AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಮನಿಗೂ ಶಾಪ ನೀಡಿದ ಋಷಿ, ಅದರ ಫಲವೇನಾಯಿತು? ಈ ಶಾಪದ ಫಲವೇ ವಿದುರನ ಜನನಕ್ಕೆ ಕಾರಣವಾಯಿತೇ?

ಯಮನೆಂದರೆ ಸಮಸ್ತ ಜೀವಗಳ ಪುಣ್ಯ ಪಾಪಕ್ಕನುಗುಣವಾಗಿ ನ್ಯಾಯ ತೀರ್ಮಾನ ಮಾಡಿ ಅವರ ಕರ್ಮಕ್ಕೆ ಸರಿಯಾದ ಫಲವನ್ನು ನಿರ್ಣಯಿಸುವಾತ. ಜಗತ್ತಿನ ಪಾಲನೆಯಲ್ಲಿ ಮಹಾವಿಷ್ಣುವಿಗೆ ಸಂಹಾರದಲ್ಲಿ ಶಿವನಿಗೆ ಸಹಕರಿಸುವಾತ. ಅಂತಹ ಯಮನಿಗೂ ಒಬ್ಬ ಋಷಿ ಶಾಪವನ್ನು ನೀಡುತ್ತಾರೆ.

ಯಮನಿಗೂ ಶಾಪ ನೀಡಿದ ಋಷಿ, ಅದರ ಫಲವೇನಾಯಿತು? ಈ ಶಾಪದ ಫಲವೇ ವಿದುರನ ಜನನಕ್ಕೆ ಕಾರಣವಾಯಿತೇ?
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Mar 08, 2023 | 7:25 AM

Share

ಯಮನೆಂದರೆ ಸಮಸ್ತ ಜೀವಗಳ ಪುಣ್ಯ ಪಾಪಕ್ಕನುಗುಣವಾಗಿ ನ್ಯಾಯ ತೀರ್ಮಾನ ಮಾಡಿ ಅವರ ಕರ್ಮಕ್ಕೆ ಸರಿಯಾದ ಫಲವನ್ನು ನಿರ್ಣಯಿಸುವಾತ. ಜಗತ್ತಿನ ಪಾಲನೆಯಲ್ಲಿ ಮಹಾವಿಷ್ಣುವಿಗೆ ಸಂಹಾರದಲ್ಲಿ ಶಿವನಿಗೆ ಸಹಕರಿಸುವಾತ. ಅಂತಹ ಯಮನಿಗೂ ಒಬ್ಬ ಋಷಿ ಶಾಪವನ್ನು ನೀಡುತ್ತಾರೆ. ಅಂತಹ ತಪ್ಪು ಏನಾಯಿತು ಯಮನಿಂದ. ಅದು ಹೇಗೆ ಪರಿಣಮಿಸಿತು ಎಂದು ತಿಳಿಯೋಣ. ಮಾಂಡವ್ಯ ಎಂಬ ಒಬ್ಬರು ಋಷಿಗಳು ತಪೋ ನಿರತರಾಗಿರುವಾಗ ಅವರ ಆಶ್ರಮದಲ್ಲಿ ಕಳ್ಳರು ಬಂದು ಅವಿತುಕೊಳ್ಳುತ್ತಾರೆ. ಕೆಲವು ಕಾಲದ ನಂತರ ರಾಜನ ಭಟರಿಗೆ ಈ ವಿಷಯ ತಿಳಿದು ರಾಜ ಭಟರು ಕಳ್ಳರೊಂದಿಗೆ ಮಾಂಡವ್ಯರನ್ನು ಬಂಧಿಸುತ್ತಾರೆ. ವಿಷಯ ಗಮನಕ್ಕೆ ಬಾರದ ರಾಜ ಅವರೆಲ್ಲರನ್ನೂ ಶೂಲಕ್ಕೆ ಏರಿಸುವಂತೆ ಆದೇಶ ಮಾಡುತ್ತಾನೆ. ಶೂಲಕ್ಕೇರಿಸಿದ ಕ್ಷಣದಲ್ಲೇ ಮಾಂಡವ್ಯರ ವಿಷಯ ತಿಳಿದ ರಾಜ ಅವರನ್ನು ಶೂಲದಿಂದ ಇಳಿಸಿ ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಕ್ಷಮೆಯನ್ನು ಯಾಚಿಸುತ್ತಾನೆ. ಕುಪಿತರಾದ ಮಾಂಡವ್ಯರು ತಮ್ಮ ತಪೋಬಲದಿಂದ ನೇರವಾಗಿ ಯಮನನ್ನು ಸಂದರ್ಶಿಸಿ ತನ್ನ ಯಾವ ಪಾಪಕರ್ಮಕ್ಕೆ ಈ ಶಿಕ್ಷೆ ಎಂದು ಕೇಳಿದಾಗ ಯಮನು ಹೀಗೆನ್ನುತ್ತಾನೆ ನೀವು ಬಾಲ್ಯದಲ್ಲಿ ಪಾತರಗಿತ್ತಿಯನ್ನು (ಚಿಟ್ಟೆಯನ್ನು) ದರ್ಭೆಯಲ್ಲಿ ಚುಚ್ಚಿ ಹಿಂಸಿಸಿದ್ದೀರಿ ಅದರ ಕರ್ಮಫಲವೇ ಇದು ಎಂದು ಹೇಳುತ್ತಾನೆ.

ಬಾಲ್ಯದಲ್ಲಿ ಅರಿಯದೇ ಮಾಡಿದ ತಪ್ಪು ಅದು ಮತ್ತು ಬಾಲ್ಯದಲ್ಲಿ ಪಾಪ ಪುಣ್ಯಗಳ ಕಲ್ಪನೆ ಮೂಡುವ ಮೊದಲೇ ಮಾಡಿದ ತಪ್ಪಿಗೆ ಈ ಪರಿಯಾದ ಶಿಕ್ಷೆಯೇ ಎಂದು ಕ್ರುದ್ಧರಾಗಿ ಯಮನಿಗೆ ಶಾಪ ನೀಡುತ್ತಾರೆ. ಆ ಶಾಪ ದಾಸಿಯ ಮಗನಾಗಿ ಜನಿಸಿ ಹಲವು ವರ್ಷಗಳ ಕಾಲ ಧರ್ಮ ಅಧರ್ಮಗಳ ಮಧ್ಯೆಯೇ ಜೀವಿಸುವಂತಾಗಲಿ ಎಂದು. ಮಾಂಡವ್ಯ ಋಷಿಗಳ ಶಾಪದ ಫಲವಾಗಿ ಯಮನು ವೇದವ್ಯಾಸರ ಅನುಗ್ರಹದಿಂದ ಧೃತರಾಷ್ಟ್ರ ಪಾಂಡುರಾಜ ಇವರ ಮಾತೆಯ ದಾಸಿಯ ಮಗನಾಗಿ ವಿದುರನ ರೂಪದಲ್ಲಿ ಜನಿಸುತ್ತಾನೆ. ಯಮನು ವಿದುರನ ರೂಪದಲ್ಲಿ ಕುರುವಂಶದ ಮಂತ್ರಿಯಾಗಿರಬೇಕಾದರೆ ಯಮನ ಧರ್ಮ ನಿರ್ಣಯ ಮಾಡುವ ಕರ್ತವ್ಯವೇನಿದೆ ಅದನ್ನು ಅವನ ತಂದೆಯಾದ ಸೂರ್ಯನು ನಡೆಸುತ್ತಿದ್ದನು ಎಂದು ಪುರಾಣ ಹೇಳುತ್ತದೆ.

ಇದನ್ನೂ ಓದಿ; Spiritual: ಪೂಜೆ ಎಂದರೇನು? ನಮ್ಮ ಪೂಜೆಯು ಸಾರ್ಥಕ್ಯವಾಗುವುದು ಹೇಗೆ?

ಈ ಶಾಪದ ಫಲದಿಂದಲೇ ವಿದುರ ಪೂರ್ಣ ಜೀವನವನ್ನು ಧರ್ಮ ಅಧರ್ಮಗಳ ಮಧ್ಯೆ ಕಳೆಯಬೇಕಾಯಿತು. ಅವನು ಕೌರವರ ಆಸ್ಥಾನದಲ್ಲಿದ್ದರೂ ಧರ್ಮ ವಿರುದ್ಧ ಕಾರ್ಯವನ್ನು ಎಂದೂ ಮಾಡಲಿಲ್ಲ. ಹಾಗೆಯೇ ಯಮನ ಅವತಾರ ಆದ ಕಾರಣ ಧರ್ಮಪರರಾದ ಪಾಂಡವರಿಗುಂಟಾಗುತ್ತಿದ್ದ ಅಪಾಯಗಳನ್ನು ಸೂಕ್ಷ್ಮವಾಗಿ ಅವರ ಗಮನಕ್ಕೆ ಬರುವಂತೆ ಮಾಡಿ ಅವರನ್ನು ಸಂರಕ್ಷಿಸುತ್ತಿದ್ದ. ಅತ್ಯಂತ ಸಾತ್ವಿಕನಾಗಿ ಜೀವನ ನಡೆಸಿದ್ದಲ್ಲದೆ ಜಗತ್ತಿಗೆ ಉಪಯೋಗವಾಗುವ ನೀತಿಯನ್ನು ರಚಿಸುತ್ತಾನೆ. ಅದುವೇ ಇಂದು ವಿದುರ ನೀತಿ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ಮಾಂಡವ್ಯರ ಶಾಪ ಫಲಿಸಿದಂತೆ ಆಯಿತು ಹಾಗೆಯೇ ಪಾಂಡವರ ಅರ್ಥಾತ್ ಧರ್ಮದ ರಕ್ಷಣೆಯೂ ಆಯಿತು ಅಲ್ಲದೇ ಭಗವಂತ ಕೌರವನ ಬಳಿ ಬಂದಾಗ ಅವನಿಗೆ ಸಾತ್ವಿಕವಾಗಿ ಸತ್ಕಾರ ಮಾಡಿದಂತೆಯೂ ಆಯಿತು. ತಪಸ್ವಿಗಳ ಶಾಪವೂ ಸತ್ಕಾರ್ಯಕ್ಕೆ ಪೂರಕವಾಗಿಯೇ ಇರುತ್ತದೆ.

ಡಾ.ಕೇಶವ ಕಿರಣ ಬಿ

ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ