ಹಣದ ಕಪಾಟು ಯಾವ ದಿಕ್ಕಿಗೆ ಇರಬೇಕು? ಮನೆಯಲ್ಲಿ ಸಂಪತ್ತು ವೃದ್ಧಿಯಾಗಲು ವಾಸ್ತು ಶಾಸ್ತ್ರ ಹೇಳುವ ಪ್ರಮುಖ ನಿಯಮಗಳಿವು!

ಹಿಂದೂ ಸಂಪ್ರದಾಯದಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯನ್ನು ಆರಾಧಿಸುವುದರ ಜೊತೆಗೆ ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನೂ ಪಾಲಿಸಲಾಗುತ್ತದೆ. ಅದರಲ್ಲೂ ಮನೆಯಲ್ಲಿ ಹಣ, ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಇಡುವ ಕಪಾಟಿನ ದಿಕ್ಕಿಗೆ ವಿಶೇಷ ಮಹತ್ವ ನೀಡಲಾಗಿದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಹಣದ ಕಪಾಟನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಹಣದ ಕಪಾಟಿಗೆ ಸಂಬಂಧಿಸಿದ ವಾಸ್ತು ನಿಯಮಗಳು ಮತ್ತು ಪಾಲಿಸಬೇಕಾದ ಪ್ರಮುಖ ಸಲಹೆಗಳು ಇಲ್ಲಿವೆ.

ಹಣದ ಕಪಾಟು ಯಾವ ದಿಕ್ಕಿಗೆ ಇರಬೇಕು? ಮನೆಯಲ್ಲಿ ಸಂಪತ್ತು ವೃದ್ಧಿಯಾಗಲು ವಾಸ್ತು ಶಾಸ್ತ್ರ ಹೇಳುವ ಪ್ರಮುಖ ನಿಯಮಗಳಿವು!
ಹಣದ ಕಪಾಟು

Updated on: Oct 31, 2026 | 4:50 PM

ಮನೆ ಎಂದರೆ ಕೇವಲ ವಾಸಿಸುವ ಸ್ಥಳವಲ್ಲ, ಅದು ನಮ್ಮ ಸುಖ, ಶಾಂತಿ ಮತ್ತು ಸಮೃದ್ಧಿಯ ಸಂಕೇತ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಸದಾ ಇರಬೇಕು, ಆರ್ಥಿಕ ಸಂಕಷ್ಟಗಳು ದೂರವಾಗಿ ಸಂಪತ್ತು ವೃದ್ಧಿಯಾಗಬೇಕು ಎಂದು ಬಯಸುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯನ್ನು ಆರಾಧಿಸುವುದರ ಜೊತೆಗೆ ವಾಸ್ತು ಶಾಸ್ತ್ರದ ಕೆಲವು ನಿಯಮಗಳನ್ನೂ ಪಾಲಿಸಲಾಗುತ್ತದೆ. ಅದರಲ್ಲೂ ಮನೆಯಲ್ಲಿ ಹಣ, ಚಿನ್ನಾಭರಣ ಮತ್ತು ಬೆಲೆಬಾಳುವ ವಸ್ತುಗಳನ್ನು ಇಡುವ ಕಪಾಟಿನ ದಿಕ್ಕಿಗೆ ವಿಶೇಷ ಮಹತ್ವ ನೀಡಲಾಗಿದೆ. ಹಾಗಾದರೆ ವಾಸ್ತು ಶಾಸ್ತ್ರದ ಪ್ರಕಾರ ಹಣದ ಕಪಾಟನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಯಾವ ನಿಯಮಗಳನ್ನು ಪಾಲಿಸಬೇಕು? ಇಲ್ಲಿದೆ ಮಾಹಿತಿ.

ಹಣದ ಕಪಾಟು ಯಾವ ದಿಕ್ಕಿಗೆ ಇರಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿಪತಿಯಾದ ಕುಬೇರನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಹಣದ ಕಪಾಟನ್ನು ಇಡುವುದು ಶುಭ ಎಂಬ ನಂಬಿಕೆಯಿದೆ. ವಿಶೇಷವಾಗಿ ಕಪಾಟಿನ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತೆ ವ್ಯವಸ್ಥೆ ಮಾಡುವುದು ಉತ್ತಮ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಆರ್ಥಿಕ ಸಮೃದ್ಧಿ ನೆಲೆಸುತ್ತದೆ ಎಂಬುದು ಸಾಂಪ್ರದಾಯಿಕ ನಂಬಿಕೆ.

ಕಪಾಟನ್ನು ಯಾವ ಗೋಡೆಗೆ ಹೊಂದಿಸಬೇಕು?

ಹಣದ ಕಪಾಟನ್ನು ಮನೆಯ ನೈಋತ್ಯ (South-West) ಭಾಗದ ಗೋಡೆಗೆ ಹೊಂದಿಸಿ ಇಡುವುದು ವಾಸ್ತು ಪ್ರಕಾರ ಉತ್ತಮವೆಂದು ಹೇಳಲಾಗುತ್ತದೆ. ಈ ರೀತಿ ಇಟ್ಟಾಗ ಕಪಾಟಿನ ಬಾಗಿಲು ಉತ್ತರ ದಿಕ್ಕಿಗೆ ತೆರೆಯುವಂತಿರಬೇಕು. ಕಪಾಟಿನ ಮುಂದೆ ಸಾಕಷ್ಟು ಜಾಗವಿರಬೇಕು. ಅದರ ಬಾಗಿಲು ತೆರೆಯಲು ಯಾವುದೇ ಅಡೆತಡೆ ಇರಬಾರದು ಎಂಬುದನ್ನೂ ಗಮನಿಸಬೇಕು.

ಇದನ್ನೂ ಓದಿ: ಶನಿ ಸಾಡೇ ಸಾತಿ ಮುಗಿದ ತಕ್ಷಣ ಜೀವನದಲ್ಲಿ ನಡೆಯುವ 5 ಪ್ರಮುಖ ಬದಲಾವಣೆಗಳಿವು!

ಹಣದ ಕಪಾಟಿನ ಒಳಗೆ ಏನಿರಬೇಕು?

ಹಣದ ಕಪಾಟಿನಲ್ಲಿ ಕೇವಲ ಹಣವನ್ನಷ್ಟೇ ಇಡಬೇಕೆಂದಿಲ್ಲ. ಚಿನ್ನಾಭರಣ, ಪ್ರಮುಖ ದಾಖಲೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಡಬಹುದು. ವಾಸ್ತು ನಂಬಿಕೆಗಳ ಪ್ರಕಾರ ಕಪಾಟನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಅನಗತ್ಯ ಕಾಗದಗಳು, ಹಳೆಯ ಬಿಲ್‌ಗಳು ಹಾಗೂ ಬಳಕೆಯಿಲ್ಲದ ವಸ್ತುಗಳನ್ನು ಅದರಲ್ಲಿ ತುಂಬಿಡಬಾರದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us