Daily Devotional: ಉತ್ತಮ ಆರೋಗ್ಯಕ್ಕಾಗಿ ಸಾಂಪ್ರದಾಯಿಕ ವಿಧಾನ, ಜ್ಯೋತಿಷ್ಯ ಸಲಹೆ ಇಲ್ಲಿದೆ
ಡಾ. ಬಸವರಾಜ್ ಗುರೂಜಿ ಅವರು ಆರೋಗ್ಯ ಸಮಸ್ಯೆಗಳಿಗೆ ಸರಳ ಪರಿಹಾರವನ್ನು ಸೂಚಿಸುತ್ತಾರೆ. "ಓಂ ಶ್ರೀ ಮಹಾವಿಷ್ಣುವೇ ನಮಃ" ಎಂಬ ಮಂತ್ರವನ್ನು ಬಿಳಿ ಕಾಗದದಲ್ಲಿ ಬರೆದು, ಅರಿಶಿನದೊಂದಿಗೆ ಮಡಚಿ, ಮಕ್ಕಳ ದಿಂಬಿನ ಕೆಳಗೆ ಇಡುವುದರಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಅವರು ಹೇಳುತ್ತಾರೆ. ಈ ಪರಿಹಾರ ವಯಸ್ಕರಿಗೂ ಸಹಾಯಕವಾಗಬಹುದು. ಆದರೆ, ಈ ಎಲ್ಲಾ ಪರಿಹಾರಗಳು ನಂಬಿಕೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಗುರೂಜಿ ಸ್ಪಷ್ಟಪಡಿಸಿದ್ದಾರೆ.

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಆರೋಗ್ಯದ ಮಹತ್ವವನ್ನು ವಿವರಿಸಿದ್ದಾರೆ. ಜೊತೆಗೆ ಅನಾರೋಗ್ಯದಿಂದ ಪಾರಾಗಲು ಸರಳವಾದ ಮತ್ತು ಪರಿಣಾಮಕಾರಿಯಾದ ಮನೆಮದ್ದನ್ನು ಹಂಚಿಕೊಂಡಿದ್ದಾರೆ.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ, ಡಾಕ್ಟರ್ ಭೇಟಿ ಮತ್ತು ನಿಯಮಿತ ಆರೋಗ್ಯ ಪರೀಕ್ಷೆಗಳ ಜೊತೆಗೆ, ಸರಳವಾದ ಮನೆಮದ್ದನ್ನು ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ. ಇದರಲ್ಲಿ “ಓಂ ಶ್ರೀ ಮಹಾವಿಷ್ಣುವೇ ನಮಃ” ಎಂಬ ಮಂತ್ರವನ್ನು ಬಳಸುವ ವಿಧಾನವನ್ನು ವಿವರಿಸಿದ್ದಾರೆ. ಬಿಳಿ ಕಾಗದದ ಮೇಲೆ ಈ ಮಂತ್ರವನ್ನು ಬರೆದು, ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ಮಡಚಿ, ಮಕ್ಕಳ ದಿಂಬಿನ ಕೆಳಗೆ ಅಥವಾ ತೊಟ್ಟಿಲ ಕೆಳಗೆ ಇಡುವುದು ಈ ಪರಿಹಾರದ ವಿಧಾನ. ಇದರಿಂದ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು ಎಂದು ಹೇಳಲಾಗಿದೆ. ಮೂರು ದಿನಗಳಲ್ಲಿ ಫಲಿತಾಂಶ ಕಾಣಬಹುದು ಎಂದು ಅವರು ಹೇಳಿದ್ದಾರೆ. ಈ ವಿಧಾನ ವಯಸ್ಕರಿಗೂ ಅನ್ವಯಿಸುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ಸೆ. 07 ಎರಡನೇ ಚಂದ್ರಗ್ರಹಣ; ಈ ಎರಡು ರಾಶಿಯವರು ಅತ್ಯಂತ ಜಾಗರೂಕರಾಗಿರಿ
ಇದಲ್ಲದೆ, ದನ್ವಂತ್ರಿ ಮಂತ್ರ, ಮೃತ್ಯುಂಜಯ ಮಂತ್ರ, ಮತ್ತು ಉಗ್ರಂ ವೀರಂ ನರಸಿಂಹ ಮಂತ್ರಗಳನ್ನು ಜಪಿಸುವುದರ ಮಹತ್ವವನ್ನು ಗುರೂಜಿ ತಿಳಿಸಿದ್ದಾರೆ. “ಶರೀರೇ ಜರ್ಜರಿಭೂತೇ ವ್ಯಾಧಿಗ್ರಸ್ತೇ ಕಳೇಬರಹ ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರಿಃ” ಎಂಬ ಮಂತ್ರವನ್ನು ಉಲ್ಲೇಖಿಸಿದ್ದಾರೆ. ಆದರೆ, ಈ ಎಲ್ಲಾ ಪರಿಹಾರಗಳು ನಂಬಿಕೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಗುರೂಜಿ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




