Success Sutra: ಪರೀಕ್ಷಾ ಸಮಯದಲ್ಲಿ ಮಕ್ಕಳ ಜ್ಞಾನವೃದ್ಧಿಗಾಗಿ ವಾಸ್ತು ಟಿಪ್ಸ್ ಫಾಲೋ ಮಾಡಿ
ಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಜೀವನದ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ ಒಂದಾದ ಪಿಯುಸಿ ಮತ್ತು ಎಸ್ ಎಲ್ ಸಿ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳಲ್ಲಿ ಪರೀಕ್ಷಾ ಸಮಯದಲ್ಲಿ ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ವಾಸ್ತು ತತ್ವಗಳನ್ನು ಅಳವಡಿಸಿಕೊಳ್ಳಿ
ಬೋರ್ಡ್ ಪರೀಕ್ಷೆಗಳು ಆರಂಭವಾಗಿದೆ, ಇಂತಹ ಸಮಯದಲ್ಲಿ ನಿಮ್ಮ ಮಕ್ಕಳ ಮೇಲೆ ಓದುವಂತೆ ಹೆಚ್ಚಿನ ಒತ್ತಡ ಹಾಕದಿರಿ. ಬದಲಾಗಿ ಈ ವಾಸ್ತು ಟಿಪ್ಸ್ ಬಳಸಿ ಮಕ್ಕಳ ಜ್ಞಾನವನ್ನು ಹೆಚ್ಚಿಸಿ. ಶಾಲೆಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಜೀವನದ ಅತ್ಯಂತ ಸವಾಲಿನ ಪರೀಕ್ಷೆಗಳಲ್ಲಿ ಒಂದಾದ ಪಿಯುಸಿ ಮತ್ತು ಎಸ್ ಎಲ್ ಸಿ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತೀವ್ರ ಆತಂಕ ಮತ್ತು ಒತ್ತಡದ ಅವಧಿಯಾಗಿದೆ. ಮಕ್ಕಳಲ್ಲಿ ಪರೀಕ್ಷಾ ಸಮಯದಲ್ಲಿ ಗಮನ ಮತ್ತು ಏಕಾಗ್ರತೆಯನ್ನು ಸುಧಾರಿಸಲು ವಾಸ್ತು ತತ್ವಗಳನ್ನು ಅಳವಡಿಸಿಕೊಳ್ಳಿ:
ಯಶಸ್ಸಿನ ದಿಕ್ಕುಗಳು:
ಪಶ್ಚಿಮ ಮತ್ತು ನೈಋತ್ಯದ ನಡುವಿನ ಪ್ರದೇಶವು ವಾಸ್ತು ಪ್ರಕಾರ ಏಕಾಗ್ರತೆಗೆ, ಅಧ್ಯಯನಗಳಿಗೆ ಉತ್ತಮ ಆಯ್ಕೆಯಾಗಿದೆ. ಈಶಾನ್ಯ ವಲಯವು ಮನಸ್ಸಿನ ಸ್ಪಷ್ಟತೆಯನ್ನು ಒದಗಿಸುತ್ತದೆ, ನೈಋತ್ಯವು ಸುಧಾರಿತ ಕೌಶಲ್ಯಗಳನ್ನು ಖಾತ್ರಿಗೊಳಿಸುತ್ತದೆ. ಆಗ್ನೇಯದ ಪೂರ್ವ ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ನೈಋತ್ಯದ ಪಶ್ಚಿಮದಲ್ಲಿ ಕೆಂಪು, ಗುಲಾಬಿ, ನೇರಳೆ, ಹಸಿರು ಅಥವಾ ಕಿತ್ತಳೆಯಂತಹ ಬಣ್ಣಗಳು ಬಣ್ಣದ ಅಸಮತೋಲನವನ್ನುಂಟು ಮಾಡಬಹುದು. ಜೊತೆಗೆ ಮನೆಯನ್ನು ಆದಷ್ಟು ಸ್ವಚ್ಚವಾಗಿಟ್ಟುಕೊಳ್ಳಿ. ಇದು ನಿಮ್ಮ ಮಕ್ಕಳನ್ನು ಒತ್ತಡದಿಂದ ಮುಕ್ತಗೊಳಿಸಿ ಓದಲು ಮುಕ್ತವಾದ ವಾತಾವರಣವನ್ನು ಒದಗಿಸಿಕೊಡುತ್ತದೆ.
ಓದುವ ಕೋಣೆಯ ಸ್ಥಳ:
ವಾಸ್ತು ಶಾಸ್ತ್ರದ ಪ್ರಕಾರ ಅಧ್ಯಯನ ಕೊಠಡಿಯು ನೈಋತ್ಯ ದಿಕ್ಕಿನ ಪಶ್ಚಿಮದಲ್ಲಿ ಸೂಕ್ತವಾಗಿದೆ. ಸ್ಥಳಾವಕಾಶದ ಕೊರತೆಯಿಂದಾಗಿ ಅದನ್ನು ಹೊಂದಲು ಸಾಧ್ಯವಾಗದಿದ್ದರೆ, ನೀವು ಈಶಾನ್ಯ ಅಥವಾ ಪೂರ್ವವನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಕಠಿಣ ಪರಿಶ್ರಮದ ಹೊರತಾಗಿಯೂ ಸೋಲು ಅನುಭವಿಸುತ್ತಿದ್ದರೆ ಗುರಿ ಸಾಧನೆಗಾಗಿ ಈ ಅಂಶಗಳತ್ತ ಗಮನ ಹರಿಸಿ
ಓದುವ ಪೀಠೋಪಕರಣಗಳ ಆಕಾರ:
ವಾಸ್ತು ಶಾಸ್ತ್ರದ ಪ್ರಕಾರ ಮಕ್ಕಳು ಓದುವ ಮೇಜು ಮತ್ತು ಕುರ್ಚಿಯ ಆಕಾರವು ಆಯತಾಕಾರದಲ್ಲಿರಬೇಕು. ವಿವಿಧ ವಿನ್ಯಾಸದ ಪೀಠೋಪಕರಣಗಳು ಮಕ್ಕಳ ಏಕಾಗ್ರತೆಯನ್ನು ಹಾಳು ಮಾಡುತ್ತದೆ.
ಬಣ್ಣ ಮತ್ತು ಬೆಳಕು:
ಉತ್ತಮ ಬೆಳಕು ಮತ್ತು ಹಿತವಾದ ಬಣ್ಣಗಳಾದ ತಿಳಿ ನೀಲಿ, ಹಳದಿ ಬಣ್ಣಗಳು ಏಕಾಗ್ರತೆ ಮತ್ತು ಕಲಿಕೆಗೆ ಅನುಕೂಲಕರವಾಗಿವೆ. ನಿಮ್ಮ ಮಕ್ಕಳು ಓದುವ ಕೊಠಡಿಯೂ ನೈಸರ್ಗಿಕ ಬೆಳಕನ್ನು ಹೊಂದಿರಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಎದುರಾಗಿರುವ ಕಿಟಕಿಯ ಬಳಿ ಡೆಸ್ಕ್ ಇರಿಸಬೇಕು. ಮನೆಯ ನೈಋತ್ಯದಲ್ಲಿ ಚಿನ್ನದ ಬಣ್ಣದ ಪೆನ್ ಸ್ಟ್ಯಾಂಡ್ ಮತ್ತು ಸ್ಟಡಿ ಟೇಬಲ್ ಮೇಲೆ ಗಣೇಶನ ಹಿತ್ತಾಳೆಯ ಪ್ರತಿಮೆಯನ್ನು ಇರಿಸಿ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:07 pm, Fri, 10 March 23