Life Story of Chanakya: ಕಡುಕಷ್ಟಗಳ ನಡುವೆ ಅಪಾರ ಜ್ಞಾನ ಸಂಪಾದಿಸಿದ ಚಾಣಕ್ಯನ ರಣರೋಚಕ ಕಹಾನಿ ಇಲ್ಲಿದೆ, ತಪ್ಪದೆ ಓದಿ

ಮೂರ್ಖ ಚಾಣಕ್ಯನಂತೆ ವರ್ತಿಸಬೇಡ ಎಂದು ರೊಟ್ಟಿ ತಿನ್ನುವಾಗ ಕೈಸುಟ್ಟುಕೊಂಡ ತನ್ನ ಮಗನಿಗೆ ಲೋಕಜ್ಞಾನ ಹೇಳಿದ ಮಹಿಳೆ! ಆ ತಾಯಿ ನ ನೀಡಿದ ಆ ಅಮೂಲ್ಯ ನೀತಿಪಾಠವನ್ನು ತಕ್ಷಣವೇ ಕಾರ್ಯರೂಪಕ್ಕೆ ತಂದ ಚಾಣಕ್ಯ ಮುಂದೆ ತನ್ನ ಜೀವನದಲ್ಲಿ ಅಗಾಧವಾದುದನ್ನು ಸಾಧಿಸುತ್ತಾನೆ. ಅದು ಸಾರ್ವಕಾಲಿಕ ಎನಿಸುತ್ತದೆ. ಚಾಣಕ್ಯನ ರಣರೋಚಕ ಕಹಾನಿ ಇಲ್ಲಿದೆ, ತಪ್ಪದೆ ಓದಿ

Life Story of Chanakya: ಕಡುಕಷ್ಟಗಳ ನಡುವೆ ಅಪಾರ ಜ್ಞಾನ ಸಂಪಾದಿಸಿದ ಚಾಣಕ್ಯನ ರಣರೋಚಕ ಕಹಾನಿ ಇಲ್ಲಿದೆ, ತಪ್ಪದೆ ಓದಿ
ಅಪಾರ ಪಾಂಡಿತ್ಯದ ಚಾಣಕ್ಯನ ರಣರೋಚಕ ಕಹಾನಿ ಇಲ್ಲಿದೆ
ಸಾಧು ಶ್ರೀನಾಥ್​

Updated on: May 29, 2024 | 8:28 AM

ಒಂದು ದಿನ ಚಾಣಕ್ಯ ಮತ್ತು ಚಂದ್ರಗುಪ್ತ ಮಗಧದಲ್ಲಿ ತಿರುಗಾಡುತ್ತಿದ್ದಾಗ, ಒಬ್ಬ ತಾಯಿಯು ಬಿಸಿ ರೊಟ್ಟಿಯ ಮಧ್ಯದಲ್ಲಿ ತನ್ನ ಕೈಯನ್ನು ಇಟ್ಟು, ಸುಟ್ಟುಕೊಂಡ ಮಗನನ್ನು ನೋಡಿ ಗದರಿಸುತ್ತಾಳೆ. ಆ ತಾಯಿ ಆಗ ಅಮೂಲ್ಯ ನೀತಿಪಾಠವೊಂದನ್ನು ಹೇಳುತ್ತಾಳೆ: ನೀನು ನೇರವಾಗಿ ಬಿಸಿಯಾದ ರೊಟ್ಟಿಯ ನಡುವೆ ಕೈ ಹಾಕಿದರೆ ಅದು ನಿನ್ನನ್ನು ಸುಡುವುದು ಖಂಡಿತ. ಗಡಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಬದಲು ನೇರವಾಗಿ ರಾಜಧಾನಿಯ ಮೇಲೆ ದಾಳಿ ಮಾಡಿ ಕೈ ಸುಟ್ಟುಕೊಂಡ ಮೂರ್ಖ ಚಾಣಕ್ಯನಂತೆ ಏಕೆ ವರ್ತಿಸುತ್ತಿದ್ದೀಯಾ? ಮೊದಲು ರೊಟ್ಟಿಯ ಅಂಚಿನ ಭಾಗವನ್ನು ತಿಂದು ಆಮೇಲೆ ನಿಧಾನವಾಗಿ ಮಧ್ಯದಲ್ಲಿ ಕೈ ಹಾಕು, ಆಗ ಅದು ನಿನ್ನನ್ನು ಸುಡುವುದಿಲ್ಲ. ಆ ತಾಯಿ ತನ್ನ ಮಗನನ್ನು ಹೀಗೆ ಬೈಯುತ್ತಿದ್ದಳು. ಚಾಣಕ್ಯ ಮತ್ತು ಚಂದ್ರಗುಪ್ತ ಅದನ್ನು ರಹಸ್ಯವಾಗಿ ಕೇಳಿಸಿಕೊಳ್ಳುತ್ತಾರೆ. ಅದನ್ನು ಕೇಳಿ ಅವರಿಗೆ ತಮ್ಮ ತಪ್ಪಿನ ಅರಿವಾಯಿತು. ಮೊದಲು ಗಡಿಯನ್ನು ವಶಪಡಿಸಿಕೊಳ್ಳದೆ ರಾಜಧಾನಿ ಪಾಟಲೀಪುತ್ರದ ಮೇಲೆ ದಾಳಿ ಮಾಡಿದ್ದು ಅವರ ದೊಡ್ಡ ತಪ್ಪು ಎಂದು ವಿಷಾದ ವ್ಯಕ್ತಪಡಿಸಿದರು. ಚಾಣಕ್ಯ ಆ ಮಾತುಗಳಿಂದ ಲೋಕಜ್ಞಾನ ನೀಡಿದ ತಾಯಿಗೆ ನಮಸ್ಕರಿಸಿ ಮುಂದೆ ಹೋಗಲು ನಿರ್ಧರಿಸಿದರು. ಚಾಣಕ್ಯ ಒಬ್ಬ ಶಿಕ್ಷಕ, ತತ್ವಜ್ಞಾನಿ, ಅರ್ಥಶಾಸ್ತ್ರಜ್ಞ ಮತ್ತು ರಾಜನೀತಿಜ್ಞನಾಗಿದ್ದ. ಅವರು ಭಾರತೀಯ ರಾಜಕೀಯ ಗ್ರಂಥವಾದ ‘ಅರ್ಥಶಾಸ್ತ್ರ’ (ರಾಜಕೀಯ ಮತ್ತು ಅರ್ಥಶಾಸ್ತ್ರ) ಎಂಬ ಸಾರ್ವಕಾಲಿಕ ಮಹಾಗ್ರಂಥವನ್ನು ಬರೆದರು. ಮೌರ್ಯ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಅವರು ಪ್ರಮುಖ...

Published On - 11:29 am, Tue, 28 May 24

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ