುತ್ತೆ? ಇಲ್ಲಿದೆ ವಿವರ

Solar Eclipse 2021: ಸೂರ್ಯಗ್ರಹಣವು ಬೆಳಿಗ್ಗೆ 10:59 ರಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 3:7 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಿಗೆ ಗೋಚರವಾಗಲಿದೆ.

Surya Grahan 2021: ಇಂದು 2021ರ ಕೊನೆಯ ಸೂರ್ಯಗ್ರಹಣ; ಎಷ್ಟು ಗಂಟೆಗೆ ಗ್ರಹಣ? ಎಲ್ಲೆಲ್ಲಿ ಸಂಭವಿಸುತ್ತೆ? ಇಲ್ಲಿದೆ ವಿವರ
ಸೂರ್ಯ ಗ್ರಹಣ (ಸಂಗ್ರಹ ಚಿತ್ರ)
Follow us
TV9 Web
| Updated By: Vinay Bhat

Updated on:Dec 04, 2021 | 8:38 AM

ಅಮಾವಾಸ್ಯೆಯ ದಿನ ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ. ಈ ವರ್ಷದ ಎರಡನೇ ಸೂರ್ಯಗ್ರಹಣ (Solar Eclipse 2021) ಮತ್ತು 2021ರ ಕೊನೆಯ ಸೂರ್ಯಗ್ರಹಣವು ಶನಿವಾರ, ಡಿಸೆಂಬರ್ 4 ರಂದು ಸಂಭವಿಸಲಿದೆ. ಈ ಗ್ರಹಣ ಸುಮಾರು 4 ಗಂಟೆಗಳ ಕಾಲ ಇರಲಿದೆ. ಸೂರ್ಯಗ್ರಹಣವು ಬೆಳಿಗ್ಗೆ 10:59 ರಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 3:7 ಕ್ಕೆ ಕೊನೆಗೊಳ್ಳುತ್ತದೆ. ಈ ಸೂರ್ಯಗ್ರಹಣವು ಅಂಟಾರ್ಟಿಕಾ ಮತ್ತು ದಕ್ಷಿಣ ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಜಗತ್ತಿನ ಕೆಲವು ಭಾಗಗಳಿಗೆ ಗೋಚರವಾಗಲಿದೆ. ಭೂಮಿಯ ಮೇಲ್ಮೈಯಲ್ಲಿ ಸೂರ್ಯಗ್ರಹಣದ ಹಾದಿಯನ್ನು ಪತ್ತೆಹಚ್ಚುವ ನಕ್ಷೆಯನ್ನು ನಾಸಾ ಬಿಡುಗಡೆ ಮಾಡಿದ್ದು, ಇದರ ಆಧಾರದಲ್ಲಿ ಡಿಸೆಂಬರ್ 4 ರ ಸೂರ್ಯಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ.

ಈ ವರ್ಷದ ಕೊನೆಯ ಸೂರ್ಯಗ್ರಹಣ (Total solar eclipse 2021)  2021 ರ ಕೊನೆಯ ಸೂರ್ಯಗ್ರಹಣವು ಈ ಮೊದಲು ಅಂದರೆ ಇದೇ ವರ್ಷ ಜೂನ್​ 10 ರಂದು ಸಂಭವಿಸಿದ ಮಾದರಿಯಲ್ಲಿಯೇ ಇರಲಿದೆ. ಬೆಳಿಗ್ಗೆ 10.59ಕ್ಕೆ ಪ್ರಾರಂಭವಾಗುತ್ತದೆ. ಮಧ್ಯಾಹ್ನ 12:30 ಕ್ಕೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗುತ್ತದೆ. 01:03 ಕ್ಕೆ ಗರಿಷ್ಠವಾಗಿರುತ್ತದೆ ಮತ್ತು 01:36 ಕ್ಕೆ ಕೊನೆಗೊಳ್ಳುತ್ತದೆ. ಅಂತಿಮವಾಗಿ 3.07ಕ್ಕೆ ಮುಕ್ತಾಯವಾಗುತ್ತದೆ.

ಸೂರ್ಯಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿರುತ್ತದೆ? (Surya Grahan Effect on Zodiac Signs) ಡಿಸೆಂಬರ್ 4ನೇ ತಾರೀಕು ಸಂಭವಿಸುವ ಸೂರ್ಯಗ್ರಹಣವು ಜೇಷ್ಠಾ ನಕ್ಷತ್ರ, ವೃಶ್ಚಿಕ ರಾಶಿಯ ಮೇಲೆ ಪ್ರಭಾವ ಬೀರುತ್ತದೆ. ಈ ಗ್ರಹಣ ತಲಾ 4 ರಾಶಿಗಳಿಗೆ ಶುಭ, ಅಶುಭ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಮೊದಲುಗೊಂಡು 3, 6, 10 ಹಾಗೂ 11ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆಯೋ ಅಂಥವರಿಗೆ ಶುಭ ಆಗುತ್ತದೆ. ಕನ್ಯಾ, ಮಿಥುನ, ಕುಂಭ ಹಾಗೂ ಮಕರ ರಾಶಿಯವರಿಗೆ ಶುಭ ಫಲಗಳನ್ನು ನೀಡುತ್ತದೆ. ಇನ್ನು ಅಶುಭ ಫಲಗಳು 1, 4, 8, 12ನೇ ರಾಶಿಯಾಗುವ ವೃಶ್ಚಿಕ, ಸಿಂಹ, ಮೇಷ ಹಾಗೂ ಧನುಸ್ಸು ರಾಶಿಯವರಿಗೆ ಇರಲಿದೆ. 2, 5, 7 ಹಾಗೂ 9ನೇ ಮನೆ ಆಗುವ ತುಲಾ, ಕರ್ಕಾಟಕ, ವೃಷಭ ಮತ್ತು ಮೀನ ರಾಶಿಯವರಿಗೆ ಮಿಶ್ರ ಫಲ ಇರಲಿದೆ.

ಭಾರತದಲ್ಲಿ ಯಾವಾಗ ಸೂರ್ಯಗ್ರಹಣ ಗೋಚರವಾಗಲಿದೆ ಎಂದು ಯೋಚಿಸುತ್ತಿದ್ದೀರಾ? ಅಕ್ಟೋಬರ್ 25, 2022 ರಂದು ಭಾರತದಿಂದ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಈ ಬಾರಿಯ ಸೂರ್ಯಗ್ರಹಣವನ್ನು ನೀವು ವೀಕ್ಷಿಸಬೇಕು ಎಂಬ ಆಸಕ್ತಿ ಹೊಂದಿದ್ದರೆ ಅದಕ್ಕೂ ಮಾರ್ಗಗಳಿವೆ. Timeanddate.com ವೆಬ್​ಸೈಟ್ ಮೂಲಕ ಡಿಸೆಂಬರ್ 4 ರ ಸೂರ್ಯಗ್ರಹಣವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: Solar Eclipse 2021: ಡಿಸೆಂಬರ್ 4ರ ವರ್ಷದ ಕೊನೆ ಸೂರ್ಯ ಗ್ರಹಣದ ಪ್ರಭಾವ ದ್ವಾದಶ ರಾಶಿಗಳ ಮೇಲೆ ಹೇಗಿರುತ್ತದೆ?

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಅನವಶ್ಯಕ ಅಲೆದಾಟದ ಸಾಧ್ಯತೆ ಇದೆ

Published On - 11:21 am, Fri, 3 December 21

ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಮುಖ್ಯಮಂತ್ರಿಯವರನ್ನು ಸ್ವಾಗತಿಸಲು ಸ್ಥಳೀಯ ನಾಯಕರ ನೂಕುನುಗ್ಗಲು
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ಲೆಜೆಂಡರಿ ಬ್ಯಾಟರ್​ ಒಡಿಐಗಳಲ್ಲಿ ಮಾತ್ರ ಭಾರತವನ್ನು ಪ್ರತಿನಿಧಿಸುತ್ತಾರೆ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಪೂಜಾರಿಗೆ ‘ಕಾಂತಾರ’ ಚಿತ್ರದಲ್ಲಿ ಸಿಕ್ಕಿತ್ತು ಒಳ್ಳೆಯ ಪಾತ್ರ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ರಾಕೇಶ್ ಒಮ್ಮೆ ಎದೆ ಮುಟ್ಟಿಕೊಳ್ಳುವುದು ವಿಡಿಯೋದಲ್ಲಿ ಕಾಣುತ್ತದೆ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಪೊಲೀಸರು, ಡಿ-ಸ್ವ್ಯಾಟ್ ಪಡೆಯಿಂದ ಹುಡುಕಾಟ, ಡಿಸಿಪಿ ಸ್ಥಳದಲ್ಲಿ ಮೊಕ್ಕಾಂ
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಸ್ಲಿಪ್​ನಲ್ಲಿ ನಿಂತ ವಿಕೆಟ್ ಕೀಪರ್: ಎದುರಾಳಿ ತಂಡಕ್ಕೆ ಸಿಕ್ತು 5 ರನ್​
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ಮದುವೆಯಲ್ಲಿ ಡ್ಯಾನ್ಸ್ ಮಾಡುವಾಗ ಎದೆ ಹಿಡಿದುಕೊಳ್ಳುತ್ತಿದ್ದ ರಾಕೇಶ್ ಪೂಜಾರಿ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ
ದೇಶದ ಸೈನಿಕರಿಗೆ ಕರ್ತವ್ಯ ಮುಖ್ಯ; ವೈಯಕ್ತಿಕ ಸಂಬಂಧಗಳು, ಕೆಲಸಗಳಲ್ಲ