‘ನವಕಾರ ಮಹಾಮಂತ್ರ ದಿವಸ್’; ಪ್ರಧಾನಿ ಮೋದಿ ಪಠಿಸಿದ ಮಹಾಮಂತ್ರದ ಅರ್ಥವೇನು?
ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯಲ್ಲಿ ನಡೆದ ನವಕಾರ ಮಹಾಮಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ನವಕಾರ ಮಹಾ ಮಂತ್ರವನ್ನು ಪಠಿಸಿದರು. ಜೈನ ಧರ್ಮದಲ್ಲಿ ಪವಿತ್ರವಾದ ಈ ಮಂತ್ರವು ಆತ್ಮಶುದ್ಧಿ ಮತ್ತು ಆಂತರಿಕ ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ. ಈ ಮಂತ್ರದ ಇತಿಹಾಸ ಮತ್ತು ಮಹತ್ವವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ನವದೆಹಲಿ: ಬುಧವಾರ(ಏ.09) ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ‘ನವಕಾರ ಮಹಾಮಂತ್ರ ದಿವಸ್’ನಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ‘ನವಕಾರ ಮಹಾಮಂತ್ರ’ವನ್ನು ಪಠಿಸಿದರು. ಈ ಮಂತ್ರದ ಕುರಿತು ಮೋದಿಯವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗಿದ್ರೆ ಏನಿದು ನವಕಾರ ಮಹಾಮಂತ್ರ ದಿವಸ್ ಹಾಗೂ ಈ ಮಹಾಮಂತ್ರದ ವಿಶೇಷತೆ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ನವಕಾರ ಮಹಾಮಂತ್ರ ಎಂದರೇನು?
ಜೈನ ಧರ್ಮದಲ್ಲಿ ನವಕಾರ ಮಂತ್ರವನ್ನು ಯುಗಯುಗಗಳಿಂದಲೂ ಬಹಳ ಮುಖ್ಯವಾದ ಮಂತ್ರವೆಂದು ಪರಿಗಣಿಸಲಾಗಿದೆ . ಇದು ಜೈನರು ಧ್ಯಾನ ಮಾಡುವಾಗ ಪಠಿಸುವ ಮೊದಲ ಪ್ರಾರ್ಥನೆ. ಈ ಮಂತ್ರವನ್ನು ಪಂಚ ನಮಸ್ಕಾರ ಮಂತ್ರ , ನಮಸ್ಕಾರ ಮಂತ್ರ , ನವಕಾರ ಮಂತ್ರ , ನಮಸ್ಕಾರ ಮಂಗಳ ಅಥವಾ ಪರಮೇಷ್ಠಿ ಮಂತ್ರ ಎಂದೂ ಕರೆಯಲಾಗುತ್ತದೆ . ಈ ಮಂತ್ರವು ನಮ್ಮ ಆಂತರಿಕ ಶತ್ರುಗಳಾದ ಅಪನಂಬಿಕೆ, ನಕಾರಾತ್ಮಕತೆ, ಹಗೆತನ ಮತ್ತು ಸ್ವಾರ್ಥವನ್ನು ಗುರುತಿಸುವ ಮೂಲಕ ಅಂತರಂಗ ವೈರಿಗಳನ್ನು ಜಯಿಸಲು ಪ್ರೇರೇಪಿಸುತ್ತದೆ.
ಮೋದಿ ನವಕಾರ ಮಹಾಮಂತ್ರ ಪಠಿಸುತ್ತಿರುವ ವಿಡಿಯೋ ಇಲ್ಲಿದೆ ನೋಡಿ:
At Vigyan Bhawan, amidst the sacred aura of Navkar Mahamantra Divas, Hon’ble PM @narendramodi ji chanted the timeless Navkar Mahamantra — a moment where spiritual reverence met national leadership.
A leader who shapes the future and honours dharmic roots. pic.twitter.com/4vShNJQcVo
— Dr Padma Veerapaneni ( Modi Ka Parivar) (@DrPadmaofficial) April 9, 2025
ಇದನ್ನೂ ಓದಿ: ಅಮರನಾಥ ಯಾತ್ರೆಗೆ ಯಾವಾಗ ನೋಂದಣಿ ಆರಂಭ? ಇಲ್ಲಿದೆ ಮಾಹಿತಿ
ಮಹಾರಾಷ್ಟ್ರದ ಪೇಲ್ ಗುಹೆಗಳಲ್ಲಿ ಅಂದರೆ ಮುಂಬೈನಿಂದ ದಕ್ಷಿಣಕ್ಕೆ 105 ಕಿ.ಮೀ ದೂರದಲ್ಲಿರುವ ಮಹಾದ್ ಬಳಿಯ ಮುಂಬೈ-ಗೋವಾ ಹೆದ್ದಾರಿಯಲ್ಲಿನ 30 ಬೌದ್ಧ ಗುಹೆಗಳಲ್ಲಿ ನಮೋಕರ ಮಂತ್ರದ ಮೊದಲ ಸಾಲಿನ ನಮೋ ಅರಹತನಂ ( नमो अरहतानं ) ಬಗ್ಗೆಗಿನ ಉಲ್ಲೇಖಗಳಿವೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ