ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೆಲವು ಒಳ್ಳೆಯದು ಮತ್ತು ಕೆಲವು ಕೆಟ್ಟ ಗುಣ ಲಕ್ಷಣಗಳು ಇರುತ್ತವೆ. ಮಹಾನ್ ನೀತಿ ಬೋಧಕ (Chanakya Teachings) ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ತನ್ನೊಳಗೆ ಅಂತಹ ಕೆಲವು ಅಭ್ಯಾಸಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಂಡರೆ, ಸಮಾಜದಲ್ಲಿ ಅವನ ಗೌರವವು ಹೆಚ್ಚಾಗುತ್ತದೆ. ಇದನ್ನ ತಿಳಿದ ಮೇಲೆ ನೀವೂ ಸಹ ಇತರರಿಗೆ ಮಾದರಿಯ ಮೂಲವಾಗಿರಿ (Motivation). ಒಬ್ಬ ವ್ಯಕ್ತಿಯು ಪ್ರೀತಿಯಲ್ಲಿ ಹೆಚ್ಚು ಸಂತೋಷವಾಗಿರುತ್ತಾನೆ. ಅವನ ದುಃಖವು ಪ್ರತ್ಯೇಕವಾಗಿ, ಸೀಮಿತವಾಗಿರುತ್ತದೆ. ಒಬ್ಬ ವ್ಯಕ್ತಿಗೆ ಹೆಂಡತಿ ಅಥವಾ ಗೆಳತಿಯಿಂದ ಬೇರ್ಪಡುವ ಪರಿಸ್ಥಿತಿಯು ತುಂಬಾ ದುಃಖಕರವಾಗಿದೆ. ಅಂತಹ ಪರಿಸ್ಥಿತಿಯನ್ನು ಎದುರಿಸುವ ಧೈರ್ಯ ಎಲ್ಲರಿಗೂ ಇರುವುದಿಲ್ಲ. ಅದರಿಂದ ಹೊರಬರುವುದು ಸುಲಭವಾಗಿರುವುದಿಲ್ಲ. ಪರಿಣಾಮವಾಗಿ ಅವರ ಜೀವನವು ಪೇಲವವಾಗಿ ಮತ್ತು ಗುರಿ ಇಲ್ಲದಂತೆ ಸಾಗುತ್ತದೆ (Chanakya Niti).
ಹೆಚ್ಚಿನ ಜನರು ತಮ್ಮನ್ನು ಇತರರು ಗೌರವಿಸಬೇಕೆಂದು ನಿರೀಕ್ಷಿಸುತ್ತಾರೆ. ಒಬ್ಬ ವ್ಯಕ್ತಿಯು ತನ್ನ ಸಂಬಂಧಿ ಅಥವಾ ಸ್ನೇಹಿತನಿಂದ ಅವಮಾನಿಸಿದಾಗ, ಅಂತಹ ಪರಿಸ್ಥಿತಿಯು ತುಂಬಾ ನೋವಿನಿಂದ ಕೂಡಿರುತ್ತದೆ. ಚಾಣಕ್ಯನ ಪ್ರಕಾರ, ಅವಮಾನವು ವ್ಯಕ್ತಿಯನ್ನು ಒಳಗಿನಿಂದ ಬೆಂಕಿಯಂತೆ ಸುಡಲು ಪ್ರಾರಂಭಿಸುತ್ತದೆ. ಇದರಿಂದಾಗಿ ಅವನಲ್ಲಿ ಸೇಡಿನ ಭಾವನೆ ಮೂಡುತ್ತದೆ.
ಚಾಣಕ್ಯನ ಪ್ರಕಾರ, ಒಬ್ಬರ ವ್ಯಕ್ತಿತ್ವವು ಅವರ ಪ್ರಗತಿಯನ್ನು ನಿರ್ಧರಿಸುತ್ತದೆ, ಅದರಲ್ಲಿ ಉತ್ತಮ ನಡತೆಗಳಿದ್ದರೆ, ಅವರ ಸ್ವಭಾವದಲ್ಲಿ ಅಹಂಕಾರವಿಲ್ಲದಿದ್ದರೆ ಸಮಾಜದಲ್ಲಿ ಅಂತಹವರ ಗೌರವ ಹೆಚ್ಚಾಗುತ್ತದೆ ಮತ್ತು ಜನರು ಅವರನ್ನು ಸ್ಫೂರ್ತಿಯಾಗಿಯೂ ನೋಡುತ್ತಾರೆ. ಅಂತಹವರನ್ನು ಅವರ ಬೆನ್ನ ಹಿಂದೆಯೂ ಎಲ್ಲರೂ ಹೊಗಳುತ್ತಾರೆ.
ಚಾಣಕ್ಯನ ಪ್ರಕಾರ ಯಾರ ಮನಸ್ಸು ತಿಳಿ ನೀರಿನಂತೆ ಸ್ಪಷ್ಟವಾಗಿರುತ್ತದೆಯೋ ಮತ್ತು ಅವರು ತಮ್ಮ ಸಂತೋಷವನ್ನು ತ್ಯಾಗ ಮಾಡುವ ಮೂಲಕ ಇತರರಿಗೆ ಒಳ್ಳೆಯದನ್ನು ಮಾಡುತ್ತಾರೋ… ಅವರು ಪರಿಪೂರ್ಣರಾಗಿರುತ್ತಾರೆ. ಇತರರಿಗೆ ಆದರಣೆಯಾಗಿರುತ್ತಾರೆ, ಮಾದರಿಯಾಗಿರುತ್ತಾರೆ. ಆದರೆ ತಿಳಿದುಕೊಳ್ಳಿ ಜಗತ್ತಿನಲ್ಲಿ ಹೆಚ್ಚಿನ ಜನರು ಇಂತಹ ಜನರಿಗೆ ಮೋಸ ಮಾಡುತ್ತಿರುತ್ತಾರೆ. ಒಬ್ಬ ವ್ಯಕ್ತಿಯು ಒಳ್ಳೆಯದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಪಡೆದಾಗ, ಅವನ ಮನಸು ನೋಯುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Thu, 6 April 23