AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Margashira Masa: ಮಾರ್ಗಶಿರ ಮಾಸದ ಮಹತ್ವ, ಆಚರಿಸಬೇಕಾದ ಕೆಲವು ಪ್ರಮುಖ ಪದ್ಧತಿಗಳ ವಿವರ

ಮಾರ್ಗಶಿರ ಮಾಸವು ಭಗವಾನ್ ಶ್ರೀಕೃಷ್ಣ ಮತ್ತು ಲಕ್ಷ್ಮೀದೇವಿಗೆ ಪ್ರಿಯವಾದ ಮಾಸ. ಬ್ರಾಹ್ಮೀ ಮುಹೂರ್ತದಲ್ಲಿ ವಿಷ್ಣುವಿನ ಆರಾಧನೆ, ಅನ್ನದಾನ, ಶಂಖ ಪೂಜೆ, ತೀರ್ಥಸ್ನಾನದಂತಹ ಆಚರಣೆಗಳಿಂದ ಆರೋಗ್ಯ, ಐಶ್ವರ್ಯ ವೃದ್ಧಿಯಾಗಿ ಸಕಲ ದೋಷಗಳು ನಿವಾರಣೆಯಾಗುತ್ತವೆ. ಈ ಮಾಸದಲ್ಲಿ ಶ್ರದ್ಧಾಭಕ್ತಿಯಿಂದ ದೇವರನ್ನು ಆರಾಧಿಸುವುದರಿಂದ ಶುಭಫಲಗಳು ಪ್ರಾಪ್ತಿಯಾಗುತ್ತವೆ ಎಂದು ನಂಬಲಾಗಿದೆ.

Margashira Masa: ಮಾರ್ಗಶಿರ ಮಾಸದ ಮಹತ್ವ, ಆಚರಿಸಬೇಕಾದ ಕೆಲವು ಪ್ರಮುಖ ಪದ್ಧತಿಗಳ ವಿವರ
ಮಾರ್ಗಶಿರ ಮಾಸ
ಅಕ್ಷತಾ ವರ್ಕಾಡಿ
|

Updated on: Nov 21, 2025 | 12:59 PM

Share

ಮಾರ್ಗಶಿರ ಮಾಸದ ಮಹತ್ವ, ಆಚರಿಸಬೇಕಾದ ಕೆಲವು ಪ್ರಮುಖ ಪದ್ಧತಿಗಳು ಮತ್ತು ಅವುಗಳಿಂದ ದೊರೆಯುವ ಫಲಗಳ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಗುರೂಜಿಯವರು ಹೇಳುವಂತೆ, ಮಾರ್ಗಶಿರ ಮಾಸವು ಒಂಬತ್ತನೇ ಚಾಂದ್ರಮಾನ ಮಾಸವಾಗಿದ್ದು, ಹಿಂದೂ ಸಂಪ್ರದಾಯದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ. ಭಗವಾನ್ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ “ಮಾಸಾನಾಂ ಮಾರ್ಗಶಿರೋಸ್ಮಿ” ಎಂದು ಹೇಳುವ ಮೂಲಕ ಈ ಮಾಸದ ಶ್ರೇಷ್ಠತೆಯನ್ನು ಸಾರಿದ್ದಾನೆ. ಇದು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಮಾಸವಾಗಿದೆ. ಹಾಗೆಯೇ ಲಕ್ಷ್ಮೀದೇವಿಯ ಆರಾಧನೆ ಮತ್ತು ಲಕ್ಷ್ಮೀ ವ್ರತಗಳನ್ನು ಆಚರಿಸಲು ಇದು ಅತ್ಯಂತ ಶುಭಕರವಾದ ಸಮಯ.

ಮಾರ್ಗಶಿರ ಮಾಸದಲ್ಲಿ ಆಚರಿಸಬೇಕಾದ ಕೆಲವು ಪ್ರಮುಖ ಪದ್ಧತಿ ಮತ್ತು ಅವುಗಳಿಂದ ದೊರೆಯುವ ಫಲಗಳು ಹೀಗಿವೆ:

  • ಬ್ರಾಹ್ಮೀ ಮುಹೂರ್ತದ ಆರಾಧನೆ: ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ವಿಷ್ಣುವಿನ ಆರಾಧನೆ ಮತ್ತು ಸ್ಮರಣೆ ಮಾಡುವವರಿಗೆ ಉತ್ತಮ ಆರೋಗ್ಯ, ಐಶ್ವರ್ಯ ಪ್ರಾಪ್ತಿಸುವುದಲ್ಲದೆ, ಕಂಟಕಗಳು ಮತ್ತು ದೋಷಗಳು ನಿವಾರಣೆಯಾಗುತ್ತವೆ.
  • ಸೂರ್ಯ ಭಗವಾನರ ಕಥೆ: ಒಮ್ಮೆ ಬ್ರಹ್ಮದೇವನು ಹಂಸದ ಮೇಲೆ ಸಾಗುತ್ತಿದ್ದಾಗ, ಸೂರ್ಯನ ಉಷ್ಣತೆ ಹೆಚ್ಚಾಗಿತ್ತು. ಇದರಿಂದ ಕೋಪಗೊಂಡ ಬ್ರಹ್ಮನು ಸೂರ್ಯನಿಗೆ “ಈ ಮಾಸದಲ್ಲಿ ನಿನ್ನ ಶಕ್ತಿ ಕುಂದಲಿ” ಎಂದು ಶಾಪ ನೀಡಿದನು. ತನ್ನ ಶಕ್ತಿಯನ್ನು ಮರಳಿ ಪಡೆಯಲು ಸೂರ್ಯ ಭಗವಾನನು ಮಾರ್ಗಶಿರ ಮಾಸದಲ್ಲಿ ವಿಷ್ಣುವನ್ನು ಆರಾಧಿಸಿದನು. ಆದ್ದರಿಂದ ಈ ಮಾಸದಲ್ಲಿ ವಿಷ್ಣು ಪೂಜೆಯು ವಿಶೇಷ ಫಲಗಳನ್ನು ನೀಡುತ್ತದೆ.

ವಿಶೇಷ ಆಚರಣೆಗಳು:

  • ಪ್ರದೋಷ ವ್ರತಗಳು: ಈ ಮಾಸದಲ್ಲಿ ಬರುವ ಪ್ರದೋಷ ವ್ರತಗಳು ಮಹತ್ವವನ್ನು ಹೊಂದಿವೆ.
  • ಶಿವ ಗೌರಿ ಪೂಜೆ: ಶಿವ ಮತ್ತು ಗೌರಿ ದೇವಿಯ ಆರಾಧನೆಯು ಶುಭಕರವಾಗಿದೆ.
  • ಅನ್ನದಾನ: ಸ್ಕಂದ ಪುರಾಣದ ಪ್ರಕಾರ, ಈ ಮಾಸದಲ್ಲಿ ಮಾಡುವ ಅನ್ನದಾನವು ಅಪಾರ ಪುಣ್ಯದ ಫಲಗಳನ್ನು ತರುತ್ತದೆ.
  • ಶ್ರೀರಾಮ ಮತ್ತು ಸೀತಾ ವಿವಾಹ: ಶ್ರೀರಾಮನು ಸೀತಾದೇವಿಯನ್ನು ವಿವಾಹವಾದ ಮಾಸವೂ ಇದೇ ಮಾರ್ಗಶಿರ ಮಾಸವಾಗಿದೆ.
  • ಶಂಖ ಪೂಜೆ: ಮನೆಯಲ್ಲಿ ಶಂಖವಿದ್ದರೆ, ಅದನ್ನು ಅಕ್ಕಿಯಲ್ಲಿಟ್ಟು ಪೂಜಿಸುವುದರಿಂದ ಸಕಲ ರೋಗರುಜಿನೆಗಳಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.
  • ತೀರ್ಥಸ್ನಾನ: ಮನೆಯಲ್ಲಿನ ನೀರನ್ನೂ ಸಹ “ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲಸ್ಮಿನ್ ಸನ್ನಿಧಿಂ ಕುರುಂ” ಎಂಬ ಮಂತ್ರದಿಂದ ಅಭಿಮಂತ್ರಿಸಿ ತೀರ್ಥಸ್ನಾನದ ಫಲವನ್ನು ಪಡೆಯಬಹುದು.
  • ಸಂತಾನ ಪ್ರಾಪ್ತಿ: ಸಂತಾನ ಅಪೇಕ್ಷೆ ಇರುವವರು ಬ್ರಾಹ್ಮೀ ಮುಹೂರ್ತದಲ್ಲಿ ವಿಷ್ಣುವಿನ ಆರಾಧನೆ ಮತ್ತು ಶಂಖ ಪೂಜೆ ಮಾಡುವುದರಿಂದ ಶುಭ ಫಲಗಳು ದೊರೆಯುತ್ತವೆ.
  • ಮಂತ್ರ ಪಠಣೆ: ಪ್ರತಿನಿತ್ಯ “ಓಂ ಕೃಷ್ಣಾಯ ನಮಃ” ಮತ್ತು “ಓಂ ನಮೋ ಭಗವತೇ ವಾಸುದೇವಾಯ” ಮಂತ್ರಗಳನ್ನು ಪಠಿಸುವುದು, ತುಳಸಿಯಿಂದ ವಿಷ್ಣುವನ್ನು ಆರಾಧಿಸುವುದು ಅತ್ಯಂತ ಶುಭಕರ.
  • ಪಿತೃ ಪೂಜೆ: ಪಿತೃಪೂಜೆಗಳನ್ನು ಸಹ ಈ ಮಾಸದಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: ಮಹಿಳೆಯರು ಶವ ಯಾತ್ರೆಯಲ್ಲಿ ಭಾಗವಹಿಸಬಹುದೇ? ವೈಜ್ಞಾನಿಕ ದೃಷ್ಟಿಕೋನ ಇಲ್ಲಿದೆ

ಖಗೋಳೀಯ ಮಹತ್ವ:

ಸೂರ್ಯ ಭಗವಾನನು ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಪ್ರವೇಶಿಸುವ ಸಂದರ್ಭ ಇದಾಗಿದ್ದು, ಇದನ್ನು ಧನುರ್ ಮಾಸದ ಪ್ರಾರಂಭ ಎಂದೂ ಕರೆಯುತ್ತಾರೆ. ಈ ಸಮಯದಲ್ಲಿ ಸೂರ್ಯನ ಬಲ ಸ್ವಲ್ಪ ಕಡಿಮೆಯಾಗಿರುತ್ತದೆ. ವೈಜ್ಞಾನಿಕವಾಗಿ ಉಸಿರಾಟದ ಪ್ರಕ್ರಿಯೆ ಮತ್ತು ಶರೀರದ ಉಷ್ಣತೆಯಂತಹ ಬದಲಾವಣೆಗಳು ಕಂಡುಬರುತ್ತವೆ. ಆದರೆ, ಮಂತ್ರ ಪಠಣೆ ಮತ್ತು ಸ್ತೋತ್ರಗಳಿಂದ ಮಾರ್ಗಶಿರ ಮಾಸವನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಂಡರೆ, ದೀರ್ಘಾಯುಷ್ಯ ಮತ್ತು ಸಕಲ ಶುಭಗಳು ಪ್ರಾಪ್ತಿಸುತ್ತವೆ. ಈ ಮಾಸದಲ್ಲಿ ಭಕ್ತಿ ಶ್ರದ್ಧೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದು ಅತ್ಯಂತ ಶುಭಕರ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ