Lord Hanuman: ರಾಮ ಬಂಟ ಹನುಮ ‘ವೀರಾಂಜನೇಯ’ನಾಗಿ ಪೂಜ್ಯನೀಯನಾಗಿದ್ದು ಹೇಗೆ?

ಕೈಲಾಸದಿಂದ ಅಲ್ಲಿಗೆ ನೇರವಾಗಿ ತೆರಳುವ ನಾರದರು ಮಾರುತಿಯನ್ನು ಕುರಿತು 'ನೀನು ನಿರುಪಯುಕ್ತವಾದ ಪದಾರ್ಥಗಳನ್ನು ಕೇಳದೆ ಅಮೂಲ್ಯವಾದ ಮುಕ್ತಿಮಣಿಯನ್ನು ಬೇಡು' ಎನ್ನುವರು. ಶ್ರೀರಾಮನು ಮಾರುತಿಯನ್ನು ಕರೆದು ತನ್ನ ಕೇಯೂರ ಹಾರವನ್ನು ನೀಡುವನು. ಅದನ್ನು ನಿರಾಕರಿಸುವ ಮಾರುತಿಯು ಕೈಮುಗಿದು ವಿನೀತನಾಗಿ, ತನಗೆ ಮುಕ್ತಿಮಣಿಯನ್ನು ನೀಡಲು ಕೇಳಿಕೊಳ್ಳುವನು.

Lord Hanuman: ರಾಮ ಬಂಟ ಹನುಮ 'ವೀರಾಂಜನೇಯ'ನಾಗಿ ಪೂಜ್ಯನೀಯನಾಗಿದ್ದು ಹೇಗೆ?
ವೀರಾಂಜನೇಯ
Follow us
TV9 Web
| Updated By: ಆಯೇಷಾ ಬಾನು

Updated on: Jan 24, 2022 | 6:30 AM

ಸಾಮಾನ್ಯವಾಗಿ ಗುರುವಿನ ಆಶೀರ್ವಾದ, ಗುರುಬಲವೊಂದಿದ್ದರೆ ಗ್ರಹ ಅಥವಾ ದೇವತೆಯ ದೋಷವಿದ್ದರೂ ಅದು ಪರಿಣಾಮ ಬೀರುವುದಿಲ್ಲ. ಗುರುವಿನ ಶಕ್ತಿಯೇ ಎಲ್ಲಾ ದೇವತೆಗಳ ಮತ್ತು ಗ್ರಹಗಳ ಶಕ್ತಿಗಿಂತ ಮಿಗಿಲು ಎಂದು ಕೇಳಿರುತ್ತೇವೆ. ಗುರು ಪರಂಪರೆಯು ಕೇವಲ ಮಾನವರಿಗೆ ಸೀಮಿತವದದ್ದಲ್ಲ, ಸಮಸ್ತ ದೇವತೆಗಳಿಗೆ ಮತ್ತು ಗ್ರಹಗಳಿಗೆ ಗುರು ಪರಂಪರೆಯ ಬಗ್ಗೆ ಗೌರವವಿದೆ.

ಒಮ್ಮೆ ಪಾರ್ವತಿಯು ಶಿವನನ್ನು ಕುರಿತು, ‘ಹರ ಮತ್ತು ಗುರು ಇವರಲ್ಲಿ ಯಾರು ಶ್ರೇಷ್ಠ?’ ಎಂದು ಕೇಳಿದಾಗ ಶಿವನು, ‘ಹರನಿಗಿಂತ ಗುರುವೇ ಶ್ರೇಷ್ಠ. ಹರ ಮುನಿದರೂ ಗುರು ಕಾಯ್ವನು’ ಎನ್ನುವನು. ‘ಇದು ಹೇಗೆ? ಭೂಲೋಕದಲ್ಲಿ ಇದನ್ನು ಸಿದ್ಧಮಾಡಿ ತೋರಿಸು’ ಎಂದು ಪಾರ್ವತಿಯು ಅಲ್ಲೇ ಇದ್ದ ದೇವರ್ಷಿ ನಾರದಮುನಿಗಳಿಗೆ ಆದೇಶ ನೀಡಿದಳು. ಭೂಲೋಕದಲ್ಲಿ ಆಗ ತ್ರೇತಾಯುಗದ ಅಂತ್ಯದ ಸಮಯ. ಶ್ರೀರಾಮನು ರಾವಣನನ್ನು ಮಣಿಸಿ ಅಯೋಧ್ಯೆಗೆ ಮರಳಿರುತ್ತಾನೆ. ಯುದ್ಧ ಸಂಪೂರ್ಣಗೊಂಡ ಸಂತಸಕ್ಕೆ ಔತಣಕೂಟ ಏರ್ಪಡಿಸಿ, ಯುದ್ಧದಲ್ಲಿ ಭಾಗಿಯಾದ ಎಲ್ಲ ವೀರರಿಗೂ ಅವರು ಬೇಡಿದ ಪದಾರ್ಥಗಳನ್ನು ನೀಡುತ್ತಿರುತ್ತಾನೆ. ಆದರೆ ಮಾರುತಿಯು ಮಾತ್ರ ಏನು ಬೇಡಬೇಕೆಂದು ತೋಚದೆ ಮೌನವಾಗಿ ಒಂದೆಡೆ ಕುಳಿತಿರುತ್ತಾನೆ.

ಕೈಲಾಸದಿಂದ ಅಲ್ಲಿಗೆ ನೇರವಾಗಿ ತೆರಳುವ ನಾರದರು ಮಾರುತಿಯನ್ನು ಕುರಿತು ‘ನೀನು ನಿರುಪಯುಕ್ತವಾದ ಪದಾರ್ಥಗಳನ್ನು ಕೇಳದೆ ಅಮೂಲ್ಯವಾದ ಮುಕ್ತಿಮಣಿಯನ್ನು ಬೇಡು’ ಎನ್ನುವರು. ಶ್ರೀರಾಮನು ಮಾರುತಿಯನ್ನು ಕರೆದು ತನ್ನ ಕೇಯೂರ ಹಾರವನ್ನು ನೀಡುವನು. ಅದನ್ನು ನಿರಾಕರಿಸುವ ಮಾರುತಿಯು ಕೈಮುಗಿದು ವಿನೀತನಾಗಿ, ತನಗೆ ಮುಕ್ತಿಮಣಿಯನ್ನು ನೀಡಲು ಕೇಳಿಕೊಳ್ಳುವನು. ಆಗ ಶ್ರೀರಾಮನು ‘ನಾನು ಈ ಅವತಾರದಲ್ಲಿ ಮಾನವನಾಗಿ ಜನಿಸಿರುವುದರಿಂದ ಮುಕ್ತಿ ಕರುಣಿಸಲು ಸಾಧ್ಯವಿಲ್ಲ’ ಎಂದು ತಿಳಿಸಿ ವಸಿಷ್ಠ ಮಹರ್ಷಿಗಳ ಬಳಿಗೆ ಮಾರುತಿಯನ್ನು ಕಳುಹಿಸುವನು. ಹನುಮನು ವಸಿಷ್ಠರ ಬಳಿ ಮುಕ್ತಿಮಣಿಯನ್ನು ಬೇಡುವನು. ವಸಿಷ್ಠರು ಮಾರುತಿಯನ್ನು ಪಂಪಾವರ ಕ್ಷೇತ್ರದ ಹೇಮಕೂಟಕ್ಕೆ ತೆರಳಿ (ಇಂದಿನ ಹಂಪಿ ಪ್ರದೇಶ) ಅಲ್ಲಿ ತುಂಗಭದ್ರಾ ನದಿಯ ದಡದಲ್ಲಿ ವೀರಭದ್ರನನ್ನು ಕುರಿತು ತಪಸ್ಸನ್ನು ಆಚರಿಸಲು ಸೂಚಿಸುವರು.

ವಸಿಷ್ಠರ ಆಣತಿಯಂತೆ ಮಾರುತಿಯು ತುಂಗಭದ್ರಾ ನದಿಯ ದಂಡೆಯ ಮೇಲೆ ಉಗ್ರವಾದ ತಪಸ್ಸನ್ನಾಚರಿಸಿ, ಶ್ರೀ ವೀರಭದ್ರನನ್ನು ಒಲಿಸಿಕೊಂಡು ಅವನಿಂದ ಮುಕ್ತಿಮಣಿಯನ್ನು ಬೇಡುವನು. ಆಗ ವೀರಭದ್ರನು ಮಾರುತಿಯ ಕರದಲ್ಲಿ ಇಷ್ಟಲಿಂಗವನ್ನಿಟ್ಟು ‘ಇದು ಸನಾತನ ಧರ್ಮದ ಮುಕ್ತಿಮಣಿ ಮತ್ತು ಪರಮರಹಸ್ಯ. ಈ ಇಷ್ಟಲಿಂಗವನ್ನು ದಿನದ ಮೂರು ಸಮಯದಲ್ಲಿ ತಪ್ಪದೇ ಪೂಜಿಸಬೇಕು’ ಎಂದು ಆದೇಶ ನೀಡುವನು. ಗುರುವಿನ ಆದೇಶ ಪಡೆದ ಮಾರುತಿಯು ಪ್ರತಿದಿನವೂ ತಪ್ಪದೆ ಮೂರುಬಾರಿ ಇಷ್ಟಲಿಂಗ ಸಾಧನೆಯಲ್ಲಿ ನಿರತನಾದನು.

ಒಮ್ಮೆ ಮಾರುತಿಯು ಗೌತಮ ಋಷಿಗಳ ಆಶ್ರಮದಲ್ಲಿದ್ದಾಗ, ಗೌತಮರ ಇಷ್ಟಲಿಂಗವು ಕಾಣೆಯಾಗುವುದು. ಗೌತಮರು ಶಿವನ ಮೇಲಣ ನಿಷ್ಠೆಯಿಂದ ಪ್ರಾಣ ತ್ಯಜಿಸಲು ನಿರ್ಧರಿಸಿ ಶಿರಚ್ಛೇದನ ಮಾಡಿಕೊಳ್ಳಲು ಅನುವಾಗಲು, ಅಲ್ಲಿಗೆ ಪಾರ್ವತೀ ಸಹಿತನಾಗಿ ಬಂದ ಪರಮೇಶ್ವರನು, ಗೌತಮರಿಗೆ ಮತ್ತೊಂದು ಇಷ್ಟಲಿಂಗವನ್ನು ಕರುಣಿಸಿ ಆಶೀರ್ವದಿಸುವರು. ಅಲ್ಲಿ ಭಾವಪರವಶನಾಗಿ ಮಾರುತಿಯು ಹಾಡುತ್ತಿದ್ದ ಭಕ್ತಿಗೀತೆಗಳನ್ನು ಕೇಳಿ ಆನಂದಿಸುವರು.

ಭಕ್ತಿಗೀತೆಗಳನ್ನು ಹಾಡುತ್ತಾ ತಮ್ಮನ್ನು ವಾಯುಮಾರ್ಗವಾಗಿ ಕೈಲಾಸಕ್ಕೆ ತಲುಪಿಸು ಎಂದು ಮಾರುತಿಗೆ ಆದೇಶಿಸಿದರು. ಮಾರುತಿಯು ಅವರನ್ನು ತನ್ನ ಭುಜಗಳ ಮೇಲೆ ಕುಳ್ಳಿರಿಸಿಕೊಂಡು ಕೈಲಾಸದತ್ತ ತೆರಳುತ್ತಿರಲು ಸಂಜೆಯಾಗುವುದು. ಆಗ ಮಾರುತಿಯು ಶಿವಪಾರ್ವತಿಯನ್ನು ಇಳಿಯಲು ಸೂಚಿಸಿ, ತಾನು ಇಷ್ಟಲಿಂಗದ ಪೂಜೆಗೆ ತೆರಳಬೇಕು ಎಂದು ಆಜ್ಞೆಯನ್ನು ಬೇಡುವನು. ಆಗ ಶಿವನು ‘ನಾನು ನಿನ್ನ ಎದುರೇ ಇರುವಾಗ ಲಿಂಗ ಪೂಜೆ ಏತಕ್ಕೆ?’ ಎನ್ನಲು ಮಾರುತಿಯು, ‘ಇದು ನನ್ನ ಗುರುವಿನ ಆಜ್ಞೆ! ಮೀರಲಾರೆ’ ಎಂದು ನುಡಿದು ಶಿವನಾಜ್ಞೆಯನ್ನು ಪಡೆದು, ಹೇಮಕೂಟದ ಸಮೀಪ ತುಂಗಭದ್ರಾ ನದಿಯಲ್ಲಿ ಮಿಂದೇಳಿ ಶಿವ ಪೂಜೆಗೆ ಸಜ್ಜಾಗುವನು. ಆಗ ಮಾರುತಿಯನ್ನು ಪರೀಕ್ಷಿಸಲು ಶಿವನು ಮಾರುತಿಯ ಇಷ್ಟಲಿಂಗವನ್ನೇ ಮಾಯ ಮಾಡುವರು.

ಇದರಿಂದ ವಿಚಲಿತನಾದ ಮಾರುತಿಯು ನದಿಯ ನೀರನ್ನೆಲ್ಲಾ ಬಗೆದು ಇಷ್ಟಲಿಂಗವನ್ನು ಹುಡುಕುವನು. ಆದರೂ ಲಿಂಗವು ದೊರೆಯುವುದಿಲ್ಲ. ಆಗ ದುಃಖಿತನಾದ ಮಾರುತಿಯು ತನ್ನ ಗುರುವಾದ ವೀರಭದ್ರನನ್ನು ನೆನೆಯಲು ವೀರಭದ್ರನು ಪ್ರತ್ಯಕ್ಷನಾಗುವನು. ಮಾರುತಿಯು, ‘ಶಿವನಿಗೆ ಲಿಂಗಪೂಜೆ ಮಾಡಿ ಬರುವುದಾಗಿ ಮಾತುಕೊಟ್ಟಿರುವೆ. ಲಿಂಗವಿಲ್ಲದೆ ಶಿವನಿಗೆ ಹೇಗೆ ಮುಖತೋರಿಸಲಿ?’ ಎನ್ನಲು, ಪ್ರತ್ಯಕ್ಷ ಪರಶಿವನೇ ಎದುರಿಗಿದ್ದರೂ ತನ್ನ ಮಾತಿನಂತೆ ಇಷ್ಟಲಿಂಗವನ್ನು ಪೂಜಿಸಲು ಬಂದ ಮಾರುತಿಯ ಗುರುಭಕ್ತಿಗೆ ಮೆಚ್ಚಿ ಒಲಿದ ವೀರಭದ್ರನು, “ನಿನ್ನ ಒಂದೊಂದು ರೋಮವೂ ಲಿಂಗಮಯವಾಗಲಿ. ವಾನರ ಕುಲದಲ್ಲಿ ಜನಿಸಿದರೂ ನೀನು ಸರ್ವತ್ರ ಭೂಲೋಕದಲ್ಲಿ ಪೂಜೆಗೊಳ್ಳುವೆ. ಇನ್ನು ಮುಂದೆ ಗುರು-ಶಿಷ್ಯ ಭಕ್ತಿಗೆ ಸಾಕ್ಷಿಯಾಗಿ ‘ವೀರಾಂಜನೇಯ’ ಎಂದು ಪ್ರಸಿದ್ಧಿಗೊಳ್ಳುವೆ” ಎಂದು ವರವನ್ನು ನೀಡಿದನು.

ಶ್ರೀ ವೀರಭದ್ರನಿಂದ ಮುಕ್ತಿಮಣಿಯನ್ನು ಪಡೆದ ಮಾರುತಿಯು ಅಂದಿನಿಂದ ‘ವೀರಾಂಜನೇಯ’ ಎಂದು ಪ್ರಸಿದ್ಧಿ ಹೊಂದಿ ಪೂಜನೀಯನಾದನು. ಮಾರುತಿಯು ತಪಸ್ಸು ಮಾಡಿದ ಪಂಪಾವರ ಕ್ಷೇತ್ರದಲ್ಲಿ ಮಾರುತಿಯ 108 ಅಡಿ ಲೋಹದ ವಿಗ್ರಹ ನಿರ್ಮಿಸುವ ಕಾರ್ಯವು, ಶ್ರೀ ವೀರಭದ್ರ ಪ್ರಚಾರ ಸಮಿತಿ ಮತ್ತು ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ನಡೆಯುತ್ತಿದೆ.

ಮಾರುತಿ, ವಸಿಷ್ಠರು, ಗೌತಮಮುನಿಗಳು ಮುಂತಾದವರಂತೆ ಅನೇಕ ದೇವಾನುದೇವತೆಗಳು, ಋಷಿಗಳು ಇಷ್ಟಲಿಂಗವೆಂಬ ಮುಕ್ತಿಮಣಿಯನ್ನು ಪೂಜಿಸುತ್ತಾರೆ. ಗುರುಪರಂಪರೆಯನ್ನು ತಿಳಿಸುವ ಈ ಕಥೆಯು ಸ್ಕಂದಪುರಾಣದ ಪಂಪಾ ಮಹಾತ್ಮ್ಯದಲ್ಲಿ ಬರುವುದು.

ಇದನ್ನೂ ಓದಿ: Holy Ganga Bath: ಗಂಗಾ ಸ್ನಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತಾ? ಶಿವ-ಪಾರ್ವತಿ ನಡುವಿನ ಈ ಪ್ರಸಂಗ ನೀಡುತ್ತೆ ಇದಕ್ಕೆ ಉತ್ತರ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ