AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛಾಯಾಗ್ರಹಗಳು ಯಾರು? ಇವರ ಆರಾಧನೆ ಹೇಗೆ? ಇದರಿಂದಾಗುವ ಅತ್ಯುನ್ನತ ಪ್ರಯೋಜನಗಳೇನು?

ರಾಹು ಮತ್ತು ಕೇತು ಗ್ರಹಗಳು ಇಬ್ಬರೂ ಪಾಪತ್ವವುಳ್ಳ ಗ್ರಹಗಳು. ಅವರು ನಮ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಶುಭಫಲವನ್ನು ಕೊಡುತ್ತಾರೆ. ಎಂಟನೇ ಗ್ರಹವಾದ ರಾಹುವಿಗೆ ಅಧಿದೇವತೆ ಸರ್ಪ. ಅಂದರೆ ಸುಬ್ರಹ್ಮಣ್ಯನೆಂದು ಹೇಳಿದರೆ ತಪ್ಪಲ್ಲ.

ಛಾಯಾಗ್ರಹಗಳು ಯಾರು? ಇವರ ಆರಾಧನೆ ಹೇಗೆ? ಇದರಿಂದಾಗುವ ಅತ್ಯುನ್ನತ ಪ್ರಯೋಜನಗಳೇನು?
ರಾಹು ಮತ್ತು ಕೇತು
TV9 Web
| Updated By: ಆಯೇಷಾ ಬಾನು|

Updated on: Jul 05, 2022 | 7:15 AM

Share

ನಭೋಮಂಡಲದಲ್ಲಿ ಸಂಚರಿಸುವ ಗ್ರಹಗಳು(Planets) ನಮ್ಮ ಜನ್ಮಕಾಲದಲ್ಲಿ ಯಾವ ಸ್ಥಾನದಲ್ಲಿ ಇರುತ್ತವೋ ಅದರ ಆಧಾರದ ಮೇಲೆ ನಮ್ಮ ಜೀವನಚಕ್ರದ ಸ್ವರೂಪ ಜಾತಕ/ಕುಂಡಲಿಯ(Kundali) ರೂಪದಲ್ಲಿ ನಿರ್ಣಯವಾಗುತ್ತದೆ. ಅದರಲ್ಲಿ ಪ್ರಧಾನವಾಗಿ ಏಳು ಗ್ರಹಗಳು ಗ್ರಾಹ್ಯ. ಉಳಿದ ರಾಹು ಮತ್ತು ಕೇತು ಎನ್ನುವ ಗ್ರಹಗಳೇನಿವೆ ಅವುಗಳು ಉಳಿದ ಗ್ರಹಗಳಂತೆ ಅಲ್ಲ. ಅವರನ್ನು ಛಾಯಾಗ್ರಹಗಳು ಎಂದು ಕರೆಯುತ್ತಾರೆ.

ಸಮುದ್ರ ಮಂಥನ ಸಂದರ್ಭದಲ್ಲಿ ಅಮೃತ ಉದ್ಭವವಾದಾಗ ಸಿಂಹಿಕಾ ಎಂಬ ರಾಕ್ಷಸಿಯ ಮಗನು ಕಪಟದಿಂದ ಅದರ ಅಮೃತಪಾನ ಮಾಡುತ್ತಾನೆ. ಅದನ್ನು ಗಮನಿಸಿದ ಸೂರ್ಯ ಮತ್ತು ಚಂದ್ರರು ಅದನ್ನು ಭಗವಾನ್ ವಿಷ್ಣುವಿಗೆ ಹೇಳುತ್ತಾರೆ. ಅದರಿಂದ ಕುಪಿತನಾದ ವಿಷ್ಣುವು ಅವನ ಶಿರಚ್ಛೇದ ಮಾಡುತ್ತಾನೆ. ಆದರೆ ಅವನ ರುಂಡ ಮತ್ತು ಮುಂಡ ಬೇರೆಯಾದರೂ ಅಮೃತಪಾನದ ಫಲದಿಂದ ಜೀವವು ಹೋಗುವುದಿಲ್ಲ. ಅಂದಿನಿಂದ ಅವನು ರಾಹು ಕೇತು ಎಂದು ಎರಡು ಭಾಗವಾಗಿ ಗೋಚರವಾಗುತ್ತಾನೆ ಮತ್ತು ಛಾಯಾ ಗ್ರಹತ್ವವನ್ನು ಪಡೆಯುತ್ತಾನೆ. ಅಲ್ಲದೆ ಸೂರ್ಯ ಚಂದ್ರರ ಪರಮಶತ್ರುವಾಗುತ್ತಾನೆ.

ರಾಹು ಮತ್ತು ಕೇತು ಗ್ರಹಗಳು ಇಬ್ಬರೂ ಪಾಪತ್ವವುಳ್ಳ ಗ್ರಹಗಳು. ಅವರು ನಮ್ಮ ಕುಂಡಲಿಯಲ್ಲಿ ಉತ್ತಮ ಸ್ಥಾನದಲ್ಲಿದ್ದರೆ ಶುಭಫಲವನ್ನು ಕೊಡುತ್ತಾರೆ. ಎಂಟನೇ ಗ್ರಹವಾದ ರಾಹುವಿಗೆ ಅಧಿದೇವತೆ ಸರ್ಪ. ಅಂದರೆ ಸುಬ್ರಹ್ಮಣ್ಯನೆಂದು ಹೇಳಿದರೆ ತಪ್ಪಲ್ಲ. ರಾಹುವು ನವಗ್ರಹ ಮಂಡಲದಲ್ಲಿ ಸೂರ್ಯನಿಂದ ನೈಋತ್ಯಭಾಗದಲ್ಲಿ ಶೂರ್ಪಾಕಾರದ (ಗೆರೆಸೆಯ ಆಕಾರದ) ಮಂಡಲದಲ್ಲಿ ಕಪ್ಪುಬಣ್ಣದಿಂದ ಕೂಡಿದವನಾಗಿ ಸಾನ್ನಿಧ್ಯವನ್ನು ಹೊಂದಿರುತ್ತಾನೆ. ಇವನಿಗೆ ಕಪ್ಪು ಅತ್ಯಂತ ಪ್ರಿಯ ಬಣ್ಣ. ಇವನಿಗೆ ಉದ್ದು ಪ್ರೀತಿಯ ಧಾನ್ಯ. ಇವನು ಅನೂಕೂಲವಾಗಿಲ್ಲದಿದ್ದಲ್ಲಿ ಚರ್ಮ ಸಂಬಂಧ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತದೆ ಮತ್ತು ಇವನ ದಶಾಕಾಲದಲ್ಲಿ ಆಪತ್ತುಗಳು ಹೆಚ್ಚು. ರಾಹು ಮತ್ತು ಬೃಹಸ್ಪತಿ ಜೊತೆಯಾಗಿರುವ ಕಾಲದಲ್ಲಿ ಶುಭಕಾರ್ಯಗಳನ್ನು ಮಾಡುವುದು ಉತ್ತಮವಲ್ಲ. ಇದನ್ನೂ ಓದಿ: Vastu Tips: ಸಂಪತ್ತಿನ ದೇವತೆ ಲಕ್ಷ್ಮಿ, ಪ್ರಥಮ ಪೂಜಿತ ಗಣೇಶ ಮತ್ತು ಭಗವಾನ್ ಶಿವನ ವಿಗ್ರಹಗಳನ್ನು ಯಾವ ದಿಕ್ಕಿನಲ್ಲಿಟ್ಟರೆ ಹೆಚ್ಚು ಫಲ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತೆ?

ರಾಹು ಬೃಹಸ್ಪತಿಯರು ವಿರುದ್ಧವಾದ ಗುಣವುಳ್ಳ ಗ್ರಹಗಳಾದ್ದರಿಂದ ಅವರ ದಶಾ ಬದಲಾವಣೆಯ ಸಮಯದಲ್ಲಿ ಸಂಧಿದೋಷವುಂಟಾಗುತ್ತದೆ. ಆ ಕಾಲದಲ್ಲಿ ಶಾಂತಿಯನ್ನು ಮಾಡುವುದು ತುಂಬಾ ಅನಿವಾರ್ಯ. ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇದೆ. ರಾಹುವಿನ ದಶಾಕಾಲ ಹದಿನೆಂಟು ವರ್ಷ. ರಾಹುವು ನಮ್ಮ ಕುಂಡಲಿಯ ಲಗ್ನದಿಂದ 3ನೇ, 6ನೇ ಮತ್ತು 11ನೇ ಮನೆಯಲ್ಲಿದ್ದರೆ ಸಾಮಾನ್ಯವಾಗಿ ಶುಭಫಲವನ್ನು ನೀಡುತ್ತಾನೆ. ರಾಹುವಿಗೆ ಕನ್ಯಾರಾಶಿ ಸ್ವಂತ ಕ್ಷೇತ್ರ. ಮಿಥುನ ರಾಶಿಯು ಉಚ್ಚಕ್ಷೇತ್ರ. ಧನುರಾಶಿಯು ನೀಚಕ್ಷೇತ್ರವಾಗಿದೆ.

ರಾಹುವಿನಿಂದಾಗುವ ವಿಪತ್ತುಗಳಿಂದ ತಪ್ಪಿಸಿಕೊಳ್ಳಲು ಇದನ್ನು ಮಾಡಿ ರಾಹುವಿನ ಕುರಿತಾಗಿ ಆಶ್ಲೇಷ ಬಲಿ, ನಾಗಾರಾಧನೆ, ನಾಗಕ್ಷೇತ್ರ ದರ್ಶನ ರುದ್ರಾಭಿಷೇಕ ಮತ್ತು ಸತ್ಪಾತ್ರರಿಗೆ ಕಪ್ಪು ಬಟ್ಟೆಯಲ್ಲಿ ಉದ್ದಿನಬೇಳೆಯನ್ನಿರಿಸಿ ದಾನ ಮಾಡುವುದು ಮತ್ತು ಗರಿಕೆಯಿಂದ ರಾಹುವಿನ ಪ್ರೀತಿಗಾಗಿ ಹವನ ಮಾಡಿಸುವುದು ಇವುಗಳಲ್ಲಿ ಒಂದನ್ನು ಶ್ರದ್ಧೆಯಿಂದ ಮಾಡಿದರೆ ಅವನ್ನಿಂದಾಗುವ ವಿಪತ್ತುಗಳಿದ್ದಲ್ಲಿ ಶಮನವಾಗುವುದು.

ಇನ್ನು ಇಲ್ಲೇ ಒಂದು ಭಾಗವಾಗಿರುವ ಮತ್ತು ಒಂಭತ್ತನೇ ಗ್ರಹವಾದ ಕೇತುವಿನ ಕುರಿತು ಹೇಳುವುದಾದರೆ “ಕೇತುಃ ಯಶಃ ಸುಪ್ರದಃ” ಕೇತುವು ಯಶಸ್ಸನ್ನು ಮತ್ತು ಒಳ್ಳೆಯ ದಾರಿಯನ್ನು ತೋರಿಸುವಾತ ಎಂದರ್ಥ. ಇವನೂ ಪಾಪತ್ವವುಳ್ಳ ಗ್ರಹ. ಆದರೆ ಹಿಂದೆ ಹೇಳಿದಂತೆ ಯಾವ ಗ್ರಹರಾದರೂ ಉತ್ತಮಸ್ಥಾನದಲ್ಲಿದ್ದರೆ ಸತ್ಫಲವನ್ನೇ ನೀಡುತ್ತಾರೆ. ಕೇತುವಿಗೆ ಬ್ರಹ್ಮ ಅಧಿದೇವತೆಯಾಗಿದ್ದರೂ ಇವನ ಕುರಿತಾಗಿ ಗಣಪತಿಯನ್ನು ಆರಾಧಿಸುವುದು ರೂಢಿ. ವಿಘ್ನಹರ್ತನಾದ ಗಣಪತಿಯ ಸೇವೆಯಿಂದ ಸಂಪ್ರೀತನಾಗಿ ಇವನು ಶುಭಾನುಗ್ರಹವನ್ನು ಮಾಡುತ್ತಾನೆ.

ಜನ್ಮ ರಾಶಿಯಿಂದ 3 ,6, 10, 11 ನೇ ಮನೆ ಇವುಗಳಲ್ಲಿ ಕೇತುವು ಇದ್ದರೆ ಶುಭಪ್ರದವಾಗಿರುತ್ತಾನೆ. ಮೀನರಾಶಿಯು ಇವನ ಸ್ವಕ್ಷೇತ್ರ. ಧನೂರಾಶಿಯು ಉಚ್ಚಕ್ಷೇತ್ರ. ಮಿಥುನ ರಾಶಿಯು ನೀಚಕ್ಷೇತ್ರವಾಗಿದೆ. ಸೂರ್ಯ, ಚಂದ್ರ, ಕುಜರು ಇವನ ಮಿತ್ರಗ್ರಹರು. ಇವನ ದಶಾಕಾಲವು ಏಳು ವರ್ಷ. ಇವನು ನವಗ್ರಹ ಮಂಡಲದಲ್ಲಿ ಸೂರ್ಯನಿಂದ ವಾಯವ್ಯ ದಿಕ್ಕಿನಲ್ಲಿ ಧ್ವಜಾಕಾರ ಮಂಡಲದಲ್ಲಿ ಚಿತ್ರಬಣ್ಣದಲ್ಲಿ (ಬಣ್ಣಬಣ್ಣದಿಂದ) ಸಾನ್ನಿಧ್ಯವನ್ನು ಹೊಂದಿರುತ್ತಾನೆ. ಇವನಿಗೆ ಹುರುಳಿ ಕಾಳು ಪ್ರಿಯಧಾನ್ಯ ಹಾಗೂ ಚಿತ್ರಬಣ್ಣದ ವಸ್ತ್ರ ಅತ್ಯಂತಪ್ರಿಯ. ಇವನ ಸಂಪ್ರೀತಿಗಾಗಿ ದರ್ಭೆಯಿಂದ ಹವನ ಮಾಡುತ್ತಾರೆ. ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದೇ ಇದೆ ಮತ್ತು ಸದ್ಭಾವನೆಯಿಂದ / ಶುದ್ದಾಂತಃಕರಣದಿಂದ ಯಾವುದೇ ಕಾರ್ಯ ಮಾಡಿದರೂ ಅದು ಭಗವಂತನಿಗೆ ಪ್ರಿಯವಾಗುತ್ತದೆ.

ರಾಹುವಿನ ಮಂತ್ರ – ಅರ್ಧಕಾಯಂ ಮಹಾವೀರ್ಯಂ ಚಂದ್ರಾದಿತ್ಯವಿಮರ್ದನಂ | ಸಿಂಹಿಕಾಗರ್ಭಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ||

ಕೇತುವಿನ ಮಂತ್ರ – ಪಲಾಲಧೂಮ್ರಸಂಕಾಶಾನ್ ತಾರಕಾಗ್ರಹಮಸ್ತಕಾನ್ | ರುದ್ರಾನ್ ರೌದ್ರಾತ್ಮಕಾನ್ ಘೋರಾನ್ ತಾನ್ ಕೇತೂನ್ ಪ್ರಣಮಾಮ್ಯಹಂ ||

ಬರಹ: ಡಾ.ಕೇಶವ ಕಿರಣ ಬಿ. (ಪ್ರಾಧ್ಯಾಪಕರು, S.R.B.S.S College, ಹೊನ್ನಾವರ)

ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಲಕ್ಷಾಂತರ ರೂ ಮೌಲ್ಯದ ಟ್ರ್ಯಾಕ್ಟರ್ ಬೆಂಕಿಗಾಹುತಿ: ಕಣ್ಣೀರಿಟ್ಟ ರೈತ
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಪುಣೆಯಲ್ಲಿ 2 ಟ್ರಕ್‌ಗಳ ನಡುವೆ ಸಿಕ್ಕಿ ಸುಟ್ಟು ಕರಕಲಾದ ಕಾರು; 8 ಜನ ಸಾವು
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಕಬ್ಬು ಬೆಳೆಗಾರರನ್ನು ಬಿಜೆಪಿ ಪ್ರಚೋದಿಸುತ್ತಿದೆ; ಈಶ್ವರ ಖಂಡ್ರೆ ಆರೋಪ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
ಬಿಗ್ ಬಾಸ್ ಆಟದಲ್ಲಿ ರಘು ಭುಜಬಲಕ್ಕೆ ಹೆದರಿ ಕೈ ಮುಗಿದ ಕಾಕ್ರೋಚ್ ಸುಧಿ
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
‘ಮಾರ್ನಮಿ’ ಟ್ರೈಲರ್ ಲಾಂಚ್​​ನಲ್ಲಿ ಚೈತ್ರಾ ಆಚಾರ್ ಕಾಲೆಳೆದ ಕಿಚ್ಚ ಸುದೀಪ್
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ಕಬ್ಬಿನ ಜ್ವಾಲೆ: ಕಬ್ಬು ತುಂಬಿದ ಟ್ರಾಕ್ಟರ್​ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ರೋಹಿತ್ ಶರ್ಮಾರ ವಿಶ್ವ ದಾಖಲೆಯ ಇನ್ನಿಂಗ್ಸ್​ಗೆ ಭರ್ತಿ 11 ವರ್ಷ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಗ್​​ಬಾಸ್: ಗಿಲ್ಲಿ-ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾದ ಅಶ್ವಿನಿ
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್
ಬಿಹಾರದಲ್ಲೂ ನೇಪಾಳದಂತಹ ಹಿಂಸಾಚಾರ ನಡೆಯುತ್ತದೆ; MLC ಸುನಿಲ್ ಸಿಂಗ್