ಉತ್ತರಾಯಣ- ದಕ್ಷಿಣಾಯನ ಆರಂಭದ ದಿನಗಳಲ್ಲೇ ಬದಲಾವಣೆ ಆಗುವುದು ಹೇಗೆ? ಇಲ್ಲಿದೆ ಉದಾಹರಣೆ ಸಹಿತ ಲೆಕ್ಕಾಚಾರ
ಎರಡು ವರ್ಷಗಳಿಂದ ಉತ್ತರಾಯಣವು ಡಿಸೆಂಬರ್ 22ರ ಬದಲು ಡಿಸೆಂಬರ್ 21ರಿಂದ ಆರಂಭವಾಗಲು ಶುರುವಾಗಿದೆ. ಹಾಗೆಯೇ ದಕ್ಷಿಣಾಯನವು ಜೂನ್ 22ರ ಬದಲು ಜೂನ್ 21ರಿಂದಲೇ ಆರಂಭವಾಗಲು ಶುರುವಾಗಿದೆ. ಇದೊಂದು ಖಗೋಳ ನಿಯಮ. ಈ 144ನೇ ವರ್ಷದ ಹಿಂದು ಮುಂದು ಒಂದೊಂದು ವರ್ಷ ಪ್ರಕೃತಿಯ ಮೇಲೆ ಬದಲಾವಣೆ ಆಗುತ್ತದೆ.
ಎಲ್ಲರಿಗೂ ನಮಸ್ಕಾರ. ಮತ್ತೊಮ್ಮೆ ಜ್ಯೋತಿರ್ಗಣಿತದ ಲೇಖನದೊಂದಿಗೆ ನಿಮ್ಮ ಎದುರು ಬಂದಿದ್ದೇನೆ. ಉತ್ತರಾಯಣ ಹಾಗೂ ದಕ್ಷಿಣಾಯನ ಎಂಬುದನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಇದರ ದಿನಾಂಕದಲ್ಲಿ ಬದಲಾವಣೆಗಳು ಆಗುವುದರ ಬಗ್ಗೆ ತಿಳಿಸಬೇಕು ಎಂಬುದು ಉದ್ದೇಶ. ನಿಮಗೆ ಗೊತ್ತಿರಲಿ, 144 ವರ್ಷಗಳಿಗೆ ಒಮ್ಮೆ ಎಂಬಂತೆ ರವಿಗೆ ಉತ್ತರಾಯಣ- ದಕ್ಷಿಣಾಯನಗಳಲ್ಲಿ ವ್ಯತ್ಯಾಸ ಬರುತ್ತದೆ. ಅಂದರೆ ಒಂದು ದಿನ ಹಿಂದಕ್ಕೆ ಬರುತ್ತದೆ.
ಎರಡು ವರ್ಷಗಳಿಂದ ಉತ್ತರಾಯಣವು ಡಿಸೆಂಬರ್ 22ರ ಬದಲು ಡಿಸೆಂಬರ್ 21ರಿಂದ ಆರಂಭವಾಗಲು ಶುರುವಾಗಿದೆ. ಹಾಗೆಯೇ ದಕ್ಷಿಣಾಯನವು ಜೂನ್ 22ರ ಬದಲು ಜೂನ್ 21ರಿಂದಲೇ ಆರಂಭವಾಗಲು ಶುರುವಾಗಿದೆ. ಇದೊಂದು ಖಗೋಳ ನಿಯಮ. ಈ 144ನೇ ವರ್ಷದ ಹಿಂದು ಮುಂದು ಒಂದೊಂದು ವರ್ಷ ಪ್ರಕೃತಿಯ ಮೇಲೆ ಬದಲಾವಣೆ ಆಗುತ್ತದೆ. ಇನ್ನು 142 ವರ್ಷ ಇದೇ ಸ್ಥಿತಿ ಮುಂದುವರಿಯುತ್ತದೆ.
ಸಾಮಾನ್ಯವಾಗಿ ಮಳೆ ಕಡಿಮೆ ಆಗುವುದು, ವಿಪರೀತ ಸೆಕೆ ಕಾಣಿಸಿಕೊಳ್ಳುವುದು ಇದರ ಫಲಗಳಾಗಿರುತ್ತವೆ. ಮತ್ತೆ ಸರಿಯಾಗುತ್ತಾ ಯಥಾಸ್ಥಿತಿಗೆ ಹೋಗುತ್ತದೆ ಎಂದಲ್ಲ.ಅದಕ್ಕೆ ಮನುಷ್ಯನು ಹೊಂದಿಕೊಳ್ಳುತ್ತಾರೆ ಎಂದರ್ಥ.
ಯಾರಾದರೂ 150 ವರ್ಷ ಬಾಳಿ ಬದುಕಿದವರು, ಸರಿಯಾದ ಜ್ಞಾಪಕ ಶಕ್ತಿ ಇದ್ದವರಿದ್ದರೆ ಅವರ ಅನುಭವ ಹೇಳಿಯಾರು. ನಾವೇನಿದ್ದರೂ ಜ್ಯೋತಿರ್ಗಣಿತ,ಜ್ಯೋತಿರ್ವಿಜ್ಞಾನ, ಗ್ರಹಸ್ಥಿತಿಯ ಆಧಾರದಲ್ಲಿ ಹೇಳಬಹುದಷ್ಟೆ.
ಇದನ್ನೂ ಓದಿ:ಬುಧ, ರವಿಯಿಂದ ಸೃಷ್ಟಿಯಾಗುವ ಬಲಿಷ್ಠ ರಾಜಯೋಗ ನಿಮ್ಮ ಜಾತಕದಲ್ಲೂ ಇದೆಯಾ? ಇಂದೇ ಪರಿಶೀಲಿಸಿ
ಮಹಾಭಾರತದ ಕಾಲದಲ್ಲಿ ತುಲಾ ಸಂಕ್ರಮಣವೇ ಉತ್ತರಾಯಣ ಪರ್ವಕಾಲ ಆಗಿತ್ತು. ಭೀಷ್ಮಾಚಾರ್ಯರು ಕಾಯ ತ್ಯಜಿಸಿದ ಕಾಲವಾಗಿತ್ತು ಎಂದು ಪುರಾಣ ಉಲ್ಲೇಖಗಳಿವೆ. ಇದರಿಂದ ಮಹಾಭಾರತ ಎಷ್ಟು ವರ್ಷ ಹಿಂದೆ ನಡೆದಿತ್ತು ಎಂದು ನಿಖರವಾಗಿ ಹೇಳಬಹುದು. ಆದರೆ ಇದಕ್ಕೆ ಗಣಿತ ಮಾತ್ರ ಸರಿಯಾಗಿರಬೇಕು. ಹಾಗಾಗಿ ಪ್ರಜೆಗಳು ಗಡಿಬಿಡಿಗೊಳ್ಳುವ ಬದಲು ವಾತಾವರಣಕ್ಕೆ ಹೊಂದಿಕೊಂಡು ಬಾಳುವುದೇ ಲೇಸು. ಇದನ್ನೇ ಕಾಲಾಯ ತಸ್ಮೈ ನಮಃ ಎಂದರು.
ಈ ವರ್ಷ ಮಳೆಯ ಅಭಾವ ಎದುರಾಗಲಿದೆ ಎಂಬುದನ್ನು ಹಿಂದೆಯೇ ಪ್ರಸ್ತಾವ ಮಾಡಿದ್ದೆ. ಏಕೆ ಇದನ್ನು ನೆನಪಿಸಿಕೊಳ್ಳಬೇಕಾಯಿತು ಅಂದರೆ, ಜ್ಯೋತಿಷ್ಯದ ಲೆಕ್ಕಾಚಾರದಲ್ಲಿ ವಿಜ್ಞಾನ ಇದೆ. ಅಂದರೆ ಆ ಜ್ಞಾನವನ್ನು ಅರ್ಥೈಸಿಕೊಂಡು, ಜನರಿಗೆ ಹೇಳುವವರಲ್ಲಿ ನ್ಯೂನತೆ ಇರಬಹುದು, ಆದರೆ ಜ್ಯೋತಿಷ್ಯದಲ್ಲಿ ನ್ಯೂನತೆ ಇಲ್ಲ.
ಇನ್ನು ಈ ಮೇಲೆ ತಿಳಿಸಿದ ಜ್ಯೋತಿರ್ಗಣಿತದ ಭಾಗವನ್ನು ಆಸಕ್ತರು ಗಮನಿಸಬಹುದು. ಉತ್ಸಾಹಿಗಳು ಇನ್ನಷ್ಟು ಅಧ್ಯಯನ ಹಾಗೂ ಸಂಶೋಧನೆಗಳನ್ನು ಮಾಡಬಹುದು.