Vastu Tips: ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂಬ ಚಿಂತೆಯೇ? ಈ ವಾಸ್ತು ಸಲಹೆಗಳನ್ನು ಅನುಸರಿಸಿ ನೋಡಿ

| Updated By: ganapathi bhat

Updated on: Jan 24, 2022 | 6:50 AM

Vastu Tips: ವಾಸ್ತು ತಜ್ಞರ ಸಲಹೆಯ ಪ್ರಕಾರ ಮನೆಯಲ್ಲಿ ಹಣದ ಉಳಿಕೆ, ಹರಿವು ವಾಸ್ತು ಪ್ರಕಾರವನ್ನು ಅವಲಂಬಿಸಿ ಇರಬಹುದು. ನಿಮ್ಮ ಲಾಕರ್​ಅನ್ನು ಎಲ್ಲಿ ಇಟ್ಟಿರುತ್ತೀರಿ ಎಂಬುದು ಕೂಡ ಹಣ ಹಾಗೂ ವಾಸ್ತು ಲೆಕ್ಕಾಚಾರದಲ್ಲಿ ಮುಖ್ಯ ಪಾತ್ರ ವಹಿಸಬಹುದು.

Vastu Tips: ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಎಂಬ ಚಿಂತೆಯೇ? ಈ ವಾಸ್ತು ಸಲಹೆಗಳನ್ನು ಅನುಸರಿಸಿ ನೋಡಿ
Vastu Tips
Follow us on

ನಮಗೆಲ್ಲರಿಗೂ ಹಣಕಾಸು ಭದ್ರತೆ ಅನ್ನುವುದು ಬೇಕೇ ಬೇಕು. ಹಣದ ಆಸರೆ ಇಲ್ಲದೆ ಜೀವನ ಸಾಗಿಸುವುದು ಹಲವು ಬಾರಿ ಕಷ್ಟ ಅನಿಸಬಹುದು. ದುಡ್ಡೇ ದೊಡ್ಡಪ್ಪ ಎಂದು ಅಂದುಕೊಳ್ಳುವವರೂ ಬಹಳ ಮಂದಿ. ಶೋಕಿಗೆ ಅಲ್ಲದೇ ಹೋದರೂ ಬದುಕು ಸಾಗಿಸಲು ಬೇಕಾದಷ್ಟು ಹಣ ಇರಬೇಕಾದ ಅನಿವಾರ್ಯತೆ ಇಂದಿನ ದಿನದಲ್ಲಿ ಇದೆ. ಹಣ ಇಲ್ಲದೇ ಹೋದರೆ ಹಲವಾರು ಹೆಚ್ಚಿನ ಸಮಸ್ಯೆಗಳು ಎದುರಾಗಬಹುದು. ವಾಸ್ತು ತಜ್ಞರ ಸಲಹೆಯ ಪ್ರಕಾರ ಮನೆಯಲ್ಲಿ ಹಣದ ಉಳಿಕೆ, ಹರಿವು ವಾಸ್ತು ಪ್ರಕಾರವನ್ನು ಅವಲಂಬಿಸಿ ಇರಬಹುದು. ನಿಮ್ಮ ಲಾಕರ್​ಅನ್ನು ಎಲ್ಲಿ ಇಟ್ಟಿರುತ್ತೀರಿ ಎಂಬುದು ಕೂಡ ಹಣ ಹಾಗೂ ವಾಸ್ತು ಲೆಕ್ಕಾಚಾರದಲ್ಲಿ ಮುಖ್ಯ ಪಾತ್ರ ವಹಿಸಬಹುದು.

ಹಣವನ್ನು ಸರಿಯಾದ ಕಡೆ, ಸರಿಯಾದ ದಿಕ್ಕಿನಲ್ಲಿ ಇಡುವುದು ಅತೀ ಮುಖ್ಯ. ಅದರಿಂದಾಗಿ ನಿಮ್ಮಲ್ಲಿ ಹಣದ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು. ನೀವು ಹಣದ ಜಾಗ್ರತೆಗಾಗಿ ಈ ವಾಸ್ತು ಸಲಹೆಗಳನ್ನು ಅನುಸರಿಸಬಹುದು.

ಲಾಕರ್​ನ ದಿಕ್ಕು
ನಿಮ್ಮ ಮನೆಯಲ್ಲಿ ಹಣದ ಲಾಕರ್​ಅನ್ನು ನೈಋತ್ಯ (south-west) ದಿಕ್ಕಿನಲ್ಲಿ ಇಡಬಹುದು. ಆದರೆ ಹಾಗೆ ಇರಿಸಿದ ಲಾಕರ್​ನ ಬಾಗಿಲು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಇರಬಾರದು. ಹಾಗೆ ಇರದಂತೆ ನೋಡಿಕೊಳ್ಳಿ.

ಹಣವನ್ನು ಹಿಡಿದು ನಿಲ್ಲುವ ದಿಕ್ಕು
ಹಣ ಅಥವಾ ಕಾರ್ಡ್​ಗಳನ್ನು ಉತ್ತರ ದಿಕ್ಕಿಗೆ ಮುಖ ಮಾಡಿ ನಿಂತು ನೋಡಿ, ಅಥವಾ ಹಣದ ಲೆಕ್ಕವನ್ನು ಹಾಕುವಾಗ ಉತ್ತರದ ಕಡೆಗೆ ನೋಡಿ ನಿಂತಿರಿ. ಉತ್ತರವು ಕುಬೇರನ ದಿಕ್ಕು ಎಂದು ಹೇಳಲಾಗುತ್ತದೆ. ಹಾಗೂ ದೈನಂದಿನ ಖರ್ಚಿನ ಹಣವನ್ನು ಇಡಲು ಉತ್ತರದ ಭಾಗದಲ್ಲಿ ಸ್ಥಳ ಒಂದನ್ನು ಆರಿಸಿಕೊಳ್ಳಿ.

ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಹಣ ಇಡುವುದು ನಿಲ್ಲಿಸಿ
ಹಣವನ್ನು ಮನೆಯ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಇಡಬೇಡಿ. ವಾಸ್ತ ಪ್ರಕಾರ ಹಾಗೆ ಮಾಡುವುದು ಒಳಿತಲ್ಲ. ಉತ್ತರ ಅಥವಾ ಪೂರ್ವ ಭಾಗವನ್ನು ಹಣ ಇಡಲು ಬಳಸುವುದು ತುಂಬಾ ಒಳ್ಳೆಯದು.

ಲಾಕರ್ ಅಥವಾ ಹಣದ ಪೆಟ್ಟಿಗೆಯು ಹೊರಗೆ ಕಾಣುವಂತೆ ಇರಬಾರದು
ಹಣದ ಪೆಟ್ಟಿಗೆ ಅಥವಾ ಲಾಕರ್ ಮನೆಯ ಹೊರಗಿನಿಂದ ಅಥವಾ ಮನೆಗೆ ಪ್ರವೇಶ ಮಾಡುವಲ್ಲಿಂದ ಕಾಣುವಂತೆ ಇರಬಾರದು. ಅಥವಾ ಇನ್ಯಾವುದೇ ಹೊರಗಿನ ಬಾಗಿಲಿನಿಂದ ಕಾಣಬಾರದು. ವಾಸ್ತು ಪ್ರಕಾರ ಹಣವನ್ನು, ಲಾಕರ್​ಅನ್ನು ಒಳಗೆ ಇಡುವುದು ಸೂಕ್ತ.

ಹಣದ ಪೆಟ್ಟಿಗೆಯನ್ನು ಈ ಸ್ಥಳದಲ್ಲಿ ಇಡಲೇಬೇಡಿ
ಹಣದ ಪೆಟ್ಟಿಗೆ ಅಥವಾ ಲಾಕರ್​ಅನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ. ದಕ್ಷಿಣ ದಿಕ್ಕಿನಿಂದ ದೂರ ಇರುವಂತೆ ಹಣದ ಪೆಟ್ಟಿಗೆ ಹಾಗೂ ಲಾಕರ್ ಇಡುವುದು ಒಳ್ಳೆಯದು. ಅಲ್ಲದೆ, ಲಾಕರ್ ಮತ್ತು ಹಣದ ಪೆಟ್ಟಿಗೆಯನ್ನು ಬಾತ್​ರೂಮ್, ಶೌಚಾಲಯ, ಮೆಟ್ಟಿಲು, ಅಡುಗೆ ಕೋಣೆ ಸಮೀಪವೂ ಇಡುವುದು ಅಷ್ಟೊಂದು ಒಳ್ಳೆಯದಲ್ಲ.

ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಮನೆಯ ಈ ಜಾಗಗಳಲ್ಲಿ ಚಪ್ಪಲಿ -ಷೂ ಧರಿಸಬೇಡಿ, ಇಲ್ಲವಾದರೆ ಅದರಿಂದ ತೊಂದರೆಗಳೇ ಹೆಚ್ಚು

ಇದನ್ನೂ ಓದಿ: Vastu Tips : ವಾಸ್ತು ಪ್ರಕಾರ ಮನೆಯ ಬಳಿ ಅಪ್ಪಿತಪ್ಪಿಯೂ ಈ ನಾಲ್ಕು ಗಿಡ ಹಾಕಬೇಡಿ, ಅದರಿಂದ ಹಾನಿಯೇ ಹೆಚ್ಚು