AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friday the 13th: 13ನೇ ತಾರೀಕು ಶುಕ್ರವಾರ ಬಂದರೆ ಅಶುಭವೇ? ಈ ದಿನ ಜನರು ಹೆದರುವುದೇಕೆ?

13ನೇ ತಾರೀಖು ಶುಕ್ರವಾರ ಬಂದರೆ ಅಶುಭ ಎಂದು ಪರಿಗಣಿಸುವುದಕ್ಕೆ ಧಾರ್ಮಿಕ ಮತ್ತು ಐತಿಹಾಸಿಕ ಕಾರಣಗಳಿವೆ. ಏಸುಕ್ರಿಸ್ತನ ಶಿಲುಬೆಗೇರಿಸುವಿಕೆ ಮತ್ತು ಆತನ ಅಂತಿಮ ಭೋಜನದೊಂದಿಗೆ ಸಂಬಂಧಿಸಿದ ನಂಬಿಕೆಗಳು, ಹಾಗೂ 1307ರ ಅಕ್ಟೋಬರ್ 13ರಂದು ನೈಟ್ಸ್ ಟೆಂಪ್ಲರ್‌ಗಳನ್ನು ಬಂಧಿಸಿದ ಘಟನೆ ಇದಕ್ಕೆ ಕಾರಣ. ಪಶ್ಚಿಮಾತ್ಯ ದೇಶಗಳಲ್ಲಿ 13 ಸಂಖ್ಯೆಯನ್ನು ಅನೇಕರು ಅಶುಭವೆಂದು ಪರಿಗಣಿಸುತ್ತಾರೆ.

Friday the 13th: 13ನೇ ತಾರೀಕು ಶುಕ್ರವಾರ ಬಂದರೆ ಅಶುಭವೇ? ಈ ದಿನ ಜನರು ಹೆದರುವುದೇಕೆ?
Why Is Friday The 13th Considered Unlucky
ಅಕ್ಷತಾ ವರ್ಕಾಡಿ
|

Updated on:Jun 13, 2025 | 11:23 AM

Share

ಪ್ರಪಂಚದಾದ್ಯಂತ ವಿವಿಧ ಧರ್ಮಗಳಿವೆ, ವಿಭಿನ್ನ ನಂಬಿಕೆಗಳಿವೆ. ಕೆಲವು ಧರ್ಮಗಳಲ್ಲಿ, ಒಂದು ದಿನವನ್ನು ಶುಭವೆಂದು ಪರಿಗಣಿಸಲಾಗುತ್ತದೆ, ಆದರೆ ಕೆಲವು ಧರ್ಮಗಳಲ್ಲಿ, ಅದೇ ದಿನವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದರಂತೆ 13ನೇ ತಾರೀಕು ಶುಕ್ರವಾರ ಬಂದರೆ ಅತ್ಯಂತ ದುರದೃಷ್ಟಕರ ದಿನ ಎಂದು ಹೇಳಲಾಗುತ್ತದೆ. ಈ ವರ್ಷ ಇಂದು(ಜೂ.13)ರಂದು ಬಂದಿದೆ. ಈ ದಿನ ಬಂದರೆ ಜನರು ಹೆದರುವುದೇಕೆ, ನಿಜವಾಗಿಯೂ ಈ ದಿನ ಅಶುಭವೇ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

13ನೇ ತಾರೀಕು ಶುಕ್ರವಾರ ಏನಾಗುತ್ತದೆ ಎಂಬುದರ ಬಗ್ಗೆ ಶತಮಾನಗಳಷ್ಟು ಹಳೆಯದಾದ ಕ್ರೈಸ್ತರ ಧರ್ಮ ಗ್ರಂಥ ಬೈಬಲ್‌ನಲ್ಲಿ ವಿವರಿಸಲಾಗಿದೆ. ಕ್ರೈಸ್ತ ಧರ್ಮದ ಪ್ರಕಾರ ಯಾವುದೇ ತಿಂಗಳು 13ನೇ ತಾರೀಖು ಶುಕ್ರವಾರ ಬಂದರೆ ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದಲ್ಲೆ ಮುಖ್ಯ ಕಾರಣ ಏಸು ಕ್ರಿಸ್ತ ಶಿಲುಬೆಗೇರಿದ್ದು ಕೂಡಾ ಶುಕ್ರವಾರ, ಇದಲ್ಲದೇ ‘ಅಂತಿಮ ಭೋಜನ’ದ ದಿನ ಏಸುಕ್ರಿಸ್ತನ ಜೊತೆ ಆಹಾರ ಸೇವಿಸಿದ 13 ಅತಿಥಿಗಳು, ಕೊನೆಗೆ ಕ್ರಿಸ್ತನಿಗೆ ಮೋಸ ಮಾಡಿ ಶಿಲುಬೆಗೇರಲು ಕಾರಣವಾದರು ಎಂದು ಹೇಳಲಾಗುತ್ತದೆ. ಅಂದಿನಿಂದ ಜನರು 13ನೇ ತಾರೀಕು ಶುಕ್ರವಾರ ಬಂದರೆ ಹೆದರುತ್ತಾರೆ.

ಹಲವಾರು ಪಶ್ಚಿಮಾತ್ಯ ದೇಶಗಳಲ್ಲಿ ಸಂಖ್ಯೆ 13ರನ್ನು ಅಶುಭವೆಂದು ಪರಿಗಣಿಸಲ್ಪಡುತ್ತದೆ. ಹೋಟೆಲ್‌ಗಳಲ್ಲಿ 13ನೇ ಮಹಡಿ ಇಲ್ಲದಿರುವುದನ್ನು ನೀವು ಕಂಡಿರಬಹುದು. ಏಕೆಂದರೆ ಜನರು ಅದರಲ್ಲಿ ಉಳಿಯಲು ಇಚ್ಛಿಸುವುದಿಲ್ಲ. ಇತಿಹಾಸದಲ್ಲಿ 1307ರ ಅಕ್ಟೋಬರ್ 13ರಂದು (ಶುಕ್ರವಾರ), ಫ್ರಾನ್ಸ್ ರಾಜ ಫಿಲಿಪ್ ನ ‘Knights Templar’ ಸಂಘದ ಸದಸ್ಯರನ್ನು ಬಂಧಿಸಿ, ಕೊಂದು ಹಾಕಲಾಗಿತ್ತು. ಈ ಘಟನೆ “Friday the 13th” ಅಶುಭವೆಂಬ ನಂಬಿಕೆಗೆ ಮತ್ತೊಂದು ಆಧಾರವಾಯಿತು.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನಕ್ಕೆ ಅವಿವಾಹಿತ ಜೋಡಿ ಏಕೆ ಭೇಟಿ ನೀಡಬಾರದು?

13ನೇ ತಾರೀಖು ಮತ್ತು ಶುಕ್ರವಾರ ಒಂದೇ ದಿನ ಬಂದರೆ ಅದನ್ನು ಅಶುಭವೆಂದು ನಂಬಲು ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕಾರಣಗಳಿವೆ. ಆಧುನಿಕ ಕಾಲದಲ್ಲಿ ಕೂಡ ಕೆಲವರು ಈ ದಿನದಂದು ಮನೆಯಲ್ಲಿ ಹೊರ ಬರಲು ಹೆದರುತ್ತಾರೆ. ಯುರೋಪಿನಲ್ಲಿ, ಹೆಚ್ಚಿನ ಜನರು 13 ನೇ ತಾರೀಖಿನಂದು ವಿಮಾನದಲ್ಲಿ ಪ್ರಯಾಣಿಸಲು ಇಷ್ಟಪಡುವುದಿಲ್ಲ. ಭಯವು ಎಷ್ಟರ ಮಟ್ಟಿಗೆ ಎಂದರೆ ಜನರು ಈ ದಿನದಂದು ತಮ್ಮ ಮನೆಗಳನ್ನು ಬಿಡಲು ಸಹ ಹಿಂಜರಿಯುತ್ತಾರೆ.

ಗಣಿತದ ನಿಯಮಗಳು:

ಗಣಿತದ ನಿಯಮಗಳ ಪ್ರಕಾರ, ಸಂಖ್ಯೆ 12 ಒಂದು ಪೂರ್ಣಾಂಕವಾಗಿದೆ. ಇದರಿಂದಾಗಿ ಒಂದು ವರ್ಷದಲ್ಲಿ 12 ತಿಂಗಳುಗಳು, ಒಂದು ಗಡಿಯಾರದಲ್ಲಿ 12 ಗಂಟೆಗಳು ಮತ್ತು 12 ರಾಶಿ ಚಿಹ್ನೆಗಳು ಇರುತ್ತವೆ. ಇದರ ಹೊರತಾಗಿ, ಸಂಖ್ಯೆ 13 ಅನ್ನು ಸಮತೋಲನವನ್ನು ತೊಂದರೆಗೊಳಿಸುವ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಸಂಖ್ಯೆ 13 ಅನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:21 am, Fri, 13 June 25